For Quick Alerts
ALLOW NOTIFICATIONS  
For Daily Alerts

ರಾತ್ರೋ ರಾತ್ರಿ ಕೂದಲಿನ ಸಮಸ್ಯೆಯಿಂದ ಮುಕ್ತಿ ಹೊಂದಿ!

|

ಆರೋಗ್ಯಯುತವಾದ ಹಾಗೂ ಹೊಳೆಯುವ ಕಾ೦ತಿಯುಕ್ತ ಕೂದಲು ಯಾರಿಗೇ ತಾನೇ ಬೇಡ ಹೇಳಿ? ಆದರೆ ಇ೦ದಿನ ದಿನಗಳಲ್ಲಿ ಇನ್ನೂ ಇಪ್ಪತ್ತರ ಹರೆಯಕ್ಕೆ ಕಾಲಿಡುತ್ತಿರುವ ಯುವಜನತೆ ಕೂಡ ತಲೆಕೂದಲಿಗೆ ಸಂಬಂಧಿಸಿದಂತೆ ಉದುರುವ, ಬಿಳಿ ಕೂದಲು ಮೊದಲಾದ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.

ಕೂದಲು ಉದುರುವಿಕೆ ತಡೆಯಲು ಹಲವಾರು ನೈಸರ್ಗಿಕ ಪರಿಹಾರಗಳಿವೆ. ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲ. ಸಾಮಾವ್ಯವಾಗಿ ನೈಸರ್ಗಿಕ ಚಿಕಿತ್ಸೆಗಳು ಪರಿಣಾಮ ತೋರಿಸಲು ದೀರ್ಘ ಸಮಯ ಬೇಕಾಗಬಹುದು. ಆದರೆ ಪರಿಣಾಮ ದೀರ್ಫ ಕಾಲದ್ದು ಮತ್ತು ಶಾಶ್ವತ. ಬನ್ನಿ ಕೂದಲು ಉದುರುವುದನ್ನು ತಡೆಯುವುದು ಹೇಗೆಂದು ಕೆಲವೊಂದು ವಿಧಾನಗಳಲ್ಲಿ ಇಲ್ಲಿ ನೀಡಲಾಗಿದೆ.

Homemade hair packs for all kind of hair problem

ಮೊಟ್ಟೆ ಲಿ೦ಬೆ, ಹಾಗೂ ಆಲಿವ್ ಎಣ್ಣೆ
ಬಟ್ಟಲೊ೦ದರಲ್ಲಿ ಮೊಟ್ಟೆಯೊ೦ದನ್ನು ಒಡೆದು, ಅದಕ್ಕೆ ಅರ್ಧಹೋಳಿನಷ್ಟು ಲಿ೦ಬೆಯ ರಸವನ್ನು ಬೆರೆಸಿರಿ. ಇವೆರಡನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಈಗ ಈ ಮಿಶ್ರಣಕ್ಕೆ ಎರಡು ಟೇಬಲ್ ಚಮಚಗಳಷ್ಟು ಆಲಿವ್ ಎಣ್ಣೆಯನ್ನು ಬೆರೆಸಿ ಪುನ: ಇವೆಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಇವೆಲ್ಲವೂ ಪರಸ್ಪರ ಚೆನ್ನಾಗಿ ಬೆರೆತುಕೊ೦ಡ ಬಳಿಕ, ಮಿಶ್ರಣವನ್ನು ಕೂದಲಿಗೆ ಲೇಪಿಸಿಕೊಳ್ಳಿರಿ. ನೆತ್ತಿಯನ್ನೂ ಹಾಗೂ ಕೂದಲ ಎಳೆಗಳನ್ನೂ ಸಮನಾಗಿ ಆವರಿಸಿಕೊಳ್ಳುವ೦ತೆ ಹಚ್ಚಿಕೊ೦ಡಿರುವುದನ್ನು ಖಚಿತಪಡಿಸಿಕೊಳ್ಳಿರಿ. ಹಚ್ಚಿಕೊ೦ಡ ಬಳಿಕ ಅರ್ಧಘ೦ಟೆಯ ಕಾಲ ಅದನ್ನು ಹಾಗೆಯೇ ಇರಗೊಡಿರಿ. ಬಳಿಕ ತಣ್ಣೀರಿನಿ೦ದ ಕೂದಲನ್ನು ತೊಳೆದುಕೊ೦ಡು ತದನ೦ತರ ಶ್ಯಾ೦ಪೂವಿನಿ೦ದ ತೊಳೆಯಿರಿ. ಆರೋಗ್ಯಕರ ಕೂದಲಿಗಾಗಿ ಹಾಗಲಕಾಯಿ ಜ್ಯೂಸ್ ಪ್ರಯತ್ನಿಸಿ ನೋಡಿ!

ಪಪ್ಪಾಯಿ
ಇದು ತಲೆಯ ಶುಷ್ಕತೆ ಕಡಿಮೆ ಮಾಡುತ್ತದೆ ಮತ್ತು ಕೂದಲದುರುವಿಕೆಯನ್ನು ಕಡಿಮೆಮಾಡುತ್ತದೆ. ಹಾಲು ಮತ್ತು ಜೇನಿನೊಂದಿಗೆ ಹಿಸುಕಿದ ಪಪ್ಪಾಯಿಯನ್ನು ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿ. ನಿಮ್ಮ ಕೂದಲಿನ ಹೊಳಪಿಗಾಗಿ ಈ ವಿಧಾನವನ್ನು ನಿಯಮಿತವಾಗಿ ಮಾಡಬಹುದು.

ಆಲೂಗಡ್ಡೆಯ ಚಮತ್ಕಾರ
ಆಲೂಗಡ್ಡೆ ಸಿಪ್ಪೆ ಸುಳಿಯಿರಿ. ಒಂದು ಬಾಣಲೆಯಲ್ಲಿ ನೀರನ್ನು ಚೆನ್ನಾಗಿ ಬಿಸಿ ಮಾಡಿ ಮತ್ತು ಅದಕ್ಕೆ ಆಲೂಗಡ್ಡೆ ಸಿಪ್ಪೆ ಹಾಕಿ. ಅದನ್ನು 20 ನಿಮಿಷ ತನಕ ಬಿಸಿ ಮಾಡಿ. ಇದರ ಬಳಿಕ ನೀರನ್ನು ಒಂದು ಗ್ಲಾಸ್ ಅಥವಾ ಪಾತ್ರೆಗೆ ಹಾಕಿ. ಕೂದಲನ್ನು ಶಾಂಪೂ ಹಾಕಿ ತೊಳೆಯಿರಿ, ಇದರ ಬಳಿಕ ಆಲೂಗಡ್ಡೆ ಸಿಪ್ಪೆಯಿಂದ ತೆಗೆದ ನೀರಿನಿಂದ ಕೂದಲು ನೆನೆಸಿ. ಇದು ನಿಮ್ಮ ಕೂದಲಿಗೆ ನೈಸರ್ಗಿಕ ಕಪ್ಪು ಬಣ್ಣ ನೀಡುತ್ತದೆ. ಇದನ್ನು ಪರ್ಯಾಯವಾಗಿ ಕೂದಲು ತೊಳೆಯಲು ಬಳಸಿ. ಇದು ಕಂದು ಕೂದಲಿಗೆ ಒಳ್ಳೆಯ ಹಾಗೂ ನೈಸರ್ಗಿಕ ಚಿಕಿತ್ಸೆ.

ಬಾಳೆಹಣ್ಣಿನ ಹೇರ್ ಪ್ಯಾಕ್
ನಿಮ್ಮ ಕೂದಲು ಒರಟಾಗಿ, ಸಿಕ್ಕು ಸಿಕ್ಕು ಆಗಿದೆಯೇ? ಹಾಗಾದರೆ ನೀವು ಒಣ ಕೂದಲನ್ನು ಹೊಂದಿರುತ್ತೀರಿ. ಬಾಳೆಹಣ್ಣು ಪುರುಷರ ಕೂದಲಿಗೆ ಉತ್ತಮವಾದ ಪದಾರ್ಥವಾಗಿರುತ್ತದೆ. ಇದಕ್ಕಾಗಿ ಬಾಳೆಹಣ್ಣನ್ನು 1 ಟೀ.ಚಮಚ ಜೇನು ತುಪ್ಪ ಮತ್ತು ನಿಂಬೆರಸದ ಜೊತೆಗೆ ಬೆರೆಸಿ. ಈ ಪೇಸ್ಟನ್ನು ನಿಮ್ಮ ಕೂದಲಿನ ಬುಡಕ್ಕೆ ಲೇಪಿಸಿ. ನಂತರ ಒಂದು ಮೈಲ್ಡ್ ಶಾಂಪೂವಿನಿಂದ ಇದನ್ನು ತೊಳೆಯಿರಿ.

ಮೆಂತೆ- ಮೊಸರಿನ ಪ್ಯಾಕ್
ನಿಮ್ಮ ಕೂದಲನ್ನು ಹೊಳಪಿನಿಂದ ಕೂಡಿರುವಂತೆ ಮಾಡಬೇಕೆ ಅಥವಾ ಮೃದುವಾಗಿಸಬೇಕೆ. ಅದಕ್ಕಾಗಿ ಅಂಗಡಿಗೆ ತೆರಳುವ ಅಗತ್ಯವಿಲ್ಲ, ನಿಮ್ಮ ಮನೆಯಲ್ಲಿರುವ ಮೆಂತೆ ಕಾಳುಗಳನ್ನು ರಾತ್ರಿಯೆಲ್ಲ ನೆನೆಸಿ ಇಡಿ. ಬೆಳಗ್ಗೆ ಇದರ ಪೇಸ್ಟ್ ತಯಾರಿಸಿಕೊಂಡು, ಆ ಪೇಸ್ಟ್‌ನ ಅರ್ಧ ಪ್ರಮಾಣದಷ್ಟು ಮೊಸರನ್ನು ಬೆರೆಸಿಕೊಂಡು ಕೂದಲಿಗೆ ಹಚ್ಚಿ. ಇದು ಒಣಗುವವರೆಗೆ ಬಿಡಿ. ನಂತರ ಒಂದು ಮೈಲ್ಡ್ ಶಾಂಪೂವಿನಿಂದ ಇದನ್ನು ತೊಳೆಯಿರಿ.

ಈರುಳ್ಳಿ ಮತ್ತು ಬೆಳ್ಳುಳ್ಳಿ
ಒಂದು ಈರುಳ್ಳಿಯನ್ನು ಚಿಕ್ಕದಾಗಿ ಕೊಚ್ಚಿ ತೆಳುವಾದ ಬಟ್ಟೆಯಲ್ಲಿ ಹಿಂಡಿ ರಸ ತೆಗೆದಿಟ್ಟುಕೊಳ್ಳಬೇಕು. ಇನ್ನೊಂದು ಚಿಕ್ಕ ಪಾತ್ರೆಯಲ್ಲಿ ಬೆಳ್ಳುಳ್ಳಿಯ ಎಸಳುಗಳನ್ನು ಜಜ್ಜಿ ಕೊಬ್ಬರಿ ಎಣ್ಣೆಯಲ್ಲಿ ಚಿಕ್ಕ ಉರಿಯಲ್ಲಿ ಸ್ವಲ್ಪ ಕೆಂಪಗಾಗುವವರೆಗೆ ಕುದಿಸಬೇಕು. ಈ ಎಣ್ಣೆ ತಣ್ಣಗಾಗಲು ಬಿಡಿ. ಸ್ನಾನಕ್ಕೂ ಒಂದು ಅಥವಾ ಒಂದೂವರೆ ಗಂಟೆ ಮೊದಲು ಈರುಳ್ಳಿ ರಸವನ್ನು ತಲೆಗೆ ಹಚ್ಚಿ ಹದಿನೈದು ನಿಮಿಷಗಳ ಕಾಲ ಒಣಗಲು ಬಿಡಿ. ಬಳಿಕ ಶುದ್ಧ ನೀರಿನಿಂದ ಅಥವಾ ಸೌಮ್ಯವಾದ ಶಾಂಪೂವಿನಿಂದ ತಲೆಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಿರಿ.


ಕೂದಲು ಚೆನ್ನಾಗಿ ಒರೆಸಿಕೊಂಡು ಈಗ ತಣ್ಣಗಾಗಿರುವ ಬೆಳ್ಳುಳ್ಳಿ, ಕೊಬ್ಬರಿ ಎಣ್ಣೆಯ ಮಿಶ್ರಣವನ್ನು ತಲೆಗೆ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ. ಇಡಿಯ ತಲೆಗೆ ಎಣ್ಣೆ ಹಚ್ಚಿದ ಬಳಿಕವೂ ನಯವಾಗಿ ಮಸಾಜ್ ಮಾಡುತ್ತಾ ಬನ್ನಿ. ಸುಮಾರು ಮುಕ್ಕಾಲರಿಂದ ಒಂದು ಗಂಟೆ ಬಿಟ್ಟು ಸೌಮ್ಯ ಶಾಂಪೂವಿನಿಂದ ತಲೆ ಸ್ನಾನ ಮಾಡಿಕೊಳ್ಳಿ. ವಾರಕ್ಕೆ ಮೂರು ಬಾರಿ ಈ ವಿಧಾನವನ್ನು ಅನುಸರಿಸುವುದರಿಂದ ಉತ್ತಮ ಪರಿಣಾಮವನ್ನು ಪಡೆಯಬಹುದು.
English summary

Homemade hair packs for all kind of hair problem

Know a hair problem become a big problem in Young genereation. As you have to spend maximum time outside, the dirt and pollution damages your hair and problems like hair fall, dandruff, baldness at early age become your regular companion. So here are few tips which should prevent hair falls
X
Desktop Bottom Promotion