For Quick Alerts
ALLOW NOTIFICATIONS  
For Daily Alerts

ಸೊಂಪಾದ ಕೂದಲಿಗಾಗಿ ಕಲರ್ ಕಲರ್ ಹೇರ್‌ ಪ್ಯಾಕ್‍!

|

ಆಧುನಿಕ ಜೀವನದಲ್ಲಿ ಆರೋಗ್ಯಕರವಾದ ಕೂದಲನ್ನು ಹೊಂದುವುದು ಅಷ್ಟೇನು ಸುಲಭವಲ್ಲ. ಸಲೂನ್‌ಗಳಲ್ಲಿ ಬಳಸುವ ರಾಸಾಯನಿಕಗಳು, ಹೇರ್ ಕಲರ್‌ಗಳು ಸಹ ಕೂದಲು ಹಾಳಾಗುವಿಕೆಗೆ ಕೊಡುಗೆಯನ್ನು ನೀಡುತ್ತದೆ. ಯಾವಾಗ ನೀವು ಕೆಲಸಕ್ಕೆ ಹೊರಡಲು ಸಿದ್ಧವಾಗುತ್ತೀರೋ, ಆಗ ನಿಮ್ಮ ಕೂದಲನ್ನು ಹೇರ್ ಡ್ರೈಯರ್ ಮೂಲಕ ಡ್ರೈ ಮಾಡಲು ಆರಂಭಿಸುತ್ತೀರಿ. ಇದು ಸಹ ನಿಮ್ಮ ಕೂದಲನ್ನು ತೆಳುವಾಗಿ, ಜೀವ ಇಲ್ಲದಂತೆ ಮಾಡಿ, ಹಾಳು ಮಾಡುತ್ತದೆ. ಸೂರ್ಯನ ಕಿರಣಗಳು, ಪರಿಸರ ಮಾಲಿನ್ಯವು ಸಹ ಕೂದಲನ್ನು ಹಾನಿ ಮಾಡಿ ಬಿಡುತ್ತದೆ. ಇದನ್ನು ಪರಿಹರಿಸಲು ಇರುವ ಏಕೈಕ ಮಾರ್ಗವೆಂದರೆ, ಅದು ಸ್ವಾಭಾವಿಕ ಪದಾರ್ಥಗಳಿಗೆ ಮೊರೆ ಹೋಗುವುದಾಗಿರುತ್ತದೆ. ಆರೋಗ್ಯಕರ ಕೂದಲಿಗಾಗಿ ಹಾಗಲಕಾಯಿ ಜ್ಯೂಸ್ ಪ್ರಯತ್ನಿಸಿ ನೋಡಿ!
ಈ ಕಾರಣಕ್ಕಾಗಿ ನೀವು ಸಲೂನ್‍ಗೆ ಹೋದರೆ, ಮತ್ತೆ ನಿಮ್ಮ ಕೂದಲು ಹಾನಿಗೊಳಗಾಗುತ್ತದೆ. ಜೊತೆಗೆ ನಿಮ್ಮ ಕೂದಲು ಹಾಳಾಗುವಿಕೆಯ ಪ್ರಕ್ರಿಯೆಯು ಮುಂದುವರಿಯುತ್ತದೆ. ಆದ್ದರಿಂದ ರಾಸಾಯನಿಕಗಳಿಗೆ ಮೊರೆ ಹೋಗುವುದನ್ನು ತಡೆಯಿರಿ. ನಿಮ್ಮ ಕೂದಲಿನ ಹೊಳಪಿಗೆ ಮತ್ತು ಆರೋಗ್ಯಕ್ಕೆ ಸ್ವಾಭಾವಿಕ ಪದಾರ್ಥಗಳನ್ನು ಬಳಸಿ. ಬನ್ನಿ ಅಂತಹ ಪದಾರ್ಥಗಳು ಯಾವುವು ಎಂದು ತಿಳಿದುಕೊಳ್ಳೋಣ...

ಬೆಟ್ಟದ ನೆಲ್ಲಿಕಾಯಿ ಮತ್ತು ದಾಸವಾಳದ ಪುಡಿ

ಬೆಟ್ಟದ ನೆಲ್ಲಿಕಾಯಿ ಮತ್ತು ದಾಸವಾಳದ ಪುಡಿ

ಈ ಹೇರ್ ಪ್ಯಾಕ್ ಮಾಡಲು ತಲಾ ಎರಡು ಟೀ ಚಮಚ ಬೆಟ್ಟದ ನೆಲ್ಲಿಕಾಯಿ ಪುಡಿ, ಕಡಲೆ ಹಿಟ್ಟು ಮತ್ತು ದಾಸವಾಳದ ಪುಡಿ, ಬೇವಿನ ಪುಡಿ, ತುಳಸಿ ಪುಡಿಗಳನ್ನು ಬೆರೆಸಿಕೊಳ್ಳಿ. ಈ ಮಿಶ್ರಣಕ್ಕೆ ಈಗ ಎರಡು ಟೇಬಲ್ ಚಮಚದಷ್ಟು ಮೊಸರನ್ನು ಬೆರೆಸಿ. ಈ ಮಿಶ್ರಣವನ್ನು ನಿಮ್ಮ ಕೂದಲು ಮತ್ತು ಬುಡಕ್ಕೆ ಲೇಪಿಸಿ, 30 ನಿಮಿಷಗಳ ಕಾಲ ಬಿಡಿ. ನಿಮಗೆ ಅಗತ್ಯವಾದಲ್ಲಿ, ನಿಮ್ಮ ಕೂದಲನ್ನು ಶವರ್ ಕ್ಯಾಪ್‌ನಿಂದ ಮುಚ್ಚಿಕೊಳ್ಳಬಹುದು. ನಂತರ ಇದನ್ನು ಗಿಡಮೂಲಿಕೆಗಳ ಶಾಂಪೂವಿನಿಂದ ತೊಳೆಯಿರಿ.

ಪಪ್ಪಾಯಿ ಹಣ್ಣು ಮತ್ತು ಮೊಸರು

ಪಪ್ಪಾಯಿ ಹಣ್ಣು ಮತ್ತು ಮೊಸರು

ಈ ಹೇರ್ ಮಾಸ್ಕ್ ಒಡೆದ ತುದಿಗಳ ಕೂದಲುಗಳಿಗೆ ಉಪಕಾರಿ. ಇದಕ್ಕಾಗಿ ಹಣ್ಣಾದ ಪಪ್ಪಾಯಿ ಹಣ್ಣನ್ನು ರಬ್ಬಿಕೊಂಡು, ಅದಕ್ಕೆ ಒಂದು ಕಪ್ ಮೊಸರು ಸೇರಿಸಿಕೊಂಡು, ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪೇಸ್ಟ್ ಅನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಚೆನ್ನಾಗಿ ಲೇಪಿಸಿ. 30 ನಿಮಿಷ ಬಿಟ್ಟು, ನಂತರ ಇದನ್ನು ತೊಳೆಯಿರಿ. ಇದು ಒಡೆದ ಮತ್ತು ಹಾಳಾದ ಕೂದಲಿಗೆ ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದಾಗಿರುತ್ತದೆ.

ಮೆಹಂದಿ ಮತ್ತು ಮೊಸರು

ಮೆಹಂದಿ ಮತ್ತು ಮೊಸರು

ಪರಿಶುದ್ಧವಾದ ಮೆಹಂದಿಯನ್ನು ಇದಕ್ಕೆ ಬಳಸಿ. ಪ್ಯಾಕ್‌ ಮಾಡಿರುವ ಮೆಹಂದಿಯನ್ನು ಬಳಸಬೇಡಿ. ರಾಸಾಯನಿಕಗಳಿಂದ ಮುಕ್ತವಾದ ಮೆಹಂದಿಯು ಇದಕ್ಕೆ ಒಳ್ಳೆಯದು. ಇದನ್ನು ಮಾಡಲು ಮೆಹಂದಿಯನ್ನು ನೀರಿನ ಬದಲಿಗೆ ಬ್ಲಾಕ್ ಟೀಯಲ್ಲಿ ನೆನೆಸಿ. ರಾತ್ರಿಯಿಡೀ ಇದನ್ನು ನೆನೆಯಲು ಬಿಟ್ಟು, ಬೆಳಗ್ಗೆ ಇದಕ್ಕೆ ಒಂದು ಟೇಬಲ್ ಚಮಚ ಆಲೀವ್ ಎಣ್ಣೆಯನ್ನು ಬೆರೆಸಿ. ನಂತರ ಅರ್ಧ ಕಪ್ ಮೊಸರು ಅಥವಾ ಒಂದು ಮೊಟ್ಟೆಯನ್ನು ಬೆರೆಸಿಕೊಳ್ಳಿ. ಆಮೇಲೆ ಇದನ್ನು ನಿಮ್ಮ ಕೂದಲಿಗೆ ಲೇಪಿಸಿ. 30 ನಿಮಿಷ ಬಿಟ್ಟು, ನಂತರ ನಿಮ್ಮ ಕೂದಲನ್ನು ತೊಳೆಯಿರಿ.

ಅಲೋವಿರಾ ಮತ್ತು ಮೊಟ್ಟೆ

ಅಲೋವಿರಾ ಮತ್ತು ಮೊಟ್ಟೆ

ಅರ್ಧ ಕಪ್ ಅಲೋವಿರಾ ಜೆಲ್ ಜೊತೆಗೆ ಒಂದು ಮೊಟ್ಟೆಯ ಬಿಳಿಭಾಗವನ್ನು ಮಿಶ್ರಣ ಮಾಡಿಕೊಂಡು ಪೇಸ್ಟ್‌ನಂತೆ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಲೇಪಿಸಿ. ಇದನ್ನು 30 ನಿಮಿಷ ಬಿಡಿ, ನಂತರ ತೊಳೆಯಿರಿ. ಈ ಹೇರ್ ಮಾಸ್ಕ್ ನಿಮ್ಮ ಕೂದಲಿಗೆ ಹೊಳಪನ್ನು ನೀಡಿ, ಒಣ ಮತ್ತು ಒಡೆದ ತುದಿಗಳನ್ನು ಪರಿಹರಿಸುತ್ತದೆ.

ಆಲೀವ್ ಎಣ್ಣೆ, ಕಚ್ಛಾ ಹಾಲು ಮತ್ತು ದಾಸವಾಳದ ದಳಗಳು

ಆಲೀವ್ ಎಣ್ಣೆ, ಕಚ್ಛಾ ಹಾಲು ಮತ್ತು ದಾಸವಾಳದ ದಳಗಳು

ಆರರಿಂದ ಏಳು ದಾಸವಾಳದ ದಳಗಳನ್ನು ಒಂದು ಕಪ್ ಬಟ್ಟಲಿನಲ್ಲಿ ರಾತ್ರಿಯಿಡಿ ನೆನೆಸಿರಿ. ಬೆಳಗ್ಗೆ ಇದನ್ನು ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್‌ಗೆ ಎರಡು ಟೇಬಲ್ ಚಮಚ ಕಚ್ಛಾ ಹಾಲು ಮತ್ತು ಒಂದು ಟೇಬಲ್ ಚಮಚ ಎಕ್ಸ್‌ಟ್ರಾ ವರ್ಜಿನ್ ಆಲೀವ್ ಎಣ್ಣೆಯನ್ನು ಬೆರೆಸಿ. ಇದನ್ನು ನಿಮ್ಮ ಕೂದಲಿನ ತುದಿ ಮತ್ತು ಬುಡಕ್ಕೆ ಲೇಪಿಸಿ. 30 ನಿಮಿಷ ಬಿಟ್ಟು ನಂತರ ಸ್ನಾನ ಮಾಡಿ. ಈ ಮಾಸ್ಕ್ ಒಡೆದ ಕೂದಲು ಮತ್ತು ಕೂದಲು ಉದುರುವಿಕೆಯನ್ನು ತಡೆಯುತ್ತದೆ.

English summary

Homemade Natural Hair Packs For Dry And Damaged Hair

Now a days it is not that easy to get thick and lustrous hair. In this modern life, hair is subjected to various chemical treatments in salons, hair colours also contribute to hair damage. When you leave for work, you blow dry your hair to dry them fast. All these things not only damage your hair but makes them thin and lifeless.
Story first published: Monday, May 11, 2015, 14:48 [IST]
X
Desktop Bottom Promotion