For Quick Alerts
ALLOW NOTIFICATIONS  
For Daily Alerts

ಕಾಡುವ ಬಿಳಿಕೂದಲಿನ ಸಮಸ್ಯೆಗೆ ಅದ್ಭುತ ಹೇರ್ ಪ್ಯಾಕ್

|

ಇಂದಿನ ದಿನಗಳಲ್ಲಿ ಇನ್ನೂ ಮೂವತ್ತರ ಹರೆಯದಲ್ಲಿರುವವರ ತಲೆ ಕೂದಲೂ ಬಿಳಿಯಾಗುತ್ತಿರುವುದು ಚಿಂತೆಯ ವಿಷಯವಾಗಿದೆ. ಇದಕ್ಕೆ ಕಾರಣ ಏನೆಂದು ಇದುವರೆಗೆ ನಿಖರವಾಗಿ ತಿಳಿದು ಬಂದಿಲ್ಲ. ಪ್ರದೂಷಿತ ಗಾಳಿ, ಕಲ್ಮಶಗೊಂಡ ಅಂತರ್ಜಲ, ರಾಸಾಯನಿಕ ಗೊಬ್ಬರ ಬಳಸಿದ ತರಕಾರಿಗಳು, ಸಿದ್ಧ ತಿನಿಸುಗಳು, ಏನೊಂದೂ ಇದಕ್ಕೆ ಕಾರಣವಾಗಬಲ್ಲದು. ಕೆಲವೊಂದು ಸಮೀಕ್ಷೆಗಳ ಪ್ರಕಾರ ಅಮೇರಿಕನ್ನರು ತಮ್ಮ ಮೂವತ್ತೈದನೇ ಪ್ರಾಯದಲ್ಲಿ ಕೂದಲ ಬಣ್ಣ ಕಳೆದುಕೊಂಡರೆ ಏಷ್ಯನ್ನರು ಮೂವತ್ತೆಂಟು ಮೂವತ್ತೊಂಭತ್ತರ ವಯಸ್ಸಿನಲ್ಲಿ ಬಿಳಿಕೂದಲ ತೊಂದರೆಯನ್ನು ಅನುಭವಿಸುತ್ತಾರೆ.

ಆಫ್ರಿಕನ್ ಹಾಗೂ ಅಫ್ರಿಕನ್ ಅಮೇರಿಕನ್ ಸಂಜಾತರ ತಲೆಗೂದಲು ನಲವತ್ತೈದರ ಬಳಿಕ ನೆರೆಯುತ್ತದೆ. ಕೂದಲಿಗೆ ಕಪ್ಪುಬಣ್ಣ ಬರಲು ಮೆಲನಿನ್ ಎಂಬ ವರ್ಣದ್ರವ್ಯ ಕಾರಣ. ಈ ಮೆಲನಿನ್ ಹೈಡ್ರೋಜನ್ ಪೆರಾಕ್ಸೈಡ್ ನೊಂದಿಗೆ ಸಂಯೋಜನೆಗೊಂಡಾಗ ಬಿಳಿಯಾಗಿ ಪರಿವರ್ತಿತವಾಗಿರುವುದು ಪ್ರಯೋಗಗಳಿಂದ ತಿಳಿದುಬಂದಿದೆ. ಆದರೆ ನಮ್ಮ ಯಾವ ಆಹಾರದಿಂದ ಹೈಡ್ರೋಜನ್ ಪೆರಾಕ್ಸೈಡ್ ಕೂದಲಿಗೆ ಬರುತ್ತದೆ? ಇದನ್ನು ತಡೆಯುವುದು ಹೇಗೆ? ಈಗಾಗಲೇ ಬಿಳಿಯಾಗಿರುವ ಕೂದಲನ್ನು ಮತ್ತೆ ಕಪ್ಪಗಾಗಿಸುವುದು ಹೇಗೆ ಎಂದು ಕುತೂಹಲಗಳನ್ನು ಕೆಳಗಿನ ಮೂವತ್ತು ಸಾಬೀತುಪಡಿಸಿದ ಮನೆಮದ್ದುಗಳು ತಣಿಸುತ್ತವೆ. ಮುಂದೆ ಓದಿ...

ದಾಸವಾಳ ಮೊಸರಿನ ಪ್ಯಾಕ್

ದಾಸವಾಳ ಮೊಸರಿನ ಪ್ಯಾಕ್

ಬಿಳಿ ಕೂದಲಿಗಾಗಿ ಇದೊಂದು ಅದ್ಭುತ ಪ್ಯಾಕ್ ಆಗಿರುತ್ತದೆ. ಒಂದು ಬಟ್ಟಲು ತೆಗೆದುಕೊಂಡು ಅದರಲ್ಲಿ 4 ಟೇಬಲ್ ಚಮಚ ಮೊಸರು ಮತ್ತು ಅದರ ಕಾಲು ಭಾಗದಷ್ಟು ದಾಸವಾಳದ ಪುಡಿಯನ್ನು ತೆಗೆದುಕೊಳ್ಳಿ.ಇದನ್ನು ಬಳಸಿ ಒಂದು ಪೇಸ್ಟ್ ತಯಾರಿಸಿಕೊಳ್ಳಿ. ಅದನ್ನು ಒದ್ದೆಯಾದ ಕೂದಲು ಮತ್ತು ಅದರ ಬುಡಕ್ಕೆ ಲೇಪಿಸಿ. ಇದನ್ನು ಮೂವತ್ತು ನಿಮಿಷಗಳ ಕಾಲ ಬಿಡಿ ಮತ್ತು ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ಸಾಸಿವೆ ಎಣ್ಣೆ ಮತ್ತು ಕರಿಬೇವು ಸೊಪ್ಪಿನ ಪ್ಯಾಕ್

ಸಾಸಿವೆ ಎಣ್ಣೆ ಮತ್ತು ಕರಿಬೇವು ಸೊಪ್ಪಿನ ಪ್ಯಾಕ್

ಒಂದು ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಸಾಸಿವೆ ಎಣ್ಣೆಯನ್ನು ಕಾಯಿಸಿಕೊಳ್ಳಿ. ಅದಕ್ಕೆ ಸ್ವಲ್ಪ ಕರಿಬೇವು ಸೊಪ್ಪನ್ನು ಹಾಕಿ. ಇದನ್ನು ತಣ್ಣಗಾಗಲು ಬಿಟ್ಟು, ನಂತರ ನಿಮ್ಮ ಕೂದಲುಗಳ ಮೇಲೆ ಲೇಪಿಸಿ.ಎರಡು ನಿಮಿಷಗಳ ಕಾಲ ಮೃದುವಾಗಿ ಇದರಿಂದ ಕೂದಲುಗಳ ಮಸಾಜ್ ಮಾಡಿ. ಈ ಪ್ಯಾಕ್ ಅನ್ನು ಇಡೀ ರಾತ್ರಿ ಹಾಗೆಯೇ ಇರಲು ಬಿಡಿ. ನಂತರ ಇದನ್ನು ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಉತ್ತಮ ಫಲಿತಾಂಶಕ್ಕಾಗಿ ಈ ಬೇಸಿಗೆ ಪ್ಯಾಕನ್ನು ಪ್ರತಿ ಮೂರು ದಿನಗಳಿಗೊಮ್ಮೆ ಬಳಸಿ.

ತೆಂಗಿನಕಾಯಿ ಎಣ್ಣೆ ಮತ್ತು ಗೋಧಿಹುಲ್ಲು

ತೆಂಗಿನಕಾಯಿ ಎಣ್ಣೆ ಮತ್ತು ಗೋಧಿಹುಲ್ಲು

ಗೋಧಿಹುಲ್ಲನ್ನು ಜಜ್ಜಿಕೊಂಡು ಅದನ್ನು ನುಣ್ಣಗಿನ ಪುಡಿ ಮಾಡಿಕೊಳ್ಳಿ. ನಂತರ ಒಂದು ಬಟ್ಟಲು ತೆಗೆದುಕೊಂಡು ಅದರಲ್ಲಿ ಎರಡು ಟೇಬಲ್ ಚಮಚ ಗೋಧಿಹುಲ್ಲಿನ ಪುಡಿ ಮತ್ತು ತೆಂಗಿನಕಾಯಿ ಎಣ್ಣೆಯನ್ನು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಈ ಪ್ಯಾಕನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಲೇಪಿಸಿ. ನಂತರ ಮೂವತ್ತು ನಿಮಿಷ ಬಿಟ್ಟು ಉಗುರು ಬೆಚ್ಚಗಿನ ನೀರಿನಲ್ಲಿ ಇದನ್ನು ತೊಳೆಯಿರಿ.

ಆಲೂಗಡ್ಡೆ ಜ್ಯೂಸ್ ಪ್ಯಾಕ್

ಆಲೂಗಡ್ಡೆ ಜ್ಯೂಸ್ ಪ್ಯಾಕ್

ಇದು ಬಿಳಿ ಕೂದಲುಗಳಿಗಾಗಿ ಇರುವ ಅತ್ಯುತ್ತಮವಾದ ಪ್ಯಾಕ್ ಆಗಿರುತ್ತದೆ. ಇದಕ್ಕಾಗಿ ಸುಲಿದ ಆಲೂಗಡ್ಡೆಯನ್ನು ತೆಗೆದುಕೊಳ್ಳಿ ಮತ್ತು ಅದನ್ನು ಸ್ವಲ್ಪ ನೀರಿನ ಜೊತೆಗೆ ಬೆರೆಸಿ, ಪೇಸ್ಟ್ ಮಾಡಿಕೊಳ್ಳಿ. ಈ ಪ್ಯಾಕನ್ನು ನಿಮ್ಮ ಕೂದಲಿಗೆ ಲೇಪಿಸಿ, ಶವರ್ ಕ್ಯಾಪ್‍ನಿಂದ ಮುಚ್ಚಿಕೊಳ್ಳಿ. 30 ನಿಮಿಷಗಳ ನಂತರ ತಣ್ಣೀರಿನಲ್ಲಿ ಇದನ್ನು ತೊಳೆಯಿರಿ.

ಹಾಲಿನ ಕೆನೆ ಮತ್ತು ಮೊಟ್ಟೆಯ ಪ್ಯಾಕ್

ಹಾಲಿನ ಕೆನೆ ಮತ್ತು ಮೊಟ್ಟೆಯ ಪ್ಯಾಕ್

ಒಂದು ಬಟ್ಟಲು ತೆಗೆದುಕೊಂಡು ಅದರಲ್ಲಿ ಎರಡು ಟೇಬಲ್ ಚಮಚ ತಾಜಾ ಹಾಲಿನ ಕೆನೆಯನ್ನು ಹಾಕಿಕೊಳ್ಳಿ, ಇದಕ್ಕೆ 2 ಮೊಟ್ಟೆಗಳನ್ನು ಒಡೆದು ಕಲೆಸಿ. ಇವೆರಡನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಈ ಪ್ಯಾಕನ್ನು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಲೇಪಿಸಿ. ಶವರ್ ಕ್ಯಾಪ್‍ನಿಂದ ಮುಚ್ಚಿಕೊಳ್ಳಿ. 30 ನಿಮಿಷಗಳ ನಂತರ ತಣ್ಣೀರಿನಲ್ಲಿ ಶಾಂಪೂ ಮಾಡಿಕೊಂಡು ಇದನ್ನು ತೊಳೆಯಿರಿ.

English summary

Hair Packs For Premature Grey Hair

summer pack for premature grey hair, hair pack for premature grey hair, hair pack for grey hair, grey hair packs Are you disturbed about your grey hair?However, you do not have to worry because there are some easy remedies which will help you tackle the premature grey hair. These are:
X
Desktop Bottom Promotion