For Quick Alerts
ALLOW NOTIFICATIONS  
For Daily Alerts

ಮಹಿಳಾ ದಿನಕ್ಕಾಗಿ ಕ್ಯಾನ್ಸರ್ ಪೀಡಿತ ಮಹಿಳೆಯರಿಗೆ ಉಚಿತ ವಿಗ್ ಕೊಡುಗೆ

|

ಬೆಂಗಳೂರು, ಮಾರ್ಚ್ 7, 2015: ಮಾರ್ಚ್ 8 ಅನ್ನು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಪ್ರತಿ ವರ್ಷ ಆಚರಿಸಲಾಗುತ್ತದೆ. ಬಹುತೇಕ ಮಹಿಳೆಯರು ಈ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸುತ್ತಾರೆ, ಆದರೆ ಇದನ್ನು ಸಂಭ್ರಮಿಸುವ ಸ್ಥಿತಿಯಲ್ಲಿಲ್ಲದ ಸಣ್ಣ ಸಮುದಾಯವೊಂದಿದೆ. ಈ ಮಹಿಳೆಯರು ತಮ್ಮ ಯುದ್ಧದಲ್ಲಿ ಕ್ಯಾನ್ಸರ್ ನಂತಹ ದೀರ್ಘಕಾಲಿಕ ಕಾಯಿಲೆಗಳ ಜತೆ ಹೋರಾಡುತ್ತಲೇ ಇದ್ದಾರೆ. ಇದು ಕೇವಲ ದೇಹವನ್ನಷ್ಟೇ ಅಲ್ಲ, ಮನಸ್ಸು, ಉತ್ಸಾಹ ಮತ್ತು ರೋಗಿಯ ಆತ್ಮವನ್ನೂ ಎದೆಗುಂದಿಸುವಂತಹದ್ದಾಗಿದೆ.

ಮಾರ್ಚ್ 8ರಂದು, ಹೇರ್‍ಲೈನ್ ಇಂಟರ್‌ನ್ಯಾಷನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್ ಮತ್ತು ಕಿದ್ವಾಯಿ ಮೆಮೋರಿಯಲ್ ಇನ್‍ಸ್ಟಿಟ್ಯೂಟ್ ಆಫ್ ಆಂಕಾಲಜಿ ಕೈಜೋಡಿಸಿಕೊಂಡು ಈ ಮಹಿಳೆಯರಲ್ಲಿ ಭಿನ್ನತೆ ಮೂಡಿಸಲು ಸಜ್ಜಾಗಿವೆ. ಹೇರ್‍ಲೈನ್ ಇಂಟರ್‌ನ್ಯಾಷನಲ್ ಉನ್ನತ ಗುಣಮಟ್ಟದ, ಆಮದುಗೊಳಿಸಿದ ವಿಗ್‍ಗಳನ್ನು ಮಹಿಳಾ ರೋಗಿಗಳಿಗೆ ವಿತರಿಸುವ ಸಲುವಾಗಿ ಕ್ಯಾನ್ಸರ್ ಇನ್‍ಸ್ಟಿಟ್ಯೂಟ್‍ಗೆ ಒದಗಿಸುತ್ತಿದೆ.

Hairline International donates wigs to Women cancer patients

ಬನಿ ಆನಂದ್, ಹೇರ್‍ಲೈನ್ ಇಂಟರ್‌ನ್ಯಾಷನಲ್‌ನ ಸಂಸ್ಥಾಪಕ ನಿರ್ದೇಶಕಿ ಮಾತನಾಡಿ, ಕೂದಲು ಉದುರುವುದು ಕೀಮೋಥೆರಪಿಯ ಒಂದು ಪ್ರಮುಖ ಅಡ್ಡ ಪರಿಣಾಮವಾಗಿದೆ. ಇದರಿಂದಾಗಿ ಈ ಮಹಿಳೆಯರ ಆತ್ಮ ಗೌರವಕ್ಕೆ ಕುಂದುಂಟಾಗುತ್ತದೆ. ಅವರ ನೈತಿಕತೆಯನ್ನು ಉತ್ತೇಜಿಸಲು, ನಾವು ಹೇರ್‍ಲೈನ್‍ನಿಂದ 100 ಆಮದುಗೊಳಿಸಿದ ವಿಗ್‍ಗಳನ್ನು ಒಂದು ವರ್ಷದ ಅವಧಿಯೊಳಗೆ ಒದಗಿಸಲಿದ್ದೇವೆ. ಈ ಕ್ರಮವು ಅವರ ಜೀವನ ಗುಣಮಟ್ಟದಲ್ಲಿ, ವಿಶೇಷವಾಗಿ ಚಿಕಿತ್ಸೆ ಮತ್ತು ಚೇತರಿಕೆಯ ಹಂತಗಳಲ್ಲಿ ಸಣ್ಣ ವ್ಯತ್ಯಾಸ ಮೂಡಿಸಲಿದೆ ಎಂಬ ನಂಬ ನಂಬಿಕೆ ನಮಗಿದೆ'' ಎಂದು ಹೇಳಿದರು.

ಇವರ ಪ್ರಕಾರ, ಈ ವಿಗ್‍ಗಳನ್ನು ಸಂಸ್ಕರಿತ ಮಾನವ ಕೂದಲಿನಿಂದ ತಯಾರಿಸಲಾಗಿದ್ದು ಇವು ಬಹುತೇಕ ಮಹಿಳೆಯರ ಸಾಮಾನ್ಯ ಕೂದಲಿನ ಜೊತೆಗೆ ತುಂಬಾ ಹೊಂದಾಣಿಕೆಯಾಗುತ್ತದೆ. ಚಿಕಿತ್ಸೆ ಆರಂಭಗೊಳ್ಳುವ ಮುಂಚೆಯೇ, ನಮ್ಮ ಬಳಿಗೆ ರೋಗಿಯು ಬಂದರೆ, ನಾವು ಅವರ ಕೂದಲನ್ನು ಪಡೆದುಕೊಂಡು, ಅವುಗಳಿಂದ ಫ್ಯಾಷನ್ ವಿಗ್‍ಗಳನ್ನು ತಯಾರಿಸುತ್ತೇವೆ. ಈ ವಿಗ್‍ಗಳನ್ನು ಇಳಿತದ ಹಂತಗಳಲ್ಲೂ ಉಪಯೋಗಿಸಬಹುದಾಗಿದೆ'' ಎಂದು ಅವರು ಹೇಳಿದರು.

ಜತೆಗೆ, ತಮ್ಮನ್ನು ಸಂಪರ್ಕಿಸುವ ಎಲ್ಲಾ ಮಹಿಳಾ ಕ್ಯಾನ್ಸರ್ ರೋಗಿಗಳಿಗೆ ಕೂದಲು ವರ್ಧನಾ ವಿಧಾನಗಳಲ್ಲಿ ಶೇ.50ರಷ್ಟು ರಿಯಾಯ್ತಿಯನ್ನು ಒದಗಿಸುವುದಾಗಿ ಹೇರ್‍ಲೈನ್ ಇಂಟರ್‌ನ್ಯಾಷನಲ್‌ ಘೋಷಿಸಿದೆ. ಡಾ.ಲಿಂಗೇಗೌಡ, ಕಿದ್ವಾಯಿ ಮೆಮೋರಿಯಲ್ ಇನ್‍ಸ್ಟಿಟ್ಯೂಟ್ ಆಫ್ ಆಂಕಾಲಜಿಯ ನಿರ್ದೇಶಕರು ಮಾತನಾಡಿ, ಕ್ಯಾನ್ಸರ್ ವ್ಯವಸ್ಥಿತವಾಗಿ ಒಬ್ಬ ವ್ಯಕ್ತಿಯನ್ನು, ವಿಶೇಷವಾಗಿ ಅಂತಿಮ ಹಂತಗಳಲ್ಲಿರುವ ರೋಗಿಗಳನ್ನು ನಾಶಗೊಳಿಸುತ್ತದೆ. ಮಹಿಳಾ ರೋಗಿಗಳಿಗೆ, ಚಿಕಿತ್ಸೆಯ ವೇಳೆಯಲ್ಲಿ ತಮ್ಮ ಸ್ತ್ರೀತ್ವದ ಲಕ್ಷಣವಾಗಿರುವ ಕೂದಲಿನ ಉದುರುವಿಕೆಯಿಂದ


ತುಂಬಾಹಾನಿಯಾಗುತ್ತದೆ. ಕೂದಲು ಉದುರುವುದು ಭಾವನಾತ್ಮಕವಾಗಿ ಕಾಡುತ್ತದೆ. ಈ ವಿಗ್‍ಗಳು ಭಾವನಾತ್ಮಕ ಸಂಘರ್ಷದಿಂದ ಪಾರಾಗಲು ನೆರವಾಗಲಿದೆ'' ಎಂದು ಹೇಳಿದರು. ವಿಗ್‍ಗಳನ್ನು ಕಿದ್ವಾಯಿ ಮೆಮೋರಿಯಲ್ ಇನ್‍ಸ್ಟಿಟ್ಯೂಟ್ ಆಫ್ ಆಂಕಾಲಜಿಯ ನಿರ್ದೇಶಕರಾದ ಡಾ.ಲಿಂಗೇಗೌಡ ಅವರಿಗೆ ಆಸ್ಪತ್ರೆಯಲ್ಲಿ ಹಸ್ತಾಂತರಿಸಲಾಯಿತು.
English summary

Hairline International donates wigs to Women cancer patients

March 8 is observed as International Women’s Day every year. While a majority of the women mark the occasion in a special way, there is a small section which does not have a reason to celebrate. These women are fighting their war against a chronic illness like cancer, which debilitates not just the body, but the mind, spirit and soul of the patients as well.
X
Desktop Bottom Promotion