For Quick Alerts
ALLOW NOTIFICATIONS  
For Daily Alerts

ಕೂದಲುದುರುವ ಸಮಸ್ಯೆಗೆ ಶೀಘ್ರ ಪರಿಹಾರ: ಅದುವೇ ಯೋಗ!

By Art of Living
|

ತಲೆ ಬಾಚುವುದೆಂದರೆ ನಿಮ್ಮಲ್ಲಿ ನಡುಕ ಉಂಟಾಗುತ್ತದೆಯೆ? ಯೋಗದ ರೀತಿಯನ್ನು ಅನುಸರಿಸಿ. ಇದರಿಂದ ಕೂದಲುದುರುವಿಕೆ ನಿಲ್ಲುತ್ತದೆ. ಆದರೆ ಮೊದಲನೆಯ ಹಂತದಲ್ಲೇ ಈ ಸ್ಥಿತಿಯನ್ನು ತಡೆಗಟ್ಟುವಲ್ಲಿ ಯೋಗವು ಸಹಾಯ ಮಾಡುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ.

ಬಹಳ ಕೂದಲು ಉದುರಿ ಹೋದ ನಂತರ ಅದರ ಚಿಕಿತ್ಸೆಯಿಂದ ಉತ್ತಮ ಫಲಿತಾಂಶ ಸಿಗುವುದಕ್ಕಿಂತಲೂ ಹೆಚ್ಚಾಗಿ, ಈ ಸ್ಥಿತಿಯನ್ನು ತಡೆಗಟ್ಟುವಲ್ಲಿ ಉತ್ತಮ ಫಲಿತಾಂಶ ಸಿಗುತ್ತದೆ. ಹೊಳೆಯುತ್ತಿರುವ, ಸುಂದರವಾದ, ಬಲಿಷ್ಠವಾದ ಕೂದಲನ್ನು ಬಯಸುವಲ್ಲಿ ಎಲ್ಲಾ ಮಹಿಳೆಯರು ಬಯಸುವುದು ಸಾಮಾನ್ಯ. ಆದರೆ ಕೆಲವೊಮ್ಮೆ ಕೂದಲು ಸಣ್ಣದಾಗುವುದನ್ನು ನೆನೆಸಿಕೊಂಡೇ ಅನೇಕ ಮಹಿಳೆಯರಿಗೆ ನಿದ್ದೆ ಹತ್ತುವುದಿಲ್ಲ.

ನಿಮ್ಮ ಕೂದಲಿನ ಸ್ಥಿತಿ ನಿಮ್ಮ ಆರೋಗ್ಯದ ಮಾಪನ ಯಂತ್ರವಿದ್ದಂತೆ. ಸುಂದರವಾದ ಕೇಶವು ಖಂಡಿತವಾಗಿಯೂ ನಿಮಗೊಂದು ಕಿರೀಟವಿದ್ದಂತೆ. ಕೂದಲುದುರುವಿಕೆಯ ಸಾಮಾನ್ಯ ಕಾರಣಗಳೆಂದರೆ ಒತ್ತಡ, ಹಾರ್ಮೋನುಗಳ ಏರುಪೇರು, ಮುದಿತನ, ಕೆಟ್ಟದಾಗಿ ತಿನ್ನುವ ಅಭ್ಯಾಸಗಳು, ಕಾಯಿಲೆಗಳು, ಔಷಧಿಗಳು, ರಾಸಾಯನಿಕ ಶ್ಯಾಂಪುಗಳನ್ನು ಅಥವಾ ಕೂದಲಿನ ಬಣ್ಣವನ್ನು ಹೆಚ್ಚಾಗಿ ಬಳಸುವುದು, ಅನುವಂಶಿಕ ಕಾಯಿಲೆಗಳು, ಇತ್ಯಾದಿ.

ಯೋಗ ಮತ್ತು ಧ್ಯಾನ ಮಾಡುವುದರಿಂದ ನಿಮಗೆ ಆರೋಗ್ಯವಾದ ಕೂದಲು ಸಿಗುವುದು ಮಾತ್ರವಲ್ಲದೆ ಇಡೀ ವ್ಯವಸ್ಥೆಗೂ ಲಾಭವಾಗುತ್ತದೆ. ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮಗ್ರ ಬೆಳವಣಿಗೆಯೂ ಆಗುತ್ತದೆ. ಯೋಗದಿಂದ ತಲೆಯ ಭಾಗಕ್ಕೆ ರಕ್ತ ಸಂಚಾರ ಹೆಚ್ಚಾಗುವುದಲ್ಲದೆ ಜೀರ್ಣ ಶಕ್ತಿ ಸುಧಾರಿಸುತ್ತದೆ ಮತ್ತು ಒತ್ತಡ ಹಾಗೂ ಆತಂಕವೂ ಕಡಿಮೆಯಾಗುತ್ತದೆ.

ಆರೋಗ್ಯಕರವಾದ ಕೂದಲನ್ನು ಕೊಡುವ ಆಸನಗಳು:
ಮುಂದೆ ಬಗ್ಗುವ ಎಲ್ಲಾ ಆಸನಗಳೂ ತಲೆಯ ಭಾಗಕ್ಕೆ ರಕ್ತಸಂಚಾರವನ್ನು ಹೆಚ್ಚಿಸುತ್ತವೆ. ಇದರಿಂದ ಕೂದಲಿನ ಬೇರುಗಳು ಬಲಿಷ್ಠವಾಗಿ, ಸ್ವಲ್ಪ ಸಮಯದ ನಂತರ ಬದಲಾವಣೆಗಳನ್ನು ಕಾಣಬಹುದು. ಎಲ್ಲರೂ ಮಾಡಿ ನೋಡಲೇಬೇಕಾದ ಕೆಲವು ಆಸನಗಳಿವು!

 ಅಧೋಮುಖ ಶ್ವಾನಾಸನ

ಅಧೋಮುಖ ಶ್ವಾನಾಸನ

ಕೆಳಗೆ ಬಗ್ಗುವ ನಾಯಿಯ ಭಂಗಿಯು ತಲೆಗೆ ರಕ್ತ ಸಂಚಾರವನ್ನು ಹೆಚ್ಚಿಸುವುದಲ್ಲದೆ ಸೈನಸ್ ಹಾಗೂ ನೆಗಡಿಯ ಸಮಸ್ಯೆಯನ್ನೂ ನಿವಾರಿಸುತ್ತದೆ. ಮಾನಸಿಕ ದಣಿವು, ಖಿನ್ನತೆ ಮತ್ತು ನಿದ್ರಾವಿಹೀನತೆಗೂ ಇದು ಒಳ್ಳೆಯದು.

ಉತ್ಥಾನಾಸನ

ಉತ್ಥಾನಾಸನ

ಮುಂದೆ ಬಗ್ಗಿ ನಿಲ್ಲುವ ಈ ಭಂಗಿಯಿಂದ ದಣಿವು, ಸುಸ್ತು ಕಡಿಮೆಯಾಗುತ್ತದೆ. ಮುಟ್ಟು ನಿಂತ ನಂತರ ಮತ್ತು ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಇದು ಒಳ್ಳೆಯದು.

ವಜ್ರಾಸನ

ವಜ್ರಾಸನ

ಇದನ್ನು ವಜ್ರದ ಭಂಗಿ ಎಂದೂ ಕರೆಯುತ್ತಾರೆ. ಇತರ ಆಸನಗಳಂತೆ ಈ ಆಸನವಲ್ಲ. ತಿಂದ ತಕ್ಷಣವೇ ಈ ಆಸನವನ್ನು ಮಾಡಬಹುದು. ಮೂತ್ರದ ಸಮಸ್ಯೆಗಳಲ್ಲಿ, ತೂಕ ಕಡಿಮೆ ಮಾಡಲು, ಜೀರ್ಣ ಶಕ್ತಿಯನ್ನು ಹೆಚ್ಚಿಸಲು ಮತ್ತು ಹೊಟ್ಟೆಯ ವಾಯುವನ್ನು ಕುಗ್ಗಿಸಲು ಇದು ಸಹಾಯ ಮಾಡುತ್ತದೆ.

ಪವನ ಮುಕ್ತಾಸನ

ಪವನ ಮುಕ್ತಾಸನ

ಹೊಟ್ಟೆಯ ವಾಯುವನ್ನು ಕುಗ್ಗಿಸಿ ಪಚನಕ್ರಿಯೆಯಲ್ಲಿ ಸಹಾಯ ಮಾಡುತ್ತದೆ. ಕೆಳ ಬೆನ್ನಿನ ಸ್ನಾಯುಗಳು ಬಲಿಷ್ಠವಾಗುತ್ತದೆ. ಹೊಟ್ಟೆ ಹಾಗೂ ಪೃಷ್ಠ ಭಾಗದ ಕೊಬ್ಬನ್ನೂ ಇದು ಕರಗಿಸುತ್ತದೆ.

ಸರ್ವಾಂಗಾಸನ

ಸರ್ವಾಂಗಾಸನ

ಥೈರಾಯ್ಡ್ ಗ್ರಂಥಿಯನ್ನು ಇದು ಸುಸ್ಥಿತಿಯಲ್ಲಿಡುವುದರಿಂದ ಶ್ವಾಸಕೋಶ, ಅನ್ನನಾಳ, ಪ್ರಜನಕ ಹಾಗೂ ನರವ್ಯವಸ್ಥೆಯನ್ನು ಇದು ಪೋಷಿಸುತ್ತದೆ.

ಕೂದಲುದುರುವಿಕೆಯನ್ನು ತಡೆಗಟ್ಟಲು ಸಹಾಯಕವಾಗುವ ಪ್ರಾಣಾಯಾಮಗಳು

ಕೂದಲುದುರುವಿಕೆಯನ್ನು ತಡೆಗಟ್ಟಲು ಸಹಾಯಕವಾಗುವ ಪ್ರಾಣಾಯಾಮಗಳು

1) ಕಫಾಲಭಾತ್ತಿ - ಪ್ರಾಣಾಯಾಮದಿಂದ ಮೆದುಳಿಗೆ ಹೆಚ್ಚು ಆಮ್ಲಜನಕವನ್ನು ಕೊಡುವುದರಿಂದ ನರವ್ಯವಸ್ಥೆಗೆ ಇದು ಬಹಳ ಒಳ್ಳೆಯದು. ದೇಹದ ವಿಷಕಾರಿ ಮಧುಮೇಹವನ್ನು, ಸ್ಥೂಲಕಾಯವನ್ನು ಗುಣಪಡಿಸುತ್ತದೆ.

2) ಭಸ್ತ್ರಿಕ ಪ್ರಾಣಾಯಾಮ - ದೇಹದಲ್ಲಿರುವ ಹೆಚ್ಚು ವಾಯು, ಕಫ ಮತ್ತು ಪಿತ್ತವನ್ನು ಇದು ಹೊರಹಾಕಿ, ನರವ್ಯವಸ್ಥೆಯನ್ನು ಶುದ್ಧಗೊಳಿಸಿ, ದೇಹದಲ್ಲಿ ಅನೇಕ ರೀತಿಯ ಖಾಯಿಲೆಗಳನ್ನು ಇದು ನಿವಾರಿಸುತ್ತದೆ.

3) ನಾಡಿಶೋಧನ ಪ್ರಾಣಾಯಾಮ - ಹೃದಯದ ಸಮಸ್ಯೆ, ಉಬ್ಬಸದ ಖಾಯಿಲೆ, ಸಂಧಿವಾತ, ಖಿನ್ನತೆ, ಮೈಗ್ರೇನ್ ತಲೆನೋವು, ಒತ್ತಡ, ಕಣ್ಣು ಮತ್ತು ಕಿವಿಯ ಸಮಸ್ಯೆಯನ್ನು ಇದು ನಿವಾರಿಸುತ್ತದೆ.

4) ತಣ್ಣಗೆ ಮಾಡುವ ಪ್ರಾಣಾಯಾಮಗಳಾದಂತಹ ಶೀತಲಿ ಮತ್ತು ಶಿತ್‍ಕಾರಿ ಪ್ರಾಣಾಯಾಮಗಳು ಪಿತ್ತದ ಅಸಮತೋಲನದಿಂದುಂಟಾಗುವ ಕೂದಲುದುರುವಿಕೆಯನ್ನು ತಡೆಗಟ್ಟುತ್ತವೆ.

5) ಭ್ರಮರಿ ಪ್ರಾಣಾಯಾಮವು ಮೆದುಳಿನ ಹಾಗೂ ತಲೆಯ ಮೇಲ್ಭಾಗದ ಕೋಶಗಳನ್ನು ತೀಡುತ್ತದೆ.

ಹಣ್ಣು ಹಾಗೂ ತರಕಾರಿಗಳು

ಹಣ್ಣು ಹಾಗೂ ತರಕಾರಿಗಳು

ಯೋಗ ಮಾಡುವುದರ ಜೊತೆಗೆ ನಿಮ್ಮ ಆಹಾರದ ಮೇಲೂ ಗಮನವನ್ನಿಡುವುದು ಮುಖ್ಯ. ತಾಜಾ ಹಣ್ಣುಗಳು, ಸೊಪ್ಪು, ಕಾಳು, ಮೊಳಕೆಯೊಡದ ಕಾಳು, ಹಾಲು, ಮೊಸರು, ತುಪ್ಪ, ಇತ್ಯಾದಿ ಕೂದಲಿನ ಬೆಳವಣೆಗೆಗೆ ಸಹಾಯಕವಾಗುತ್ತವೆ.

*ಕೂದಲನ್ನು ಬೇವಿನ ಸೊಪ್ಪಿನ ನೀರಿನಿಂದ ತೊಳೆಯಿರಿ ಮತ್ತು ವಾರಕ್ಕೆ 2 ರಿಂದ 3 ಸಲ ಕೂದಲನ್ನು ತೊಳೆಯಿರಿ. ತಲೆಯನ್ನು ತೆಂಗಿನಕಾಯಿ ಎಣ್ಣೆಯಿಂದ ಚೆನ್ನಾಗಿ ಮಾಲೀಷ್ಟು ಮಾಡಿ, ಕೂದಲನ್ನು ಬಾಚಿಕೊಳ್ಳಿ. ಮಾಲೀಷು ಮಾಡಿದ ನಂತರ ರಾತ್ರಿಯಿಡೀ ಎಣ್ಣೆಯಿರಲು ಬಿಟ್ಟು ಮಾರನೆಯ ದಿನ ಕೂದಲನ್ನು ತೊಳೆದರೆ ಬಹಳ ಒಳ್ಳೆಯದು.

* ಹಾನಿಕಾರಕ ರಾಸಾಯನಿಕಗಳನ್ನು, ಹೇರ್ ಸ್ಟೈಲ್ ಮಾಡಲು ಬಳಸುವ ರಾಸಾಯನಿಕಗಳನ್ನು ಬಳಸಬೇಡಿ.


www.artofliving.org
English summary

Top Yoga tips for hair Loss

Most people are not aware of the fact that there are yoga poses for hair regrowth that can help you have naturally lustrous hair. If you do these yoga asanas for hair growth regularly, then you will have thick and shinning hair. So you should definitely try to practise these yoga poses for hair regrowth
X
Desktop Bottom Promotion