For Quick Alerts
ALLOW NOTIFICATIONS  
For Daily Alerts

ಕೂದಲಿನ ಸಮಸ್ಯೆಗೆ ಮೊಟ್ಟೆಯ ಶಾಂಪೂ ಬಳಸಿ ನೋಡಿ!

By Super
|

ಕೂದಲಿನ ಆರೈಕೆಗೆ ಸ೦ಬ೦ಧಿಸಿದ ಹೇರ್ ಪ್ಯಾಕ್‌ಗಳ ವಿಚಾರಕ್ಕೆ ಬ೦ದಾಗ, ಫಕ್ಕನೆ ಹೊಳೆಯುವ ಅತ್ಯುತ್ತಮವಾದ ಒ೦ದು ಹೇರ್ ಪ್ಯಾಕ್ ಯಾವುದೆ೦ದರೆ ಅದು ಮೊಟ್ಟೆ! ಹೌದು ಅನೇಕ ವಿಟಮಿನ್ ಹಾಗೂ ವಿವಿಧ ವರ್ಗಗಳಿಗೆ ಸೇರಿದ ಖನಿಜಾ೦ಶಗಳಿ೦ದ ಸಮೃದ್ಧವಾಗಿರುವ ಮೊಟ್ಟೆಯು ಪೋಷಕಾ೦ಶಗಳ ಒ೦ದು ಉಗ್ರಾಣವೇ ಆಗಿದೆ.

ಮೊಟ್ಟೆಯಲ್ಲಿರುವ ಪ್ರೋಟೀನ್ ಗುಣಮಟ್ಟವು ಅತ್ಯುತ್ಕೃಷ್ಟವಾದುದಾಗಿದ್ದು, ಕೂದಲಿನ ಬೆಳವಣಿಗೆಗೆ ನಾನಾ ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ. ಸಾಮಾನ್ಯವಾಗಿ ಕೂದಲನ್ನು ಮತ್ತಷ್ಟು ಸುಂದರವನ್ನಾಗಿ ಮಾಡಲು ನೀವು ಸೆಲೂನ್‌ಗಳು ಮತ್ತು ದುಬಾರಿ ಚಿಕಿತ್ಸೆಗಳಿಗೆ ಮೊರೆ ಹೋಗುತ್ತೇವೆ, ಅದರ ಜೊತೆಗೆ ಹೆಚ್ಚಿನ ರಾಸಾಯನಿಕಗಳು ಇರುವ ಶಾಂಪೂಗಳನ್ನು ಸಹ ಖರೀದಿಸಿ ಪ್ರಯೋಗ ಮಾಡುತ್ತೇವೆ. ಈ ಕೇಶ ರಕ್ಷಕ ಉತ್ಪನ್ನಗಳು, ನಿಮಗೆ ತಾತ್ಕಾಲಿಕವಾಗಿ ಸುಂದರ ಕೂದಲನ್ನು ನೀಡುತ್ತವೆ. ಆದರೆ ದೀರ್ಘಕಾಲದಲ್ಲಿ ಇವು ನಿಮ್ಮ ಕೂದಲನ್ನು ಹಾಳು ಮಾಡುತ್ತವೆ.

ಇದಕ್ಕಾಗಿ ನೀವು ವ್ಯಯಿಸಿದ ಕಾಲ ಮತ್ತು ಹಣ ಆಗ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ನಷ್ಟವಾಗುತ್ತದೆ. ಇಂತಹ ರಾಸಾಯನಿಕಗಳನ್ನು ನಿಮ್ಮ ಕೂದಲ ಮೇಲೆ ಬಳಸುವುದನ್ನು ಬಿಡಿ. ಮನೆಯಲ್ಲಿಯೇ ದೊರೆಯುವ ಸ್ವಾಭಾವಿಕ ಉತ್ಪನ್ನಗಳ ಸಹಾಯದಿಂದ ನೀವು ನಿಮ್ಮ ಕೂದಲನ್ನು ಸುಂದರವನ್ನಾಗಿ ಇರಿಸಿಕೊಳ್ಳಬಹುದು. ಕೂದಲಿನ ಸಮಸ್ಯೆಗೆ ತಯಾರಿಸಿ ಎಗ್ ಹೇರ್ ಪ್ಯಾಕ್!
ಕೂದಲನ್ನು ಸ್ವಾಭಾವಿಕವಾಗಿ ರಕ್ಷಿಸಿಕೊಳ್ಳುವ ಮತ್ತು ಸಂಪೂರ್ಣವಾಗಿ ಅದನ್ನು ರಿಪೇರಿ ಮಾಡುವ ಪದಾರ್ಥಗಳು ಮನೆಯಲ್ಲಿಯೇ ದೊರೆಯುತ್ತವೆ. ಇದಕ್ಕಾಗಿ ನೀವು ಮೊಟ್ಟೆಗಳನ್ನು ಸಹ ಬಳಸಿಕೊಳ್ಳಬಹುದು. ಮೊಟ್ಟೆಯಲ್ಲಿ ವಿಟಮಿನ್‌ಗಳು, ಖನಿಜಗಳು, ಪ್ರೋಟೀನ್‍ಗಳು ಮತ್ತು ಬಯೋಟಿನ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಮೊಟ್ಟೆಗಳನ್ನು ಕೂದಲಿಗೆ ಬಳಸಿದಲ್ಲಿ, ನಿಮಗೆ ಇನ್ನಿತರ ಯಾವುದೇ ಕೇಶ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ಇಂದು ನಾವು ಮೊಟ್ಟೆಯ ಶಾಂಪೂವನ್ನು ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ.

ಮೊಟ್ಟೆ, ಲಿ೦ಬೆ, ಹಾಗೂ ಆಲಿವ್ ಎಣ್ಣೆ ಶಾಂಪೂ

ಮೊಟ್ಟೆ, ಲಿ೦ಬೆ, ಹಾಗೂ ಆಲಿವ್ ಎಣ್ಣೆ ಶಾಂಪೂ

ಬಟ್ಟಲೊ೦ದರಲ್ಲಿ ಮೊಟ್ಟೆಯೊ೦ದನ್ನು ಒಡೆದು, ಅದಕ್ಕೆ ಅರ್ಧಹೋಳಿನಷ್ಟು ಲಿ೦ಬೆಯ ರಸವನ್ನು ಬೆರೆಸಿರಿ.ಇವೆರಡನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ.ಈಗ ಈ ಮಿಶ್ರಣಕ್ಕೆ ಎರಡು ಟೇಬಲ್ ಚಮಚಗಳಷ್ಟು ಆಲಿವ್ ಎಣ್ಣೆಯನ್ನು ಬೆರೆಸಿ ಪುನ: ಇವೆಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಇವೆಲ್ಲವೂ ಪರಸ್ಪರ ಚೆನ್ನಾಗಿ ಬೆರೆತುಕೊ೦ಡ ಬಳಿಕ,ಇದಕ್ಕೆ ಎರಡು ಟೇಬಲ್ ಚಮಚ ಮೈಲ್ಡ್ ಶಾಂಪೂವನ್ನು ಅರ್ಧ ಕಪ್ ಉಗುರು ಬೆಚ್ಚಗಿನ ನೀರಿನಲ್ಲಿ ಇದನ್ನೆಲ್ಲ ಬೆರೆಸಿಕೊಳ್ಳಿ

ನೆತ್ತಿಯನ್ನೂ ಹಾಗೂ ಕೂದಲ ಎಳೆಗಳನ್ನೂ ಸಮನಾಗಿ ಆವರಿಸಿಕೊಳ್ಳುವ೦ತೆ ಹಚ್ಚಿಕೊ೦ಡಿರುವುದನ್ನು ಖಚಿತಪಡಿಸಿಕೊಳ್ಳಿರಿ. ಹಚ್ಚಿಕೊ೦ಡ ಬಳಿಕ ಅರ್ಧಘ೦ಟೆಯ ಕಾಲ ಅದನ್ನು ಹಾಗೆಯೇ ಇರಗೊಡಿರಿ. ಬಳಿಕ ತಣ್ಣೀರಿನಿ೦ದ ಕೇಶರಾಶಿಯನ್ನು ತೊಳೆದುಕೊಳ್ಳಿ

ಮೊಟ್ಟೆ ಮತ್ತು ಅಲೋವಿರಾ ಶಾಂಪೂ

ಮೊಟ್ಟೆ ಮತ್ತು ಅಲೋವಿರಾ ಶಾಂಪೂ

ಈ ಶಾಂಪೂವು ತಲೆಹೊಟ್ಟು ಮತ್ತು ಶಿಲೀಂಧ್ರದ ಇನ್‌ಫೆಕ್ಷನ್ ಅನ್ನು ತಡೆಯುತ್ತದೆ. ಇದು ನಿಮ್ಮ ಕೂದಲನ್ನು ಸದೃಢವಾಗಿ ಮಾಡಿ, ಕೂದಲು ಉದುರದಂತೆ ತಡೆಯುತ್ತದೆ. ಒಂದು ಮೊಟ್ಟೆಯ ಜೊತೆಗೆ ಮೂರು ಟೇಬಲ್ ಚಮಚ ಅಲೋವಿರಾ ಜೆಲ್ ಮತ್ತು ಎರಡು ಟೇಬಲ್ ಚಮಚ ಮೈಲ್ಡ್ ಶಾಂಪೂವನ್ನು ಬೆರೆಸಿ, ಮೃದುವಾದ ಮಿಶ್ರಣ ಮಾಡಿಕೊಂಡು ನಿಮ್ಮ ಕೂದಲಿಗೆ ಬಳಸಿ.

ಬಾದಾಮಿ ಎಣ್ಣೆ, ಜೇನು ತುಪ್ಪ ಮತ್ತು ಮೊಟ್ಟೆ ಶಾಂಪೂ

ಬಾದಾಮಿ ಎಣ್ಣೆ, ಜೇನು ತುಪ್ಪ ಮತ್ತು ಮೊಟ್ಟೆ ಶಾಂಪೂ

ಈ ಶಾಂಪೂವು ನಿಮ್ಮ ಕೂದಲಿಗೆ ನಿಮ್ಮ ಕೂದಲಿಗೆ ಹಿಂದಿನ ಸೌಂದರ್ಯವನ್ನು ಕೊಡುವುದು ಖಚಿತ. ಇದಕ್ಕಾಗಿ ಒಂದು ಟೇಬಲ್ ಚಮಚ ಬಾದಾಮಿ ಎಣ್ಣೆ, ಒಂದು ಟೇಬಲ್ ಚಮಚ ವಿಚ್ ಹಜೆಲ್ ಹರ್ಬ್, ಎರಡು ಟೇಬಲ್ ಚಮಚ ಮೈಲ್ಡ ಶಾಂಪೂ, ಒಂದು ಟೇಬಲ್ ಚಮಚ ರೋಸ್ ವಾಟರ್ ಮತ್ತು ಒಂದು ದೊಡ್ಡ ಮೊಟ್ಟೆಯನ್ನು ಬಟ್ಟಲಿನಲ್ಲಿ ಹಾಕಿ, ಚೆನ್ನಾಗಿ ಮಿಶ್ರಣ ಮಾಡಿ; ಅಗತ್ಯವಾದಾರೆ ಅರ್ಧ ಕಪ್ ನೀರನ್ನು ಸಹ ಇದಕ್ಕೆ

ರೆಸಿಕೊಳ್ಳಬಹುದು.

ಮೊಟ್ಟೆ, ಕಡ್ಲೆಹಿಟ್ಟು, ಹಾಗೂ ಆಲಿವ್ ಎಣ್ಣೆ

ಮೊಟ್ಟೆ, ಕಡ್ಲೆಹಿಟ್ಟು, ಹಾಗೂ ಆಲಿವ್ ಎಣ್ಣೆ

ಮೊಟ್ಟೆ ಹಾಗೂ ಕಡ್ಲೆಹಿಟ್ಟುಗಳೆರಡೂ ಪ್ರೋಟೀನ್‌ನ ಆಗರಗಳಾಗಿದ್ದು, ನಿಮ್ಮ ಕೇಶರಾಶಿಗೆ ಬಲವನ್ನು ನೀಡುವುದಕ್ಕಾಗಿ ಮಾತ್ರವಲ್ಲದೇ ನೈಸರ್ಗಿಕವಾದ ಕ೦ಡಿಶನಿ೦ಗ್ ಅನ್ನೂ ಸಹ ಒದಗಿಸುವುದಕ್ಕಾಗಿ ಈ ಎರಡು ಸಾಮಗ್ರಿಗಳು ಈ ಹೇರ್ ಪ್ಯಾಕ್ ನಲ್ಲಿ ಜೊತೆಗೂಡಿವೆ. ಒ೦ದು ತತ್ತಿ, ಒ೦ದು ಟೇಬಲ್ ಚಮಚದಷ್ಟು ಕಡ್ಲೆಹಿಟ್ಟು, ಹಾಗೂ ಎರಡು ಟೇಬಲ್ ಚಮಚಗಳಷ್ಟು ಆಲಿವ್ ಎಣ್ಣೆ - ಸಮರೂಪದಲ್ಲಿ ಕಾಣಿಸುವ೦ತಹ ಪ್ಯಾಕ್ ಅನ್ನು ಸಿದ್ಧಪಡಿಸಿಟ್ಟುಕೊಳ್ಳುವುದಕ್ಕಾಗಿ ಈ ಮೂರನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಈ ಮಿಶ್ರಣವನ್ನು ಸಮಾನವಾಗಿ ಕೂದಲು ಹಾಗೂ ನೆತ್ತಿಯ ಭಾಗಕ್ಕೆ ಲೇಪಿಸಿಕೊ೦ಡ ಬಳಿಕ ಅದನ್ನು ಹಾಗೆಯೇ ಒಣಗಲು ಬಿಡಿರಿ. ಕಡ್ಲೆಹಿಟ್ಟು ನಿಮ್ಮ ಕೂದಲ ಎಳೆಗಳಿಗೆ ಸ್ವಲ್ಪ ಅ೦ಟಿಕೊಳ್ಳಬಹುದು. ಆದರೂ ಕೂಡ, ಸ್ವಲ್ಪ ಹೆಚ್ಚುವರಿಯಾಗಿ ಪ್ರಯತ್ನಿಸಿದಲ್ಲಿ, ಇದನ್ನು ಸುಲಭವಾಗಿ ನಿವಾರಿಸಿ ತೆಗೆಯಬಹುದು.

English summary

Natural Egg Shampoo Recipes

The beauty of your tresses reflects on your whole personality. To make your hair beautiful and healthy you usually visit salons and go for expensive hair treatments. Apart from that you also purchase chemical laden shampoos to make you hair shine.
X
Desktop Bottom Promotion