For Quick Alerts
ALLOW NOTIFICATIONS  
For Daily Alerts

ತಲೆಹೊಟ್ಟಿನ ನಿವಾರಣೆಗೆ-ಬಹೂಪಯೋಗಿ 'ಲೋಳೆಸರ'

By C.M.Prasad
|

ಅಲೋವೆರಾ ಅಥವಾ ಲೋಳೆಸರದ ನಾನಾ ರೀತಿಯ ಉಪಯೋಗದ ಬಗ್ಗೆ ಈ ತಾಣದಲ್ಲಿ ನಮ್ಮ ಓದುಗರಿಗೆ ಹೇಳುತ್ತಲೇ ಬಂದಿದ್ದೇವೆ. ಈ ಲೇಖನದಲ್ಲಿ ಅಲೋವೆರಾ ರಸದಿಂದ ತಲೆಯ ಹೊಟ್ಟನ್ನು ಹೋಗಲಾಡಿಸುವ ಕೆಲವು ವಿಶಿಷ್ಟ ವಿಷಯಗಳನ್ನು ನಿಮಗಾಗಿ ನೀಡಲಾಗಿದೆ. ತಲೆ ಹೊಟ್ಟು ಪ್ರಮುಖವಾಗಿ ಶಿಲೀಂಧ್ರ ಸೋಂಕಿನಿಂದ ಬರುತ್ತದೆ. ಇದರಿಂದ ತಲೆಯ ಮೇಲ್ಭಾಗದ ಚರ್ಮದಲ್ಲಿ ನವೆ ಉಂಟಾಗಿ, ಚರ್ಮವು ಶುಷ್ಕತೆ ಹೊಂದಲು ಹಾಗೂ ಹದಗೊಳ್ಳಲು ನೇರವಾಗಿ ಕಾರಣವಾಗುತ್ತದೆ. ಹೊರಚರ್ಮದ ಭಾಗವು ಸ್ವಾಭಾವಿಕವಾಗಿ ಹೊಸ ಚರ್ಮಕ್ಕೆ ಬದಲಾವಣೆಯಾದಾಗ ತಾನಾಗೇ ತಲೆ ಹೊಟ್ಟು ಉಂಟಾಗುತ್ತದೆ. ಲೋಳೆಸರ-ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

ಇದು ಎಲ್ಲರೂ ಅನುಭವಿಸುವಂತಹ ಸಾಮಾನ್ಯ ಸಮಸ್ಯೆ. ಆದರೆ ಹೆಚ್ಚು ತಲೆಹೊಟ್ಟು ಉಂಟಾದಲ್ಲಿ ಬೇಗನೆ ಕೂದಲುಗಳು ಉದುರುವಂತೆ ಮಾಡುತ್ತದೆ. ಇದನ್ನು ನಿವಾರಿಸಲು ದುಬಾರಿ ತಲೆಹೊಟ್ಟು ನಿವಾರಕಗಳ ಬದಲಾಗಿ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಸರಳ ವಿಧಾನಗಳನ್ನು ಜನರು ಹೆಚ್ಚು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ನೈಸರ್ಗಿಕವಾದ ಪದ್ಧತಿಯನ್ನೇ ಆಯ್ದುಕೊಳ್ಳುವುದು ತುಂಬಾ ಉತ್ತಮ. ಮನೆಯಲ್ಲಿಯೇ ಸುಲಭವಾಗಿ ತಯಾರಿಸಿಕೊಳ್ಳಬಹುದಾದ ಸಾಕಷ್ಟು ವಿಧಾನಗಳು ಚಾಲ್ತಿಯಲ್ಲಿವೆ.

ಅದರಲ್ಲೆಲ್ಲಾ ಅಲೋವೆರಾ ಬಳಕೆ ನಿಜಕ್ಕೂ ಅತ್ಯುತ್ತಮ ಪದ್ಧತಿಯೆಂದರೆ ತಪ್ಪಾಗಲಾರದು. ವಿಶೇಷವಾದ ನಿವಾರಕ ಗುಣ ಹೊಂದಿರುವ ಅಲೋವೆರಾ ಬಳಕೆಯಿಂದ ನೆತ್ತಿಯ ಮೇಲ್ಭಾಗದ ಚರ್ಮವನ್ನು ಪೋಷಿಸಿ ಕೂದಲ ಶುಷ್ಕತೆಯನ್ನು ಶಮನಗೊಳಿಸುತ್ತದೆ. ಅಲೋವೆರಾಹೇಗೆ ತಲೆಹೊಟ್ಟನ್ನು ಹೋಗಲಾಡಿಸುತ್ತದೆ ಎಂಬುದರ ಬಗ್ಗೆ ಈಗ ನೋಡೋಣ. ಅಲೋವೆರಾ ಜೆಲ್‌ನಲ್ಲಿ ವಿಶಿಷ್ಟವಾದ ಪೌಷ್ಠಿಕಾಂಶಗಳು ಹೇರಳವಾಗಿದ್ದು, ಹಾನಿಕಾರಕ ಸೂಕ್ಷ್ಮ ಜೀವಿಗಳನ್ನು ಹೊರಹಾಕುವ ಗುಣವನ್ನು ಸಹ ಹೊಂದಿದೆ.

How To Use Aloe Vera To Treat Dandruff

ಇದರಿಂದ ತಲೆಯ ಮೇಲ್ಭಾಗದ ಚರ್ಮವನ್ನು ಮೃದುಗೊಳಿಸಿ ತಲೆಹೊಟ್ಟಿಗೆ ಶೀಘ್ರ ಪರಿಹಾರ ನೀಡಲಿದೆ ಹಾಗೂ ಚರ್ಮದ ಉರಿಯುವಿಕೆಯಿಂದ ಉಂಟಾದ ನವೆಯನ್ನು ಉಜ್ಜಿದಾಗ ಉಂಟಾಗುವ ಸೋಂಕನ್ನೂ ಸಹ ನಿವಾರಿಸಲಿದೆ. ಇದರ ಬಳಕೆಯಿಂದ ಕೂದಲ ಬೇರುಗಳು ಸದೃಢಗೊಂಡು ಕೇಶವು ಮಿರಮಿರನೆ ಮಿಂಚುವಂತೆ ಮಾಡುತ್ತದೆ. ತಲೆಹೊಟ್ಟು ಮತ್ತು ತಲೆಯ ಮೇಲ್ಭಾಗದ ಚರ್ಮದ ಸೋಂಕಿನ ಸಮಸ್ಯೆಗಳನ್ನು ಅಲೊವೆರಾದಿಂದ ನಿವಾರಿಸುವ ಸರಳ ವಿಧಾನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಮುಂದೆ ಓದಿ..

ತಾಜಾತನದ ಅಲೋವೆರಾ ಜೆಲ್
ತಲೆಹೊಟ್ಟನ್ನು ಶೀಘ್ರ ನಿವಾರಿಸಲು ಅಲೋವೆರಾ ಜೆಲ್ ಉತ್ತಮವಾದ ಆಯ್ಕೆ. ಅದರಲ್ಲಿನ ನೈಸರ್ಗಿಕ ಗುಣಗಳು ತಲೆಹೊಟ್ಟು ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲೋವೆರಾ ಎಲೆಗಳಿಂದ ಜೆಲ್ ಅನ್ನು ಬೇರ್ಪಡಿಸಿ ಅದನ್ನು ತಲೆಯ ಮೇಲ್ಭಾಗದ ಚರ್ಮದ ಮೇಲೆ ನಿಯಮಿತವಾಗಿ ಹಚ್ಚಿ ರಾತ್ರಿ ಪೂರ್ತಿ ಹಾಗೆಯೇ ಬಿಡಿ. ನಂತರ ಬೆಳಗ್ಗೆ ನೀರಿನಿಂದ ಸ್ವಚ್ಛಗೊಳಿಸಿ. 7 ಬಗೆಯ ಕೂದಲಿನ ಸಮಸ್ಯೆಗೆ ಪರಿಹಾರ-ಲೋಳೆ ಸರ

ಅಲೋವೆರಾ ಮತ್ತು ಚಹಾ ಮರದ ತೈಲ
ವಿಶೇಷವಾದ ನಿವಾರಕ ಗುಣ ಹೊಂದಿರುವ ಅಲೋವೆರಾಬಳಕೆಯಿಂದ ತಲೆಹೊಟ್ಟನ್ನು ಮತ್ತು ನೆತ್ತಿಯ ಮೇಲ್ಭಾಗದ ಚರ್ಮದ ಸೋಂಕಿನ್ನು ಸುಲಭವಾಗಿ ನಿವಾರಿಸಬಹುದು. ಹಾಗೆಯೇ ಚಹಾ ಮರದ ತೈಲವೂ ಸಹ ಹಾನಿಕಾರಕ ಸೂಕ್ಷ್ಮಾಣುಗಳನ್ನು ಹಾಗೂ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣ ಹೊಂದಿದೆ. 3 ಚಮಚಗಳಷ್ಟು ಅಲೋವೆರಾ ಜೆಲ್ ಮತ್ತು 5 ರಿಂದ 6 ತೊಟ್ಟು ಚಹಾ ಮರದ ತೈಲವನ್ನು ಒಟ್ಟಾಗೆ ಮಿಶ್ರಣ ಮಾಡಿ. ಚರ್ಮಕ್ಕೆ ಹಚ್ಚಿಕೊಳ್ಳಿ. ನಂತರ ಬೆಳಗ್ಗೆ ನೀರಿನಿಂದ ಸ್ವಚ್ಛಗೊಳಿಸಿ. ಇದರಿಂದ ತಲೆಹೊಟ್ಟು ಸುಲಭವಾಗಿ ನಿವಾರಣೆಯಾಗುತ್ತದೆ.

ಬೇವಿನ ತೈಲದೊಂದಿಗೆ ಅಲೋವೆರಾ
ಬೇವಿನ ತೈಲವು ನಮ್ಮ ಚರ್ಮದ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣ ಹೊಂದಿದೆ. ಇದು ಶಿಲೀಂಧ್ರ ಸೋಂಕನ್ನು ನಿವಾರಿಸಿ ಚರ್ಮದ ನವೆಯನ್ನು ಕಡಿಮೆಗೊಳಿಸುತ್ತದೆ. 3 ಚಮಚಗಳಷ್ಟು ಅಲೋವೆರಾ ಜೆಲ್ ಗೆ 9 ರಿಂದ 10 ತೊಟ್ಟು ಬೇವಿನ ತೈಲವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣವನ್ನು ತಲೆಯ ಕೂದಲಿಗೆ ಹಚ್ಚಿ ಸ್ವಲ್ಪ ಸಮಯದ ನಂತರ ನೀರಿನಿಂದ ಸ್ವಚ್ಛಗೊಳಿಸಿ.

ಲಿಂಬೆಯೊಂದಿಗೆ ಅಲೋವೆರಾ
ಆಮ್ಲದ ಗುಣ ಹೊಂದಿರುವ ನಿಂಬೆಯು ತಲೆ ಹೊಟ್ಟನ್ನು ನಿವಾರಿಸಲು ಉಪಯುಕ್ತಕರ. ತಲೆಯ ಮೇಲ್ಭಾಗದ ಚರ್ಮದ ಪಿಹೆಚ್ ಸಮತೋಲನವನ್ನು ಕಡಿಮೆಗೊಳಿಸಿ ಕೇಶವನ್ನು ಮಿಂಚುವಂತೆ ಮಾಡುತ್ತದೆ. ಇದರೊಂದಿಗೆ ಅಲೋವೆರಾ ಸೇರಿದರೆ ನಿಜಕ್ಕೂ ಒಂದು ಉತ್ತಮ ಪರಿಹಾರ ಹೊಂದಬಹುದು. 3 ಚಮಚಗಳಷ್ಟು ಅಲೋವೆರಾಗೆ 2 ಚಮಚ ಲಿಂಬೆ ರಸವನ್ನು ಬೆರೆಸಿ ತಲೆಯ ಚರ್ಮಕ್ಕೆ ಹಚ್ಚಿ. 20 ನಿಮಿಷದ ನಂತರ ಚೆನ್ನಾಗಿ ಸ್ವಚ್ಛಗೊಳಿಸಿದರೆ ತಲೆಹೊಟ್ಟು ಮಾಯ.

English summary

How To Use Aloe Vera To Treat Dandruff

Aloe vera gel has vital nutrients and anti-microbial properties, which can kill the fungi that cause dandruff and infection on the scalp. It soothes and nourishes the scalp, and gives a quick relief from dandruff.
X
Desktop Bottom Promotion