For Quick Alerts
ALLOW NOTIFICATIONS  
For Daily Alerts

ಅಬ್ಬಬ್ಬಾ..ಬೆಟ್ಟದ ನೆಲ್ಲಿಕಾಯಿಯ ಜಾದೂಗೆ ತಲೆಬಾಗಲೇಬೇಕು

By Super
|

ತಲೆ ಹೊಟ್ಟು ಎಂದರೇನು? ಇದು ಕೂದಲಿನ ಬುಡದಲ್ಲಿ ಒಣಗುವಿಕೆ, ಅಧಿಕ ಬೆವರು ಅಥವಾ ಬ್ಯಾಕ್ಟೀರಿಯಾದಿಂದಾಗಿ ತ್ವಚೆಯ ಮೇಲೆ ಕಾಣಿಸಿಕೊಳ್ಳುವ ಒಂದು ರೀತಿಯ ನಿರ್ಜೀವ ತ್ವಚೆಯನ್ನು ತಲೆ ಹೊಟ್ಟು ಎಂದು ಕರೆಯುತ್ತಾರೆ.

ಇದು ನಿಮಗೆ ತೊಂದರೆ ನೀಡುತ್ತದೆಯೇ? ಹೌದು, ಇದರಿಂದ ನಿಮಗೆ ತುರಿಕೆ, ಉರಿ ಮತ್ತು ಕಿರಿಕಿರಿಯು ಕೂದಲಿನ ಬುಡದಲ್ಲಿ ಕಾಣಿಸಿಕೊಳ್ಳುತ್ತದೆ. ಇದು ಬಂದಿತೆಂದರೆ ನಿಮಗೆ ಎಲ್ಲಾ ಕಡೆಯು ಮುಜುಗರ ಶುರುವಾಗುತ್ತದೆ. ವಿಶೇಷವಾಗಿ ಕೆಲಸದ ಸ್ಥಳದಲ್ಲಿ ಇದರಿಂದ ನೀವು ತಲೆ ಕೆರೆದುಕೊಂಡು ಕೂರುತ್ತೀರಿ. ತಲೆ ಹೊಟ್ಟಿನಿಂದ ಹಲವಾರು ಅಡ್ಡ ಪರಿಣಾಮಗಳು ಕಂಡು ಬರುತ್ತವೆ. ಇದು ತಲೆ ಕೂದಲು ಹೆಚ್ಚಿಗೆ ಉದುರುವಂತೆ ಮಾಡುತ್ತದೆ ಮತ್ತು ನಿಮ್ಮ ಕೂದಲನ್ನು ತೆಳ್ಳಗೆ ಮಾಡುತ್ತದೆ.

Steps To Apply Amla For Hair

ಜೊತೆಗೆ ಇದು ಕೂದಲಿನ ಬಣ್ಣವನ್ನು ಸಹ ಬದಲಾಯಿಸುತ್ತದೆ. ಯೌವನದಲ್ಲಿಯೇ ಇದರ ಪರಿಣಾಮವಾಗಿ ಹಲವರು ಬಿಳಿಯ ಕೂದಲನ್ನು ಪಡೆಯುತ್ತಾರೆ. ಇದಕ್ಕೆ ತಲೆ ಹೊಟ್ಟೆ ಪ್ರಮುಖ ಕಾರಣವಾಗಿರುತ್ತದೆ. ಆದ್ದರಿಂದ ತಲೆಹೊಟ್ಟನ್ನು ಆದಷ್ಟು ಬೇಗ ನಿವಾರಿಸಿಕೊಳ್ಳಲು ಪ್ರಯತ್ನಿಸಿ. ಹಾಗಾದರೆ ತಲೆ ಹೊಟ್ಟನ್ನು ಹೇಗೆ ನಿವಾರಿಸಿಕೊಳ್ಳಬಹುದು? ಎಂಬುದು ನಿಮ್ಮ ಪ್ರಶ್ನೆಯಾದಲ್ಲಿ, ಅದಕ್ಕಾಗಿ ಶತಮಾನಗಳಿಂದ ಬಳಸಿಕೊಂಡು ಬರಲಾಗುತ್ತಿರುವ, ಆಯುರ್ವೇದದಲ್ಲಿ ಪ್ರಧಾನ ಗಿಡ ಮೂಲಿಕೆಯಾಗಿರುವ ಬೆಟ್ಟದ ನೆಲ್ಲಿಕಾಯಿ ಅಥವಾ ಆಮ್ಲ ಎಂದು ಕರೆಯಲ್ಪಡುವ ರಾಮ ಬಾಣವನ್ನು ಪ್ರಯೋಗಿಸಿ. ಕೂದಲಿನ ಎಲ್ಲಾ ಸಮಸ್ಯೆಗೆ ಒಂದೇ ರಾಮಬಾಣ: ಬೇವಿನ ಎಣ್ಣೆ!

ಬೆಟ್ಟದ ನೆಲ್ಲಿಕಾಯಿಯು ಕೂದಲಿಗೆ ಹಲವಾರು ರೀತಿಯಲ್ಲಿ ಪ್ರಯೋಜನಕಾರಿಯಾಗಿರುತ್ತದೆ. ನಿಮಗೆ ತಿಳಿದಿರಬಹುದು. ಇದರ ರಸವನ್ನು ಕೂದಲಿಗೆ ಲೇಪಿಸುತ್ತಾರೆ. ಇದೊಂದು ಅಗ್ಗದ ಮತ್ತು ಸುಲಭವಾಗಿ ದೊರೆಯುವ ಪದಾರ್ಥವಾಗಿದ್ದು, ನಿಮ್ಮ ಕೂದಲನ್ನು ಪರಿಣಾಮಕಾರಿಯಾಗಿ ಬೆಳೆಯಲು ಸಹಾಯ ಮಾಡುತ್ತದೆ. ಬೆಟ್ಟದ ನೆಲ್ಲಿಕಾಯಿಯು ವಿಟಮಿನ್ ಸಿ, ಕಬ್ಬಿಣಾಂಶ, ಸತು ಮತ್ತು ಬಿ ಕಾಂಪ್ಲೆಕ್ಸ್ ವಿಟಮಿನ್‌ಗಳನ್ನು ಹೊಂದಿರುತ್ತದೆ.

ಬೆಟ್ಟದ ನೆಲ್ಲಿಕಾಯಿ ರಸದಿಂದ ಯಾವುದೇ ಅಡ್ಡ ಪರಿಣಾಮಗಳು ಕಂಡು ಬರುವುದಿಲ್ಲ. ಈ ಅಂಕಣದಲ್ಲಿ ಈ ಬೆಟ್ಟದ ನೆಲ್ಲಿಕಾಯಿಯಿಂದ ಕೂದಲಿಗೆ ದೊರೆಯುವ ಅತ್ಯುತ್ತಮ ಪ್ರಯೋಜನಗಳನ್ನು ಬಳಸಿಕೊಂಡು, ನಿಮ್ಮ ತಲೆ ಹೊಟ್ಟಿನ ಸಮಸ್ಯೆಯನ್ನು ಹೇಗೆ ದೂರ ಮಾಡಿಕೊಳ್ಳುವುದು ಎಂದು ವಿವರಿಸಲಾಗಿದೆ ಮುಂದೆ ಓದಿ.

ನೆಲ್ಲಿಕಾಯಿ ಪೇಸ್ಟ್
ನೆಲ್ಲಿಕಾಯಿಯನ್ನು ನೀರಿನಲ್ಲಿ ಬೆರೆಸಿ ಪೇಸ್ಟ್ ಮಾಡಿಕೊಂಡು ತಲೆ ಕೂದಲ ಬುಡಕ್ಕೆ ಲೇಪಿಸಿ. ಇದನ್ನು ಲೇಪಿಸಿ, 30 ನಿಮಿಷಗಳ ಕಾಲ ಬಿಡಿ, ನಂತರ ನೀರಿನಿಂದ ತೊಳೆಯಿರಿ. ಇದು ತಲೆ ಹೊಟ್ಟನ್ನು ನಿವಾರಿಸಿಕೊಳ್ಳಲು ಅದ್ಭುತವಾದ ಪರಿಹಾರವಾಗಿರುತ್ತದೆ.

ನೆಲ್ಲಿಕಾಯಿ-ಲಿಂಬೆಹಣ್ಣಿನ ಪ್ಯಾಕ್
ನೆಲ್ಲಿಕಾಯಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಂಡು ಅದನ್ನು ಚೆನ್ನಾಗಿ ಒಣಗಿಸಿ. ನಂತರ ಅದನ್ನು ಚೆನ್ನಾಗಿ ಪುಡಿ ಮಾಡಿಕೊಂಡು, ಕಂಟೇನರ್‌ನಲ್ಲಿ ಹಾಕಿಟ್ಟುಕೊಳ್ಳಿ. ನಿಮಗೆ ಅಗತ್ಯವಾದಾಗ ಇದನ್ನು ನೀರು ಮತ್ತು ಲಿಂಬೆರಸದಲ್ಲಿ ಬೆರೆಸಿಕೊಂಡು ತೆಳುವಾದ ಪೇಸ್ಟ್ ಮಾಡಿಕೊಂಡು, ಕೂದಲಿನ ಬುಡಕ್ಕೆ ಲೇಪಿಸಿಕೊಳ್ಳಿ. ಇದನ್ನು 30 ನಿಮಿಷಗಳ ಕಾಲ ಬಿಡಿ, ನಂತರ ತೊಳೆಯಿರಿ. ಹೆಚ್ಚಿನ ಪ್ರಯೋಜನವನ್ನು ನಿಮ್ಮದಾಗಿಸಿಕೊಳ್ಳಲು, ಕೂದಲನ್ನು ತೊಳೆಯುವಾಗ ಸೀಗೆಕಾಯಿಯನ್ನು ಬಳಸಬಹುದು. ಸಾಸಿವೆ ಎಣ್ಣೆ: ಕೂದಲಿನ ಸಮಸ್ಯೆಗಳಿಗೆ ಹೇಳಿ ಮಾಡಿಸಿದ ಮನೆಮದ್ದು

ನೆಲ್ಲಿಕಾಯಿ-ತುಳಸಿ ಪ್ಯಾಕ್


ನೆಲ್ಲಿಕಾಯಿಯನ್ನು ತುಳಸಿ ಮತ್ತು ನೀರಿನೊಂದಿಗೆ ಬೆರೆಸಿಕೊಂಡು ಮೃದುವಾದ ಪೇಸ್ಟ್ ಮಾಡಿ ಮಾಡಿಕೊಳ್ಳಿ. ಒಂದು ವೇಳೆ ನಿಮ್ಮ ಬಳಿ ನೆಲ್ಲಿಕಾಯಿ ಇಲ್ಲವಾದಲ್ಲಿ, ನೆಲ್ಲಿ ಕಾಯಿ ಪುಡಿಯನ್ನು ಸಹ ಬಳಸಬಹುದು. ಈ ಪ್ಯಾಕನ್ನು ನಿಮ್ಮ ಕೂದಲಿನ ಬುಡಕ್ಕೆ ಲೇಪಿಸಿ 30 ನಿಮಿಷಗಳ ಕಾಲ ಬಿಡಿ, ನಂತರ ಇದನ್ನು ತೊಳೆಯಿರಿ. ಈ ಬಗೆಯಲ್ಲಿ ನೆಲ್ಲಿಕಾಯಿ ರಸವನ್ನು ಲೇಪಿಸಿಕೊಳ್ಳುವುದರಿಂದ, ತಲೆಹೊಟ್ಟನ್ನು ನಿವಾರಿಸಿಕೊಳ್ಳಬಹುದು. ಈ ವಿಧಾನವನ್ನು ವಾರಕ್ಕೆ ಎರಡು ಬಾರಿ ಮಾಡಿ, ತ್ವರಿತಗತಿಯಲ್ಲಿ ಫಲಿತಾಂಶವನ್ನು ಪಡೆಯಬಹುದು. ಇದು ನಿಮಗೆ ತಲೆಹೊಟ್ಟನ್ನು ಮಾತ್ರ ನಿವಾರಿಸುವುದಿಲ್ಲ, ಜೊತೆಗೆ ನಿಮ್ಮ ಕೂದಲಿಗೆ ಕಂಡೀಶನರನ್ನು ಸಹ ನೀಡಿ, ಸ್ವಾಭಾವಿಕವಾಗಿ ಕೂದಲು ಹೊಳೆಯುವಂತೆ ಮಾಡುತ್ತದೆ.
English summary

Steps To Apply Amla For Hair

What is dandruff? It is the dry flaky skin on the scalp caused due to dryness or excessive sweat or bacteria on the scalp. Does this dandruff harm you? This article helps you with several steps to apply amla juice for hair and get the best benefits for dandruff problems.
Story first published: Monday, April 27, 2015, 16:06 [IST]
X
Desktop Bottom Promotion