For Quick Alerts
ALLOW NOTIFICATIONS  
For Daily Alerts

ಅಷ್ಟಕ್ಕೂ ತಲೆಹೊಟ್ಟಿನ ಸಮಸ್ಯೆಗೆ ನಿಜವಾದ ಕಾರಣವೇನು?

By Arshad
|

ತಲೆ ಹೊಟ್ಟಿನ ಸಮಸ್ಯೆ ಈಗ ಎಲ್ಲಾ ಕಡೆ, ಎಲ್ಲರಲ್ಲಿಯೂ ಕಾಣಿಸಿಕೊಳ್ಳುವಷ್ಟು ದೊಡ್ಡ ಸಮಸ್ಯೆಯಾಗಿದೆ. ಬಹುಶಃ ನೀವು ಸಹ ಗಮನಿಸಿರಬಹುದು. ನಿಮ್ಮ ತಲೆ ಮತ್ತು ಹೆಗಲ ಮೇಲೆ ಬಿಳಿಯ ಬಣ್ಣದ ಪುಡಿ ರೀತಿಯ ತುಣುಕುಗಳು ಅಲ್ಲಲ್ಲಿ ಬಿದ್ದಿರುವುದನ್ನು. ಅದನ್ನೇ ತಲೆ ಹೊಟ್ಟು ಎಂದು ಕರೆಯುತ್ತಾರೆ.

ಇಂದಿನ ಧಾವಂತದ ಜೀವನದಲ್ಲಿ ತಲೆಗೆ ನೀಡಲಾಗದ ಆರೈಕೆ ಈ ಸೂಕ್ಷ್ಮಾಣುಗಳಿಗೆ ಬೆಳೆಯಲು ಅವಕಾಶ ನೀಡಿದಂತಾಗುತ್ತದೆ. ಇವು ಅತಿ ಹೆಚ್ಚಾಗಿ ಬೆಳೆದು ತಲೆಹೊಟ್ಟನ್ನು ಹೆಚ್ಚಿಸುತ್ತವೆ. ಇದಕ್ಕಾಗಿ ತಲೆಗೂದಲಿಗೆ ಉತ್ತಮ ಪೋಷಣೆ ಮತ್ತು ಗಾಳಿಗೆ ಒಡ್ಡಿಕೊಳ್ಳುವುದು ಅಗತ್ಯವಾಗಿದೆ.

ಒಣಚರ್ಮ ಪಕಳೆ ಏಳುವಾಗ ಮುಕ್ಕಾಲು ಪಾಲು ಎದ್ದು ಕಾಲುಭಾಗ ಅಂಡಿಕೊಂಡಿದ್ದು ಕೂದಲು ಅಲ್ಲಾಡುವಾಗೆಲ್ಲಾ ಇದೂ ಅಲ್ಲಾಡಿ ಚರ್ಮಕ್ಕೆ ಸಂವೇದನೆಯನ್ನು ನೀಡುತ್ತದೆ. ಇದೇ ತುರಿಕೆ. ಇಲ್ಲಿ ತುರಿಸಿಕೊಂಡರೆ ಆ ಪಕಳೆ ಬಿಡಿಯಾಗುವುದರ ಜೊತೆ ಅಕ್ಕಪಕ್ಕದಲ್ಲಿದ್ದ ಪಕಳೆಗಳೆಲ್ಲಾ ಅಲ್ಲಾಡಿ ಈ ತುರಿಕೆಯನ್ನು ಇನ್ನಷ್ಟು ಹೆಚ್ಚಿಸುತ್ತವೆ. ಅಪ್ಪಿತಪ್ಪಿಯೂ ತಲೆ ಹೊಟ್ಟಿನ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ

ಈ ತಲೆಹೊಟ್ಟನ್ನು ಶೀಘ್ರವಾಗಿ ತಹಬಂದಿಗೆ ತರದೇ ಇದ್ದಲ್ಲಿ ಒಣಚರ್ಮದ ಕಾರಣ ಕೂದಲ ಬುಡಕ್ಕೆ ಸೂಕ್ತ ಪೋಷಣೆ ಅಲಭ್ಯವಾಗಿ ಕೂದಲು ಕಾಂತಿ ಕಳೆದುಕೊಳ್ಳುತ್ತದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಉದುರುವ ಸಾಧ್ಯತೆಗಳಿವೆ. ಅದರಲ್ಲೂ ಹದಿನೈದರಿಂದ ಐವತ್ತು ವರ್ಷದ ನಡುವಿನವರಲ್ಲಿ ಕೂದಲುದುರುವ ಸಂಭವ ಹೆಚ್ಚು. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ..ತಲೆಹೊಟ್ಟನ್ನು ನಿವಾರಿಸಲು 20 ಮನೆ ಮದ್ದುಗಳು

ಒಣಚರ್ಮ ತಲೆಹೊಟ್ಟನ್ನು ಹೆಚ್ಚಿಸುತ್ತದೆಯೇ?

ಒಣಚರ್ಮ ತಲೆಹೊಟ್ಟನ್ನು ಹೆಚ್ಚಿಸುತ್ತದೆಯೇ?

ತಲೆಯ ಚರ್ಮ ಒಣಗಿದೆ ಎನ್ನಿಸಿದಾಗ ಅಲ್ಲಿ ಆರ್ದ್ರತೆ ಇರುವ ಕ್ರೀಂ (moisturiser) ಗಳನ್ನು ಹಚ್ಚುವುದು ಉತ್ತಮ. ಆದರೆ ತಲೆಹೊಟ್ಟು ಇದ್ದಾಗ ಕ್ರೀಂ ಅಥವಾ ಎಣ್ಣೆ ಹಚ್ಚಿದರೆ ಪರಿಸ್ಥಿತಿ ಉಲ್ಬಣಗೊಳ್ಳುತ್ತದೆ. ಏಕೆಂದರೆ ನೀವು ಹಚ್ಚಿದ ಎಣ್ಣೆ ಸೂಕ್ಷ್ಮ ಜೀವಿಗಳಿಗೆ ಮೃಷ್ಟಾನ್ನ ಭೋಜನ ಒದಗಿಸಿ ತಲೆಹೊಟ್ಟಿನಲ್ಲಿ ಶಿಲೀಂಧ್ರ ಬೆಳೆಯಲು ಅವಕಾಶ ಮಾಡಿಕೊಡುತ್ತದೆ. ಇದು ಇನ್ನಷ್ಟು ತುರಿಕೆಗೆ ಕಾರಣವಾಗಿದೆ.

ತಲೆಹೊಟ್ಟಿಗೆ ನೇರ ಕಾರಣ ಯಾರು?

ತಲೆಹೊಟ್ಟಿಗೆ ನೇರ ಕಾರಣ ಯಾರು?

Malassezia globosa ಎಂಬ ಹೆಸರಿನ ಶಿಲೀಂಧ್ರ ತಲೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ ಹಾಗೂ ತಲೆಹೊಟ್ಟಿಗೆ ನೇರವಾಗಿ ಕಾರಣವಾಗಿದೆ. ಆದರೆ ಇದು ನಾವಂದುಕೊಂಡಷ್ಟು ಪ್ರಬಲವಲ್ಲ.

ತಲೆಹೊಟ್ಟಿಗೆ ಕಾರಣವೇನು?

ತಲೆಹೊಟ್ಟಿಗೆ ಕಾರಣವೇನು?

ನೈಸರ್ಗಿಕವಾಗಿ ಸಾಯುವ ಹೊರಚರ್ಮದ ಜೀವಕೋಶಗಳು ಹೊರಚರ್ಮಕ್ಕೆ ಅಂಟಿಕೊಂಡಿರುವುದೇ ತಲೆಹೊಟ್ಟಿಗೆ ಕಾರಣ. ಇದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಸತ್ತ ಜೀವಕೋಶಗಳನ್ನು ನಿಯಮಿತವಾಗಿ ಸೂಕ್ತ ವಿಧಾನಗಳಿಂದ ನಿವಾರಿಸುವ ಮೂಲಕ ಇದರ ಮೇಲೆ ಹತೋಟಿ ಸಾಧಿಸಬಹುದು.

ತಲೆಯ ಭಾಗವನ್ನು ಸ್ವಚ್ಛವಾಗಿಟ್ಟುಕೊಂಡರೆ ತಲೆಹೊಟ್ಟು ಮಾಯವಾಗುವುದೇ?

ತಲೆಯ ಭಾಗವನ್ನು ಸ್ವಚ್ಛವಾಗಿಟ್ಟುಕೊಂಡರೆ ತಲೆಹೊಟ್ಟು ಮಾಯವಾಗುವುದೇ?

ತಲೆಯ ಚರ್ಮದಲ್ಲಿ ನಮ್ಮ ಕಣ್ಣಿಗೆ ಕಾಣುವ ಕಪ್ಪು ಕೂದಲುಗಳಿಗಿಂತಲೂ ಅಧಿಕ ಸಂಖ್ಯೆಯಲ್ಲಿ ಸರಿಸುಮಾರು ಪಾರದರ್ಶಕವಾದ ಅತಿ ಸೂಕ್ಷ್ಮ ಕೂದಲುಗಳಿವೆ. ಇವೇ ದೇಹದ ತಾಪಮಾನವನ್ನು ಸುಸ್ಥಿತಿಯಲ್ಲಿಡಲು ಅಗತ್ಯವಾಗಿವೆ. (ಇದೇ ಕಾರಣಕ್ಕೆ ಬಕ್ಕ ತಲೆಯವರೂ ಇತರರಷ್ಟೇ ಆರೋಗ್ಯವಂತರಾಗಿರುತ್ತಾರೆ). ಈ ಕೂದಲುಗಳ ಬುಡದಿಂದ ನೈಸರ್ಗಿಕವಾದ ಎಣ್ಣೆಯ ಪಸೆ ಹೊರಸೂಸುತ್ತದೆ. ಸೋಪು ಶಾಂಪೂವಿನ ಅಧಿಕ ಬಳಕೆಯಿಂದ ಈ ನೈಸರ್ಗಿಕ ಎಣ್ಣೆ ನಾಶವಾಗುತ್ತದೆ. ಆದರೆ ತೊಳೆದುಕೊಳ್ಳದೇ ಇದ್ದರೆ ಪರಿಸ್ಥಿತಿ ಬಿಗಡಾಯಿಸುತ್ತದೆ.

ತಲೆಯ ಭಾಗವನ್ನು ಸ್ವಚ್ಛವಾಗಿಟ್ಟುಕೊಂಡರೆ ತಲೆಹೊಟ್ಟು ಮಾಯವಾಗುವುದೇ?

ತಲೆಯ ಭಾಗವನ್ನು ಸ್ವಚ್ಛವಾಗಿಟ್ಟುಕೊಂಡರೆ ತಲೆಹೊಟ್ಟು ಮಾಯವಾಗುವುದೇ?

ಚರ್ಮದ ಸತ್ತ ಜೀವಕೋಶ ಮತ್ತು ಈ ನೈಸರ್ಗಿಕ ಎಣ್ಣೆ ಮಿಳಿತಗೊಂಡು ಒಂದು ಪದರವಾಗಿ ನಿಧಾನವಾಗಿ ಪಕಳೆಯ ರೂಪದಲ್ಲಿ ಚರ್ಮದಿಂದ ಏಳುತ್ತದೆ. ಇದು ತುರಿಕೆಗೆ ಕಾರಣವಾಗುತ್ತದೆ ಮತ್ತು ಸತತ ತುರಿಕೆಯಿಂದ ಹೊಟ್ಟು ಇನ್ನಷ್ಟು ಹೆಚ್ಚುತ್ತದೆ. ತಲೆಹೊಟ್ಟು ನಿವಾರಿಸುವ ಶಾಂಪೂ ಬಳಕೆಯಿಂದ ಇದಕ್ಕೆ ಪರಿಹಾರ ಸಾಧ್ಯವಿದೆ.

 ತಲೆಹೊಟ್ಟು ತಲೆಯ ಹೊರತಾಗಿ ಯಾವುದೇ ಭಾಗದಲ್ಲಿ ಬರಬಹುದು

ತಲೆಹೊಟ್ಟು ತಲೆಯ ಹೊರತಾಗಿ ಯಾವುದೇ ಭಾಗದಲ್ಲಿ ಬರಬಹುದು

ದೇಹದ ಕೂದಲಿರುವ ಇತರ ಭಾಗಗಳಲ್ಲಿಯೂ ಹೊಟ್ಟು ಕಂಡುಬರಬಹುದು. ಏಕೆಂದರೆ ಇಲ್ಲಿನ ಚರ್ಮದಿಂದಲೂ ಸ್ರವಿತವಾದ ಎಣ್ಣೆಯ ಅಂಶ ಅತಿಹೆಚ್ಚಾಗಿ ಸಂಗ್ರಹವಾದರೆ ಮತ್ತು ಆ ಭಾಗದ ಸ್ವಚ್ಛತೆ ಮತ್ತು ಆರೈಕೆ ಕಡಿಮೆಯಾದರೆ ಹೊಟ್ಟು ಪ್ರಾರಂಭವಾಗುವ ಸಾಧ್ಯತೆಗಳಿವೆ.

ಮನಸ್ಸಿನ ಒತ್ತಡ ತಲೆಹೊಟ್ಟಿಗೆ ಕಾರಣವೇ?

ಮನಸ್ಸಿನ ಒತ್ತಡ ತಲೆಹೊಟ್ಟಿಗೆ ಕಾರಣವೇ?

ಹೌದು, ಚರ್ಮತಜ್ಞರ ಪ್ರಕಾರ ಒತ್ತಡದಲ್ಲಿರುವ ಮನಸ್ಸು ತಲೆಹೊಟ್ಟು ಹೆಚ್ಚಿಸಲು ಕಾರಣವಾಗಿದೆ. ಇದಕ್ಕಾಗಿ ಸಾಕಷ್ಟು ವಿಶ್ರಾಂತಿ ನಿದ್ದೆ ಮತ್ತು ಒತ್ತಡದ ಸಮಯದಲ್ಲಿಯೂ ನಿರಾಳರಾಗಿರಲು ಪ್ರಯತ್ನಿಸುವುದು ಮೊದಲಾದವು ಅಗತ್ಯವಾಗಿದೆ.

English summary

Interesting Facts About Dandruff

Dandruff can be irritating. But it is a normal condition which is caused by microorganisms that live on your scalp. Of course, several lifestyle conditions may trigger the overgrowth of these micro-organisms. When your scalp is nourished well and is exposed to some air, you can control the issue to an extent. Now, let us discuss a few facts about dandruff.
X
Desktop Bottom Promotion