For Quick Alerts
ALLOW NOTIFICATIONS  
For Daily Alerts

ಕೂದಲು ಉದುರುವ ಕಿರಿಕಿರಿ - ಮನೆಮದ್ದೇ ಸರಿ

By Staff
|

ಚರ್ಮರೋಗ ತಙ್ಞರ ಪ್ರಕಾರ ದಿನಕ್ಕೆ 50-100 ಕೂದಲು ಉದುರಿದರೆ ಅದರಿಂದ ಯಾವುದೇ ಸಮಸ್ಯೆ ಇರುವುದಿಲ್ಲವಂತೆ. ಏಕೆಂದರೆ ಇದು ಸಾಮಾನ್ಯ ಮಟ್ಟವಾಗಿರುತ್ತದೆ. ಆದರೆ ಯಾವಾಗ ಒಂದರ ಮೇಲೆ ಒಂದರಂತೆ ಹೆಚ್ಚು ಕೂದಲುಗಳು ಉದುರಲು ಆರಂಭಿಸುತ್ತವೆಯೋ, ಅಥವಾ ತಲೆಯ ಮೇಲೆ ಬೊಕ್ಕ ತಲೆಯ ಲಕ್ಷಣಗಳು ಕಾಣಲು ಆರಂಭಿಸಿದರೆ, ಆಗ ಆ ಸ್ಥಿತಿಯನ್ನು ಅಲೊಪಿಸಿಯ ಎಂದು ಕರೆಯುತ್ತಾರೆ.

ಈಗ ಹಿಂದಿನ ಕಾಲದಂತಲ್ಲ, ಮೂವತ್ತು ವರ್ಷಕ್ಕೆ ಒಬ್ಬ ವ್ಯಕ್ತಿಗೆ ಬೊಕ್ಕತಲೆಯು ಕಾಣಿಸಿಕೊಳ್ಳುವುದು ಈಗ ಸಾಮಾನ್ಯವಾಗಿದೆ. ಇದಕ್ಕೆ ಅಸಮರ್ಪಕ ಡಯಟ್ ಅಥವಾ ಹಾರ್ಮೋನುಗಳ ಡಿಸಾರ್ಡರ್ ಕಾರಣವಾಗಿರುತ್ತದೆ. ಸ್ವಲ್ಪ ಕೇಳಿ, ಕೂದಲು ಉದುರುತ್ತಿದೆ ಎಂದು ಚಿಂತಿಸಬೇಡಿ

ಈ ಲೇಖನದಲ್ಲಿ ನಿಮಗೆ ಮನೆಯಲ್ಲಿಯೇ ಕೂದಲು ಉದುರುವಿಕೆಗೆ ಪರಿಹಾರವನ್ನು ಮಾಡಿಕೊಳ್ಳುವ ಬಗೆಯನ್ನು ತಿಳಿಸಿಕೊಡುತ್ತದೆ. ಇದು ನಿಮ್ಮ ಕೂದಲನ್ನು ಕಾಪಡುವುದರ ಜೊತೆಗೆ, ಅದು ಮತ್ತಷ್ಟು ಬೆಳೆಯುವಂತೆ ಮಾಡುತ್ತದೆ. ಅಡುಗೆ ಮನೆಯಲ್ಲಿ ದೊರೆಯುವ ವಸ್ತುಗಳನ್ನು ಬಳಸಿಕೊಂಡು ನಿಮ್ಮ ಕೂದಲನ್ನು ಮತ್ತಷ್ಟು ಬೆಳೆಸಿಕೊಳ್ಳುವ ಸಲಹೆಗಳನ್ನು ನಾವು ಇಂದು ನಿಮಗಾಗಿ ನೀಡುತ್ತಿದ್ದೇವೆ.

ಮೊಟ್ಟೆಗಳು

ಮೊಟ್ಟೆಗಳು

ಮೊಟ್ಟೆಗಳಲ್ಲಿ ಸಲ್ಫರ್ ಅಧಿಕವಾಗಿ ಇರುತ್ತದೆ, ಜೊತೆಗೆ ಇದರಲ್ಲಿ ಅಸಂಖ್ಯಾತ ಪ್ರೋಟಿನ್‌ಗಳು ಮತ್ತು ಖನಿಜಾಂಶಗಳು ಇರುತ್ತವೆ. ಇವುಗಳು ಸೆಲೆನಿಯಂ, ಸತು, ಐಯೋಡಿನ್, ರಂಜಕ ಮುಂತಾದ ಅಂಶಗಳನ್ನು ಒಳಗೊಂಡಿರುತ್ತವೆ. ಮೊಟ್ಟೆಗಳು ಕೂದಲ ಬೆಳವಣಿಗೆಯಲ್ಲಿ ಗಣನೀಯವಾಗಿ ಸಹಕರಿಸುತ್ತವೆ. ಅದರಲ್ಲೂ ಇದನ್ನು ಆಲೀವ್ ಎಣ್ಣೆಯ ಜೊತೆಗೆ ಬಳಸಿದರೆ ಮತ್ತಷ್ಟು ಉತ್ತಮ ಫಲಿತಾಂಶ ಪಡೆಯಬಹುದು. ನಿಮ್ಮದೇ ಆದ ಕೂದಲು ಉದುರುವಿಕೆಯನ್ನು ತಡೆಯುವ ಪೇಸ್ಟನ್ನು ನೀವೇ ಮನೆಯಲ್ಲಿ ತಯಾರಿಸಿಕೊಳ್ಳಿ.

ಮೊಟ್ಟೆಗಳು

ಮೊಟ್ಟೆಗಳು

ಇದಕ್ಕಾಗಿ ಒಂದು ಮೊಟ್ಟೆಯ ಬಿಳಿ ಭಾಗವನ್ನು ಒಂದು ಟೀ.ಚಮಚ ಆಲೀವ್ ಎಣ್ಣೆಯ ಜೊತೆಗೆ ಬೆರೆಸಿ. ಅದನ್ನು ಚೆನ್ನಾಗಿ ಕಲೆಸಿಕೊಂಡು ನಿಮ್ಮ ಕೂದಲಿಗೆ ಲೇಪಿಸಿ. ಇದನ್ನು 15-20 ನಿಮಿಷಗಳ ಕಾಲ ಬಿಡಿ. ನಂತರ ಇದನ್ನು ತಣ್ಣೀರಿನಲ್ಲಿ ತೊಳೆಯಿರಿ.

ಆಮ್ಲಾ

ಆಮ್ಲಾ

ಆಮ್ಲಾ ಅಥವಾ ಬೆಟ್ಟದ ನೆಲ್ಲಿಕಾಯಿ ಕೂದಲು ಉದುರುವಿಕೆಗೆ ಹೇಳಿ ಮಾಡಿಸಿದ ಔಷಧಿಯಾಗಿರುತ್ತದೆ. ಇದು ಬೊಕ್ಕತಲೆ ಹೊಂದುವ ಸಮಸ್ಯೆಯಿಂದ ನಮ್ಮನ್ನು ಕಾಪಾಡುತ್ತದೆ. ಇದರಲ್ಲಿರುವ ಸಮೃದ್ಧ ವಿಟಮಿನ್ ಸಿ ಮತ್ತು ಕೋಶ ಪುನರ್ ಉದ್ದೀಪನಗೊಳಿಸುವ ಅಂಶಗಳನ್ನು ಇದು ಒಳಗೊಂಡಿರುತ್ತದೆ. ಆಮ್ಲಾವನ್ನು ನೀವು ಕೂದಲಿನ ಬುಡಕ್ಕೆ ಲೇಪಿಸಬಹುದು. ಜೊತೆಗೆ ಹಾಗೆಯೇ ಅದರ ರಸವನ್ನು ನೇರವಾಗಿ ಲೇಪಿಸಬಹುದು. ಈ ಆಮ್ಲಾವು ವಿಟಮಿನ್ ಸಿಯನ್ನು ಹೊಂದಿರುವುದರಿಂದ ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು.

ಆಮ್ಲಾ

ಆಮ್ಲಾ

ಆಮ್ಲಾ ಮಿಶ್ರಣವನ್ನು ತಯಾರಿಸಲು, ಆಮ್ಲಾವನ್ನು ಜಜ್ಜಿ ಕೊಂಡು ಅದರ ರಸವನ್ನು ಪಡೆಯಬಹುದು ಅಥವಾ ಆಮ್ಲಾ ಪುಡಿಯನ್ನು ಔಷಧಿ ಅಂಗಡಿಯಿಂದ ಪಡೆಯಬಹುದು. ಎರಡು ಟೇಬಲ್ ಸ್ಪೂನ್ ಆಮ್ಲಾ ರಸ ಅಥವಾ ಪುಡಿಗೆ ಅಷ್ಟೇ ಪ್ರಮಾಣದ ನಿಂಬೆರಸವನ್ನು ಬೆರೆಸಿ. ಚೆನ್ನಾಗಿ ಕಲೆಸಿಕೊಳ್ಳಿ. ನಂತರ ಅದನ್ನು ಕೂದಲಿನ ಬುಡಕ್ಕೆ ಲೇಪಿಸಿ, ಒಣಗಲು ಬಿಡಿ. ಆಮೇಲೆ ಇದನ್ನು ನೀರಿನಲ್ಲಿ ತೊಳೆಯಿರಿ.

ಬೆಳ್ಳುಳ್ಳಿ ಮತ್ತು ಈರುಳ್ಳಿ

ಬೆಳ್ಳುಳ್ಳಿ ಮತ್ತು ಈರುಳ್ಳಿ

ಗಂಧಕವು ಕೊಲ್ಲಾಜೆನ್‌ನ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ಕೂದಲಿನ ಬೆಳವಣಿಗೆಗೆ ಅತ್ಯಂತ ಸಹಕಾರಿ. ಬೆಳ್ಳುಳ್ಳಿ ಮತ್ತು ಈರುಳ್ಳಿಗಳು ಗಂಧಕ ಸಮೃದ್ಧ ಆಗರಗಳಾಗಿವೆ. ಆದ್ದರಿಂದ ಇದನ್ನು ಸಾಂಪ್ರದಾಯಿಕ ಔಷಧಗಳನ್ನು ತಯಾರಿಸುವಾಗ ಬಳಸುತ್ತಾರೆ. ಇವು ಕೂದಲ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತವೆ.

ಬೆಳ್ಳುಳ್ಳಿ ಮತ್ತು ಈರುಳ್ಳಿ

ಬೆಳ್ಳುಳ್ಳಿ ಮತ್ತು ಈರುಳ್ಳಿ

ಬೆಳ್ಳುಳ್ಳಿಯನ್ನು ಕೂದಲ ಬೆಳವಣಿಗೆಗೆ ಹೀಗೆ ಬಳಸಲಾಗುತ್ತದೆ: 4-5 ಬೆಳ್ಳುಳ್ಳಿಗಳನ್ನು ಜಜ್ಜಿಕೊಂಡು ತೆಂಗಿನ ಎಣ್ಣೆಯ ಜೊತೆ ಬೆರೆಸಿಕೊಳ್ಳಿ. ಇದನ್ನು ಕುದಿಯುವವರೆಗೆ ಚೆನ್ನಾಗಿ ಕಾಯಿಸಿ, ನಂತರ 2-3 ನಿಮಿಷಗಳ ಕಾಲ ಕಾಯಿರಿ. ಆಮೇಲೆ, ಇದು ಆರುವವರೆಗೆ ಕಾಯಿರಿ. ಇದು ಆರಿದ ಮೇಲೆ, ಇದನ್ನು ನಿಮ್ಮ ಕೂದಲ ಮೇಲೆ ಲೇಪಿಸಿ ಮೃದುವಾಗಿ ಮಸಾಜ್ ಮಾಡಿ. ಅತ್ಯುತ್ತಮ ಫಲಿತಾಂಶಗಳಿಗಾಗಿ ಇದನ್ನು ವಾರಕ್ಕೆ 2-3 ಬಾರಿ ಮಾಡಿ. ಈರುಳ್ಳಿಯನ್ನು ಕತ್ತರಿಸಿ, ರಸ ಪಡೆಯುವ ಮೂಲಕ ಇದರ ಸದುಪಯೋಗವನ್ನು ನೀವು ಪಡೆಯಬಹುದು. ಈರುಳ್ಳಿಯ ರಸವನ್ನು ನಿಮ್ಮ ಕೂದಲಿಗೆ ಲೇಪಿಸಿ 15 ನಿಮಿಷ ಬಿಡಿ. ನಂತರ ನೀರಿನಲ್ಲಿ ತೊಳೆಯಿರಿ.

ಮೆಹಂದಿ

ಮೆಹಂದಿ

ಏಶಿಯಾದ ಜನ ಮೆಹಂದಿಯನ್ನು ತುಂಬಾ ಇಷ್ಟಪಡುತ್ತಾರೆ. ಅದರಲ್ಲೂ ಮೆಹಂದಿ ಕೇವಲ ಅಲಂಕಾರಕ್ಕಷ್ಟೇ ಅಲ್ಲದೆ ಕೂದಲನ್ನು ಸಂರಕ್ಷಣೆ ಮಾಡಲು ಸಹ ಭಾರೀ ಪ್ರಯೋಜನಕಾರಿಯಾಗಿರುತ್ತದೆ. ಅದರಲ್ಲೂ ಮೆಹಂದಿಯು ಸಾಸಿವೆ ಎಣ್ಣೆ ಜೊತೆಗೆ ಬೆರೆತಾಗ ಮತ್ತಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

250 ಮಿ.ಲೀ ಸಾಸಿವೆ ಎಣ್ಣೆಯ ಜೊತೆಗೆ 60 ಗ್ರಾಂ ಮೆಹಂದಿಯನ್ನು ಬೆರೆಸಿ. ಈ ಮಿಶ್ರಣವನ್ನು ಬಿಸಿ ಮಾಡಿ. ಮೆಹಂದಿ ಎಲೆಗಳು ಸಂಪೂರ್ಣವಾಗಿ ಬೆಂದು ಅದರ ರಸ ಇದರಲ್ಲಿ ಬೆರೆತು ಹೋಗಬೇಕು. ನಂತರ ಇದನ್ನು ಆರಲು ಬಿಡಿ, ಇದನ್ನು ಒಂದು ಪಾತ್ರೆಯಲ್ಲಿ ಸಂಗ್ರಹಿಸಿಟ್ಟುಕೊಂಡು ಪ್ರತಿದಿನವು ಅದನ್ನು ಬಳಸಬಹುದು.

ದಾಸವಾಳ

ದಾಸವಾಳ

ದಾಸವಳವು ಕೂದಲಿನ ಆರೈಕೆಯಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿರುತ್ತದೆ. ಇದರಲ್ಲಿ ಅಂಶಗಳು ಕೂದಲನ್ನು ಆರೋಗ್ಯಕರ ಮಾಡುತ್ತದೆ. ಇದು ಕೂದಲು ಬೂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ ಮತ್ತು ತಲೆ ಹೊಟ್ಟಿನಿಂದ ಕಾಪಾಡುತ್ತದೆ. ದಾಸವಾಳವನ್ನು ನಿರಂತರವಾಗಿ ಬಳಸುವ ಮೂಲಕ ನೀವು ನಿಮ್ಮ ತಲೆಯನ್ನು ಬೊಕ್ಕತಲೆ ಆಗುವುದರಿಂದ ಕಾಪಾಡಬಹುದು. ಕೇರಳದಲ್ಲಿರುವವರು ದಾಸವಾಳಕ್ಕೆ ತೆಂಗಿನ ಎಣ್ಣೆಯನ್ನು ಬಳಸಿ, ಕೂದಲಿಗೆ ಹಚ್ಚಿಕೊಳ್ಳುತ್ತಾರೆ.

ದಾಸವಾಳ

ದಾಸವಾಳ

ನಿಮ್ಮದೇ ಆದ ದಾಸವಾಳ ಪೇಸ್ಟನ್ನು ಮನೆಯಲ್ಲಿ ತಯಾರಿಸಿಕೊಂಡು ಕೂದಲಿಗೆ ಹಚ್ಚಿಕೊಳ್ಳಿ. ಎರಡು ದಾಸವಾಳ ಹೂವುಗಳನ್ನು ತೆಗೆದುಕೊಳ್ಳಿ. ಅದನ್ನು ಬ್ಲೆಂಡರ್‌ನಲ್ಲಿ ಹಾಕಿ, ಜೀರಿಗೆ ಅಥವಾ ತೆಂಗಿನ ಎಣ್ಣೆಯನ್ನು ಬೆರೆಸಿಕೊಂಡು ಇದನ್ನು ರುಬ್ಬಿಕೊಳ್ಳಿ. 2-3 ಗಂಟೆ ಬಿಟ್ಟು ಸ್ನಾನ ಮಾಡಿ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಒಂದು ಕಪ್ ಸಾಸಿವೆ ಎಣ್ಣೆಯನ್ನು ನಾಲ್ಕು ಚಮಚ ಮೆಹೆಂದಿ ಸೊಪ್ಪಿನ ಜೊತೆಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿ ಒಂದು ಬಾಟಲಿಯಲ್ಲಿ ಹಾಕಿಟ್ಟು ದಿನವೂ ಬೋಳಾದ ತಲೆಯ ಭಾಗಕ್ಕೆ ಲೇಪಿಸಿ. ಇದು ಕೂದಲು ಉದುರುವುದನ್ನು ತಡೆಯುವುದರ ಜೊತೆಗೆ ಮತ್ತೆ ಹುಟ್ಟಲು ಸಹಾಯ ಮಾಡುತ್ತದೆ.

ಹೇರ್ ಪ್ಯಾಕ್

ಹೇರ್ ಪ್ಯಾಕ್

ತಿಂಗಳಿಗೊಮ್ಮೆಯಾದರೂ ಹೇರ್ ಪ್ಯಾಕ್ ಹಚ್ಚಿ. ಮೆಹೆಂದಿ ಸೊಪ್ಪು, ಮೊಸರು ಅಥವಾ ಮೊಟ್ಟೆ ಯಾವುದನ್ನೂ ಹೇರ್ ಪ್ಯಾಕ್ ಆಗಿ ಬಳಸಬಹುದು. ಇದರಿಂದ ಕೂದಲು ಉದುರುವಿಕೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.

ತಲೆ ಕೂದಲಿಗೆ ಮೆಂತೆ ನೀರನ್ನು ಬಳಸಿ

ತಲೆ ಕೂದಲಿಗೆ ಮೆಂತೆ ನೀರನ್ನು ಬಳಸಿ

ಮೆಂತೆಯನ್ನು ರಾತ್ರಿ ನೀರು ಅಥವಾ ಮೊಸರಿನಲ್ಲಿ ನೆನೆಸಿ ಬೆಳಗ್ಗೆ ಅದನ್ನು ರುಬ್ಬಿ ತಲೆಕೂದಲಿನ ಬುಡಕ್ಕೆ ಹಚ್ಚಿ ಅರ್ಧ ತಾಸಿನ ನಂತರ ತೊಳೆಯಬೇಕು. ಇದನ್ನು ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.

ಮೊಸರು ಹಾಗೂ ಮೊಟ್ಟೆ

ಮೊಸರು ಹಾಗೂ ಮೊಟ್ಟೆ

ಹುಳಿ ಮೊಸರಿಗೆ ಮೊಟ್ಟೆಯ ಬಿಳಿ ಭಾಗವನ್ನು ಹಾಕಿ ಮಿಶ್ರ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ಅರ್ಧ ತಾಸಿನ ನಂತರ ತೊಳೆಯಬೇಕು. ಇದನ್ನು ವಾರದಲ್ಲಿ ಎರಡು ಬಾರಿ ಮಾಡುತ್ತಾ ಬಂದರೆ ಕೂದಲು ಉದುರುವ ಸಮಸ್ಯೆ ನಿವಾರಣೆಯಾಗುತ್ತದೆ.

ಬಿಸಿ ಎಣ್ಣೆ ಮಸಾಜ್

ಬಿಸಿ ಎಣ್ಣೆ ಮಸಾಜ್

ತಲೆಗೆ ಸರಿಯಾಗಿ ಎಣ್ಣೆ ಹಚ್ಚಿ. ಅದರಲ್ಲೂ ತಲೆಗೆ ಎಣ್ಣೆಯನ್ನು ಬಿಸಿ ಮಾಡಿ ಹಚ್ಚಿದರೆ ಕೂದಲಿನ ಬುಡದ ರಂಧ್ರಗಳು ತೆರೆದುಕೊಂಡು ಎಣ್ಣೆಯನ್ನು ಹೀರಿಕೊಳ್ಳುತ್ತದೆ. ಇದರಿಂದ ಕೂದಲು ಉದುರುವುದು ಕಡಿಮೆಯಾಗಿ ಆರೋಗ್ಯ ಹೆಚ್ಚಾಗುವುದು.

ದವಸ ಧಾನ್ಯಗಳು

ದವಸ ಧಾನ್ಯಗಳು

ದವಸ ಧಾನ್ಯಗಳಲ್ಲಿ ವಿಟಮಿನ್ ಬಿ5 ಇರುವುದರಿಂದ ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಕಾಳುಗಳನ್ನು ಮೊಳಕೆ ಬರಿಸಿ ಸೇವಿಸಿದರೆ ಹೆಚ್ಚಿನ ಪೋಷಕಾಂಶಗಳನ್ನು ಪಡೆಯಬಹುದು.

ಕೊತ್ತಂಬರಿ ಸೊಪ್ಪಿನ ಪೇಸ್ಟ್ ಮಾಡಿ

ಕೊತ್ತಂಬರಿ ಸೊಪ್ಪಿನ ಪೇಸ್ಟ್ ಮಾಡಿ

ಕೊತ್ತಂಬರಿ ಸೊಪ್ಪಿನ ಪೇಸ್ಟ್ ಮಾಡಿ ತಲೆಗೆ ಹಚ್ಚಿದರೆ ಕೂದಲು ಉದುರುವ ಸಮಸ್ಯೆಗೆ ಉತ್ತಮ ಫಲ ಕಾಣುತ್ತದೆ. ಬೋಳಾದ ತಲೆಗೂ ಇದು ಉತ್ತಮ.

ಕಹಿಬೇವು, ಮೆಹೆಂದಿ ಸೊಪ್ಪಿನ ಎಣ್ಣೆ

ಕಹಿಬೇವು, ಮೆಹೆಂದಿ ಸೊಪ್ಪಿನ ಎಣ್ಣೆ

ಕಹಿಬೇವು, ಮೆಹೆಂದಿ ಸೊಪ್ಪನ್ನು ಸಾಸಿವೆ ಎಣ್ಣೆಯಲ್ಲಿ ಕುದಿಸಿ ತಣಿಸಿ. ನಂತರ ಇದನ್ನು ಸೋಸಿ ಬಾಟಲಿಯಲ್ಲಿ ಹಾಕಿಡಿ. ಅದಕ್ಕೆ ಕೆಲವು ಚೂರು ಕರ್ಪೂರವನ್ನೂ ಹಾಕಿಡಿ. ಈ ಎಣ್ಣೆಯನ್ನು ಪ್ರತಿನಿತ್ಯ ತಲೆಗೆ ಬಳಸಬಹುದು. ಮಸಾಜ್‌ಗಾಗಿಯೂ ಬಳಸಬಹುದು.

ಲಿಂಬೆ ರಸ

ಲಿಂಬೆ ರಸ

ಕೂದಲಿನ ಬುಡಕ್ಕೆ ನಿಂಬೆ ರಸ ಹಚ್ಚಿ ಚೆನ್ನಾಗಿ ತಿಕ್ಕಿ. ಅರ್ಧ ಗಂಟೆಯ ನಂತರ ತಣ್ಣೀರಿನಿಂದ ತಲೆ ತೊಳೆಯಿರಿ. ನೀವು ಈ ಕ್ರಮ ಅನುಸರಿಸುತ್ತಾ ಬಂದರೆ ಖಂಡಿತವಾಗಿಯೂ ಕೂದಲು ಉದುರುವ ಸಮಸ್ಯೆಯಿಂದ ಪಾರಾಗಬಹುದು.

English summary

Remedies for Hair Loss that Actually Work!

Dermatologists suggest that there is no reason for worries when one loses 50-100 strands of hair, since it is absolutely normal.However, when one loses more and more hair, and there are some visible bare patches occurring, the person suffers from a condition known as alopecia. This article will show you some quite effective homemade cures that will be your ally in the struggle to preserve the hair and to encourage its growth again.
X
Desktop Bottom Promotion