For Quick Alerts
ALLOW NOTIFICATIONS  
For Daily Alerts

ಕೂದಲಿಗೆ ಮೆಹೆಂದಿ ಹಚ್ಚಿಕೊಳ್ಳುವ ಮುನ್ನ ಎರಡು ಬಾರಿ ಆಲೋಚಿಸಿ!

By Manu
|

ಕೂದಲಿನ ಸೌಂದರ್ಯಕ್ಕಾಗಿ ಇಂದು ಹೆಂಗಳೆಯರು ನಾನಾ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ದಟ್ಟವಾಗಿ ರೇಷ್ಮೆಯಂತೆ ಹೊಳೆಯುವ ಕೂದಲು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ...? ಇದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ರಾಸಾಯನಿಕಗಳನ್ನು ಬಳಸುವುದಕ್ಕಿಂತ ಸೈಸರ್ಗಿಕ ವಿಧಾನಗಳನ್ನು ಅನುಸರಿಸಿ ಸೊಗಸಾದ ಕೂದಲನ್ನು ಹೊಂದುವ ಉಪಾಯವನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ. ನೈಸರ್ಗಿಕ ವಿಧಾನದಲ್ಲಿ ಮೆಹಂದಿ ಕೂಡ ಸ್ಥಾನ ಪಡೆದಿದ್ದು ನಿಮ್ಮ ಕೈಗಳ ಸೌಂದರ್ಯವನ್ನು ಹೆಚ್ಚಿಸುವ ಇದು ಕೂದಲಿನ ಕಾಂತಿ ಮತ್ತು ರೇಷ್ಮಯಂತಹ ನುಣುಪಿಗೂ ಸೂಕ್ತವಾದುದಾಗಿದೆ.

ಬಿಳಿ ಕೂದಲಿನ ಸಮಸ್ಯೆಗೆ ಅದ್ಭುತ ಪರಿಹಾರವನ್ನು ನೀಡುವ ಗೋರಂಟಿ ಕಪ್ಪನೆಯ ಕೂದಲನ್ನು ಮಿರಮಿರನೆ ಮಿಂಚುವಂತೆ ಮಾಡುತ್ತದೆ ಮತ್ತು ಕೂದಲಿನ ಪೋಷಣೆಯಲ್ಲೂ ಅದ್ಭುತವಾಗಿ ಕಾರ್ಯನಿರ್ವಹಿಸುತ್ತದೆ. ಅಪಾಯಕಾರಿ ಹೇರ್ ಡೈಗಳಿಗಿಂತ ಇದು ಅತ್ಯುತ್ತಮವಾದ ಮತ್ತು ಸುರಕ್ಷಿತವಾದ ಸೌಂದರ್ಯಪರಿಕರವಾಗಿರುವ ಕಾರಣದಿಂದ ಮೆಹಂದಿಯನ್ನು ಹೆಚ್ಚಿನವರು ಯಾವುದೇ ಭಯವಿಲ್ಲದೆ ಬಳಸುತ್ತಾರೆ. ಕೂದಲಿನ ಬುಡವನ್ನು ಆರೋಗ್ಯಕರಗೊಳಿಸುವ ಅಂಶಗಳು ಮೆಹೆಂದಿಯಲ್ಲಿ ಯಥೇಚ್ಛವಾಗಿದ್ದು ಕೂದಲನ್ನು ನುಣುಪಾಗಿಸುವ ಇದರ ಮೇಲೆ ಸಂಪೂರ್ಣ ವಿಶ್ವಾಸವನ್ನು ನಿಮಗೆ ಇರಿಸಿಕೊಳ್ಳಬಹುದು. ಮೆಹೆಂದಿ ಸಮಾರಂಭ: ನಿಮ್ಮ ದಿರಿಸಿನ ಆಯ್ಕೆ ಹೇಗಿದ್ದರೆ ಚೆಂದ?

ಮೆಹೆಂದಿಯನ್ನು ನಿಮ್ಮ ಕೂದಲಿನ ಬುಡಕ್ಕೆ ಲೇಪಿಸುವ ಮುನ್ನ ಕೂದಲಿನ ಬುಡದಲ್ಲಿ ನಮ್ಮ ಕಣ್ಣಿಗೆ ಕಾಣದೆ ಆಗಿರುವ ಗಾಯಗಳನ್ನು ನಿವಾರಣೆ ಮಾಡಿಕೊಳ್ಳುವುದು ಒಳ್ಳೆಯದು. ಒಂದು ವೇಳೆ ನಿಮ್ಮ ಕೂದಲಿನ ಬುಡದಲ್ಲಿ ಇನ್‌ಫೆಕ್ಷನ್ ಇದ್ದಲ್ಲಿ ಸಹ ಮೆಹೆಂದಿಯನ್ನು ಬಳಸಿ ಅದನ್ನು ನಿವಾರಿಸಿಕೊಳ್ಳಬಹುದು. ಹಾಗಾಗಿ ಬಣ್ಣ, ಆರೋಗ್ಯ ಮತ್ತು ಕಾಂತಿ ಎಲ್ಲದಕ್ಕೂ ಒಂದೇ ಒಂದು ಉಪಾಯ, ಅದು ಮೆಹೆಂದಿ. ಬನ್ನಿ ಮೆಹೆಂದಿಯನ್ನು ನಿಮ್ಮ ತಲೆಗೆ ಮೊದಲ ಬಾರಿ ಲೇಪಿಸಿಕೊಳ್ಳುವ ಮುನ್ನ ಕೆಲವೊಂದು ಅಂಶಗಳನ್ನು ಗಮನಿಸಬೇಕಾಗಿರುತ್ತದೆ. ಅದು ಏನು ಎಂದು ನೋಡಿಕೊಂಡು ಬರೋಣ... ಕಳೆಗುಂದಿದ ಮೆಹೆಂದಿ ಬಣ್ಣವನ್ನು ನಿವಾರಿಸಲು ಸರಳ ಟಿಪ್ಸ್

ಕೂದಲಿನ ಬುಡದಲ್ಲಿ ಗಾಯಗಳು ಇಲ್ಲವೆಂದು ಖಚಿತಪಡಿಸಿಕೊಳ್ಳಿ

ಕೂದಲಿನ ಬುಡದಲ್ಲಿ ಗಾಯಗಳು ಇಲ್ಲವೆಂದು ಖಚಿತಪಡಿಸಿಕೊಳ್ಳಿ

ಕೂದಲಿನ ಬುಡದಲ್ಲಿ ಗಾಯಗಳು ಇದ್ದಲ್ಲಿ ಡೈ ಲೇಪಿಸಿಕೊಳ್ಳದೆ ಇರುವುದು ಒಳ್ಳೆಯದು. ಏಕೆಂದರೆ ಡೈ ನಿಮ್ಮ ಕೂದಲಿನ ಬುಡದಲ್ಲಿರುವ ಇನ್‌ಫೆಕ್ಷನ್ ಮತ್ತು ಗಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಕೂದಲಿನ ಬುಡದಲ್ಲಿ ಉಂಟಾಗಿರುವ ಗಾಯಗಳನ್ನು ಮೊದಲು ನಿವಾರಣೆ ಮಾಡಿಕೊಂಡು ನಂತರ ಮೆಹಂದಿಯನ್ನು ಹಚ್ಚಿಕೊಳ್ಳುವುದು ಉತ್ತಮ.

ನಿಮ್ಮ ಹಿಂದಿನ ಕೂದಲಿನ ಬಣ್ಣ

ನಿಮ್ಮ ಹಿಂದಿನ ಕೂದಲಿನ ಬಣ್ಣ

ಒಂದು ವೇಳೆ ನೀವು ಇತ್ತೀಚೆಗಷ್ಟೇ ಕೂದಲಿನ ಬುಡಕ್ಕೆ ರಾಸಾಯನಿಕ-ಮಿಶ್ರಿತ ಕೂದಲಿನ ಡೈ ಹಚ್ಚಿಕೊಂಡಿದ್ದಲ್ಲಿ, ಮೆಹಂದಿಯನ್ನು ಹಚ್ಚಿಕೊಳ್ಳುವ ಮುನ್ನ ಕನಿಷ್ಠ 6 ತಿಂಗಳು ಕಾಯುವುದು ಒಳ್ಳೆಯದು. ರಾಸಾಯನಿಕ ಮಿಶ್ರಿತ ಡೈ ಮತ್ತು ಮೆಹಂದಿ ಎರಡರ ಮಿಶ್ರಣವು ನಿಮ್ಮ ಕೂದಲಿಗೆ ಹಾನಿಯುಂಟು ಮಾಡಬಹುದು. ಇದರಿಂದ ಯಾವ ಬಗೆಯ ಹಾನಿ ಸಂಭವಿಸುತ್ತದೆ ಎಂಬುದನ್ನು ಊಹಿಸುವುದು ಕಷ್ಟ. ಅದು ನಿಮ್ಮ ಕೂದಲೇ ನಿರ್ಧರಿಸಬೇಕು. ಇದರಿಂದ ನಿಮ್ಮ ಕೂದಲು ಉದುರಿ ಹೋಗಬಹುದು ಅಥವಾ ಇನ್ನಿತರ ಕೂದಲು-ಸಂಬಂಧಿತ ಕಾಯಿಲೆಗಳು ಸಂಭವಿಸಬಹುದು.

ನಿಮ್ಮ ಕೂದಲು ವಾಸನೆ ಬರಬಹುದು

ನಿಮ್ಮ ಕೂದಲು ವಾಸನೆ ಬರಬಹುದು

ಮೆಹಂದಿಯನ್ನು ಹಾಕಿಕೊಂಡ ತಲೆಯಲ್ಲಿ ಅದರದೆ ವಾಸನೆ ಬರುವುದು ಸಹಜ. ಅದನ್ನು ಶಾಂಪೂ ಹಾಕಿ ತೊಳೆದ ಮೇಲೂ ಸಹ ಅದರಿಂದ ವಾಸನೆ ಬರುತ್ತಲೆ ಇರುತ್ತದೆ. ಆದ್ದರಿಂದ ಮೆಹಂದಿಯನ್ನು ಹಚ್ಚಿಕೊಂಡರೆ ಅದರ ವಾಸನೆಯನ್ನು ಸಹ ಸಹಿಸಿಕೊಳ್ಳುವ ಶಕ್ತಿಯನ್ನು ಪಡೆಯಿರಿ.

ಮೆಹಂದಿಯಿಂದ ಕಲೆಗಳು ಉಂಟಾಗುತ್ತವೆ

ಮೆಹಂದಿಯಿಂದ ಕಲೆಗಳು ಉಂಟಾಗುತ್ತವೆ

ತ್ವಚೆಗಾಗಲಿ, ಕೂದಲಿಗಾಗಲಿ, ಬಟ್ಟೆಗಾಗಲಿ ಮೆಹಂದಿಯನ್ನು ನೀವು ಎಲ್ಲಿ ಹಚ್ಚಿಕೊಳ್ಳುತ್ತೀರೋ, ಅಲ್ಲಿ ಇದು ತನ್ನ ಕಲೆಯನ್ನು ಉಳಿಸಿ ಹೋಗುತ್ತದೆ. ಆದ್ದರಿಂದ ಮೆಹಂದಿಯನ್ನು ನಿಮ್ಮ ಕೂದಲಿಗೆ ಹಚ್ಚಿಕೊಳ್ಳುವ ಮುನ್ನ ನಿಮ್ಮ ಹಣೆಗೆ ಮತ್ತು ಕಿವಿಗಳಿಗೆ ಇದು ಸೋಕದಂತೆ ವ್ಯಾಸೆಲಿನ್ ಲೇಪಿಸಿಕೊಳ್ಳಿ. ಕುತ್ತಿಗೆಯ ಹಿಂಬದಿಯ ಮೇಲೆ ಸಹ ವ್ಯಾಸೆಲಿನ್ ಲೇಪಿಸಿಕೊಳ್ಳಿ. ಇದು ಮೆಹಂದಿ ನಿಮ್ಮ ತ್ವಚೆಗೆ ಅಂಟದಂತೆ ಕಾಪಾಡುತ್ತದೆ.

ಕೆಲ ಗಂಟೆ ಕಾಯಬೇಕು

ಕೆಲ ಗಂಟೆ ಕಾಯಬೇಕು

ಹೌದು ಮೆಹಂದಿಯನ್ನು ಹಚ್ಚಿಕೊಂಡ ತಕ್ಷಣ ಅದು ನಿಮ್ಮ ಕೂದಲಿಗೆ ಬಣ್ಣವನ್ನು ನೀಡುವುದಿಲ್ಲ. ಅದು ಬಣ್ಣವನ್ನು ನೀಡಲು ಕನಿಷ್ಠ 2 ಗಂಟೆ ಸಮಯ ಬೇಕು. ಹಾಗಾಗಿ ಮೆಹಂದಿಯನ್ನು ನೀವು ಬಿಡುವಾಗಿದ್ದಾಗ ಮಾತ್ರ ಲೇಪಿಸಿಕೊಳ್ಳಿ. ಇದರಿಂದ ನಿಮ್ಮ ಕೂದಲಿಗೆ ಅಗತ್ಯವಾದ ಪ್ರಯೋಜನ ದೊರೆಯುತ್ತದೆ.

ಪರಿಪೂರ್ಣ ಬಣ್ಣವನ್ನು ನೀಡುವುದಿಲ್ಲ

ಪರಿಪೂರ್ಣ ಬಣ್ಣವನ್ನು ನೀಡುವುದಿಲ್ಲ

ಮೆಹಂದಿಯನ್ನು ನೀವು ಇಡೀ ತಲೆ ಕೂದಲಿಗೆ ಲೇಪಿಸಿದರು, ಅದು ಪರಿಪೂರ್ಣವಾಗಿ ನಿಮ್ಮ ಕೂದಲಿಗೆ ಬಣ್ಣವನ್ನು ನೀಡುವುದಿಲ್ಲ. ಅಲ್ಲಲ್ಲಿ ಮಾಮೂಲಿ ಬಣ್ಣದ ಕೂದಲುಗಳು ನಿಮಗೆ ಕಾಣಬಹುದು. ಇದು ಒಂದು ಲೋಪ ಮೆಹಂದಿಯಲ್ಲಿ ಇದೆ. ಆದರೆ ಹಾಗೆ ಇದ್ದಾಗಲು ಸಹ ಮೆಹಂದಿ ಲೇಪಿಸಿದ ಕೂದಲು ನೋಡಲು ಚೆನ್ನಾಗಿ ಕಾಣುತ್ತದೆ.

ಕೂದಲಿಗೆ ಡೈ ಆಗಿ ಬಳಸುವಾಗ

ಕೂದಲಿಗೆ ಡೈ ಆಗಿ ಬಳಸುವಾಗ

ಕೂದಲಿಗೆ ಮೆಹಂದಿಯನ್ನು ಡೈ ಆಗಿ ಬಳಸುವುದು ಒಳ್ಳೆಯದು. ಒಮ್ಮೆ ನೀವು ಈ ಸ್ವಾಭಾವಿಕ ಹೇರ್ ಡೈಯನ್ನು ಬಳಸಲು ಆರಂಭಿಸಿದ ಮೇಲೆ, ಅದನ್ನೇ ಬಳಸುವುದನ್ನು ಮುಂದುವರಿಸುವುದು ಒಳ್ಳೆಯದು. ಇದನ್ನು ಬಳಸಿದ ಮೇಲೆ ರಾಸಾಯನಿಕ ಡೈಗಳನ್ನು ಬಳಸಲು ಹೋಗಬೇಡಿ. ಇದರಿಂದ ನಿಮ್ಮ ಕೂದಲಿನ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ.

English summary

Tips Before Applying Henna On Hair

Henna is regarded as a safer option to use on the hair when compared to the nasty box of hair dyes that are available in the market. Henna is widely used by Indian women and, nowadays, even the Western folks are turning to this plant-based product. here are some of the best tips you should keep in mind before the application. If your scalp is sensitive, doing a patch test is mandatory:
X
Desktop Bottom Promotion