For Quick Alerts
ALLOW NOTIFICATIONS  
For Daily Alerts

ಆಲಿವ್ ಎಣ್ಣೆ-ತಲೆಹೊಟ್ಟಿನ ಸಮಸ್ಯೆಗೆ ರಾಮಬಾಣ

By Deepak
|

ಹದಿಹರೆಯದವರನ್ನು ಮತ್ತು ವಯಸ್ಕರನ್ನು ಅತೀ ಸಾಮಾನ್ಯವಾಗಿ ಕಾಡುವ ಮತ್ತು ಅತೀ ಕಿರಿಕಿರಿಯನ್ನು೦ಟು ಮಾಡುವ ಸಮಸ್ಯೆಗಳಲ್ಲೊ೦ದು ಈ ತಲೆಹೊಟ್ಟು. ಇದಕ್ಕೆ ವಯಸ್ಸಿನ ಅಂತರವಿಲ್ಲ, ಯಾವಾಗ ಬೇಕಾದರೂ ಕಾಣಿಸಿಕೊಳ್ಳಬಹುದು. ತಲೆಹೊಟ್ಟು ಸಾಮಾನ್ಯವಾಗಿ ಮುಜುಗುರಕ್ಕೀಡಾಗುವ ಸನ್ನಿವೇಶವನ್ನು೦ಟು ಮಾಡುತ್ತದೆ.

ಏಕೆ೦ದರೆ, ತಲೆಹೊಟ್ಟು ತಲೆದೋರಿದಾಗ, ವ್ಯಕ್ತಿಯ ತಲೆಯಿ೦ದ ನಿರ್ಜೀವ ತ್ವಚೆಯು ಸಣ್ಣ ಸಣ್ಣ ತುಣುಕುಗಳ ರೂಪದಲ್ಲಿ ಉದುರುತ್ತವೆ ಅಥವಾ ಕೆಲವೊಮ್ಮೆ ತಲೆಯ ಮೇಲೆ ಹಾಗೆಯೇ ಉಳಿದುಬಿಡುತ್ತವೆ ಇಲ್ಲವೇ ಕೆಲವೊಮ್ಮೆ ಧರಿಸಿಕೊ೦ಡಿರುವ ಬಟ್ಟೆಗಳ ಮೇಲೂ ಉದುರಿಬಿಡುತ್ತವೆ. ತಲೆಹೊಟ್ಟು ನಿವಾರಣೆಗೆ 6 ನೈಸರ್ಗಿಕ ವಿಧಾನ

ಹಾಗಾಗಿ ಇಂತಹ ಸಮಸ್ಯೆಯಿಂದ ಹೊರಬರಲು ಬಹುಶಃ ನೀವು ನಾನಾ ಬಗೆಯ ಮಾರುಕಟ್ಟಯೆಯಲ್ಲಿ ದೊರೆಯುವ ಸೌಂದರ್ಯ‌ವರ್ಧಕಗಳ ಮೊರೆ ಹೋಗಿ, ಕೊನೆಗೆ ಯಾವುದೇ ಫಲಿತಾಂಶಗಳು ಕಾಣದೇ ಬೇಸತ್ತು ಹೋಗಿರುವಿರಿ ಅಲ್ಲವೇ?, ಚಿಂತಿಸದಿರಿ ಇದಕ್ಕಾಗಿ ಬೋಲ್ಡ್ ಸ್ಕೈ ಇಂದು ನಿಮಗಾಗಿ ಪರಿಣಾಮಕಾರಿಯಾದ ಆಲಿವ್ ಎಣ್ಣೆಯ ಕುರಿತು ಪರಿಚಯಿಸುತ್ತಿದ್ದು, ತೆಲೆಹೊಟ್ಟಿನ ಸಮಸ್ಯೆಗೆ ಇದು ಶೀಘ್ರ ಪರಿಹಾರ ನೀಡಲಿದೆ ಎಂಬುದರಲ್ಲಿ ಯಾವುದೇ ಸಂಶಯ ಬೇಡ. ಬನ್ನಿ ಇಂದಿನ ಲೇಖನದಲ್ಲಿ ಆಲೀವ್ ಎಣ್ಣೆಯಿಂದ ತಲೆಹೊಟ್ಟನ್ನು ನಿವಾರಿಸಿಕೊಳ್ಳುವ ಕೆಲವೊಂದು ಮಾರ್ಗಗಳ ಕುರಿತು ತಿಳಿಸಿಕೊಡುತ್ತೇವೆ. ಮುಂದೆ ಓದಿ...

ಆಲಿವ್ ಎಣ್ಣೆ ಟೀ ಟ್ರೀ ಆಯಿಲ್ ಜೊತೆಗೆ

ಆಲಿವ್ ಎಣ್ಣೆ ಟೀ ಟ್ರೀ ಆಯಿಲ್ ಜೊತೆಗೆ

ಆಲಿವ್ ಎಣ್ಣೆಯು ಕೂದಲಿನ ಬುಡವನ್ನು ಮೊಯಿಶ್ಚರೈಸ್ ಮಾಡುತ್ತದೆ ಮತ್ತು ಅದಕ್ಕೆ ಸಂಬಂಧಿಸಿದ ತಲೆಹೊಟ್ಟನ್ನು ಸಹ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾಗಿ, ಮೊದಲು ಆಲಿವ್ ಎಣ್ಣೆಗೆ ಕೆಲವು ಹನಿಗಳಷ್ಟು ಟೀ ಟ್ರೀ ಎಣ್ಣೆಯನ್ನು ಬೆರೆಸಿಕೊಳ್ಳಿ. ಅದನ್ನು ನಿಮ್ಮ ತಲೆಗೆ ಲೇಪಿಸಿ, ನಂತರ ಇದನ್ನು ನೀರಿನಿಂದ ಚೆನ್ನಾಗಿ ತೊಳೆಯಿರಿ. 15 ದಿನಗಳಿಗೊಮ್ಮೆ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿ, ಆಗ ಅದರ ಫಲಿತಾಂಶಗಳನ್ನು ನೀವೇ ನೋಡುವಿರಿ.

ಆಲಿವ್ ಎಣ್ಣೆಯ ಜೊತೆಗೆ ಬಾದಾಮಿ ಎಣ್ಣೆ

ಆಲಿವ್ ಎಣ್ಣೆಯ ಜೊತೆಗೆ ಬಾದಾಮಿ ಎಣ್ಣೆ

ಬಾದಾಮಿ ಎಣ್ಣೆ ಮತ್ತು ಆಲಿವ್ ಎಣ್ಣೆಯ ಮಿಶ್ರಣವನ್ನು ಕೂದಲಿನ ಬುಡಕ್ಕೆ ಲೇಪಿಸಿ. ಈ ಮಿಶ್ರಣವನ್ನು ವಾರಕ್ಕೊಮ್ಮೆ ಬಳಸುತ್ತಿದ್ದರೆ, ಅದು ತಲೆಹೊಟ್ಟನ್ನು ಸಂಪೂರ್ಣವಾಗಿ ಹೋಗಲಾಡಿಸುತ್ತದೆ.

ಆಲಿವ್ ಎಣ್ಣೆಯ ಜೊತೆಗೆ ಆಪಲ್ ಸಿಡೆರ್ ವಿನೀಗರ್

ಆಲಿವ್ ಎಣ್ಣೆಯ ಜೊತೆಗೆ ಆಪಲ್ ಸಿಡೆರ್ ವಿನೀಗರ್

ಆಲೀವ್ ಎಣ್ಣೆಯಿಂದ ನಿಮ್ಮ ಕೂದಲನ್ನು ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ಇದನ್ನು ಸ್ವಲ್ಪ ಸಮಯ ಹಾಗೆಯೇ ಬಿಡಿ ಮತ್ತು ಮೆದುವಾದ ಶಾಂಪೂವಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ. ಹೀಗೆ ತೊಳೆಯುವಾಗ ಆಪಲ್ ಸಿಡೆರ್ ವಿನೀಗರ್ ಅನ್ನು ಕಂಡೀಶನರ್ ಆಗಿ ಬಳಸಿ. ಈ ಪ್ರಕ್ರಿಯೆಯು ಸ್ವಾಭಾವಿಕವಾಗಿ ನಿಮ್ಮ ಕೂದಲನ್ನು ಕಂಡೀಶನ್ ಮಾಡುತ್ತದೆ ಮತ್ತು ಕೂದಲಿನ ಬುಡವನ್ನು ಸದೃಢಗೊಳಿಸುತ್ತದೆ, ಜೊತೆಗೆ ತಲೆಹೊಟ್ಟನ್ನು ನಿವಾರಿಸುತ್ತದೆ.

ಅವೊಕ್ಯಾಡೊ ಜೊತೆಗೆ ಆಲಿವ್ ಎಣ್ಣೆ

ಅವೊಕ್ಯಾಡೊ ಜೊತೆಗೆ ಆಲಿವ್ ಎಣ್ಣೆ

ಆಲಿವ್ ಎಣ್ಣೆ ಮತ್ತು ಅವೊಕ್ಯಾಡೊ ಮಿಶ್ರಣವನ್ನು ತಲೆ ಹೊಟ್ಟು ನಿವಾರಿಸಿಕೊಳ್ಳಲು ಸಮರ್ಪಕವಾಗಿ ಬಳಸಿಕೊಳ್ಳಬಹುದು. ಇದು ಕೂದಲನ್ನು ಹೊಳಪಿನಿಂದ ಕಂಗೊಳಿಸುವಂತೆ ಮಾಡುವುದರ ಜೊತೆಗೆ ಆರೋಗ್ಯಕರವಾಗಿ ಸಹ ಇರುವಂತೆ ಮಾಡುತ್ತದೆ. ಇದಕ್ಕಾಗಿ ಅವೊಕ್ಯಾಡೊಗಳನ್ನು ಜಜ್ಜಿಕೊಂಡು ಅದನ್ನು 2 ಟೇಬಲ್ ಚಮಚ ಆಲೀವ್ ಎಣ್ಣೆಯ ಜೊತೆಗೆ ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಕೂದಲಿನ ಮೇಲೆ ಲೇಪಿಸಿಕೊಳ್ಳಿ, ಹಾಗು ಮೃದುವಾಗಿ ಕೆಲವು ನಿಮಿಷಗಳ ಕಾಲ ಮಸಾಜ್ ಸಹ ಮಾಡಿ. ಈ ಪ್ರಕ್ರಿಯೆಯನ್ನು ವಾರಕ್ಕೊಮ್ಮೆ ಪುನರಾವರ್ತಿಸಿ. ತಲೆಹೊಟ್ಟು ನಿವಾರಣೆಯಾಗುತ್ತದೆ.

English summary

Ways To Use Olive Oil To Treat Dandruff

Dandruff is one of the most common problems faced by every one these days. It is caused by flaking of the skin on the scalp. Dandruff can also be itchy at times and may lead to hair-fall. Maintaining hair without any problems like dandruff, split ends et cetera is the toughest task ever! Due to pollution, unhealthy diet and usage of harsh chemicals, hair is subjected to dandruff, hair-loss and split ends.
X
Desktop Bottom Promotion