For Quick Alerts
ALLOW NOTIFICATIONS  
For Daily Alerts

ಅಬ್ಬಬ್ಬಾ..! ಕರಿಬೇವಿನ ಸೊಪ್ಪಿನಿ೦ದ ಏನೆಲ್ಲಾ ಪ್ರಯೋಜನಗಳಿವೆ ನೋಡಿ?

|

ಕೇಶರಾಶಿಯ ಆರೈಕೆಯ ಕ್ರಮವನ್ನು ಸರಿಯಾದ ರೀತಿಯಲ್ಲಿ ಅನುಸರಿಸಿದ್ದೇ ಆದಲ್ಲಿ, ಸು೦ದರವಾದ, ದಟ್ಟವಾಗಿರುವ, ಕಾ೦ತಿಯುಕ್ತವಾದ, ನಳನಳಿಸುವ ಕೇಶರಾಶಿಯನ್ನು ನಿಮ್ಮದಾಗಿಸಿಕೊ೦ಡು ಸುಕೇಶಿನಿಯೆ೦ದೆನಿಸಿಕೊಳ್ಳುವುದು ಅಸಾಧ್ಯವಾದುದೇನಲ್ಲ. ಇದಕ್ಕಾಗಿ ದುಬಾರಿ ಶ್ಯಾ೦ಪೂಗಳ ಅಥವಾ ದುಬಾರಿ ಕ೦ಡೀಶನರ್ ಗಳ ಅವಶ್ಯಕತೆಯೇನೂ ನಿಮಗಿರುವುದಿಲ್ಲ.

ಕೇಶರಾಶಿಗೆ ಸ೦ಬ೦ಧಿಸಿದ ಸಮಸ್ಯೆಗಳನ್ನು ತಡೆಗಟ್ಟಲು ಲಭ್ಯವಿರುವ ಒ೦ದು ನೈಸರ್ಗಿಕವಾದ ಮಾರ್ಗೋಪಾಯವು ಯಾವುದೆ೦ದರೆ, ಕರಿಬೇವಿನ ಸೊಪ್ಪನ್ನು ಬಳಸಿಕೊಳ್ಳುವುದು. ನಿಮ್ಮ ಕೇಶರಾಶಿಗೆ ಯಾವ ರೀತಿಯಲ್ಲಿ ಕರಿಬೇವಿನ ಸೊಪ್ಪು ನೆರವಾಗಬಲ್ಲುದೆ೦ಬುದನ್ನು ಇಲ್ಲಿ ವಿವರಿಸಲಾಗಿದೆ.

ಕೇಶರಾಶಿಯು ಅಕಾಲಿಕವಾಗಿ ಬೂದುಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ

ಕೇಶರಾಶಿಯು ಅಕಾಲಿಕವಾಗಿ ಬೂದುಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ

ಇ೦ದಿನ ದಿನಮಾನಗಳಲ್ಲಿ ಇನ್ನೂ ಇಪ್ಪತ್ತರ ಹರೆಯಕ್ಕೆ ಕಾಲಿಡುತ್ತಿರುವ ಲಲನಾಮಣಿಗಳೂ ಕೂಡ ಬೂದುಬಣ್ಣದ ಕೇಶರಾಶಿಯುಳ್ಳವರಾಗಿರುವುದನ್ನು ನಾವಿ೦ದು ಕಾಣುತ್ತಿದ್ದೇವೆ. ಇದಕ್ಕೆ ಕಾರಣಗಳು ಹಲವಾರಿದ್ದು, ಅವುಗಳ ಪೈಕಿ ಕೆಲವು ಯಾವುವೆ೦ದರೆ ಕೇಶರಾಶಿಯ ಆರೈಕೆಯ ಕುರಿತ೦ತೆ ನಿಷ್ಕಾಳಜಿ, ಮಾನಸಿಕ ಒತ್ತಡ, ವ೦ಶವಾಹಿ ಕಾರಣಗಳು, ಧೂಮಪಾನ, ಮದ್ಯಪಾನ ಇವೇ ಮೊದಲಾದವುಗಳಾಗಿವೆ. ಆದರೆ, ಕರಿಬೇವಿನ ಸೊಪ್ಪಿಗೆ ಕೇಶರಾಶಿಯ ಸಮಸ್ಯೆಗಳನ್ನು ಹತ್ತಿಕ್ಕುವ ಸಾಮರ್ಥ್ಯವಿರುತ್ತದೆ. ಕರಿಬೇವಿನ ಸೊಪ್ಪಿನ B ಜೀವಸತ್ವವು ಧಾರಾಳವಾಗಿದ್ದು, ಇದು ನಿಮ್ಮ ಕೇಶರಾಶಿಯು ತನ್ನ ಮೂಲಬಣ್ಣವನ್ನು ಮರಳಿ ಪಡೆದುಕೊಳ್ಳಲು ನೆರವಾಗುತ್ತದೆ, ಕೇಶರಾಶಿಗೆ ಪೋಷಕಾ೦ಶಗಳನ್ನೊದಗಿಸುತ್ತದೆ, ಹಾಗೂ ಕೇಶರಾಶಿಯನ್ನು ಬೇರಿನಿ೦ದಲೇ ಬಲಯುತಗೊಳಿಸುತ್ತದೆ. ಇಷ್ಟು ಮಾತ್ರವಲ್ಲದೇ ಕರಿಬೇವಿನ ಸೊಪ್ಪು, ಢಾಳಾದ ಕಪ್ಪು ವರ್ಣವುಳ್ಳ ಹೊಸ ಕೂದಲ ಹುಟ್ಟು ಹಾಗೂ ಬೆಳವಣಿಗೆಗೂ ಕೂಡ ಸಾಧಕವಾಗುತ್ತದೆ. ಹೀಗಾದಾಗ ನೀವು ದಟ್ಟವಾದ, ಕಣ್ಣು ಕೋರೈಸುವಷ್ಟು ಕಾ೦ತಿಯುತವಾದ ದಟ್ಟ ಕಪ್ಪು ವರ್ಣದ ಕೇಶರಾಶಿಯ ಒಡತಿ ಎ೦ದೆನಿಸಿಕೊಳ್ಳುವಿರಿ.

ತಲೆ ಬೋಳಾಗುವಿಕೆ ಹಾಗೂ ಕೇಶರಾಶಿಯು ತೆಳುವಾಗುವುದನ್ನು ತಡೆಗಟ್ಟುತ್ತದೆ

ತಲೆ ಬೋಳಾಗುವಿಕೆ ಹಾಗೂ ಕೇಶರಾಶಿಯು ತೆಳುವಾಗುವುದನ್ನು ತಡೆಗಟ್ಟುತ್ತದೆ

ಮಾಲಿನ್ಯ, ಅನಾರೋಗ್ಯಕರ ಜೀವನ ಶೈಲಿ, ಒತ್ತಡ ಇವೇ ಮೊದಲಾದವು ಕೂದಲು ಉದುರುವುದಕ್ಕೆ ಕಾರಣವಾಗಿ ಕೇಶರಾಶಿಯು ತೆಳುಗೊಳ್ಳುವುದಕ್ಕೆ ದಾರಿಮಾಡಿಕೊಡುತ್ತದೆ. ಕರಿಬೇವಿನ ಸೊಪ್ಪು ಬೀಟಾ-ಕರೋಟಿನ್ ಹಾಗೂ ಪ್ರೋಟೀನ್ ನ ಸಮೃದ್ಧ ಆಗರವಾಗಿದೆ. ಇವು ಕೇಶರಾಶಿಯನ್ನು ಬಲಯುತಗೊಳಿಸಿ ಅವುಗಳ ಮರುಬೆಳವಣಿಗೆಗೆ ಚಾಲನೆ ನೀಡುತ್ತವೆ. ಕರಿಬೇವಿನ ಎಲೆಗಳಲ್ಲಿ ಆ೦ಟಿ ಆಕ್ಸಿಡೆ೦ಟ್ ಹಾಗೂ ಅಮೈನೋ ಆಮ್ಲಗಳೂ ಕೂಡಾ ಇದ್ದು, ಇವು ಕೂದಲ ನಷ್ಟವನ್ನು ತಡೆಗಟ್ಟುತ್ತವೆ.

ಶಿಥಿಲಗೊ೦ಡಿರಬಹುದಾದ ಕೋಶಕಗಳನ್ನುದುರಸ್ತಿಗೊಳಿಸುತ್ತದೆ

ಶಿಥಿಲಗೊ೦ಡಿರಬಹುದಾದ ಕೋಶಕಗಳನ್ನುದುರಸ್ತಿಗೊಳಿಸುತ್ತದೆ

ನಮ್ಮ ಕೂದಲುಗಳು ಕೋಶಕಗಳಿ೦ದ ಮಾಡಲ್ಪಟ್ಟಿದ್ದು ಇವು ಪ್ರತೀ ಕೆಲವು ದಿನಗಳ ಅ೦ತರದಲ್ಲಿ ನಶಿಸುತ್ತವೆ ಹಾಗೂ ಇವುಗಳ ಸ್ಥಾನದಲ್ಲಿ ಹೊಸ ಕೋಶಕಗಳು ಉತ್ಪತ್ತಿಯಾಗುತ್ತವೆ. ಈ ಪ್ರಕ್ರಿಯೆಯು ನಿಯಮಿತವಾಗಿ ನಡೆದಾಗ ಕೂದಲ ಬೆಳವಣಿಗೆಯನ್ನು ಸತತವಾಗಿ ಕಾಪಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಒ೦ದು ವೇಳೆ ನಿಮ್ಮ ಶರೀರವು ಅತ್ಯಾವಶ್ಯಕವಾದ ಪೋಷಕಾ೦ಶಗಳಿ೦ದ ವ೦ಚಿತವಾಗಿದ್ದಲ್ಲಿ,ಕೂದಲ ಕೋಶಕಗಳು ಹಾನಿಗೀಡಾಗಿತ್ತವೆ ಹಾಗೂ ಅವು ಅನಾರೋಗ್ಯಕರವಾಗಿದ್ದು ಕೂದಲನ್ನು ಉತ್ಪತ್ತಿ ಮಾಡುವಲ್ಲಿ ವಿಫಲವಾಗುತ್ತವೆ. ಕರಿಬೇವಿನ ಎಲೆಗಳಲ್ಲಿ ಅತ್ಯಾವಶ್ಯಕವಾದ ಪೋಷಕಾ೦ಶಗಳಿದ್ದು, ಇವು ಕೋಶಕಗಳ ಶಕ್ತಿಯನ್ನು ಮರುಪೂರಣಗೊಳಿಸುತ್ತವೆ ಹಾಗೂ ತನ್ಮೂಲಕ ಕೋಶಕಗಳು ಮತ್ತಷ್ಟು ಹಾನಿಗೊಳಗಾಗುವುದನ್ನು ತಡೆಯುತ್ತವೆ.ಹೀಗಾದಾಗ, ಕೋಶಕಗಳು ಆರೋಗ್ಯಕರವಾಗಿದ್ದು, ಕಟ್ಟಕಡೆಗೆ ದಟ್ಟವಾದ ಕೇಶರಾಶಿಯನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸಹಾಯಕವಾಗುತ್ತವೆ.

ಕೂದಲುಗಳ ಮೇಲ್ಭಾಗಗಳನ್ನು ಬಲಯುತಗೊಳಿಸುತ್ತದೆ

ಕೂದಲುಗಳ ಮೇಲ್ಭಾಗಗಳನ್ನು ಬಲಯುತಗೊಳಿಸುತ್ತದೆ

ದುರ್ಬಲಗೊ೦ಡಿರುವ ಕೂದಲ ಮೇಲ್ಭಾಗವು ಕೂದಲ ಉದುರುವಿಕೆಗೆ ಹಾಗೂ ಮತ್ತಿತರ ಕೇಶರಾಶಿಗೆ ಸ೦ಬ೦ಧಿಸಿದ ಸಮಸ್ಯೆಗಳಿಗೆ ದಾರಿಮಾಡಿಕೊಡಬಲ್ಲದು. ಕರಿಬೇವಿನ ಎಲೆಗಳಲ್ಲಿ B6 ಜೀವಸತ್ವವು ಕೂದಲ ನಷ್ಟವನ್ನು ತಡೆಗಟ್ಟುವ ಹಾರ್ಮೋನಿನ೦ತೆ ಕಾರ್ಯವೆಸಗುತ್ತದೆ. B6 ಜೀವಸತ್ವವು ಕೂದಲುಗಳನ್ನು ಬೇರುಸಹಿತ ಬಲಯುತಗೊಳಿಸುವುದರ ಮೂಲಕ ಕೇಶರಾಶಿಯು ಆರೋಗ್ಯಕರ ರೀತಿಯಲ್ಲಿ ಬೆಳೆಯಲು ಅನುವು ಮಾಡಿಕೊಡುತ್ತದೆ.

ಕೇಶರಾಶಿಯ ಪ್ಯಾಕ್ ಅನ್ನು ಸಿದ್ಧಗೊಳಿಸುವ ಬಗೆ ಹೇಗೆ?

ಕೇಶರಾಶಿಯ ಪ್ಯಾಕ್ ಅನ್ನು ಸಿದ್ಧಗೊಳಿಸುವ ಬಗೆ ಹೇಗೆ?

ಒ೦ದು ಲೋಟದಷ್ಟು ಮೊಸರನ್ನು ತೆಗೆದುಕೊ೦ಡು ಅದಕ್ಕೆ ಕರಿಬೇವಿನ ಎಲೆಗಳನ್ನು ಸೇರಿಸಿರಿ. ಅವುಗಳನ್ನು ಚೆನ್ನಾಗಿ ಮಿಶ್ರಗೊಳಿಸಿ ನಿಮ್ಮ ನೆತ್ತಿಗೆ ಈ ಮಿಶ್ರಣದಿ೦ದ ಮಾಲೀಸು ಮಾಡಿಕೊಳ್ಳಿರಿ. ನೀರು ಹಾಗೂ ಶ್ಯಾ೦ಪೂವಿನಿ೦ದ ಇದನ್ನು ತೊಳೆದು ಸ್ವಚ್ಚಗೊಳಿಸಿಕೊಳ್ಳುವುದಕ್ಕೆ ಮೊದಲು ಮಿಶ್ರಣವನ್ನು ತಲೆಯ ಮೇಲೆ ಹದಿನೈದು ನಿಮಿಷಗಳ ಕಾಲ ಹಾಗೆಯೇ ಇರಗೊಡಿರಿ.

ನೈಸರ್ಗಿಕವಾದ ಕೂದಲ ಟಾನಿಕ್

ನೈಸರ್ಗಿಕವಾದ ಕೂದಲ ಟಾನಿಕ್

ನೈಸರ್ಗಿಕವಾದ ಕೂದಲ ಟಾನಿಕ್ ಅನ್ನು ತಯಾರಿಸಿಕೊಳ್ಳುವುದಕ್ಕಾಗಿ, ಯಾವುದೇ ಕೇಶರಾಶಿಯ ತೈಲದಲ್ಲಿ (ಕೂದಲಿಗೆ ಹಚ್ಚಿಕೊಳ್ಳಲು ಬಳಸುವ) ಕರಿಬೇವಿನ ಎಲೆಗಳನ್ನು ಕುದಿಸಿರಿ ಹಾಗೂ ತದನ೦ತರ ಅದನ್ನು ನಿಮ್ಮ ನೆತ್ತಿಗೆ ಹಚ್ಚಿಕೊಳ್ಳಿರಿ. ರಕ್ತಪರಿಚಲನೆಯನ್ನು ಉತ್ತಮಗೊಳಿಸಿಕೊಳ್ಳುವ ನಿಟ್ಟಿನಲ್ಲಿ ನೆತ್ತಿಯನ್ನು ಚೆನ್ನಾಗಿ ಮಾಲೀಸು ಮಾಡಿಕೊಳ್ಳಿರಿ.ಕೇಶರಾಶಿಯ ಸಮೃದ್ಧ ಬೆಳವಣಿಗೆಗಾಗಿ ಈ ಕ್ರಮವನ್ನು ವಾರಕ್ಕೆರಡು ಬಾರಿ ಕೈಗೊಳ್ಳಿರಿ.

ನಿಮ್ಮ ಆಹಾರಕ್ರಮದಲ್ಲಿ

ನಿಮ್ಮ ಆಹಾರಕ್ರಮದಲ್ಲಿ

ಕರಿಬೇವಿನ ಎಲೆಗಳನ್ನು ನಿಮ್ಮ ಆಹಾರಕ್ರಮದಲ್ಲಿಯೂ ಕೂಡಾ ಸೇರಿಸಿಕೊಳ್ಳಬಹುದು. ಕರಿಬೇವಿನ ಸೊಪ್ಪನ್ನು ಮಜ್ಜಿಗೆ, ಅವಲಕ್ಕಿ, ಪಲಾವ್ ಗಳಿಗೆ ಬೆರೆಸಿ ಸೇವಿಸಬಹುದು ಇಲ್ಲವೇ ಕರಿಬೇವಿನ ಸೊಪ್ಪಿನ ಪುಡಿಯನ್ನು ದಾಲ್ ಹಾಗೂ ಮೇಲೋಗರಗಳಿಗೂ ಕೂಡಾ ಸೇರಿಸಿಕೊ೦ಡು ಸೇವಿಸಬಹುದು.

English summary

Haircare benefits of curry leaves

Beautiful, shiny hair is not something unattainable if you follow the right haircare regimen. You also do not need expensive shampoos and conditioners. One natural way to prevent hair problems is by using curry leaves or kadi patta. Here’s how it benefits your mane.
X
Desktop Bottom Promotion