For Quick Alerts
ALLOW NOTIFICATIONS  
For Daily Alerts

ಇಂತಹ ಅಭ್ಯಾಸಗಳೇ, ಕೂದಲುದುರುವುದಕ್ಕೆ ಮೂಲ ಕಾರಣ!

By Ardhad
|

ಸೊಂಪಾದ ಕೂದಲನ್ನು ಹೊಂದುವುದು ಪ್ರತಿ ಮಹಿಳೆಯ ಕನಸು. ಇದಕ್ಕಾಗಿ ಮಾಡದ ಆರೈಕೆಯಿಲ್ಲ, ಬಳಸದ ಎಣ್ಣೆಯಿಲ್ಲ. ಆದರೂ ಸತತವಾಗಿ ಉದುರುವ ಕೂದಲು ನೆಮ್ಮದಿಯನ್ನೇ ಕೆಡಿಸಿಬಿಡುತ್ತದೆ. ದಿನಂಪ್ರತಿ ಐವತ್ತರಿಂದ ನೂರು ಕೂದಲುಗಳು ಉದುರುವುದು ಸ್ವಾಭಾವಿಕ. ಕೆಲವರಲ್ಲಿ ಇದು ನೂರೈವತ್ತಕ್ಕೂ ಹೆಚ್ಚು ಉದುರಬಹುದು.

ಆದರೆ ಇಷ್ಟೇ ಪ್ರಮಾಣದ ಕೂದಲುಗಳು ಹೊಸದಾಗಿ ಹುಟ್ಟುವುದರಿಂದ ಆತಂಕಕ್ಕೆ ಕಾರಣವಿಲ್ಲ. ಆದರೆ ಕೂದಲು ಹುಟ್ಟುವ ಪ್ರಮಾಣಕ್ಕಿಂತಲೂ ಉದುರುವ ಪ್ರಮಾಣವೇ ಹೆಚ್ಚಾದರೆ ಮಾತ್ರ ಆತಂಕ ಎದುರಾಗುವುದು ಸಹಜ. ಇದಕ್ಕೆ ನಿಮ್ಮ ಆರೈಕೆಯಲ್ಲಿ ಕೊರತೆಯನ್ನೇ ಹುಡುಕುವ ಬದಲು ನಿಮ್ಮ ಅಭ್ಯಾಸಗಳ ಬಗ್ಗೆಯೂ ಕೊಂಚ ಚಿಂತಿಸಿದರೆ ಇದಕ್ಕೆ ಕಾರಣ ಕಂಡುಕೊಳ್ಳಬಹುದು.

ಪ್ರತಿದಿನ ಬೆಳಿಗ್ಗೆದ್ದ ಬಳಿಕ ತಲೆದಿಂಬಿನ ಮೇಲೆ ಎಷ್ಟು ಕೂದಲು ಸಿಕ್ಕಿತು ಎಂದು ಲೆಕ್ಕ ಹಾಕಿ. ಇವು ಹತ್ತಿಪ್ಪತ್ತು ಇದ್ದರೆ ಆತಂಕವಿಲ್ಲ. ಅದಕ್ಕೂ ಹೆಚ್ಚಿದ್ದರೆ ಮಾತ್ರ ನಿಮ್ಮ ಕಾಳಜಿ ಇತ್ತ ಹರಿಸಬೇಕಾದುದು ಅಗತ್ಯ. ಕೂದಲಿನ ಆರೈಕೆಗೆ ಅಡುಗೆ ಮನೆಯ ಉತ್ಪನ್ನಗಳೇ ಸಾಕು

ಕೆಲವರಲ್ಲಿ ಮಾನಸಿಕ ದುಗುಡ, ಮಾನಸಿಕ ಆಘಾತ, ಕೆಲವು ಔಷಧಿಗಳ ಅಡ್ಡಪರಿಣಾಮ, ಚಿಕಿತ್ಸೆಯ ಅಡ್ಡಪರಿಣಾಮ, ಕೆಲವು ರೋಗಗಳು ಸಹಾ ಕೂದಲುದುರುವಿಕೆಗೆ ಕಾರಣವಾಗಿವೆ. ಜೊತೆಗೆ ನೀವು ಇದುವರೆಗೆ ನಡೆಸಿಕೊಂಡು ಬರುತ್ತಿರುವ ಕೆಲವು ಅಭ್ಯಾಸಗಳೂ ಕಾರಣವಾಗಬಹುದು. ನಿಮ್ಮ ಕೈಯಲ್ಲಿ ಇರುವ ಈ ಅಭ್ಯಾಸಗಳನ್ನು ನಿಯಂತ್ರಿಸುವುದರಿಂದ ನಿಮ್ಮ ಕೈಯಾರೆ ಆಗುತ್ತಿದ್ದ ಈ ನಷ್ಟವನ್ನು ನಿಲ್ಲಿಸಿ ಸೊಂಪಾದ ಕೂದಲನ್ನು ಪಡೆಯಬಹುದು. ನಿಮ್ಮ ಈ ಅಭ್ಯಾಸ ಕೂದಲುದುರುವಿಕೆಗೆ ಪೂರಕವಾಗಿತ್ತೇ ಎಂದು ಚಕಿತಗೊಳ್ಳಲು ಕೆಳಗಿನ ಸ್ಲೈಡ್‌ಗಳನ್ನು ನೋಡಿ:

ಕೇಶತೈಲ ಮತ್ತು ಕೇಶ ಉತ್ಪಾದನೆಗಳು

ಕೇಶತೈಲ ಮತ್ತು ಕೇಶ ಉತ್ಪಾದನೆಗಳು

ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲ್ಲಾ ಕೇಶ ಉತ್ಪಾದನೆಗಳು ಎಲ್ಲರಿಗೂ ಸಮಾನವಾಗಿ ಪರಿಣಾಮಕಾರಿಯಾಗುತ್ತದೆ ಎಂದು ಖಡಾಖಂಡಿತವಾಗಿ ಹೇಳುವಂತಿಲ್ಲ. ಏಕೆಂದರೆ ಕೆಲವು ಉತ್ಪಾದನೆಗಳಲ್ಲಿ ನಿಮ್ಮ ಕೂದಲಿಗೆ ಅಲರ್ಜಿಯಾಗುವ ಕೆಲವು ರಾಸಾಯನಿಕಗಳೂ ಇರಬಹುದು. ಕೂದಲುದುರುತ್ತಿದ್ದರೆ ನೀವು ಬಳಸುತ್ತಿರುವ ಕೇಶಶೃಂಗಾರ ಪ್ರಸಾದನಗಳ ವಿವರಗಳನ್ನು ಚರ್ಮವೈದ್ಯರಿಗೆ ತೋರಿಸಿದರೆ ಇದರಲ್ಲಿ ನಿಮಗಾಗದಿರುವ ಉತ್ಪನ್ನ ಯಾವುದು ಎಂದು ಅವರು ಸೂಚಿಸುತ್ತಾರೆ. ಜೊತೆಗೇ ನಿಮಗೆ ಸೂಕ್ತವಾದ ಪ್ರಸಾದನ ಯಾವುದು ಎಂದೂ ಸೂಚಿಸುತ್ತಾರೆ. ಕೂಡಲೇ ನಿಮ್ಮ ಈ ಪ್ರಸಾದನವನ್ನು ಬದಲಿಸಿಕೊಳ್ಳಿ.

ಕೆಲಸದ ಒತ್ತಡ

ಕೆಲಸದ ಒತ್ತಡ

ಮನೆಕೆಲಸವೇ ಆಗಲಿ, ಕಛೇರಿಯ ಕೆಲಸವೇ ಆಗಲಿ, ಮನಸ್ಸು ಒತ್ತಡದಲ್ಲಿರುವಾಗ ದೇಹ ಹಲವು ಆಘಾತಗಳನ್ನು ಎದುರಿಸಬೇಕಾಗುತ್ತದೆ. ಕಾಡುವ ಚಿಂತೆ ಕೂದಲುದುರುವಿಕೆಗೆ ಪ್ರಮುಖ ಕಾರಣವಾಗಿದೆ.

ಕುದಿಯುವಷ್ಟು ನೀರಿನಲ್ಲಿ ತಲೆ ಸ್ನಾನ ಮಾಡುವುದು

ಕುದಿಯುವಷ್ಟು ನೀರಿನಲ್ಲಿ ತಲೆ ಸ್ನಾನ ಮಾಡುವುದು

ಕೆಲವರಿಗೆ ತಲೆಸ್ನಾನ ಮಾಡುವಾಗ ನೀರು ಬಿಸಿಯಿದ್ದಷ್ಟೂ ಒಳ್ಳೆಯದು ಎಂಬ ಅಭಿಪ್ರಾಯವಿದೆ. ವಾಸ್ತವವಾಗಿ ಇದರ ವಿರುದ್ದವೇ ಸತ್ಯ. ಏಕೆಂದರೆ ನೀರು ಬಿಸಿಯಿದ್ದಷ್ಟೂ ತಲೆಯ ಮೇಲಿನ ಚರ್ಮ ಒಣಗಿ, ಎಣ್ಣೆಯನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಚರ್ಮದ ಒಳಗಿನಿಂದ ಸ್ರವಿಸಿದ ನೈಸರ್ಗಿಕ ಎಣ್ಣೆ ಕುದಿನೀರಿನಲ್ಲಿ ಕೊಚ್ಚಿ ಹೋಗುವುದರಿಂದ ಪೋಷಣೆ ಇಲ್ಲವಾಗಿ ಕೂದಲುದುರಲು ಕಾರಣವಾಗುತ್ತದೆ. ಆದ್ದರಿಂದ ತಣ್ಣನೆಯ ಅಥವಾ ಉಗುರುಬೆಚ್ಚನೆಯ ನೀರು ತಲೆಸ್ನಾನಕ್ಕೆ ಉತ್ತಮವಾಗಿದೆ.

ಬಿಸಿಗಾಳಿಯಿಂದ ಕೂದಲನ್ನು ಒಣಗಿಸುವುದು

ಬಿಸಿಗಾಳಿಯಿಂದ ಕೂದಲನ್ನು ಒಣಗಿಸುವುದು

ಬಿಸಿಗಾಳಿಯನ್ನು ಉಪಯೋಗಿಸಿ ತಲೆಗೂದಲನ್ನು ಒಣಗಿಸಿಕೊಳ್ಳುವುದು, ಅದೇ ಸಮಯದಲ್ಲಿ ಸೌಂದರ್ಯಕ್ಕೆ ತಕ್ಕ ವಿನ್ಯಾಸ ನಡೆಸುವುದನ್ನು ಕೆಲವರು ಅನುಸರಿಸುತ್ತಾರೆ. ಆದರೆ ಬಿಸಿಗಾಳಿಯಿಂದ ಕೂದಲಿಗೆ ಅತ್ಯಗತ್ಯವಾಗಿದ್ದ ನೀರಿನ ಪಸೆ ಮತ್ತು ಆರ್ದ್ರತೆ ಒಣಗಿಹೋಗುವುದರಿಂದ ಸೆಳೆತಗೊಳ್ಳುವ ಕೂದಲನ್ನೇ ಸೌಂದರ್ಯದ ಪ್ರತೀಕವನ್ನಾಗಿ ಬಳಸುವುದು ಕೇವಲ ತಾತ್ಕಾಲಿಕವಾಗಿದೆ. ಒಣಗಿದ ಕೂದಲು ನಿಧಾನವಾಗಿ ಕಳಚಿಕೊಳ್ಳುತ್ತಾ ಹೋಗುತ್ತದೆ. ನಿಮಗೆ ತಾತ್ಕಾಲಿಕ ಕೂದಲ ಸೌಂದರ್ಯ ಅಗತ್ಯವೇ ಶಾಶ್ವತವಾಗ ಸೊಂಪಾದ ಕೂದಲು ಅಗತ್ಯವೇ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ.

ಸ್ನಾನದ ಬಳಿಕ ಕೂಡಲೇ ತಲೆಬಾಚುವುದು

ಸ್ನಾನದ ಬಳಿಕ ಕೂಡಲೇ ತಲೆಬಾಚುವುದು

ಕೆಲವರಿಗೆ ಯಾವುದಕ್ಕೂ ಸಮಯವಿಲ್ಲದೇ ಕೂಡಲೇ ತಯಾರಿಯಾಗಬೇಕೆಂದು ಆರೈಕೆಯನ್ನು ಕಡೆಗಣಿಸುತ್ತಾರೆ. ಸ್ನಾನವಾದ ಬಳಿಕ ತಕ್ಷಣ ತಲೆಬಾಚಿಬಿಡುವುದು ಇದರಲ್ಲಿ ಒಂದು. ಸ್ನಾನವಾದ ಬಳಿಕ ತಲೆಗೂದಲು, ವಿಶೇಷವಾಗಿ ಕೂದಲ ಬುಡ ಹಸಿಯಾಗಿಯೇ ಇದ್ದು ಈ ಕ್ಷಣದಲ್ಲಿ ತಲೆಬಾಚಿದರೆ ಸುಲಭವಾಗಿ, ನೋವಿಲ್ಲದೇ ಬುಡದಿಂದ ಕಿತ್ತು ಬರುತ್ತದೆ. ಇದರ ಬದಲಿಗೆ ಸುಮಾರು ಹತ್ತು ಹದಿನೈದು ನಿಮಿಷ ಕೂದಲನ್ನು ಬಿಡಿಸಿ ಒಣಗಿದ ಬಳಿಕವೇ ಬಾಚಿಕೊಳ್ಳುವುದು ಉತ್ತಮ.

English summary

Habits That Cause Hair Loss

There are some simple everyday habits that cause hair loss. Losing a few hair strands every now and then is natural but if you are losing them too often and too much, then maybe some of your habits are to be blamed. Now, let us discuss about several factors which might help you understand where you are doing it wrong.
X
Desktop Bottom Promotion