For Quick Alerts
ALLOW NOTIFICATIONS  
For Daily Alerts

ಜಾಹೀರಾತಿನಲ್ಲಿ ಕಂಗೊಳಿಸುವ ತೈಲ, ಶಾಂಪೂಗೆ ಮರುಳಾಗಬೇಡಿ

|

ಇ೦ದಿನ ದಿನಮಾನಗಳಲ್ಲಿ ಇನ್ನೂ ಇಪ್ಪತ್ತರ ಹರೆಯಕ್ಕೆ ಕಾಲಿಡುತ್ತಿರುವ ಯುವಜನತೆ ಕೂಡ ತಲೆಕೂದಲಿಗೆ ಸಂಬಂಧಿಸಿದಂತೆ ಉದುರುವ, ಬಿಳಿ ಕೂದಲು ಮೊದಲಾದ ತೊಂದರೆಗಳಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣಗಳು ಹಲವಾರಿದ್ದು, ಅವುಗಳ ಪೈಕಿ ಕೆಲವು ಯಾವುವೆ೦ದರೆ ಕೇಶರಾಶಿಯ ಆರೈಕೆಯ ಕುರಿತ೦ತೆ ನಿಷ್ಕಾಳಜಿ, ಮಾನಸಿಕ ಒತ್ತಡ, ವ೦ಶವಾಹಿ ಕಾರಣಗಳು, ಧೂಮಪಾನ, ಮದ್ಯಪಾನ ಇವೇ ಮೊದಲಾದವುಗಳಾಗಿವೆ. ಸೊಂಪಾದ ಕೂದಲಿಗಾಗಿ ಕಲರ್ ಕಲರ್ ಹೇರ್‌ ಪ್ಯಾಕ್‍!

ಅದರಲ್ಲೂ ಕೂದಲ ಆರೈಕೆಗಾಗಿ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ತೈಲ, ಶಾಂಪೂ, ಕಂಡೀಶನರ್ ಇನ್ನೂ ಏನೇನೋ ಸಾಧನಗಳಿವೆ. ತಂತ್ರಜ್ಞಾನದ ಸಹಾಯದಿಂದ ಈ ಸಾಧನಗಳು ನಮ್ಮ ತಲೆಗೂದಲನ್ನು ಹೇಗೆ ಸೊಂಪಾಗಿ ಉಳಿಸಿ ಬೆಳೆಸಿ ಸೌಂದರ್ಯ ವೃದ್ಧಿಸುತ್ತವೆ ಎಂಬುದನ್ನು ಚಲನಚಿತ್ರದಂತೆ ತೋರಿಸಿ ಗ್ರಾಹಕರನ್ನು ಸೆಳೆಯುತ್ತವೆ.

ದುಬಾರಿ ಬೆಲೆ ತೆತ್ತು ಖರೀದಿಸಿದ ಸಾಧನದಿಂದ ನಮ್ಮ ಕೂದಲು ಜಾಹೀರಾತಿನಲ್ಲಿ ಕಂಗೊಳಿಸುತ್ತದೆ ಎಂಬ ಭ್ರಮೆಯಿಂದ ನಾವು ಇನ್ನಷ್ಟು ಕೃತಕ ರಾಸಾಯನಿಕಗಳಿಗೆ ದಾಸರಾಗುತ್ತಿದ್ದೇವೆ. ಇಲ್ಲಿ ನೀಡಿರುವ ಸರಳ ವಿಧಾನಗಳಿಂದ ಕೊಂಚ ವ್ಯವಧಾನ ಮತ್ತು ಸಮಯ ಮೀಸಲಿರಿಸುವುದರಿಂದ ಕೂದಲಿಗೆ ಉತ್ತಮ ಹಾಗೂ ನೈಸರ್ಗಿಕ ಆರೋಗ್ಯ ಪಡೆಯಬಹುದು.

ಬೇವಿನ ಎಣ್ಣೆ

ಬೇವಿನ ಎಣ್ಣೆ

ಒಣ ಕೂದಲಿನ ಸಮಸ್ಯೆ ,ತಲೆಹೊಟ್ಟು, ಕೂದಲು ಉದುರುವಿಕೆ, ತಲೆ ತುರಿಕೆ ಇದ್ದಲ್ಲಿ ಇದರಿಂದ ಸಹ ಮುಕ್ತಿ ಒದಗಿಸಲು ನಿಮಗೆ ಬೇಕಾಗಿರುವುದು ಒಂದೇ ಒಂದು ಪದಾರ್ಥ ಅದು ಬೇವಿನ ಎಣ್ಣೆ. ಈ ಬಹು ಉಪಯೋಗಿ ಎಣ್ಣೆಯು ನಿಮ್ಮ ಕೂದಲನ್ನು ಸದೃಢಗೊಳಿಸುವುದರ ಜೊತೆಗೆ ನಿಮ್ಮ ಎಲ್ಲಾ ಕೂದಲ ಸಮಸ್ಯೆಗಳನ್ನು ಹೊಡೆದೋಡಿಸುತ್ತದೆ. ಇದೊಂದು ಉತ್ತಮ ಆಂಟಿ ಬ್ಯಾಕ್ಟೀರಿಯಾ ಎಣ್ಣೆಯಾಗಿರುವುದರಿಂದ ಇದು ನಿಮ್ಮ ಕೂದಲಿನ ಆರೋಗ್ಯವನ್ನು ವೃದ್ಧಿಸುತ್ತದೆ

ಕರಿಬೇವಿನ ಸೊಪ್ಪು

ಕರಿಬೇವಿನ ಸೊಪ್ಪು

ಒ೦ದು ಲೋಟದಷ್ಟು ಮೊಸರನ್ನು ತೆಗೆದುಕೊ೦ಡು ಅದಕ್ಕೆ ಕರಿಬೇವಿನ ಎಲೆಗಳನ್ನು ಸೇರಿಸಿರಿ. ಅವುಗಳನ್ನು ಚೆನ್ನಾಗಿ ಮಿಶ್ರಗೊಳಿಸಿ ನಿಮ್ಮ ನೆತ್ತಿಗೆ ಈ ಮಿಶ್ರಣದಿ೦ದ ಮಾಲೀಸು ಮಾಡಿಕೊಳ್ಳಿರಿ. ನೀರು ಹಾಗೂ ಶ್ಯಾ೦ಪೂವಿನಿ೦ದ ಇದನ್ನು ತೊಳೆದು ಸ್ವಚ್ಚಗೊಳಿಸಿಕೊಳ್ಳುವುದಕ್ಕೆ ಮೊದಲು ಮಿಶ್ರಣವನ್ನು ತಲೆಯ ಮೇಲೆ ಹದಿನೈದು ನಿಮಿಷಗಳ ಕಾಲ ಹಾಗೆಯೇ ಇರಗೊಡಿರಿ.

ಹರಳೆಣ್ಣೆ

ಹರಳೆಣ್ಣೆ

ಕಳೆದು ಹೋದ ಕೂದಲು ಮತ್ತೆ ಹುಟ್ಟಿ ಬರಲು ಹಾಗೂ ಇರುವ ಕೂದಲು ಉದುರದಂತೆ ತಡೆಯಲು ಹರಳೆಣ್ಣೆ ಉಪಯುಕ್ತವಾಗಿದೆ.ವಿಧಾನ:ಎಂಟು ಚಮಚ ಹರಳೆಣ್ಣೆಗೆ ಒಂದು ಚಮಚ ಲಿಂಬೆ ರಸವನ್ನು ಬಾಟಲಿಯಲ್ಲಿ ಹಾಕಿ ಚೆನ್ನಾಗಿ ಅಲುಗಾಡಿಸಬೇಕು. ಈ ಮಿಶ್ರಣವನ್ನು ಕೂದಲ ತುದಿಗೆ ಹಚ್ಚಿ ಕೂದಲ ಬುಡಕ್ಕೆ ಎರಡು ನಿಮಿಷ ನಯವಾಗಿ ಮಸಾಜ್ ಮಾಡಿಕೊಳ್ಳಬೇಕು. ಸುಮಾರು ಹದಿನೈದು ನಿಮಿಷದ ಬಳಿಕ ತಣ್ಣೀರು ಮತ್ತು ಸೌಮ್ಯ ಶಾಂಪೂ ಬಳಸಿ ತೊಳೆದುಕೊಳ್ಳಬೇಕು. ಪ್ರತಿದಿನ ಈ ವಿಧಾನ ಅನುಸರಿಸುವುದರಿಂದ ಕೂದಲಿಗೆ ಉತ್ತಮ ಆರೈಕೆ ದೊರಕುತ್ತದೆ. ಈ ಮಿಶ್ರಣ ಬಿಸಿಲಿನಲ್ಲಿ ರಾಸಾಯನಿಕ ಪ್ರತಿಕ್ರಿಯೆ ಪಡೆಯುವುದರಿಂದ ಬಿಸಿಲಿನಿಂದ ದೂರವಿಡಬೇಕು. ಆದಷ್ಟು ಮಟ್ಟಿಗೆ ಆಯಾ ದಿನಕ್ಕೆ ಅಗತ್ಯವಿದ್ದಷ್ಟು ಪ್ರಮಾಣವನ್ನು ಅಂದೇ ಮಿಶ್ರಣ ಮಾಡಿಕೊಂಡು ಉಪಯೋಗಿಸಿವುದು ಉತ್ತಮ.

ನೆಲ್ಲಿಕಾಯಿ ಮತ್ತು ಲಿಂಬೆ

ನೆಲ್ಲಿಕಾಯಿ ಮತ್ತು ಲಿಂಬೆ

ನೆಲ್ಲಿಕಾಯಿಯಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟುಗಳಿವೆ. ಆಹಾರದ ಮೂಲ ಹೊಟ್ಟೆಗೆ ಸೇವಿಸುವುದರಿಂದ ಈ ಪೋಷಕಾಂಶಗಳು ರಕ್ತಕ್ಕೆ ಪೂರೈಕೆಯಾಗಿ ದೇಹದ ಆರೋಗ್ಯವನ್ನು ವೃದ್ಧಿಸುವುದಲ್ಲದೇ ಕೂದಲಿಗೂ ಒಳಗಿನಿಂದ ಆರೈಕೆ ನೀಡುತ್ತವೆ. ವಿಧಾನ: ನೆಲ್ಲಿಕಾಯಿಯನ್ನು ಜಜ್ಜಿ ರಸವನ್ನು ಹಿಂಡಿ ಇಟ್ಟುಕೊಳ್ಳಬೇಕು. ಮಾರುಕಟ್ಟೆಯಲ್ಲಿ ದೊರಕುವ ನೆಲ್ಲಿಕಾಯಿಯ ಪುಡಿಯನ್ನೂ ಉಪಯೋಗಿಸಬಹುದು. ಎರಡು ಚಮಚ ರಸಕ್ಕೆ ಎರಡು ಚಮಚ ಈಗಷ್ಟೇ ಹಿಂಡಿದ ಲಿಂಬೆರಸವನ್ನು ಬೆರೆಸಿ ಬೆರಳುಗಳಿಂದ ನಯವಾಗಿ ಕೂದಲ ಬುಡಕ್ಕೆ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಬೇಕು. ಇಡಿಯ ತಲೆಗೆ ಹಚ್ಚಿಕೊಂಡಾದ ಬಳಿಕ ಒಂದು ಗಂಟೆ ಕಾಲ ಒಣಗಲು ಬಿಟ್ಟು ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂವಿನಿಂದ ತೊಳೆದುಕೊಳ್ಳಬೇಕು.

ದಾಸವಾಳ ಮತ್ತು ಕೊಬ್ಬರಿ ಎಣ್ಣೆ

ದಾಸವಾಳ ಮತ್ತು ಕೊಬ್ಬರಿ ಎಣ್ಣೆ

ಕೇರಳದಲ್ಲಿ ಮಹಿಳೆಯರು ಉದ್ದ ಹಾಗೂ ನೈಸರ್ಗಿಕ ತಲೆಗೂದಲು ಹೊಂದಿರಲು ಅವರು ಹೆಚ್ಚಾಗಿ ಉಪಯೋಸುವ ದಾಸವಾಳ ಮತ್ತ್ತುಕೊಬ್ಬರಿ ಎಣ್ಣೆಯ ಬಳಕೆ ಎಂದು ಅರ್ಥೈಸಿಕೊಳ್ಳಬಹುದು. ದಾಸವಾಳದ ನಿಯಮಿತ ಉಪಯೋಗದಿಂದ ಕೂದಲು ಬೇಗನೇ ಬಿಳಿಯಾಗುವುದನ್ನು, ತಲೆಹೊಟ್ಟು ಬರುವುದನ್ನು ಹಾಗೂ ಉದುರುವಿಕೆಯನ್ನು ತಡೆಗಟ್ಟಬಹುದು. ವಿಧಾನ: ದಾಸವಾಳ ಹೂವಿನ ಎಸಳುಗಳನ್ನು ಜಜ್ಜಿ ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಯಲ್ಲಿ ಚಿಕ್ಕ ಉರಿಯಲ್ಲಿ ಚೆನ್ನಾಗಿ ಕುದಿಸಿ ತಣಿಸಿಟ್ಟುಕೊಳ್ಳಬೇಕು. ತಣಿದ ಈ ಎಣ್ಣೆಯ ಮಿಶ್ರಣವನ್ನು ತಲೆಗೂದಲ ಬುಡಕ್ಕೆ ಹಚ್ಚಿ ನಯವಾಗಿ ಮಸಾಜ್ ಮಾಡಿಕೊಳ್ಳಬೇಕು. ಸುಮಾರು ಮೂರರಿಂದ ನಾಲ್ಕು ಘಂಟೆಗಳ ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರು ಮತ್ತು ಸೌಮ್ಯ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಬೇಕು.

English summary

Simple and effective Home remedies for hair problems

Hair is our crowning glory but due to factors like stress, pollution, improper care, etc, There are lots of factors behind the hair problem In order to take care of your mane in a natural way, make use of home remedies like amla, lime etc and get rid of any hair problem you have..
X
Desktop Bottom Promotion