For Quick Alerts
ALLOW NOTIFICATIONS  
For Daily Alerts

ಕೂದಲನ್ನು ಸಮೃದ್ಧಗೊಳಿಸುವ ಹಳ್ಳಿಗಾಡಿನ ನೈಸರ್ಗಿಕ ಶಾಂಪೂ

|

ರಾಸಾಯನಿಕಗಳಿಂದ ಕೂಡಿದ ಶಾಂಪೂಗಳನ್ನು ಬಳಸಿ ನಿಮ್ಮ ಕೂದಲನ್ನು ಹಾಳು ಮಾಡಿಕೊಳ್ಳುವ ಬದಲು, ನಿಮ್ಮ ಕೂದಲಿಗೆ ಯಾವುದೇ ಹಾನಿ ಮಾಡದಂತಹ ನೈಸರ್ಗಿಕ ಶಾಂಪೂವನ್ನು ಬಳಸುವುದು ಉತ್ತಮ. ಇದು ನಿಮ್ಮ ಕೂದಲಿಗು ಆರೈಕೆಯನ್ನು ನೀಡುತ್ತದೆ ಮತ್ತು ಅದಕ್ಕೆ ಹಾನಿಯಾಗುವುದನ್ನು ಸಹ ತಪ್ಪಿಸುತ್ತದೆ. ನೆಲ್ಲಿಕಾಯಿ,ಅಂಟುವಾಳ ಮತ್ತು ಸೀಗೆಕಾಯಿಗಳನ್ನು ಆಯುರ್ವೇದ ಹುಟ್ಟುವ ಮೊದಲೆ ನಮ್ಮ ಹಿಂದಿನ ಕಾಲದ ಜನ ಬಳಸುತ್ತಿದ್ದರು. ಇದನ್ನು ಇಂದಿಗು ಸಹ ಹಳ್ಳಿಗಳ ಕಡೆ ಹಾಗು ಪಟ್ಟಣಗಳ ಕಡೆ ಎಂಬ ಭೇದವಿಲ್ಲದೆ ಜನ ಬಳಸುತ್ತಿದ್ದಾರೆ.

ಈ ಪದಾರ್ಥಗಳು ಕೂದಲಿನ ಆರೈಕೆಯಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತವೆ. ಇವು ಕೂದಲಿನ ಬೆಳವಣಿಗೆಗು ಸಹ ನೆರವಾಗುತ್ತವೆ. ಇದು ಕೂದಲಿನ ನೈಸರ್ಗಿಕ ಬಣ್ಣವನ್ನು ಕಾಪಾಡುತ್ತದೆ ಮತ್ತು ಕೂದಲಿಗೆ ದೊರೆಯಬೇಕಾದ ಸ್ವಾಭಾವಿಕ ಎಣ್ಣೆಯನ್ನು ಸಹ ಒದಗಿಸಿ, ಅದರ ಹೊಳಪನ್ನು ಮತ್ತು ಸೌಂದರ್ಯವನ್ನು ಕಾಪಾಡುತ್ತದೆ. ಇದರ ಶಾಂಪೂವನ್ನು ನಾವು ತಯಾರಿಸುವ ಮುನ್ನ ಈ ಪದಾರ್ಥಗಳ ಕುರಿತು ನಮಗೆ ತೃಪ್ತಿಯಿರಬೇಕು. ಬನ್ನಿ ಈ ಪದಾರ್ಥಗಳ ಕುರಿತು ಒಂದು ನೋಟವನ್ನು ಹರಿಸಿ ಬರೋಣ.

ಬೆಟ್ಟದ ನೆಲ್ಲಿಕಾಯಿಯ ಪ್ರಯೋಜನಗಳು

Natural Amla, Reetha and Shikakai Shampoo

ನೆಲ್ಲಿಕಾಯಿಯಲ್ಲಿ ಕೂದಲಿಗೆ ಬೇಕಾದ ಎಲ್ಲಾ ಪೋಷಕಾಂಶಗಳು ಲಭ್ಯವಿವೆ. ಹಾಗಾಗಿ ಇದು ಕೂದಲ ಆರೈಕೆಯಲ್ಲಿ ಅತ್ಯಂತ ಪ್ರಧಾನವಾಗಿ ಬಳಸಲ್ಪಡುತ್ತದೆ.
ಇದರಲ್ಲಿ ಕೊಬ್ಬಿನ ಆಮ್ಲಗಳು ಇರುತ್ತವೆ, ಇವು ಕೂದಲನ್ನು ಮೊಯಿಶ್ಚರೈಸ್ ಮಾಡುತ್ತವೆ. ಅತ್ಯಗತ್ಯವಾದ ಕೊಬ್ಬಿನ ಆಮ್ಲಗಳು ಕೂದಲು ಒಡೆಯುವಿಕೆಯನ್ನು ಮತ್ತು ಒಣಗುವಿಕೆ ಹಾಗು ತಲೆ ಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತವೆ.
ನೆಲ್ಲಿಕಾಯಿಯಲ್ಲಿ ಸಮೃದ್ಧವಾದ ಪ್ರೋಟಿನ್‍ಗಳು, ಫ್ಲಾವೊನಾಯ್ಡ್‌ಗಳು, ವಿಟಮಿನ್‍ಗಳು ಮತ್ತು ಖನಿಜಗಳು ಇರುತ್ತವೆ. ಇವು ಕೂದಲು ಉದುರುವಿಕೆಯನ್ನು ತಡೆಗಟ್ಟಿ, ಕೂದಲ ಬೆಳವಣಿಗೆಗೆ ಸಹಕರಿಸುತ್ತವೆ. ಬೆಟ್ಟದ ನೆಲ್ಲಿಕಾಯಿಯಲ್ಲಿ ಯಥೇಚ್ಛ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಇರುತ್ತವೆ. ಇವು ಸಹ ಕೂದಲ ಬುಡವನ್ನು ಗಟ್ಟಿಗೊಳಿಸುತ್ತವೆ. ಜೊತೆಗೆ ಇದು ಕೂದಲಿನ ಮೇಲೆ ಒಂದು ಅದ್ಭುತವಾದ ಕಂಡೀಶನರ್ ಆಗಿ ಸಹ ಕಾರ್ಯ ನಿರ್ವಹಿಸುತ್ತದೆ. ಇದರಿಂದ ನಿಮ್ಮ ಕೂದಲು ನಳನಳಿಸುತ್ತದೆ.

ಅಂಟುವಾಳದ ಪ್ರಯೋಜನಗಳು


ಅಂಟುವಾಳವು ಒಂದು ಅದ್ಭುತವಾದ ಕ್ಲೀನ್ಸರ್ ಆಗಿದೆ. ಇದು ಒಡೆದ ಬುಡವನ್ನು ಸರಿಪಡಿಸುತ್ತದೆ ಮತ್ತು ಇನ್‍ಫೆಕ್ಷನ್‍ಕಾರಕ ಸೂಕ್ಷ್ಮಾಣು ಜೀವಿಗಳನ್ನು ಕೊಲ್ಲುತ್ತದೆ. ಹೀಗೆ ಇದು ತುರಿಕೆಯನ್ನು ತರುವಂತಹ ಇನ್‍ಫೆಕ್ಷನ್‍ಗಳನ್ನು ದೂರ ಮಾಡಿ ಕೂದಲ ಬುಡವನ್ನು ರಕ್ಷಿಸುತ್ತದೆ
ಇದರಲ್ಲಿರುವ ಹಲವಾರು ಪೋಷಕಾಂಶಗಳು ಕೂದಲನ್ನು ಆರೋಗ್ಯವಾಗಿ ಮತ್ತು ಮೃದುವಾಗಿ ಇಡುತ್ತದೆ. ಅಂಟುವಾಳವು ಕೂದಲಿಗೆ ಹೊಳಪನ್ನು ನೀಡುತ್ತದೆ. ಇದರಲ್ಲಿರುವ ಸ್ವಚ್ಛಗೊಳಿಸುವ ಅಂಶಗಳು, ಪ್ರತಿನಿತ್ಯ ಬಳಸುತ್ತಿದ್ದರೆ ತಲೆ ಹೊಟ್ಟನ್ನು ನಿವಾರಿಸುತ್ತದೆ.

ಸೀಗೆಕಾಯಿಯ ಪ್ರಯೋಜನಗಳು


ಸೀಗೆಕಾಯಿಯು ಕೂದಲಿಗೆ ಅತ್ಯುತ್ತಮವಾದ ಹಣ್ಣು ಎಂದು ಪರಿಗಣಿಸಲ್ಪಟ್ಟಿದೆ. ಇದನ್ನು ಬಳಸಲು ಹಲವಾರು ಕಾರಣಗಳು ನಮ್ಮ ಮುಂದೆ ದೊರೆಯುತ್ತವೆ. ಏಕೆಂದರೆ ಇದರಲ್ಲಿ pH ಪ್ರಮಾಣವು ಕಡಿಮೆಯಾಗಿರುತ್ತದೆ ಮತ್ತು ಕೂದಲಿನ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತದೆ.
ಸೀಗೆಕಾಯಿ ಸಹ ಕೂದಲನ್ನು ಕಂಡೀಶನ್ ಮಾಡಲು ಮತ್ತು ಸದೃಢಗೊಳಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರ ಪರಿಣಾಮವಾಗಿ ನಿಮ್ಮ ಕೂದಲು ಉದುರುವುದು ನಿಲ್ಲುತ್ತದೆ. ಜೊತೆಗೆ ಇದು ತಲೆ ಹೊಟ್ಟು ನಿವಾರಿಸುವಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತದೆ ಮತ್ತು ಹೆಚ್ಚಿನ ಇನ್‍ಫೆಕ್ಷನ್ ಅನ್ನು ಸಹ ನಿವಾರಿಸುತ್ತದೆ. ಮೊಟ್ಟೆಯಲ್ಲಿ ಅಡಗಿದೆ ಕೂದಲಿನ ಸಕಲ ಸೌಂದರ್ಯದ ರಹಸ್ಯ!

ನೆಲ್ಲಿಕಾಯಿ, ಅಂಟುವಾಳ ಮತ್ತು ಸೀಗೆಕಾಯಿ ಶಾಂಪೂವನ್ನು ಮಾಡುವ ವಿಧಾನ


*ಈ ಅದ್ಭುತವಾದ ಶಾಂಪೂವನ್ನು ತಯಾರಿಸುವುದು ತುಂಬಾ ಸುಲಭ. 500 ಮಿ.ಲೀ ನೀರನ್ನು ತೆಗೆದುಕೊಳ್ಳಿ, ಅದರಲ್ಲಿ 5-6 ಅಂಟುವಾಳಗಳನ್ನು ಹಾಕಿ. 6-7 *ಸೀಗೆಕಾಯಿ ಮತ್ತು ನೆಲ್ಲಿಕಾಯಿಗಳನ್ನು ಇದಕ್ಕೆ ಬೆರೆಸಿ ರಾತ್ರಿಯೆಲ್ಲ ನೆನೆಯಲು ಬಿಡಿ
*ಮರುದಿನ ಬೆಳಗ್ಗೆ ಈ ಮಿಶ್ರಣವನ್ನು ಬೇಯಿಸಿ. ನಂತರ ಉರಿಯನ್ನು ಆರಿಸಿ. ಮಿಶ್ರಣವನ್ನು ತಣ್ಣಗಾಗಲು ಬಿಡಿ. ನಂತರ ಇವುಗಳನ್ನು ರುಬ್ಬಿಕೊಳ್ಳಿ. ಶಾಂಪೂವಿನ ರೂಪಕ್ಕೆ ಬರುವಂತೆ ರುಬ್ಬಿಕೊಳ್ಳಿ.
*ಇದನ್ನು ಮಾಡುವಾಗ ನಿಮಗೆ ಇವುಗಳಲ್ಲಿ ಅಡಗಿರುವ ಸತ್ವಗಳು ಅರಿವಿಗೆ ಬರುತ್ತವೆ. ಈ ಶಾಂಪೂವಿನಲ್ಲಿರುವ ಎಲ್ಲಾ ಒಳ್ಳೆಯ ಅಂಶಗಳು, ನಿಮ್ಮ ಶಾಂಪೂವನ್ನು ಅತ್ಯಂತ ಆರೋಗ್ಯಕರ ಮಾಡುತ್ತವೆ.
English summary

Natural Amla, Reetha and Shikakai Shampoo

Instead of using chemically treated shampoos that actually damage hair over a period of time, it is a great idea to make a shampoo that not only nourishes your hair but also protects it from damage. These ingredients are Amla, Reetha and Shikakai. have a look
X
Desktop Bottom Promotion