For Quick Alerts
ALLOW NOTIFICATIONS  
For Daily Alerts

ಏನೇ ಹೇಳಿ ಕೂದಲುದುರುವ ಸಮಸ್ಯೆಗೆ ಮನೆಮದ್ದೇ ಸರಿ

|

ದಿನನಿತ್ಯವೂ ಒ೦ದಿಷ್ಟು ತಲೆಗೂದಲು ಉದುರುವುದು ನಿಮ್ಮ ಗಮನಕ್ಕೆ ಬ೦ದಿದೆಯೆ೦ದಾದರೆ ಚಿ೦ತಿಸಬೇಡಿರಿ. ಏಕೆಂದರೆ ಈ ಸಮಸ್ಯೆಯನ್ನು ಎದುರಿಸುತ್ತಿರುವವರು ನೀವೊಬ್ಬರೇ ಏನೂ ಅಲ್ಲ. ಪ್ರತಿದಿನವೂ ಜನರು ಸರಾಸರಿ ಸುಮಾರು 50 ರಿ೦ದ 100 ರಷ್ಟು ತಲೆಗೂದಲನ್ನು ಕಳೆದುಕೊಳ್ಳುತ್ತಾರೆ ಎ೦ಬುದನ್ನು ಚರ್ಮಶಾಸ್ತ್ರಜ್ಞರೂ ಸಹ ಒಪ್ಪಿಕೊಳ್ಳುತ್ತಾರೆ. ಕಳೆದುಹೋದ ತಲೆಗೂದಲ ಸ್ಥಾನವನ್ನು ಹೊಸತಾಗಿ ಬೆಳೆಯುವ ಕೂದಲು ತು೦ಬುತ್ತದೆಯಾದ್ದರಿ೦ದ ಇದೊ೦ದು ಅತೀ ಸಾಮಾನ್ಯವಾದ ಸ೦ಗತಿಯೇ ಆಗಿದೆ.

ಆದರೆ ಕೂದಲ ಬೆಳವಣಿಗೆಗೆ ಹಲವು ರೀತಿಯ ಪೋಷಕಾಂಶಗಳ ಅಗತ್ಯವಿದೆ ಎಂಬುದನ್ನು ಮರೆಯದಿರಿ. ನಮ್ಮ ಆಹಾರದ ಮೂಲಕ ಸೇವಿಸುವ ಹಲವು ಪೋಷಕಾಂಶಗಳು ಕೂದಲ ಆರೈಕೆಗೆ ಒಳಗಿನಿಂದ ನೆರವಾದರೆ ಕೂದಲ ಬುಡಕ್ಕೆ ಹಚ್ಚುವ ತೈಲ ಮತ್ತು ಇತರ ಪ್ರಸಾಧನಗಳಿಂದ ಹೊರಗಿನಿಂದ ನೆರವು ದೊರಕುತ್ತದೆ. ಅಲ್ಲದೆ ಕೆಲವೊಮ್ಮೆ ಸೂಕ್ತ ಆರೈಕೆಯಿಲ್ಲದಿದ್ದಲ್ಲಿ ಕೂದಲುದುರುವ ಸಂಖ್ಯೆಹೆಚ್ಚಿ ಹೊಸ ಕೂದಲು ಹುಟ್ಟುವ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಇರುವ ಕೂದಲುಗಳೂ ಮಂಕಾದ ಹೊಳಪು ಮೊದಲಾದ ತೊಂದರೆಗಳಿಂದ ಶಿಥಿಲವಾಗುತ್ತವೆ. ಕೂದಲು ಉದುರುವಿಕೆ ತಡೆಯಲು ನೈಸರ್ಗಿಕ 5 ವಿಧಾನಗಳು

ಸಾಮಾನ್ಯವಾಗಿ ಇವೆಲ್ಲದಕ್ಕೂ ಕೆಲವು ನಗರಗಳಲ್ಲಿರುವ ನಲ್ಲಿಗಳಲ್ಲಿ ಬರುವ ಗಡಸು ನೀರಿನಿಂದ ಕೂದಲನ್ನು ತೊಳೆದುಕೊಳ್ಳುವಾಗ ನೀರಿನ ಗುಣಮಟ್ಟವೂ ಕೂದಲನ್ನು ಶಿಥಿಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಗಡಸು ನೀರಿನಲ್ಲಿ ಕರಗಿರುವ ಹಲವು ಲೋಹ ಮತ್ತು ಖನಿಜಗಳ ಕಾರಣ ಕೂದಲು ತನ್ನ ಹೊಳಪು ಮತ್ತು ಆರೋಗ್ಯವನ್ನು ಕಳೆದುಕೊಳ್ಳುತ್ತದೆ. ಬನ್ನಿ ಈ ತೊಂದರೆಗಳಿಂದ ನಿವಾರಣೆ ಪಡೆಯಲು ಹಲವು ಸುಲಭ ಉಪಾಯಗಳನ್ನು ಇಲ್ಲಿ ವಿವರಿಸಲಾಗಿದೆ ಮುಂದೆ ಓದಿ ನಿಮ್ಮ ಕೂದಲನ್ನು ಆಗಾಗ ತೊಳೆಯುವುದು ಸೂಕ್ತವೇ ?

ವಿನೇಗರ್ ಬೆರೆಸಿದ ನೀರಿನಿಂದ ಕೂದಲು ತೊಳೆಯಿರಿ

ವಿನೇಗರ್ ಬೆರೆಸಿದ ನೀರಿನಿಂದ ಕೂದಲು ತೊಳೆಯಿರಿ

ವಿನೇಗರ್ ಒಂದು ಪ್ರತ್ಯಾಮ್ಲ (base)ವಾದುದರಿಂದ ಕೂದಲ ಮೇಲ್ಮೈ ಮೇಲೆ ಅಂಟಿಕೊಂಡಿರುವ ಜಿಡ್ಡನ್ನು ತೆಗೆಯಲು ಸಹಕಾರಿಯಾಗಿದೆ. ಇದಕ್ಕಾಗಿ apple cider vinegar ಎಂದು ಮಾರುಕಟ್ಟೆಯಲ್ಲಿ ಸಿಗುವ ವಿನೇಗರ್ ನಲ್ಲಿ ಒಂದು ದೊಡ್ಡ ಚಮಚವನ್ನು ಮೂರು ಲೋಟ ನೀರಿಗೆ ಸೇರಿಸಿ ಇಟ್ಟುಕೊಳ್ಳಿ. (balsamic vinegar ಎಂದು ಬರೆದಿರುವ ಸಿರ್ಖಾ ಸರ್ವಥಾ ಬೇಡ) ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ವಿನೇಗರ್ ಬೆರೆಸಿದ ನೀರಿನಿಂದ ಕೂದಲು ತೊಳೆಯಿರಿ

ವಿನೇಗರ್ ಬೆರೆಸಿದ ನೀರಿನಿಂದ ಕೂದಲು ತೊಳೆಯಿರಿ

ಈಗ ಸೌಮ್ಯ ಶಾಂಪೂ ಬಳಸಿ ಸ್ನಾನ ಮಾಡಿದ ಬಳಿಕ ಈ ದ್ರಾವಣದಿಂದ ಕೂದಲಿಗೆ ಹೆಚ್ಚಿ ಕೆಲವು ನಿಮಿಷಗಳ ಬಳಿಕ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ. ಇದರಿಂದ ಕೂದಲು ಮೊದಲ ಹೊಳಪನ್ನು ಪಡೆಯುತ್ತದೆ ಹಾಗೂ ಗಂಟುಗಳಾಗದಂತೆ ತಡೆಯುತ್ತದೆ. ಈ ಚಿಕಿತ್ಸೆಯನ್ನು ವಾರಕ್ಕೊಮ್ಮೆ ಪುನರಾವರ್ತಿಸಿ.

ಲಿಂಬೆ ಮಿಶ್ರಿತ ನೀರಿನಿಂದ ತೊಳೆದುಕೊಳ್ಳಿ

ಲಿಂಬೆ ಮಿಶ್ರಿತ ನೀರಿನಿಂದ ತೊಳೆದುಕೊಳ್ಳಿ

ಒಂದು ವೇಳೆ ಕೂದಲು ತುಂಬಾ ಎಣ್ಣೆಯುಕ್ತವಾಗಿರುವಂತೆ ಕಂಡುಬಂದರೆ ಲಿಂಬೆ ಸೇರಿಸಿದ ನೀರಿನಿಂದ ತೊಳೆದುಕೊಳ್ಳುವುದರಿಂದ ಪರಿಹಾರ ದೊರಕುತ್ತದೆ. ಇದಕ್ಕಾಗಿ ಮೂರು ಲೋಟ ನೀರಿಗೆ ಒಂದು ದೊಡ್ಡ ಚಮಚ ಲಿಂಬೆಹಣ್ಣಿನ ರಸವನ್ನು ಸೇರಿಸಿ ದ್ರಾವಣವನ್ನು ತಯಾರಿಸಿ. ಸೌಮ್ಯ ಶಾಂಪೂ ಬಳಸಿ ಸ್ನಾನ ಮಾಡಿದ ಬಳಿಕ ಈ ದ್ರಾವಣದಿಂದ ಕೂದಲಿಗೆ ಹೆಚ್ಚಿ ಕೆಲವು ನಿಮಿಷಗಳ ಬಳಿಕ ಸ್ವಚ್ಛ ನೀರಿನಿಂದ ತೊಳೆದುಕೊಳ್ಳಿ. ಲಿಂಬೆಯಲ್ಲಿರುವ ರೋಗನಿರೋಧಕ ಶಕ್ತಿಯ ಕಾರಣ ಕೂದಲಿಗೆ ಉತ್ತಮ ಆರೈಕೆ ದೊರೆಯುವುದರ ಜೊತೆಗೇ ತಲೆಹೊಟ್ಟಿನಿಂದಲೂ ಮುಕ್ತಿ ದೊರಕುತ್ತದೆ.

ಕೊಬ್ಬರಿ ಅಥವಾ ಬಾದಾಮಿ ಎಣ್ಣೆ ಹಚ್ಚಿ ಮಸಾಜ್ ಮಾಡಿ

ಕೊಬ್ಬರಿ ಅಥವಾ ಬಾದಾಮಿ ಎಣ್ಣೆ ಹಚ್ಚಿ ಮಸಾಜ್ ಮಾಡಿ

ಸ್ನಾನದ ಬಳಿಕ ನೈಸರ್ಗಿಕವಾದ ಕಂಡೀಶನರ್ ಉಪಯೋಗಿಸುವುದು ಕೂದಲಿಗೆ ಉತ್ತಮ ಆರೈಕೆ ಹಾಗೂ ಹೊಳಪನ್ನು ನೀಡುತ್ತವೆ. ಕೊಬ್ಬರಿ ಮತ್ತು ಬಾದಾಮಿ ಎಣ್ಣೆಗಳು ಅತ್ಯುತ್ತಮವಾದ ನೈಸರ್ಗಿಕ ಕಂಡೀಶನರ್ ಆಗಿವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೊಬ್ಬರಿ ಅಥವಾ ಬಾದಾಮಿ ಎಣ್ಣೆ ಹಚ್ಚಿ ಮಸಾಜ್ ಮಾಡಿ

ಕೊಬ್ಬರಿ ಅಥವಾ ಬಾದಾಮಿ ಎಣ್ಣೆ ಹಚ್ಚಿ ಮಸಾಜ್ ಮಾಡಿ

ಸುಮಾರು ಎರಡರಿಂದ ಮೂರು ತೊಟ್ಟು ಎಣ್ಣೆಯನ್ನು ಕೈಗಳಿಗೆ ಸವರಿಕೊಂಡು ಕೂದಲಿನ ಬುಡಕ್ಕೆ ನಯವಾಗಿ ಮಸಾಜ್ ಮಾಡಿ. ಹೆಚ್ಚು ಎಣ್ಣೆ ಉಪಯೋಗಿಸುವುದರಿಂದ ಹೊಳಪಿನ ಬದಲಿಗೆ ಹೆಚ್ಚಿನ ಎಣ್ಣೆಯ ಜಿಡ್ಡು ತಗಲುವುದು ಹಾಗೂ ಇದಕ್ಕೆ ಧೂಳು ಅಂಟಿಕೊಳ್ಳುವುದರಿಂದ ಕೇವಲ ಹೊಳಪು ಬರುವಷ್ಟು ಮಾತ್ರ ಪ್ರಮಾಣವನ್ನು ಉಪಯೋಗಿಸಬೇಕು.

ಶವರ್ ನಲ್ಲಿ ಶೋಧಕವೊಂದನ್ನು ಅಳವಡಿಸಿ

ಶವರ್ ನಲ್ಲಿ ಶೋಧಕವೊಂದನ್ನು ಅಳವಡಿಸಿ

ಒಂದು ವೇಳೆ ನಿಮ್ಮ ನಲ್ಲಿಯಲ್ಲಿ ಬರುತ್ತಿರುವ ಗಡಸು ನೀರನ್ನು ಸೂಕ್ತ ಶೋಧಕ (filter)ದ ಮೂಲಕ ಸೋಸಿ ಮೃದುಗೊಳಿಸಲು ಸಾಧ್ಯವಾದರೆ ಶವರ್ ನಲ್ಲಿ ಸ್ಥಾಪಿಸಿಕೊಳ್ಳಿ. ಇದರಿಂದ ನೀರಿನಲ್ಲಿರುವ ಕ್ಲೋರೀನ್ ಸಹಿತ ಹಲವು ಹಾನಿಕಾರಕ ಖನಿಜಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ವಿವಿಧ ಬೆಲೆ ಹಾಗೂ ಮಾದರಿಗಳಲ್ಲಿ ಲಭ್ಯವಿರುವ ಶೋಧಕಗಳಲ್ಲಿ ನಿಮಗೆ ಸೂಕ್ತವೆನಿಸಿದ್ದನ್ನು ಆನ್ಲೈನ್ ಮಾರುಕಟ್ಟೆ ಅಥವಾ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿಸಿ ಸ್ಥಾಪಿಸಿಕೊಳ್ಳಿ.

ಈರುಳ್ಳಿ ಮತ್ತು ಬೆಳ್ಳುಳ್ಳಿ

ಈರುಳ್ಳಿ ಮತ್ತು ಬೆಳ್ಳುಳ್ಳಿ

ಕೂದಲ ಬುಡದಿಂದ ಕೂದಲನ್ನು ಬೆಳೆಸಲು ಕೊಲಾಜೆನ್ ಎಂಬ ಪೋಷಕಾಂಶ ಅಗತ್ಯ. ಕೊಲಾಜೆನ್ ಪೋಷಕಾಂಶವನ್ನು ಹೆಚ್ಚಾಗಿ ಪಡೆಯಲು ಗಂಧಕ ಹೆಚ್ಚಿರುವ ಪ್ರಸಾಧನಗಳು ಬೇಕು. ಈರುಳ್ಳಿ ಮತ್ತು ಬೆಳ್ಳುಳ್ಳಿಯಲ್ಲಿ ಗಂಧಕದ ಅಂಶ ನೈಸರ್ಗಿಕವಾಗಿ ಹೆಚ್ಚಿದ್ದು ಕೂದಲ ಪೋಷಣೆಗೆ ಸಹಕರಿಸುತ್ತವೆ. ಬಹಳ ಹಿಂದಿನಿಂದಲೂ ಕೂದಲ ಆರೈಕೆಗಾಗಿ ಭಾರತದಲ್ಲಿ ಇವು ಬಳಸಲ್ಪಡುತ್ತಿವೆ. ವಿಧಾನ: ಒಂದು ನೀರುಳ್ಳಿಯನ್ನು ಚಿಕ್ಕದಾಗಿ ಕೊಚ್ಚಿ ತೆಳುವಾದ ಬಟ್ಟೆಯಲ್ಲಿ ಹಿಂಡಿ ರಸ ತೆಗೆದಿಟ್ಟುಕೊಳ್ಳಬೇಕು.ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಬೆಳ್ಳುಳ್ಳಿಯ ಎಸಳುಗಳನ್ನು ಜಜ್ಜಿ ಕೊಬ್ಬರಿ ಎಣ್ಣೆಯಲ್ಲಿ ಚಿಕ್ಕ ಉರಿಯಲ್ಲಿ ಸ್ವಲ್ಪ ಕೆಂಪಗಾಗುವವರೆಗೆ ಕುದಿಸಬೇಕು. ಈ ಎಣ್ಣೆ ತಣ್ಣಗಾಗಲು ಬಿಡಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಈರುಳ್ಳಿ ಮತ್ತು ಬೆಳ್ಳುಳ್ಳಿ

ಈರುಳ್ಳಿ ಮತ್ತು ಬೆಳ್ಳುಳ್ಳಿ

ಸ್ನಾನಕ್ಕೂ ಒಂದು ಅಥವಾ ಒಂದೂವರೆ ಗಂಟೆ ಮೊದಲು ಈರುಳ್ಳಿ ರಸವನ್ನು ತಲೆಗೆ ಹಚ್ಚಿ ಹದಿನೈದು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಶುದ್ಧ ನೀರಿನಿಂದ ಅಥವಾ ಸೌಮ್ಯವಾದ ಶಾಂಪೂವಿನಿಂದ ತಲೆಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಿರಿ. ಕೂದಲು ಚೆನ್ನಾಗಿ ಒರೆಸಿಕೊಂಡು ಈಗ ತಣ್ಣಗಾಗಿರುವ ಬೆಳ್ಳುಳ್ಳಿ, ಕೊಬ್ಬರಿ ಎಣ್ಣೆಯ ಮಿಶ್ರಣವನ್ನು ತಲೆಗೆ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ. ಇಡಿಯ ತಲೆಗೆ ಎಣ್ಣೆ ಹಚ್ಚಿದ ಬಳಿಕವೂ ನಯವಾಗಿ ಮಸಾಜ್ ಮಾಡುತ್ತಾ ಬನ್ನಿ. ಸುಮಾರು ಮುಕ್ಕಾಲರಿಂದ ಒಂದು ಗಂಟೆ ಬಿಟ್ಟು ಸೌಮ್ಯ ಶಾಂಪೂವಿನಿಂದ ತಲೆ ಸ್ನಾನ ಮಾಡಿಕೊಳ್ಳಿ. ವಾರಕ್ಕೆ ಮೂರು ಬಾರಿ ಈ ವಿಧಾನವನ್ನು ಅನುಸರಿಸುವುದರಿಂದ ಉತ್ತಮ ಪರಿಣಾಮವನ್ನು ಪಡೆಯಬಹುದು.

ದಾಸವಾಳ ಮತ್ತು ಕೊಬ್ಬರಿ ಎಣ್ಣೆ

ದಾಸವಾಳ ಮತ್ತು ಕೊಬ್ಬರಿ ಎಣ್ಣೆ

ಕೇರಳದಲ್ಲಿ ಮಹಿಳೆಯರು ಉದ್ದ ಹಾಗೂ ನೈಸರ್ಗಿಕ ತಲೆಗೂದಲು ಹೊಂದಿರಲು ಅವರು ಹೆಚ್ಚಾಗಿ ಉಪಯೋಸುವ ದಾಸವಾಳ ಮತ್ತು ಕೊಬ್ಬರಿ ಎಣ್ಣೆಯ ಬಳಕೆ ಎಂದು ಅರ್ಥೈಸಿಕೊಳ್ಳಬಹುದು. ದಾಸವಾಳದ ನಿಯಮಿತ ಉಪಯೋಗದಿಂದ ಕೂದಲು ಬೇಗನೇ ಬಿಳಿಯಾಗುವುದನ್ನು, ತಲೆಹೊಟ್ಟು ಬರುವುದನ್ನು ಹಾಗೂ ಉದುರುವಿಕೆಯನ್ನು ತಡೆಗಟ್ಟಬಹುದು. ವಿಧಾನ: ದಾಸವಾಳ ಹೂವಿನ ಎಸಳುಗಳನ್ನು ಜಜ್ಜಿ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯಲ್ಲಿ ಚಿಕ್ಕ ಉರಿಯಲ್ಲಿ ಚೆನ್ನಾಗಿ ಕುದಿಸಿ ತಣಿಸಿಟ್ಟುಕೊಳ್ಳಬೇಕು. ತಣಿದ ಈ ಎಣ್ಣೆಯ ಮಿಶ್ರಣವನ್ನು ತಲೆಗೂದಲ ಬುಡಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡಿಕೊಳ್ಳಬೇಕು. ಸುಮಾರು ಮೂರರಿಂದ ನಾಲ್ಕು ಗಂಟೆಗಳ ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಬೇಕು.

English summary

Simple Homemade Beauty Tips For Hair

Long, thick and lustrous hair is high on every woman’s wishlist. But everyday exposure to dust, pollution, sun and dirt makes it an almost impossible dream to achieve. Products available in the market contain chemicals which do more harm than good in the long run. So how do you combat all these problems while still keeping hair healthy and strong? Here are some easy homemade beauty tips for hair to follow
Story first published: Wednesday, October 7, 2015, 19:51 [IST]
X
Desktop Bottom Promotion