For Quick Alerts
ALLOW NOTIFICATIONS  
For Daily Alerts

ಕಿರಿಕಿರಿ ನೀಡುವ ಕೂದಲಿನ ಸಮಸ್ಯೆಗೆ ಫಲಪ್ರದ ಚಿಕಿತ್ಸೆ

By Poornima Hegde
|

ಒಂದು ಉದ್ದವಾದ ಜಡೆ ಅಥವಾ ಒಂದು ಸುಂದರವಾದ ಬನ್ (ಮುಡಿ ಕಟ್ಟುವುದು) ಮಾಡಲು ನಿಮ್ಮ ಕೂದಲನ್ನು ಆರೋಗ್ಯವಾಗಿ ನೋಡಿಕೊಳ್ಳುವುದು ಪ್ರಮುಖವಾದುದು. ಈಗಿನ ಜೀವನಶೈಲಿಯ ಕಾರಣದಿಂದಾಗಿ ನಿಮ್ಮ ಕೂದಲು ಒಣ ಅಥವಾ ಎಣ್ಣೆಯುಕ್ತ ನೆತ್ತಿ, ತಲೆಹೊಟ್ಟು, ಕೂದಲು ತುಂಡಾಗುವುದು, ಕೂದಲು ಉದುರುವುದು ಮೊದಲಾದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಒಣ ನೆತ್ತಿ ಸಾಕಷ್ಟು ಕಿರಿಕಿರಿಯುಂಟುಮಾಡುತ್ತದೆ.

ಇದು ನಿಮ್ಮ ಕೂದಲು ತುಂಬಾ ಮಂದವಾಗಿ ಕಾಣುವಂತೆ ಮಾಡುವುದು ಮಾತ್ರವಲ್ಲದೆ ಕೂದಲು ಕಳೆಗುಂದುವಂತೆ ಮಾಡುತ್ತದೆ. ಹೆಚ್ಚಾಗಿ, ಚಳಿಗಾಲದಲ್ಲಿ, ಈ ಶುಷ್ಕತೆ ಬಹಳಷ್ಟು ಅಧಿಕವಾಗುತ್ತದೆ. ಆದ್ದರಿಂದ, ಒಣ ನೆತ್ತಿಗೆ ಹಣ್ಣುಗಳ ಪ್ಯಾಕ್ ಒಂದು ಒಳ್ಳೆಯ ಪರಿಹಾರ. ನೀವು ಯಾವಾಗಲೂ ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುವ ಯಾವುದೇ ರೆಡಿಮೇಡ್ ಹೇರ್ ಪ್ಯಾಕ್ ಅನ್ನು ಬಳಸಬಹುದು. ಆದಾಗ್ಯೂ, ಇದರಲ್ಲಿ ಬಳಸಲಾಗುವ ರಾಸಾಯನಿಕ ಪದಾರ್ಥಗಳು ನಿಮ್ಮ ಕೂದಲಿನ ಆರೋಗ್ಯವನ್ನು ಕುಂಠಿತಗೊಳಿಸಬಹುದು. ಆದ್ದರಿಂದ, ಒಣ ನೆತ್ತಿಗೆ ಹಣ್ಣುಗಳ ಹೇರ್ ಪ್ಯಾಕ್ ಪ್ರಯತ್ನಿಸಿ.

ಹೆಚ್ಚಿನ ಒತ್ತಡ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಅನೇಕ ಅಂಶಗಳು ಒಣ ನೆತ್ತಿ ಸಮಸ್ಯೆಗೆ ಕಾರಣಗಳಾಗಿವೆ. ಆದ್ದರಿಂದ ಆರೋಗ್ಯಕರ ಕೂದಲಿಗಾಗಿ ಕೆಲವು ಹಣ್ಣುಗಳಿಂದ ತಯಾರುಮಾಡಿದ ಹೇರ್ ಪ್ಯಾಕ್ ಗಳನ್ನು ಕೂದಲಿಗೆ ಹಚ್ಚಿ. ಇದು ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಹೇರ್ ಪ್ಯಾಕ್ ಗಿಂತ ತುಂಬಾ ಉತ್ತಮವಾಗಿರುತ್ತದೆ. ಈ ಹಣ್ಣುಗಳಿಂದ ಮಾಡಿದ ಹೇರ್ ಪ್ಯಾಕ್ ಕೂದಲಿಗೆ ನೈಸರ್ಗಿಕ ಹೊಳಪನ್ನು ತಂದು ಕೊಡುವುದರಲ್ಲಿ ಸಂಶಯವಿಲ್ಲ. ಒಣ ನೆತ್ತಿಗೆ ಈ ಹಣ್ಣುಗಳ ಪ್ಯಾಕ್ ಬಳಸಿ ಬದಲಾವಣೆ ಗಮನಿಸಿ. ಮೊಸರಿನಲ್ಲಿ ಅಡಗಿದೆ ತ್ವಚೆಯ ಸೌಂದರ್ಯವನ್ನು ವೃದ್ಧಿಸುವ ರಹಸ್ಯ!

ಬಾಳೆಹಣ್ಣುಗಳು

ಬಾಳೆಹಣ್ಣುಗಳು

ಒಣ ನೆತ್ತಿಗೆ ಬಾಳೆಹಣ್ಣುಗಳ ಪ್ಯಾಕ್ ಬಳಸಿ. ಇದು ಒಣ ನೆತ್ತಿಗೆ ಅತ್ಯಂತ ಪ್ರಯೋಜನಕಾರಿ. ಬಾಳೆಹಣ್ಣುಗಳನ್ನು ಹಿಸುಕಿ ಮತ್ತು ಮೊಟ್ಟೆಯ ಬಿಳಿಭಾಗದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ನೆತ್ತಿ ಮತ್ತು ಕೂದಲಿಗೆ ಚೆನ್ನಾಗಿ ಹಚ್ಚಿ. 15-20 ನಿಮಿಷಗಳ ಕಾಲ ಅದನ್ನು ಹಾಗೆಯೇ ಬಿಟ್ಟು ನಂತರ ಚೆನ್ನಾಗಿ ತೊಳೆಯಿರಿ.

ಸೇಬು ಹಣ್ಣುಗಳು

ಸೇಬು ಹಣ್ಣುಗಳು

ಸೇಬು ಒಣ ನೆತ್ತಿಗೆ ಮತ್ತೊಂದು ಅತ್ಯುತ್ತಮ ಹೇರ್ ಪ್ಯಾಕ್. ಶ್ಯಾಂಪೂ ಮಾಡಿದ ನಂತರ, ಒಂದು ಕಂಡೀಶನರ್ ರೀತಿಯಲ್ಲಿ ಸೇಬು ರಸವನ್ನು ಬಳಸಬಹುದು. ವಿಟಮಿನ್ ಸಿ ಇರುವ ಸೇಬು ನಿಮ್ಮ ಕೂದಲನ್ನು ನಯವಾಗಿಯೂ ಮತ್ತು ಹೊಳೆಯುವಂತೆಯೂ ಮಾಡಬಹುದು.

ನಿಂಬೆ ಹಣ್ಣು

ನಿಂಬೆ ಹಣ್ಣು

ಇದು ಒಣ ನೆತ್ತಿಗೆ ಉತ್ತಮ ಹಣ್ಣುಗಳ ಪ್ಯಾಕ್ ಗಳಲ್ಲಿ ಒಂದು. ನಿಮ್ಮ ನೆತ್ತಿಗೆ ನೇರವಾಗಿ ನಿಂಬು ರಸದಿಂದ ಉಜ್ಜಿ ಅಥವಾ ಮೊಸರು ಮತ್ತು ಜೇನಿನೊಂದಿಗೆ ನಿಂಬೆ ರಸವನ್ನು ಸೇರಿಸಿ ನೆತ್ತಿಗೆ ಸವರಿ.

ಪಪ್ಪಾಯಿ

ಪಪ್ಪಾಯಿ

ಇದು ತಲೆಯ ಶುಷ್ಕತೆ ಕಡಿಮೆ ಮಾಡುತ್ತದೆ ಮತ್ತು ಕೂದಲದುರುವಿಕೆಯನ್ನು ಕಡಿಮೆಮಾಡುತ್ತದೆ. ಹಾಲು ಮತ್ತು ಜೇನಿನೊಂದಿಗೆ ಹಿಸುಕಿದ ಪಪ್ಪಾಯಿಯನ್ನು ಬೆರೆಸಿ ನಿಮ್ಮ ಕೂದಲಿಗೆ ಹಚ್ಚಿ. ನಿಮ್ಮ ಕೂದಲಿನ ಹೊಳಪಿಗಾಗಿ ಈ ವಿಧಾನವನ್ನು ನಿಯಮಿತವಾಗಿ ಮಾಡಬಹುದು.

ಸೌತೆಕಾಯಿ

ಸೌತೆಕಾಯಿ

ನೀವು ನಿಯಮಿತವಾಗಿ ಈಜುವಿಕೆಯಲ್ಲಿ ತೊಡಗಿದ್ದರೆ, ನೀರಿನಲ್ಲಿರುವ ಕ್ಲೋರಿನ್ ನಿಮ್ಮ ಕೂದಲು ಒಣಗುವಂತೆ ಮಾಡುತ್ತದೆ. ಹಿಚುಕಿದ ಸೌತೆಕಾಯಿ ಮತ್ತು ಒಂದು ಚಮಚ ಆಲಿವ್ ಎಣ್ಣೆ ಹಾಗೂ ಒಂದು ಮೊಟ್ಟೆಯ ಬಿಳಿಯ ಭಾಗವನ್ನು ಮಿಶ್ರಣ ಮಾಡಿ. ನೆತ್ತಿಗೆ ಹಚ್ಚಿ 15 ನಿಮಿಷಗಳ ಹಾಗೆಯೇ ಬಿಟ್ಟು ನಂತರ ಸ್ವಚ್ಛಗೊಳಿಸಿ.

ಪೀಚ್ ಹಣ್ಣುಗಳು

ಪೀಚ್ ಹಣ್ಣುಗಳು

ಪೀಚ್ ಹಣ್ಣುಗಳು ಹೇಗೆ ಉಪಯುಕ್ತ ಎಂಬುದು ನಿಮಗೆ ಗೊತ್ತಾ? ಪೀಚ್ ಹಣ್ಣನ್ನು ಹಿಸುಕಿ ಮೊಸರಿನೊಂದಿಗೆ ಸೇರಿಸಿ. ನಿಮ್ಮ ನೆತ್ತಿಯ ಪೂರ್ತಿ ಭಾಗಕ್ಕೆ ನಿಧಾನವಾಗಿ ಈ ಪೇಸ್ಟ್ ಅನ್ನು ಹಚ್ಚಿ ಮತ್ತು ಸರಿಯಾಗಿ ಅವುಗಳನ್ನು ತೊಳೆಯಿರಿ. ಹೀಗೆ ಮಾಡುವುದರಿಂದ ನೀವು ಖಂಡಿತವಾಗಿಯೂ ನಿಮ್ಮ ಕೂದಲಿನಲ್ಲಾದ ಬದಲಾವಣೆಗಳನ್ನು ಗಮನಿಸಬಹುದು.

ತೆಂಗಿನಕಾಯಿ

ತೆಂಗಿನಕಾಯಿ

ನೀವು ನೇರವಾಗಿ ಇವುಗಳನ್ನು ಬಳಸಲು ಸಾಧ್ಯವಿಲ್ಲ. ಕೇವಲ ತೆಂಗಿನ ಎಣ್ಣೆ ಅಥವಾ ತೆಂಗಿನ ಹಾಲುನ್ನು ಬಳಸಿ. ತೆಂಗಿನಕಾಯಿ ನಿಮ್ಮ ನೆತ್ತಿಯ ತೇವಾಂಶ ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮತ್ತೆ ತೇವಾಂಶ ಕಳೆದುಕೊಳ್ಳದಂತೆ ಸಹಾಯ ಮಾಡುತ್ತದೆ.

ಪ್ಲಮ್ ಹಣ್ಣುಗಳು

ಪ್ಲಮ್ ಹಣ್ಣುಗಳು

ಇದು ಒಣ ನೆತ್ತಿಗೆ ಮಾಡಬಹುದಾದ ಉತ್ತಮ ಹಣ್ಣುಗಳು ಪ್ಯಾಕ್ ಗಳಲ್ಲಿ ಒಂದಾಗಿದೆ. ಇದು ನಿಮ್ಮ ಕೂದಲನ್ನು ಆರೋಗ್ಯಕರವನ್ನಾಗಿ ಮಾಡುತ್ತದೆ. ಪ್ಲಮ್ ಹಣ್ಣಿನಿಂದ ಯಾವುದೇ ರೀತಿಯ ಹೇರ್ ಪ್ಯಾಕ್ ಮಾಡಿ. ಇದು ಕೂದಲುದುರುವಿಕೆಯನ್ನು ಕಡಿಮೆಗೊಳಿಸುತ್ತದೆ.

ಬೆರ್ರಿ ಹಣ್ಣುಗಳು

ಬೆರ್ರಿ ಹಣ್ಣುಗಳು

ಈ ರಸಭರಿತವಾದ ಹಣ್ಣುಗಳಲ್ಲಿ ಬಯೋಫ್ಲೇವನೋಯ್ಡ್ ಸಮೃದ್ಧವಾಗಿದೆ. ಇದು ಕೂದಲಿನಲ್ಲಿ ರಕ್ತದ ಹರಿವನ್ನು ಉತ್ತೇಜಿಸುತ್ತದೆ. ಈ ಹಣ್ಣುಗಳು ನಿಮ್ಮ ನೆತ್ತಿಗೆ, ಕೂದಲಿಗೆ ಸರಿಯಾದ ತೇವಾಂಶ ಒದಗಿಸಲು ಮತ್ತು ಕೂದಲು ಉದುರುವಿಕೆಯನ್ನು ಕಡಿಮೆಗೊಳಿಸಲು ಸಹಾಯ ಮಾಡುತ್ತದೆ.

ಕಿತ್ತಳೆ

ಕಿತ್ತಳೆ

ಇದು ನಿಮ್ಮ ನೆತ್ತಿ ಮತ್ತು ಕೂದಲಿನ ತೇವಾಂಶದ ಮೂಲವಾಗಿದೆ. ನಿಮ್ಮ ಹೇರ್ ಪ್ಯಾಕ್ ನಲ್ಲಿ ಕಿತ್ತಳೆ ರಸವನ್ನು ಸೇರಿಸಿ. ಅಥವಾ ಕಿತ್ತಳೆ ಸಿಪ್ಪೆಯ ಪೌಡರ್ ತಯಾರಿಸಿ ಅದರಿಂದ ಹೇರ್ ಪ್ಯಾಕ್ ತಯಾರಿಸಿ.

English summary

Homemade fruit masks and Packs For Hair

Whether you make a long braid or a beautiful bun, keeping your hair in good health is paramount. Due to lifestyle issues, your hair faces a lot of problems such as dry or oily scalp, dandruff, hair fall, broken ends and many more. Take a look at these fruits hair packs for dry scalp.
X
Desktop Bottom Promotion