For Quick Alerts
ALLOW NOTIFICATIONS  
For Daily Alerts

ಬಿಳಿ ಕೂದಲಿನ ನಿಯಂತ್ರಣಕ್ಕೆ ಪರಿಣಾಮಕಾರಿ ಮನೆಮದ್ದು

By Manu
|

ಸೌಂದರ್ಯದ ವಿಷಯ ಬಂದರೆ ವಿವಿಧ ರೀತಿಯ ಕೇಶ ವಿನ್ಯಾಸ ಮುಖ್ಯವಾಗುತ್ತದೆ. ಹಾಗೆಯೇ ಕೂದಲ ಆರೈಕೆಯ ಜೊತೆಗೆ ದಟ್ಟವಾದ ಕಪ್ಪು ಕೂದಲು ಎಲ್ಲರನ್ನೂ ಆಕರ್ಷಿಸುತ್ತದೆ. ಅಂದವಾದ ಕಪ್ಪು ಕೂದಲು ತಮ್ಮದಾಗಬೇಕೆಂದು ಸಾಕಷ್ಟು ಜನರು ಬಯಸುವುದನ್ನು ನಾವೆಲ್ಲಾ ಕಾಣುತ್ತಿರುತ್ತೇವೆ. ಆದರೆ ಇತ್ತೀಚಿನ ಒತ್ತಡದ ಜೀವನ ಶೈಲಿ, ಬದುಕಿನ ಜಂಜಾಟಗಳಲ್ಲಿ ಕೂದಲು ಬಿಳಿಯಾಗುವುದು ಕೂಡ ಒಂದು ದೊಡ್ಡ ಸಮಸ್ಯೆಯಾಗಿಬಿಟ್ಟಿದೆ. ಅತಿ ಚಿಕ್ಕ ವಯಸ್ಸಿನಲ್ಲೇ ನೆರೆತ ಕೂದಲಿನಿಂದ ಮರೆಮಾಚಿಕೊಳ್ಳಲು ರಾಸಾಯನಿಕ ವಸ್ತುಗಳ ಮೊರೆ ಹೋಗುತ್ತಿರುವುದನ್ನು ಕಾಣಬಹುದು.

ಸಾಮಾನ್ಯವಾಗಿ ನಿಮ್ಮಲ್ಲಿ ವಿಟಮಿನ್ ಕೊರತೆಯಿದ್ದಾಗ ಅಥವಾ ಒಂದು ವೇಳೆ ನಿಮಗೆ ಥೈರಾಯ್ಡ್ ಗ್ರಂಥಿಯ ಸಮಸ್ಯೆಯಿದ್ದಲ್ಲಿ ಸಹ ಬಿಳಿ ಕೂದಲುಗಳು ಕಂಡು ಬರಬಹುದು. ನಿಮ್ಮ ವಯಸ್ಸು ಇನ್ನೂ ಸಣ್ಣದಾಗಿದ್ದರು ಸಹ, ಬಿಳಿ ಕೂದಲುಗಳು ನಿಮ್ಮನ್ನು ವಯಸ್ಸಾದಂತೆ ಕಾಣುವಂತೆ ಮಾಡುವುದಲ್ಲದೆ, ನಿಮ್ಮ ಸಹೋದ್ಯೋಗಿಗಳು ಮತ್ತು ಸ್ನೇಹಿತರ ಮುಂದೆ ನೀವು ಇದರಿಂದ ಮುಜುಗರಕ್ಕೆ ಒಳಗಾಗುತ್ತೀರಿ. ಆದರೂ ಇದನ್ನು ಉದಾಸೀನ ಮಾಡಲು ಹೋಗಬೇಡಿ, ಬನ್ನಿ, ಅದಕ್ಕಾಗಿ ನಾವು ಹೇಳುವ ಪರಿಹಾರಗಳನ್ನು ಒಮ್ಮೆ ಪ್ರಯತ್ನಿಸಿ ನೋಡಿ... ಚಿಕ್ಕ ಪ್ರಾಯದಲ್ಲಿಯೇ ಬಿಳಿ ಕೂದಲು ಬರಲು ಕಾರಣವೇನು?

Home remedies to Stop Premature Greying of Hair in kannada

ಬಾದಾಮಿ ಎಣ್ಣೆ
ಸಮಪ್ರಮಾಣದಲ್ಲಿ ಬಾದಾಮಿ ಎಣ್ಣೆ, ಲಿಂಬೆರಸ ಮತ್ತು ನೆಲ್ಲಿಕಾಯಿಯ ರಸಗಳನ್ನು ಮಿಶ್ರಣಮಾಡಿಕೊಂಡು (ಬಿಸಿ ಮಾಡಬಾರದು) ನೇರವಾಗಿ ಕೂದಲಿಗೆ ಹಾಗೂ ಕೂದಲ ಬುಡಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಬಿಳಿಗೂದಲು ಶೀಘ್ರವೇ ಕಪ್ಪಗಾಗುತ್ತದೆ.

ಕರಿಬೇವಿನ ಎಲೆ

ಚಿಕ್ಕ ಉರಿಯಲ್ಲಿ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಕೆಲವು ಕರಿಬೇವಿನ ಎಲೆಗಳನ್ನು ಬೇಯಿಸಬೇಕು. ತಣ್ಣಗಾದ ಬಳಿಕ ಈ ಎಣ್ಣೆಯನ್ನು ಕೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡುವುದರಿಂದ ಬಿಳಿ ಕೂದಲು ಕಪ್ಪಗಾಗತೊಡಗುತ್ತದೆ. ಈ ಎಣ್ಣೆಗೆ ಕೊಂಚ ಮೊಸರನ್ನು ಅಥವಾ ಮಜ್ಜಿಗೆಯನ್ನು ಸೇರಿಸಿಯೂ ಬಳಸಬಹುದು.

ಈರುಳ್ಳಿ
ಈರುಳ್ಳಿಯ ರಸವನ್ನು ಹಿಂಡಿಹೊಂಡು ಸ್ವಲ್ಪ, ಸ್ವಲ್ಪವಾಗಿಯೇ ಕೂದಲ ಬುಡಕ್ಕೆ ಹಚ್ಚಿ ಮಾಲಿಶ್ ಮಾಡುವುದರಿಂದ ಕೂದಲು ಬಳಿಯಾಗದಂತೆ ತಡೆಯಬಹುದು ಹಾಗೂ ಕೂದಲುದುರುವುದನ್ನೂ ತಡೆಯಬಹುದು.

ಮೆಹೆಂದಿ ಮತ್ತು ಮೊಸರು
ಪರಿಶುದ್ಧವಾದ ಮೆಹೆಂದಿಯನ್ನು ಇದಕ್ಕೆ ಬಳಸಿ. ಪ್ಯಾಕ್‌ ಮಾಡಿರುವ ಮೆಹಂದಿಯನ್ನು ಬಳಸಬೇಡಿ. ರಾಸಾಯನಿಕಗಳಿಂದ ಮುಕ್ತವಾದ ಮೆಹಂದಿಯು ಇದಕ್ಕೆ ಒಳ್ಳೆಯದು. ಇದನ್ನು ಮಾಡಲು ಮೆಹಂದಿಯನ್ನು ನೀರಿನ ಬದಲಿಗೆ ಬ್ಲಾಕ್ ಟೀಯಲ್ಲಿ ನೆನೆಸಿ. ರಾತ್ರಿಯಿಡೀ ಇದನ್ನು ನೆನೆಯಲು ಬಿಟ್ಟು, ಬೆಳಗ್ಗೆ ಇದಕ್ಕೆ ಒಂದು ಟೇಬಲ್ ಚಮಚ ಆಲೀವ್ ಎಣ್ಣೆಯನ್ನು ಬೆರೆಸಿ.


ನಂತರ ಅರ್ಧ ಕಪ್ ಮೊಸರು ಅಥವಾ ಒಂದು ಮೊಟ್ಟೆಯನ್ನು ಬೆರೆಸಿಕೊಳ್ಳಿ. ಆಮೇಲೆ ಇದನ್ನು ನಿಮ್ಮ ಕೂದಲಿಗೆ ಲೇಪಿಸಿ. 30 ನಿಮಿಷ ಬಿಟ್ಟು, ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ, ಹೀಗೆ ವಾರದಲ್ಲಿ ಎರಡು ಮೂರು ದಿನ ಮಾಡುವುದರಿಂದ ಹೊಳಪಿನ ನೈಸರ್ಗಿಕವಾಗಿ ಕಪ್ಪಗಾಗಿರುವ ಕೂದಲನ್ನು ಪಡೆಯಬಹುದು.

ಹಾಲಿನ ಕೆನೆ ಮತ್ತು ಮೊಟ್ಟೆಯ ಪ್ಯಾಕ್
ಒಂದು ಬಟ್ಟಲು ತೆಗೆದುಕೊಂಡು ಅದರಲ್ಲಿ ಎರಡು ಟೇಬಲ್ ಚಮಚ ತಾಜಾ ಹಾಲಿನ ಕೆನೆಯನ್ನು ಹಾಕಿಕೊಳ್ಳಿ, ಇದಕ್ಕೆ 2 ಮೊಟ್ಟೆಗಳನ್ನು ಒಡೆದು ಕಲೆಸಿ. ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪ್ಯಾಕನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಲೇಪಿಸಿ. ಶವರ್ ಕ್ಯಾಪ್‍ನಿಂದ ಮುಚ್ಚಿಕೊಳ್ಳಿ. 30 ನಿಮಿಷಗಳ ನಂತರ ತಣ್ಣೀರಿನಲ್ಲಿ ಶಾಂಪೂ ಮಾಡಿಕೊಂಡು ಇದನ್ನು ತೊಳೆಯಿರಿ.

ಲೋಳೆ ರಸ ಮತ್ತು ಮೊಟ್ಟೆ

ಅರ್ಧ ಕಪ್ ಲೋಳೆ ರಸ ಜೊತೆಗೆ ಒಂದು ಮೊಟ್ಟೆಯ ಬಿಳಿಭಾಗವನ್ನು ಮಿಶ್ರಣ ಮಾಡಿಕೊಂಡು ಪೇಸ್ಟ್‌ನಂತೆ ತಯಾರಿಸಿಕೊಳ್ಳಿ. ಈ ಪೇಸ್ಟನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಲೇಪಿಸಿ. ಇದನ್ನು 30 ನಿಮಿಷ ಬಿಡಿ, ನಂತರ ತೊಳೆಯಿರಿ. ಈ ಹೇರ್ ಮಾಸ್ಕ್ ನಿಮ್ಮ ಕೂದಲಿಗೆ ಹೊಳಪನ್ನು ನೀಡುವುದರ ಜೊತೆಗೆ, ಬಿಳಿಗೂದಲು ಶೀಘ್ರವೇ ಕಪ್ಪಗಾಗುತ್ತದೆ.

ಸಾಸಿವೆ ಎಣ್ಣೆ

ಎರಡರಿಂದ ಮೂರು ಟೇಬಲ್ ಚಮಚದಷ್ಟು ಸಾಸಿವೆ ಎಣ್ಣೆಗೆ ಸ್ವಲ್ಪ ಮದರಂಗಿ ಎಲೆಗಳನ್ನು ಹಾಕಿ ಚಿಕ್ಕ ಉರಿಯಲ್ಲಿ ಎಲೆಗಳು ಪೂರ್ಣವಾಗಿ ಕರಗುವವರೆಗೆ ಕುದಿಸಬೇಕು. ತಣ್ಣಗಾದ ಬಳಿಕ ಈ ಎಣ್ಣೆಯನ್ನು ಪ್ರತಿದಿನ ಕೂದಲಿಗೆ ಹಚ್ಚಿಕೊಳ್ಳುವ ಮೂಲಕ ಹೊಳಪಿನ ನೈಸರ್ಗಿಕವಾಗಿ ಕಪ್ಪಗಾಗಿರುವ ಕೂದಲನ್ನು ಪಡೆಯಬಹುದು.
English summary

Home remedies to Stop Premature Greying of Hair in kannada

Greying when you are young is a major problem all men and women face although the pepper look is fashionable! To cover these rich grey or silver hair, using these home remedies is the key. To get started on home remedies to naturally make your hair white, here are some of the ingredients for you to try!
Story first published: Thursday, November 12, 2015, 16:14 [IST]
X
Desktop Bottom Promotion