For Quick Alerts
ALLOW NOTIFICATIONS  
For Daily Alerts

ಎಲೆಮರೆಕಾಯಿ ಆಲೂಗಡ್ಡೆಯ ಜಾದೂಗೆ ಬೆರಗಾಗಲೇಬೇಕು!

|

ವರ್ಷವಿಡೀ ಲಭ್ಯವಿರುವ, ಅಗ್ಗದ, ಹೆಚ್ಚು ದಿನಗಳವರೆಗೆ ಫ್ರಿಜ್ಜಿನ ಅಗತ್ಯವಿಲ್ಲದೇ ಕಾಪಾಡಬಹುದಾದ ತರಕಾರಿಗಳೆಂದರೆ ಈರುಳ್ಳಿ ಮತ್ತು ಆಲುಗಡ್ಡೆ. ಆಲುಗಡ್ಡೆಯಂತೂ ಇಡಿಯ ವಿಶ್ವದಲ್ಲಿಯೇ ಅತ್ಯಂತ ಜನಪ್ರಿಯವಾದ ತರಕಾರಿಯಾಗಿದೆ. ಅಂತೆಯೇ ಇದರ ಉಪಯೋಗಗಳೂ ಅನೇಕ. ಸಿದ್ಧರೂಪದಲ್ಲಿ ಮಾರುಕಟ್ಟೆಯಲ್ಲಿ ಸಿಗುವ ಚಿಪ್ಸ್‌ನಿಂದ ಹಿಡಿದು, ಫ್ರೆಂಚ್ ಫ್ರೈ ವರೆಗೆ, ಹೆಚ್ಚೂ ಕಡಿಮೆ ಮಾಂಸಾಹಾರ ಮತ್ತು ಸಸ್ಯಾಹಾರದ ಎಲ್ಲಾ ಖಾದ್ಯಗಳಲ್ಲಿ ಒಂದು ಭಾಗವಾಗಿ ಬಳಕೆಯಾಗುವ ಈ ಆಲುಗಡ್ಡೆ ಹೊಟ್ಟೆಗೆ ಮಾತ್ರವಲ್ಲ, ನಮ್ಮ ಕೂದಲಿಗೂ ಉತ್ತಮ ಪೋಷಣೆ ನೀಡಬಲ್ಲುದು.

ಇಂದಿನ ಯುವಜನಾಂಗಕ್ಕೆ ಕಳವಳ ಉಂಟುಮಾಡುವ ತೊಂದರೆಗಳಾದ ಚಿಕ್ಕವಯಸ್ಸಿನಲ್ಲಿಯೇ ಕೂದಲು ನೆರೆಯುವ, ಕೂದಲು ಉದುರುವ, ಶಕ್ತಿಹೀನವಾದ ಕೂದಲು ಮೊದಲಾದವುಗಳಿಗೆ ಆಲುಗಡ್ಡೆ ಉತ್ತಮ ಆರೈಕೆ ನೀಡಬಲ್ಲುದು. ಕೂದಲಿಗೆ ಮಾರುಕಟ್ಟೆಯಲ್ಲಿ ಹಲವು ಪ್ರಸಾಧನಗಳು ಲಭ್ಯವಿದ್ದರೂ ಅವುಗಳ ರಾಸಾಯನಿಕ ಸಂಯೋಜನೆ ನಿಮ್ಮ ಕೂದಲಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಬಳಕೆಯ ಬಳಿಕವೇ ಗಮನಿಸಬಹುದು. ಆಲೂಗಡ್ಡೆ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಬೇಕು!

ಇದರಲ್ಲಿ ಅಡ್ಡ ಪರಿಣಾಮಗಳೇನಾದರೂ ಇದ್ದರೆ, ಅಥವಾ ನಿಮಗೆ ಅಲರ್ಜಿಕಾರಕ ವಸ್ತು ಯಾವುದಾದರೂ ಇದ್ದರೆ ಅದರ ಪರಿಣಾಮಗಳನ್ನು ಅರಿಯುವ ವೇಳೆಗೆ ತಡವಾಗಿರುತ್ತದೆ. ಬದಲಿಗೆ ಯಾವುದೇ ಅಡ್ಡಪರಿಣಾಮವಿಲ್ಲದ, ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ಆಲುಗಡ್ಡೆಯ ಸೌಂದರ್ಯವರ್ಧಕ ಗುಣಗಳನ್ನು ಈ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ.

ಕೂದಲ ಹೊಳಪಿಗಾಗಿ

ಕೂದಲ ಹೊಳಪಿಗಾಗಿ

ಒಂದೆರಡು ಆಲುಗಡ್ಡೆಗಳನ್ನು ಸಿಪ್ಪೆಸುಲಿದು ಚಿಕ್ಕ ಚಿಕ್ಕ ತುಂಡುಗಳನ್ನಾಗಿಸಿ ಮಿಕ್ಸಿಯಲ್ಲಿ ನೀರು ಹಾಕದೇ ಹಾಗೇ ರುಬ್ಬಿಕೊಳ್ಳಿ. ಬಳಿಕ ತೆಳುವಾದ ಬಟ್ಟೆಯಲ್ಲಿ ಹಾಕಿ ಹಿಂಡಿ ರಸವನ್ನು ತೆಗೆಯಿರಿ. ಈ ರಸಕ್ಕೆ ಸಮಪ್ರಮಾಣದಲ್ಲಿ ಮೊಸರು ಮತ್ತು ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ ಚೆನ್ನಾಗಿ ಕಲಕಿ ಮಿಶ್ರಣವನ್ನು ತಯಾರಿಸಿ. ಸ್ನಾನಕ್ಕೂ ಸುಮಾರು ಹದಿನೈದು ನಿಮಿಷ ಮೊದಲು ಈ ಮಿಶ್ರಣವನ್ನು ತಲೆಗೂದಲಿಗೆ ಹಚ್ಚಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೂದಲ ಹೊಳಪಿಗಾಗಿ

ಕೂದಲ ಹೊಳಪಿಗಾಗಿ

ಹದಿನೈದು ನಿಮಿಷದ ಬಳಿಕ ಸೌಮ್ಯ ಶಾಂಪೂವಿನಿಂದ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ಸ್ನಾನಮಾಡಿ. (ಬಿಸಿನೀರು ಉಪಯೋಗಿಸಿದರೆ ಪರಿಣಾಮ ಸಿಗದು). ಸ್ನಾನದ ಬಳಿಕ ಟವೆಲ್ಲಿನಿಂದ ಕೂದಲನ್ನು ಕೇವಲ ಒತ್ತಿ ಹಿಡಿದು ನೀರನ್ನು ಹೀರಿಕೊಳ್ಳುವಂತೆ ಮಾಡಿ, ಒರೆಸಲು ಹೋಗಬೇಡಿ. ವಾರಕ್ಕೆ ಎರಡು ಅಥವಾ ಮೂರು ಸಲ ಈ ವಿಧಾನವನ್ನು ಅನುಸರಿಸುವುದರಿಂದ ಕೂದಲ ಹೊಳಪು ಅತ್ಯದ್ಭುತವಾಗಿ ಹೆಚ್ಚುತ್ತದೆ.

ಕೂದಲ ದೃಢತೆಗಾಗಿ

ಕೂದಲ ದೃಢತೆಗಾಗಿ

ಆರೈಕೆಯಿಲ್ಲದ ಕೂದಲು ಬಾಚಿಕೊಳ್ಳುವಾಗ ತುಂಡುತುಂಡಾಗಿ ಬಾಚಣಿಗೆಯಲ್ಲಿ ಸಿಕ್ಕಿಕೊಳ್ಳುತ್ತದೆ. ಇದಕ್ಕಾಗಿ ಲೋಳೆಸರ (aloe vera) ದ ಕೋಡೊಂದನ್ನು ಮುರಿದು ಮೂರು ಚಮಚ ರಸ ಹಿಂಡಿ. ಇದಕ್ಕೆ ಸಮಪ್ರಮಾಣದ ಆಲುಗಡ್ಡೆಯ ರಸ ಮತ್ತು ಕೆಲವು ಹನಿ ಜೇನನ್ನು (ಜೇನು ಅತಿ ಕಡಿಮೆ ಇರಬೇಕು) ಸೇರಿಸಿ ಮಿಶ್ರಣ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ತಲೆಗೂದಲ ಬುಡಕ್ಕೆ ತಾಕುವಂತೆ ಬೆರಳುಗಳಿಂದ ಮಸಾಜ್ ಮಾಡುತ್ತಾ ಹಚ್ಚಿರಿ. ರಾತ್ರಿ ಹಚ್ಚಿ ಬೆಳಿಗ್ಗೆ ಸ್ನಾನ ಮಾಡಿದರೂ ಸರಿ. ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರನ್ನೇ ಬಳಸಿ. ಬೆಳಿಗ್ಗೆ ಕೂದಲು ತೊಳೆಯಲು ಸೀಗೆಪುಡಿ ಬಳಸಿದರೆ ಉತ್ತಮ.

ಶೀಘ್ರವಾಗಿ ಕೂದಲು ನೆರೆಯುವುದನ್ನು ತಡೆಯಲು

ಶೀಘ್ರವಾಗಿ ಕೂದಲು ನೆರೆಯುವುದನ್ನು ತಡೆಯಲು

ಸುಮಾರು ಮೂರು ಲೀಟರ್ ನೀರಿನಲ್ಲಿ ಎರಡು ಆಲುಗಡ್ಡೆಗಳನ್ನು ಸಿಪ್ಪೆಸುಲಿಯದೇ ತುಂಡುತುಂಡು ಮಾಡಿ ಬೇಯಿಸಿ. ಆಲುಗಡ್ಡೆ ಬೆಂದ ಬಳಿಕ ಈ ನೀರನ್ನು ಸೋಸಿ ತಣಿಯಲು ಬಿಡಿ. ತಣಿದ ಬಳಿಕ ತಲೆಸ್ನಾನಕ್ಕೆ ಉಪಯೋಗಿಸಿ. ವಾರಕ್ಕೊಮ್ಮೆ ಈ ವಿಧಾನ ಅನುಸರಿಸುವುದರಿಂದ ಕೂದಲು ನೆರೆಯುವುದು ಕಡಿಮೆಯಾಗುತ್ತದೆ ಹಾಗೂ ಕಪ್ಪು ಮತ್ತು ಘನ ಕೂದಲು ನಿಮ್ಮದಾಗುತ್ತದೆ.

ಕೂದಲ ಉದ್ದ ಹೆಚ್ಚಿಸಲು

ಕೂದಲ ಉದ್ದ ಹೆಚ್ಚಿಸಲು

ಆಲುಗಡ್ಡೆಯ ರಸವನ್ನು ನೇರವಾಗಿ ಕೂದಲ ಬುಡಕ್ಕೆ ಬೆರಳುಗಳಿಂದ ಮಸಾಜ್ ಮಾಡುತ್ತಾ ಹಚ್ಚುವುದರಿಂದ ಕೂದಲ ಬೆಳವಣಿಗೆ ಶೀಘ್ರವಾಗುತ್ತದೆ. ಅಂತೆಯೇ ಈ ರಸವನ್ನು ಕೂದಲ ತುದಿಯವರೆಗೂ ತಾಕುವಂತೆ ಹಚ್ಚುವುದರಿಂದ ಕೂದಲಿಗೆ ಉತ್ತಮ ಪೋಷಣೆ ದೊರೆಯುತ್ತದೆ. ಅರ್ಧಘಂಟೆಯ ಬಳಿಕ ತಣ್ಣೀರು ಅಥವಾ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ವಾರಕ್ಕೊಂದು ಸಲ ಈ ವಿಧಾನ ಅನುಸರಿಸಿ.

ಕೂದಲ ದಪ್ಪ ಹೆಚ್ಚಿಸಲು

ಕೂದಲ ದಪ್ಪ ಹೆಚ್ಚಿಸಲು

ಒಂದು ವೇಳೆ ನಿಮ್ಮ ಕೂದಲು ತುಂಬಾ ಸಪೂರವಾಗಿದ್ದು ಕೊಂಚ ಎಳೆದರು ಸುಲಭವಾಗಿ ತುಂಡಾಗುವಂತಿದ್ದರೆ ಆಲುಗಡ್ಡೆ ಬೇಯಿಸಿ ಸೋಸಿ ತಣಿಸಿದ ನೀರಿನಿಂದ ದಿನಬಿಟ್ಟು ದಿನ ಕೂದಲನ್ನು ತೊಳೆದುಕೊಳ್ಳುತ್ತಾ ಇರಿ. ಕೂದಲು ತೊಳೆದ ಬಳಿಕ ಯಾವುದೇ ಶ್ಯಾಂಪೂ ಉಪಯೋಗಿಸಬೇಡಿ. ಟವೆಲ್ ಒತ್ತಿ ನೀರು ಒಣಗಿಸಿ. ಒರೆಸಲು ಹೋಗಬೇಡಿ. ಸುಮಾರು ಎರಡು ವಾರಗಳಲ್ಲಿಯೇ ಕೂದಲ ಬುಡದಲ್ಲಿ ಕೂದಲು ದಪ್ಪನಾಗಿರುವುದನ್ನು ಗಮನಿಸುವಿರಿ.

ಕೂದಲ ಆರೈಕೆಗೆ ವಿಟಮಿನ್‌ಗಳನ್ನು ಪೂರೈಸಲು

ಕೂದಲ ಆರೈಕೆಗೆ ವಿಟಮಿನ್‌ಗಳನ್ನು ಪೂರೈಸಲು

ಕೂದಲು ತನ್ನ ದೃಢತೆಯನ್ನು ಕಳೆದುಕೊಳ್ಳಲು ಮತ್ತು ಸುಲಭವಾಗಿ ತುಂಡಾಗಲು ವಿಟಮಿನ್ ಗಳ ಕೊರತೆ ಕಾರಣವಾಗಿದೆ. ಇದಕ್ಕಾಗಿ ಆಲುಗಡ್ಡೆಯ ರಸವನ್ನು ಸೇರಿಸಿದ ನೀರಿನಿಂದ ಆಗಾಗ ಕೂದಲನ್ನು ತೊಳೆದುಕೊಳ್ಳುತ್ತಾ ಇರಿ.ಈ ನೀರಿನಲ್ಲಿ ಯಾವುದೇ ವಾಸನೆ ಇಲ್ಲದೇ ಇರುವುದರಿಂದ ದಿನದ ಇತರ ವೇಳೆಯಲ್ಲಿಯೂ, ಹೊರಹೋಗುವ ಮೊದಲೂ ತೊಳೆದುಕೊಳ್ಳಬಹುದು. ಕೆಲದಿನಗಳಲ್ಲಿಯೇ ಕೂದಲು ನುಣುಪಾಗಿ ಮತ್ತು ಹೊಳಪುಳ್ಳದಾಗಿರುವುದನ್ನು ಗಮನಿಸಿರಿ.

English summary

How To Strengthen Your Hair With Potato

Most of us love potatoes in various dishes and we also crave potato chips. But do you know that there are some potato beauty tips for hair too? The most common hair problems that most people suffer today are premature graying, hair loss and brittle hair. Also, when the hair grows too slowly, it becomes a headache. . Now, let us discuss about potato beauty tips for hair.
Story first published: Friday, July 3, 2015, 10:32 [IST]
X
Desktop Bottom Promotion