For Quick Alerts
ALLOW NOTIFICATIONS  
For Daily Alerts

ಕೂದಲಿನ ನೈಜ ಸೌಂದರ್ಯವನ್ನು ಕಾಯ್ದುಕೊಳ್ಳುವುದು ಹೇಗೆ?

By Poornima heggade
|

ಉದ್ದವಾದ ಕೂದಲು, ಗಿಡ್ಡವಾದ ಕೂದಲು, ಭುಜದವರೆಗಿನ ಕೂದಲು ಹೀಗೆ ಕೂದಲಿನ ಶೈಲಿ ಯಾವುದೇ ಇರಲಿ, ಇದು ನಿಮ್ಮ ವ್ಯಕ್ತಿತ್ವವನ್ನು ಬಿಂಬಿಸುತ್ತದೆ. ಮತ್ತು ಈ ಕೂದಲಿನ ಆರೈಕೆಗೂ ಕೂಡ ಅಷ್ಟೇ ಗಮನವನ್ನು ಕೊಡಬೇಕು. ಉದ್ದವಾದ, ನೀಳವಾದ ಕೂದಲಿಗೆ ಹೋಲಿಸಿದರೆ ಗಿಡ್ಡವಾದ ಕೂದಲನ್ನು ಆರೈಕೆಮಾಡುವುದು, ಕಾಳಜಿ ಮಾಡುವುದು ಸುಲಭ. ಉದ್ದವಾದ ಕೂದಲನ್ನು ಕಾಳಜಿ ಮಾಡುವುದು ಮಾತ್ರವಲ್ಲ ಅದನ್ನು ಆರೋಗ್ಯಕರವಾಗಿ ಕಾಯ್ದುಕೊಳ್ಳುವುದೂ ಕೂಡ ಅಷ್ಟೇ ಮುಖ್ಯ. ಉದ್ದವಾದ, ಸುಂದರವಾದ ಆರೋಗ್ಯಕರವಾದ ಕೂದಲು ಎಲ್ಲರನ್ನೂ ಆಕರ್ಷಿಸುವುದು ನಿಜ. ಆದರೆ ಈ ಆಕರ್ಷಣೆ ನಿಮ್ಮ ಪ್ರಯತ್ನವಿಲ್ಲದೆ ಖಂಡಿತ ಸಾಧ್ಯವಿಲ್ಲ.

ಯಾವುದೇ ಒಳ್ಳೆಯ ವಿಷಯವನ್ನು ಮಾಡಬೇಕೆಂದರೂ ಅದಕ್ಕೆ ಕಠಿಣ ಪರಿಶ್ರಮ ಅತ್ಯಗತ್ಯ. ಇದೇ ರೀತಿ ನೀವು ನಿಮ್ಮ ಕೂದಲಿನ ಬಗ್ಗೆ ಸ್ವಲ್ಪ ಕಾಳಜಿಯನ್ನುವಹಿಸಿದರೂ ಆರೋಗ್ಯಕರವಾದ ಹಾಗೂ ಹೊಳಪಿನ ಕೂದಲು ನಿಮ್ಮದಾಗುತ್ತದೆ!

Simple Tips To Look After Long Hair

ಕೂದಲು ತೊಳೆಯುವುದು
ಉದ್ದವಾದ ಕೂದಲಿನಲ್ಲಿ ಧೂಳು, ಕೊಳಕು ಸೇರಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಇದು ಕೂದಲು ಮಂದವಾಗಿಯೂ, ಕಳಾಹೀನವಾಗಿಯೂ ಕಾಣುವಂತೆ ಮಾಡುತ್ತದೆ. ಉದ್ದವಾದ ಕೂದಲಿನ ಸ್ನಾನ ಸ್ವಲ್ಪ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆಯಾದರೂ ಇದು ನಿಮ್ಮ ಕೂದಲಿಗೆ ಅತ್ಯಗತ್ಯ. ನಿಮ್ಮ ಕೂದಲು ಹೊಳಪಾಗಿಯೂ ಮತ್ತು ಸ್ವಚ್ಛವಾಗಿಯೂ ಇರಲು ನಿಯಮಿತವಾಗಿ ಕೂದಲನ್ನು ತೊಳೆಯಿರಿ. ಕೂದಲು ಸ್ವಚ್ಛವಾಗಿದ್ದರೆ ಬಾಚಲು ಸುಲಭ ಹಾಗೂ ಬೇಗ ಸಿಕ್ಕಾಗುವ (ಗಂಟುಗಟ್ಟುವ) ಸಮಸ್ಯೆಯಿರುವುದಿಲ್ಲ. ಆರೋಗ್ಯವಂತ ಕೇಶಕ್ಕಾಗಿ ಪರಿಪೂರ್ಣ ಹೇರ್ ಮಸಾಜ್ ಸಲಹೆಗಳು

ಪೋಷಣೆ
ನೀವು ಉದ್ದವಾದ ಕೂದಲನ್ನು ಹೊಂದಲು ಬಯಸಿದ್ದರೆ ಅದರ ನಿರಂತರ ಪೋಷಣೆಯ ಬಗ್ಗೆ ಗಮನವಹಿಸಿ. ಸರಿಯಾದ ಪೋಷಣೆ ಕೂದಲು ದಟ್ಟವಾಗಿರುವಂತೆ ಮಾಡುತ್ತದೆ. ಮೊಟ್ಟೆ ಮತ್ತು ನಿಂಬು; ಬಾಳೆಹಣ್ಣು ಮತ್ತು
ಜೇನು; ಮೊಸರು ಮತ್ತು ಕಡಲೆ ಹಿಟ್ಟು ಮೇಯನಸ್ ಮೊದಲಾದ ಪ್ಯಾಕ್ ಗಳು ಕೂದಲಿಗೆ ಪ್ರೋಟಿನ್ ಗಳನ್ನು ಒದಗಿಸುವ ಉತ್ತಮ ಮಾರ್ಗ. ಆರೋಗ್ಯಕರವಾದ ಕೂದಲಿಗೆ ಪ್ರೋಟಿನ್‌ಗಳು ಅತ್ಯಗತ್ಯ.

ಕಂಡಿಶನರ್ (ಪೋಷಣೆ):
ಕೂದಲನ್ನು ತೊಳೆದ ಕೂಡಲೆ ಕಂಡೀಷನರ್ ಅನ್ನು ಬಳಸುವುದು ಕಡ್ಡಾಯ ಮಾಡಿಕೊಳ್ಳಿ. ಕಂಡೀಶನಿಂಗ್ ಮಾಡುವುದರಿಂದ ಕೂದಲಿನಲ್ಲಿ ಗಂಟುಕಟ್ಟುವುದು ಕಡಿಮೆಯಾಗಿ ಕೂದಲನ್ನು ಸುಲಭವಾಗಿ ಬಾಚಬಹುದು. ಇದರಿಂದ ಕೂದಲು ಆರೋಗ್ಯಕರವಾಗಿಯೂ ನಯವಾಗಿಯೂ ಕಾಣುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕಂಡೀಶನರ್ ಗಳನ್ನು ಬಳಸುವುದಕ್ಕಿಂತ ಮನೆಯಲ್ಲಿಯೇ ಇರುವ ಪದಾರ್ಥಗಳನ್ನು ಉಪಯೋಗಿಸಿ ನೈಸರ್ಗಿಕ ಕಂಡೀಶನರ್ ತಯಾರಿಸಬಹುದು. ಬಿಯರ್ ಮತ್ತು ಸೇಬು ಹಣ್ಣಿನಿಂದ ತಯಾರಿಸಲಾದ ವಿನೆಗರ್ ಅತ್ಯುತ್ತಮವಾಗಿ ಕಂಡೀಶನರ್ ರೀತಿಯಲ್ಲಿ ಕೆಲಸಮಾಡುತ್ತವೆ. ಮೊಟ್ಟೆಯ ಹೇರ್ ಪ್ಯಾಕ್ ಕೂಡ ಉತ್ತಮ ಕಂಡೀಶನರ್ ಆಗಿ ಕಾರ್ಯನಿರ್ವಹಿಸುತ್ತದೆ. ಆರೋಗ್ಯವಂತ ಕೇಶಕ್ಕಾಗಿ ಪರಿಪೂರ್ಣ ಹೇರ್ ಮಸಾಜ್ ಸಲಹೆಗಳು

ಎಣ್ಣೆ
ಉದ್ದವಾದ ಕೂದಲನ್ನು ನಿರ್ವಹಣೆ ಮಾಡುವಲ್ಲಿ ಇದೊಂದು ಪ್ರಮುಖ ಅಂಶ. ಆರೋಗ್ಯಕರವಾದ ಕೂದಲಿಗೆ ಹಾಗೂ ನೆತ್ತಿಯ ತೇವಾಂಶಕ್ಕೆ ಉತ್ತಮ ಪೋಷಣೆಯನ್ನು ನಿಡುವಂತದ್ದು ಎಣ್ಣೆ! ನೆತ್ತಿಯನ್ನು ಎಣ್ಣೆಯಿಂದ ಮಸಾಜ್ ಮಾಡಿದರೆ ಇದರಿಂದ ನೆತ್ತಿಯಲ್ಲಿ ರಕ್ತದ ಹರಿವು ಸುಲಭವಾಗುತ್ತದೆ. ಇದರಿಂದ ಕೂದಲು ಉದ್ದವಾಗಿ ಬೆಳೆಯಲು ಸಹಾಯಕವಾಗುತ್ತದೆ. ನಿಮ್ಮ ಕೂದಲು ನಿರ್ಜೀವವಾಗಿರಬಹುದು ಆದರೆ ಕೋಶಗಳು ಅಥವಾ ಕಿರುಚೀಲಗಳಲ್ಲಿ ಇನ್ನೂ ಜೀವ ಇರುತ್ತದೆ. ಅವನ್ನು ಪೋಷಿಸಿದರೆ ಕೂದಲಿನ ಬೆಳವಣಿಗೆ ಮತ್ತೆ ಮೊದಲಿನಂತಾಗುತ್ತದೆ.

ಕೂದಲಿಗೆ ಆಕಾರ ನೀಡುವುದು
ಕೂದಲನ್ನು ಸಣ್ಣಗಾಗಿಸುವುದು ಎಂದರೆ ನೀವು ಹೆಚ್ಚು ಕೂದಲನ್ನು ಕತ್ತರಿಸುತ್ತಿದ್ದೀರಿ ಎಂದು ಅರ್ಥವಲ್ಲ. ನೀವು ಪ್ರತೀ ಆರು ವಾರಗಳಿಗೊಮ್ಮೆ ನಿಮ್ಮ ಕೂದಲನ್ನು ಒಂದು ಇಂಚಿನಷ್ಟು ಕತ್ತರಿಸಬಹುದು. ಕೂದಲಿನ ತುದಿಯನ್ನು ಕತ್ತರಿಸುವುದರಿಂದ ನಿಮ್ಮ ಕೂದಲು ಆರೋಗ್ಯಕರವಾಗಿಯೂ ಉತ್ತಮ ಆರೈಕೆ ಮಾಡಿರುವಂತೆಯೂ ಕಾಣುತ್ತದೆ. ಅಲ್ಲದೇ ಸ್ವಲ್ವ ಪ್ರಮಾಣದಲ್ಲಿ ಕೂದಲನ್ನು ಕತ್ತರಿಸುವುದು ಕೂದಲು ಇನ್ನೂ ಹೆಚ್ಚು ವೇಗವಾಗಿ, ಉತ್ತಮವಾಗಿ ಬೆಳೆಯುವುದಕ್ಕೆ ಅನುಕೂಲವಾಗುತ್ತದೆ.

ಬ್ರೆಡ್ ಶೈಲಿ
ಉದ್ದವಾದ ಕೂದಲನ್ನು ಕಟ್ಟಿಕೊಳ್ಳದೇ ಹಾಗೆಯೇ ಕೂದಲನ್ನು ಬಿಡುವ ಸ್ಟೈಲ್ (ಶೈಲಿ) ನಿಮಗೆ ಇಷ್ಟವಾಗಿರಬಹುದು. ಆದರೆ ಇದನ್ನು ಎಲ್ಲಾ ಸಂದರ್ಭದಲ್ಲಿಯೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನೀವು ದಿನವಿಡೀ ಹೊರಗಡೆಯೇ ಕೆಲಸವನ್ನು ಮಾಡುವ ಸಂದರ್ಭದಲ್ಲಿ ಉದ್ದವಾದ ಕೂದಲಿನ ನಿರ್ವಹಣೆಗೆ ವಿಶೇಷ ಕಾಳಜಿ ಮಾಡಬೇಕಾಗುತ್ತದೆ. ಪೋನಿ, ಬನ್ ಈ ತರಹದ ಮುಡಿಕಟ್ಟುವ ಶೈಲಿ ನಿಮ್ಮ ಉದ್ದವಾದ ಕೂದಲನ್ನು ಸ್ವಚ್ಛವಾಗಿಡಲು ಸಹಾಯಕವಾಗಬಲ್ಲದು. ಇದರಿಂದ ಕೂದಲಿನ ಗಂಟಿಕ್ಕುವ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು! ಸೌಂದರ್ಯ ವೃದ್ಧಿಗೆ ಬಳಸಿ ಚೆಂಡು ಹೂವಿನ ಆರೋಗ್ಯಕಾರಿ ಸಲಹೆ

ಬ್ರಶ್/ ಕೂದಲು ಬಾಚುವುದು
ದಿನಕ್ಕೆ ಹೆಚ್ಚು ಬಾರಿ ಕೂದಲನ್ನು ಬಾಚುವುದರಿಂದ ಕೂದಲು ಹೆಚ್ಚು ಸುಂದರವಾಗಿ ಕಾಣಬಹುದು. ಆದರೆ ಅನೇಕ ಬಾರಿಯಲ್ಲದಿದ್ದರೂ ದಿನದಲ್ಲಿ ಸ್ವಲ್ಪ ಸಮಯ ಕೂದಲನ್ನು ಬಾಚುವುದರಿಂದ ನೆತ್ತಿಯಲ್ಲಿ ರಕ್ತದ ಹರಿವು ಉತ್ತಮವಾಗುತ್ತದೆ ಮತ್ತು ಕೂದಲು ಸಿಕ್ಕಾಗುವುದು ತಪ್ಪುತ್ತದೆ.

English summary

Simple Tips To Look After Long Hair

Long hair, short hair, shoulder length hair; no matter what the length of your hair is, it makes a marked impression on your personality. And this makes it all the more important to take great care of your hair. It still helps you make a statement. It depends upon you what kind of statement you desire to make.
X
Desktop Bottom Promotion