For Quick Alerts
ALLOW NOTIFICATIONS  
For Daily Alerts

ಕೂದಲುದುರುವ ಸಮಸ್ಯೆ- ಮಹಿಳೆಯರ ಸಂಖ್ಯೆಯೇ ಜಾಸ್ತಿ!

By Super
|

ಸ್ತ್ರೀಯರ ದೇಹವು ಪ್ರತಿಯೊಂದು ಹಂತದಲ್ಲೂ ಸಾಕಷ್ಟು ಬದಲಾವಣೆಯ ಘಟ್ಟವನ್ನು ಅನುಭವಿಸಬೇಕಾಗುತ್ತದೆ. ಈ ಎಲ್ಲಾ ಬದಲಾವಣೆಯು ಕೂದಲಿನ ಮೇಲೂ ಪರಿಣಾಮ ಬೀರುವುದರಿಂದ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.

ಈ ಸಮಸ್ಯೆಯನ್ನು ಹೋಗಲಾಡಿಸಲು ಮೊದಲು ಕೂದಲು ಉದುರುವಿಕೆಗೆ ಕಾರಣವೇನು ಎಂಬುದನ್ನು ತಿಳಿದುಕೊಂಡರೆ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಬಹುದು. ಸಾಮಾನ್ಯವಾಗಿ ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ಕಂಡು ಬರುವ 10 ಕಾರಣಗಳನ್ನು ಇಲ್ಲಿ ನೀಡಲಾಗಿದೆ, ಮುಂದೆ ಓದಿ..

ಕೂದಲ ಆರೈಕೆ

ಕೂದಲ ಆರೈಕೆ

ಸ್ಟ್ರೈಟ್ನರ್ ಬಳಕೆ,ಕೂದಲಿಗೆ ಬಣ್ಣ ಹಚ್ಚುವುದು,ಸ್ಪ್ರೇ, ಜೆಲ್ ಮುಂತಾದವುಗಳ ಅತಿಯಾದ ಬಳಕೆಯಿಂದ ಕೂದಲು ಹಾನಿಗೆ ಒಳಗಾಗುತ್ತವೆ. ಇವುಗಳ ಅತಿಯಾದ ಬಳಕೆಯಿಂದ ಕೂದಲ ಬೆಳವಣಿಗೆಯೂ ಕುಂಟಿತವಾಗುತ್ತದೆ. ಕೂದಲನ್ನು ಬಿಗಿಯಾಗಿ ಕಟ್ಟುವುದು, ಹೊಂದಿಕೆಯಾಗದ ಬಾಚಣಿಕೆ ಬಳಸುವುದು ಇವುಗಳಿಂದ ಕೂದಲು ಉದುರುವಿಕೆ ಇನ್ನಷ್ಟು ಉಲ್ಬಣಗೊಳ್ಳಬಹುದು.

PCOS

PCOS

PCOS ಸಮಸ್ಯೆ ಕಂಡು ಬಂದಲ್ಲಿ ಆಂಡ್ರೋಜೆನ್ಸ್ ಎಂಬ ಹಾರ್ಮೋನು ಹೆಚ್ಚು ಸ್ರವಿಕೆಯಾಗಿ ಸಿಸ್ಟ್ (ಸಣ್ಣ ದ್ರವ ಚೀಲಗಳು) ಕಾಣಿಸಿಕೊಳ್ಳುತ್ತವೆ.ಈ ರೀತಿ ಹಾರ್ಮೋನಿನ ಅಸಮತೋಲನವಾದಾಗ ಕೂದಲ ಬೆಳವಣಿಗೆಯ ಮೇಲೆ ಕೂಡ ಪರಿಣಾಮ ಬೀರುತ್ತದೆ.

ಅನೀಮಿಯ

ಅನೀಮಿಯ

ಆಹಾರದಲ್ಲಿ ಕಬ್ಬಿಣದ ಅಂಶ ಕಡಿಮೆಯಾದಲ್ಲಿ ಅನೀಮಿಯ ಕಂಡು ಬರುತ್ತದೆ. ಸಾಕಷ್ಟು ಮಹಿಳೆಯರ ದೇಹದಲ್ಲಿ ಫೋಲಿಕ್ ಆಸಿಡ್‌ನ ಕೊರತೆ ಮತ್ತು ಅಧಿಕ ರಕ್ತಸ್ರಾವದ ಕಾರಣದಿಂದ ಅನೀಮಿಯ ಉಂಟಾಗುತ್ತದೆ.ಇದರ ಪರಿಣಾಮವಾಗಿ ಅಂಗಾಂಶಗಳಲ್ಲಿ ಆಮ್ಲಜನಕದ ಕೊರತೆ ಅಥವಾ ಹಿಮೊಗ್ಲೋಬಿನ್ ಕೊರತೆ ಕಂಡುಬರುತ್ತದೆ. ಆಮ್ಲಜನಕವು ಕೂದಲ ಬುಡವನ್ನು ತಲುಪದಿದ್ದಾಗ ಕೂದಲು ದೃಢವಾಗಿರುವುದಿಲ್ಲ ಮತ್ತು ಕೂದಲು ಉದುರಲು ಪ್ರಾರಂಭವಾಗುತ್ತದೆ.

ಮುಟ್ಟಿನ ಸಂದರ್ಭದಲ್ಲಿ

ಮುಟ್ಟಿನ ಸಂದರ್ಭದಲ್ಲಿ

ಮಹಿಳೆಯು ಮೆನೋಪಾಸ್ (ಋತುಬಂಧ) ಹಂತದಲ್ಲಿರುವಾಗ ದೇಹದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ ಇದರ ಪರಿಣಾಮವಾಗಿ ಕೂದಲು ಉದುರುತ್ತವೆ.ದೇಹದಲ್ಲಿ ಈಸ್ಟ್ರೋಜೆನ್ ಪ್ರಮಾಣ ಕಡಿಮೆ ಇರುವುದೇ ಇದಕ್ಕೆ ಮುಖ್ಯ ಕಾರಣ. ಇದರ ಬಗ್ಗೆ ಕಾಳಜಿ ತೆಗೆದುಕೊಳ್ಳದಿದ್ದಲ್ಲಿ ಒಣ ಕೂದಲಿನ ಜೊತೆಗೆ ಕೂದಲು ಉದುರಲು ಪ್ರಾರಂಭವಾಗುತ್ತದೆ. ಮೈಲ್ಡ್ ಶಾಂಪೂ ಮತ್ತು ಕಂಡಿಷನಿಂಗ್ ಬಳಸುವುದು ಮತ್ತು ಸಮತೋಲನ ಆಹಾರ ಬಳಸುವುದರಿಂದ ಕೂದಲು ಉದುರುವಿಕೆಯನ್ನು ತಡೆಯಬಹುದು.

ಹೆರಿಗೆ

ಹೆರಿಗೆ

ಹೆಚ್ಚಿನ ಮಹಿಳೆಯರಿಗೆ ಹೆರಿಗೆಯಾದ ನಂತರ ಕೂದಲು ಉದುರುತ್ತದೆ. ಗರ್ಭಿಣಿಯಾಗಿದ್ದಾಗ ಈಸ್ಟ್ರೋಜೆನ್ ಹಾರ್ಮೋನು ಗರಿಷ್ಠ ಮಟ್ಟಕ್ಕೆ ಹೋಗುವುದರಿಂದ ದಟ್ಟ ಕೂದಲು ಹುಟ್ಟಿಕೊಳ್ಳುತ್ತವೆ. ಮಗುವಾದ ನಂತರ ಹಾರ್ಮೋನು ಮೊದಲಿನ ಸ್ಥಿತಿಗೆ ಬರುವುದರಿಂದ ಕೂದಲು ಉದುರಲು ಪ್ರಾರಂಭವಾಗುತ್ತದೆ.ಆದರೆ ಸ್ವಲ್ಪ ವಾರಗಳ ನಂತರ ಕೂದಲು ಮೊದಲಿನಂತೆ ಬರಲು ಪ್ರಾರಂಭವಾಗುತ್ತದೆ.

ಪ್ರೋಟೀನ್ ಕೊರತೆ

ಪ್ರೋಟೀನ್ ಕೊರತೆ

ನಮ್ಮ ಕೂದಲು ಕೆರಾಟಿನ್ ಎಂಬ ಪ್ರೋಟೀನ್ ನಿಂದ ಕೂಡಿರುತ್ತದೆ. ಪ್ರೋಟೀನ್ ಯುಕ್ತ ಆಹಾರಗಳನ್ನು ತೆಗೆದುಕೊಳ್ಳದಿದ್ದಾಗ ಸೀಳು ಕೂದಲು ಅಧಿಕವಾಗುತ್ತವೆ.ನಂತರ ಕೂದಲು ಉದುರಲು ಆರಂಭವಾಗುತ್ತದೆ.

ಔಷಧಗಳು

ಔಷಧಗಳು

ಗರ್ಭನಿರೋಧಕಗಳನ್ನು ಬಳಸುವ ಮಹಿಳೆಯು ಅದನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದಾಗ ಅಡ್ಡ ಪರಿಣಾಮವಾಗಿ ಕೂದಲು ಉದುರಲು ಪ್ರಾರಂಭವಾಗುತ್ತದೆ. ಇತರ ಹಾರ್ಮೋನಿನ ಸಮಸ್ಯೆಗಳು ಮತ್ತು ಮಾತ್ರೆಗಳು ಕೂಡ ಕೂದಲಿನ ಉದುರುವಿಕೆಗೆ ಕಾರಣವಾಗುತ್ತವೆ. ಕಿಮೋತೆರಪಿಯಿಂದ ಕೂಡ ಕೂದಲು ಉದುರುತ್ತದೆ.

ತೀವ್ರ ತೂಕ ನಷ್ಟ

ತೀವ್ರ ತೂಕ ನಷ್ಟ

ಡಯೆಟಿಂಗ್ ಮಾಡುವುದು ಮತ್ತು ಇದ್ದಕ್ಕಿದ್ದಂತೆ ತೀವ್ರವಾಗಿ ತೂಕ ಕಳೆದುಕೊಳ್ಳುವುದು ಕೂದಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.ಕೂದಲು ಬೆಳೆಯಲು ಬೇಕಾಗುವ ಕೆಲವು ಪೋಷಕಾಂಶವುಳ್ಳ ಆಹಾರಗಳ ಕೊರತೆಯಿಂದ ಕೂದಲು ಉದುರುವಿಕೆ ಹೆಚ್ಚುತ್ತದೆ.

ಥೈರಾಯ್ಡ್ ರೋಗ, ಸ್ವರಕ್ಷಿತ ರೋಗ

ಥೈರಾಯ್ಡ್ ರೋಗ, ಸ್ವರಕ್ಷಿತ ರೋಗ

ದೇಹದ ಬೆಳವಣಿಗೆಗೆ ಅಗತ್ಯವಾದ ತ್ರಿಯಡೋಥೈರಾಯಿನ್ ಮತ್ತು ಥೈರಾಕ್ಸಿನ್ ಎಂಬ ಹಾರ್ಮೋನುಗಳು ಥೈರಾಯಿಡ್ ನಲ್ಲಿರುತ್ತವೆ.ಹೈಪೋ ಥೈರಾಯಿಡ್ ಕಂಡುಬಂದಲ್ಲಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದಲ್ಲಿ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ.

ತೀವ್ರ ಅಥವಾ ದೀರ್ಘಕಾಲ ವೈದ್ಯಕೀಯ ಸಮಸ್ಯೆಗಳು

ತೀವ್ರ ಅಥವಾ ದೀರ್ಘಕಾಲ ವೈದ್ಯಕೀಯ ಸಮಸ್ಯೆಗಳು

ಮಧುಮೇಹ,ಸೋರಿಯಾಸಿಸ್ ಇನ್ನಿತರ ದೀರ್ಘಕಾಲದ ಕಾಯಿಲೆಗಳಿಗೂ ಕೂಡ ಕೂದಲು ಉದುರುತ್ತವೆ.ಮಧುಮೇಹವು ದೇಹದ ಪರಿಚಲನಾ ವ್ಯವಸ್ಥೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮಧುಮೇಹದಿಂದಾಗಿ ನೆತ್ತಿಯ ಮೇಲೆ ರಕ್ತ ಸಂಚಲನ ಸರಿಯಾಗಿ ಆಗದಿದ್ದಲ್ಲಿ ಕೂದಲು ಉದುರುವ ಸಂಭವವಿರುತ್ತದೆ. ಸೋರಿಯಾಸಿಸ್ ಎಂಬ ಚರ್ಮದ ಕಾಯಿಲೆ ಕೂಡ ಕೂದಲು ಉದುರುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ದಿನದಲ್ಲಿ 60 ರಿಂದ 100 ಕೂದಲು ಉದುರುವುದು ಸಾಮಾನ್ಯ ಆದರೆ ಅದಕ್ಕಿಂತ ಹೆಚ್ಚು ಕೂದಲು ಉದುರಿದಲ್ಲಿ ಬೊಕ್ಕ ತಲೆಯಾಗುತ್ತದೆ.ಆದ್ದರಿಂದ ಅದಕ್ಕಿಂತ ಹೆಚ್ಚು ಕೂದಲು ಉದುರುವುದು ಕಂಡು ಬಂದಲ್ಲಿ ವೈದ್ಯರ ಸಲಹೆ ಪಡೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಸೂಕ್ತ.

English summary

Top 10 reasons for hair loss in women

A woman’s body goes through a lot of changes through her entire course of life. These changes can at times be a contributing factor in hair loss.
Story first published: Wednesday, June 10, 2015, 20:14 [IST]
X
Desktop Bottom Promotion