For Quick Alerts
ALLOW NOTIFICATIONS  
For Daily Alerts

ಸಾಸಿವೆ ಎಣ್ಣೆ : ಅಡುಗೆಗೂ ಸೈ, ಕೂದಲಿನ ಸಮಸ್ಯೆಗೂ ಜೈ!

By Arshad
|

ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉತ್ತಮವಾಗಿರುವ ಸಾಸಿವೆ ಎಣ್ಣೆ ಚರ್ಮದ ಮತ್ತು ಕೂದಲ ಆರೈಕೆಗೂ ಸೈ ಎನಿಸಿದೆ. ವಿಶೇಷವಾಗಿ ತಲೆಯ ಚರ್ಮಕ್ಕೆ ಪೋಷಣೆ ನೀಡುವ ಮೂಲಕ ತಲೆಕೂದಲಿಗೆ ಕಾಂತಿ ಮತ್ತು ದೃಢತೆಯನ್ನೂ ನೀಡುತ್ತದೆ. ಇದರಲ್ಲಿರುವ ವಿವಿಧ ಆಂಟಿ ಆಕ್ಸಿಡೆಂಟುಗಳು, ಬೆಳವಣಿಗೆಯನ್ನು ಪ್ರಚೋದಿಸುವ ಪ್ರೋಟೀನುಗಳು ಮತ್ತು ಒಮೆಗಾ -3 ಕೊಬ್ಬಿನ ತೈಲ ತಲೆಗೂದಲನ್ನು ಉಳಿಸಿ ಬೆಳೆಸುವಲ್ಲಿ ನೆರವಾಗುತ್ತವೆ. ಸಾಸಿವೆ ಎಣ್ಣೆ: ಕೂದಲಿನ ಸಮಸ್ಯೆಗಳಿಗೆ ಹೇಳಿ ಮಾಡಿಸಿದ ಮನೆಮದ್ದು

ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಅಡುಗೆಗೆ ಹೆಚ್ಚಾಗಿ ಬಳಸಲ್ಪಡುವ ಸಾಸಿವೆ ಎಣ್ಣೆ ಕೊಂಚ ಖಾರವಾಗಿದ್ದು ವಿಶೇಷವಾದ ರುಚಿ ನೀಡುತ್ತದೆ. ಆಹಾರದ ಮೂಲಕ ಸೇವಿಸಲ್ಪಡುವ ಸಾಸಿವೆ ಎಣ್ಣೆ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಉತ್ತಮವಾಗಿರುವಂತೆಯೇ ಕೂದಲ ಪೋಷಣೆಗೂ ಉತ್ತಮವಾಗಿದೆ. ಇದರ ಇನ್ನೂ ಹಲವು ಪ್ರಯೋಜನಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ, ಮುಂದೆ ಓದಿ..

 ಕೂದಲುರುವುದನ್ನು ತಡೆಗಟ್ಟುತ್ತದೆ

ಕೂದಲುರುವುದನ್ನು ತಡೆಗಟ್ಟುತ್ತದೆ

ತಲೆಗೂದಲು ಉದುರಲು ಹಲವು ಕಾರಣಗಳಿವೆ. ಇದರಲ್ಲಿ ಪ್ರಮುಖವಾದುದು ಕೂದಲ ಬುಡಕ್ಕೆ ಸೂಕ್ತ ಪೋಷಣೆ ದೊರಕದೇ ಸಡಿಲವಾಗಿ ಕೂದಲು ಸುಲಭವಾಗಿ ಕಿತ್ತು ಬರುವುದು. ಪೋಷಕಾಂಶದ ಕೊರತೆಯಿಂದ ಹೊಸ ಕೂದಲು ಬರದಿರುವುದು, ಬಂದರೂ ಸಾಕಷ್ಟು ಕಳೆ ಇಲ್ಲದಿರುವುದು ಕೂದಲ ದಟ್ಟತೆ ಕಡಿಮೆಯಾಗಲು ಕಾರಣವಾಗಿದೆ. ಸಾಸಿವೆ ಎಣ್ಣೆಯ ನಿಯಮಿತ ಬಳಕೆಯಿಂದ ಕೂದಲ ಬುಡಗಳಿಗೆ ಉತ್ತಮ ಪೋಷಣೆ ದೊರಕುವುದು ಮಾತ್ರವಲ್ಲ, ಹೊಸ ಕೂದಲು ಬೆಳೆಯಲೂ ಸಹಕಾರ ದೊರಕುತ್ತದೆ. ಸಾಸಿವೆ ಎಣ್ಣೆಯನ್ನು ಅಡುಗೆಯಲ್ಲಿ ಬಳಸುವ ಮೂಲಕ ಮತ್ತೆ ತಲೆಗೆ ಹಚ್ಚಿಕೊಳ್ಳುವ ಮೂಲಕ ಹೊರಗಿನಿಂದಲೂ ಒಳಗಿನಿಂದಲೂ ಹೆಚ್ಚಿನ ಪೋಷಣೆ ಪಡೆಯುವಂತಾಗುತ್ತದೆ.

ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ

ಕೂದಲಿನ ಬೆಳವಣಿಗೆಗೆ ನೆರವಾಗುತ್ತದೆ

ಸಾಸಿವೆ ಎಣ್ಣೆ ಕೊಂಚ ಖಾರವಾಗಿದ್ದು ತಲೆಗೆ ಹಚ್ಚಿಕೊಂಡಾದ ಕೂದಲ ಬುಡಗಳನ್ನು ನಯವಾಗಿ ಪ್ರಚೋದಿಸುತ್ತದೆ. ಈ ಪ್ರಚೋದನೆ ಹೆಚ್ಚಿನ ರಕ್ತಸಂಚಾರಕ್ಕೆ ಆಹ್ವಾನ ನೀಡುತ್ತದೆ. ಪರಿಣಾಮವಾಗಿ ಸಾಸಿವೆ ಎಣ್ಣೆಯಲ್ಲಿ ಹೇರಳವಾಗಿರುವ, ಕೂದಲಿಗೆ ಪೂರಕವಾದ ಪೋಷಕಾಂಶಗಳನ್ನು ಕೂದಲ ಬುಡ ಹೀರಲು ಸಾಧ್ಯವಾಗುತ್ತದೆ. ಇದು ಕೂದಲಿನ ಶೀಘ್ರ ಬೆಳವಣಿಗೆಗೆ ಮತ್ತು ದಟ್ಟತೆಗೆ ನೆರವಾಗುತ್ತದೆ.

ತಲೆಬುರುಡೆಯ ಚರ್ಮಕ್ಕೂ ಉತ್ತಮವಾಗಿದೆ

ತಲೆಬುರುಡೆಯ ಚರ್ಮಕ್ಕೂ ಉತ್ತಮವಾಗಿದೆ

ಸಾಸಿವೆ ಎಣ್ಣೆಯ ಉತ್ತಮ ಗುಣಗಳಲ್ಲಿ ಸೂಕ್ಷ್ಮಜೀವಿ ವಿರೋಧಿ ಗುಣವೂ ( anti-microbial) ಒಂದಾಗಿದ್ದು ತಲೆಬುರುಡೆಯ ಚರ್ಮದಲ್ಲಿ ಪಕಳೆಯೇಳುವ ಒಣಚರ್ಮವನ್ನು ತಿನ್ನುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ನೆರವಾಗುತ್ತದೆ. ಈ ಬ್ಯಾಕ್ಟೀರಿಯಾಗಳು ತಲೆಹೊಟ್ಟು, ತುರಿಕೆ ಮತ್ತು ಸೋಂಕು ಹರಡಲು ಕಾರಣವಾಗಿವೆ. ಸಾಸಿವೆ ಎಣ್ಣೆಯಿಂದ ತಲೆಹೊಟ್ಟು, ಬ್ಯಾಕ್ಟೀರಿಯಾಗಳು ನಿವಾರಣೆಯಾಗುವುದರಿಂದ ತಲೆಬುರುಡೆಯ ಚರ್ಮ ತನ್ನ ಪೂರ್ಣ ಸಾಮರ್ಥ್ಯದಲ್ಲಿ ಕೂದಲನ್ನು ಹುಟ್ಟಿಸಲು ಸಾಧ್ಯವಾಗುತ್ತದೆ. ಪರಿಣಾಮವಾಗಿ ದಟ್ಟನೆಯ ಮತ್ತು ಆರೋಗ್ಯವಂತ ಕೂದಲು ನಿಮ್ಮದಾಗುತ್ತದೆ.

ಅಕಾಲ ನೆರೆಯುವುದನ್ನು ತಡೆಯುತ್ತದೆ

ಅಕಾಲ ನೆರೆಯುವುದನ್ನು ತಡೆಯುತ್ತದೆ

ಇತ್ತೀಚಿನ ವರ್ಷಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ನೆರೆಯುವುದನ್ನು ಕಾಣುತ್ತಿದ್ದೇವೆ. ಇದಕ್ಕೆ ನಮ್ಮ ಆಹಾರದಲ್ಲಿರುವ ವಿವಿಧ ರಾಸಾಯನಿಕಗಳ ಜೊತೆ ಗಾಳಿಯ ಪ್ರದೂಷಣೆ, ಸ್ನಾನದ ನೀರಿನಲ್ಲಿ ಕರಗಿರುವ ರಾಸಾಯನಿಕಗಳು ಮೊದಲಾದವು ಕಾರಣವಾಗಿವೆ. ಸಾಸಿವೆ ಎಣ್ಣೆಯಲ್ಲಿ ಕೂದಲು ನೆರೆಯುವ ಕಣಗಳ ವಿರುದ್ದ ಹೋರಾಡುವ ಗುಣವಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಅಕಾಲ ನೆರೆಯುವುದನ್ನು ತಡೆಯುತ್ತದೆ

ಅಕಾಲ ನೆರೆಯುವುದನ್ನು ತಡೆಯುತ್ತದೆ

ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್, ಖನಿಜಗಳು ಮತ್ತು ವಿವಿಧ ಪೋಷಕಾಂಶಗಳು ಕೂದಲು ನೆರೆಯುವ ಗತಿಯನ್ನು ನಿಧಾನಗೊಳಿಸುತ್ತದೆ. ಆದರೆ ಇದರ ಬಳಕೆಯನ್ನು ನಿಮ್ಮ ಕೂದಲ ಬಗೆಯನ್ನು ಅನುಸರಿಸಿಯೇ ಉಪಯೋಗಿಸಬೇಕಾಗಿದೆ. ಕೂದಲು ಕಡಿಮೆ ಇದ್ದರೆ ಅಥವಾ ಗಿಡ್ಡವಾಗಿದ್ದರೆ ಕಡಿಮೆ ಪ್ರಮಾಣದಲ್ಲಿ ಹಚ್ಚಬೇಕು. ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿದರೆ ಚರ್ಮ ಘಾಸಿಗೊಳ್ಳಬಹುದು.


English summary

Is Mustard Oil Good For Hair

Mustard oil is known to be an excellent product for inducing hair growth and improving scalp health. It is rich in hair protecting antioxidants, growth stimulating proteins and omega three fatty acids which helps in having good and healthy hair. Mustard oil is commonly used in Indian kitchens because of its distinct flavour and health benefits, nevertheless, the benefits of using mustard oil for hair care are even better.
X
Desktop Bottom Promotion