For Quick Alerts
ALLOW NOTIFICATIONS  
For Daily Alerts

ತಲೆ ತುರಿಕೆ, ಹೊಟ್ಟಿನ ಸಮಸ್ಯೆ ವಿಪರೀತವಾಗಿ ಕಾಡುತ್ತಿದೆಯೇ?

By Super
|

ಸಾಮಾನ್ಯವಾಗಿ ಕೇಳಿದ ಪ್ರಶ್ನೆಗೆ ಉತ್ತರ ದೊರಕದೇ ಇದ್ದಾಗ ತಲೆ ತುರಿಸಿಕೊಳ್ಳುವುದು ಒಂದು ಪ್ರಕ್ರಿಯೆಯಾಗಿದೆ. ಆದರೆ ಕೆಲವೊಮ್ಮೆ ತಲೆಯಲ್ಲಿ ಹೇನು ಮೊದಲಾದ ಕಾರಣಗಳಿಂದ ತಲೆಯನ್ನು ಪದೇ ಪದೇ ತುರಿಸಿಕೊಳ್ಳುತ್ತಿದ್ದರೆ ನಾಲ್ಕು ಜನರ ನಡುವೆ ಇದ್ದಾಗ ತೀವ್ರವಾದ ಮುಜುಗರ ತರಿಸುತ್ತದೆ. ಇದಕ್ಕೆ ಹಲವು ಕಾರಣಗಳಿವೆ.

ತಲೆಯ ಚರ್ಮದಲ್ಲಿ ಆರ್ದ್ರತೆಯ ಕೊರತೆಯಿಂದಾಗಿ ಚರ್ಮ ಒಣಗುವುದು, ವಿಪರೀತವಾಗಿ ಬೆವರುವುದು, ಹೇನು, ತಲೆಹೊಟ್ಟು, ಚರ್ಮದಲ್ಲಿ ಸೋಂಕು, ಅಲರ್ಜಿಕಾರಕ ಸೌಂದರ್ಯ ವರ್ಧಕ ಸಾಧನಗಳು ಅಥವಾ ಕೇಶತೈಲಗಳು ಮೊದಲಾದವು ತುರಿಕೆ ತರಿಸಬಲ್ಲವು. ಇವುಗಳಿಗೆಲ್ಲಾ ಲಿಂಬೆಯ ಲೇಪನ ಸೂಕ್ತ ಉತ್ತರ ನೀಡಬಲ್ಲುದು. ಹೇಗೆ ಎಂಬ ಕುತೂಹಲವೇ? ಮುಂದೆ ಓದಿ.

ತುರಿಕೆಯ ತಲೆಗೆ ಲಿಂಬೆಯ ಲೇಪನ ಅತ್ಯುತ್ತಮ

Get Rid Of Itchy Scalp With Citrus Pack

ವಿಟಮಿನ್ ಸಿ ಹೇರಳವಾಗಿರುವ ಲಿಂಬೆರಸ ಒಂದು ಆಮ್ಲೀಯ ದ್ರವವಾಗಿದೆ. ಈ ಆಮ್ಲೀಯ ಗುಣ ತಲೆತುರಿಕೆಗೆ ಕಾರಣವಾದ ಬಹುತೇಕ ಎಲ್ಲಾ ಅಡ್ಡಿಗಳನ್ನು ನಿವಾರಿಸುವ ಕ್ಷಮತೆ ಹೊಂದಿದೆ. ತಲೆಹೊಟ್ಟನ್ನು ಸುಲಭವಾಗಿ ತೊಲಗಿಸುತ್ತದೆ. ಇದಕ್ಕಾಗಿ ಈಗತಾನೇ ಕತ್ತರಿಸಿದ ನಾಲ್ಕು ಲಿಂಬೆಯ ರಸದಿಂದ ಬೀಜಗಳನ್ನು ಬೇರ್ಪಡಿಸಿ ಕೂದಲ ಬುಡಕ್ಕೆ ಮಸಾಜ್ ಮಾಡಿ. ಲಿಂಬೆ ರಸ ಶೀಘ್ರವಾಗಿ ಒಣಗುವುದರಿಂದ ಬೇಗಬೇಗನೇ ಮಸಾಜ್ ಮಾಡಬೇಕು. ಬಳಿಕ ಸುಮಾರು ಹದಿನೈದು ನಿಮಿಷ ಹಾಗೇ ಒಣಗಲು ಬಿಡಿ. ನಂತರ ಸ್ವಚ್ಛವಾದ ತಣ್ಣನೆಯ ಅಥವಾ ಕೊಂಚವೇ ಬಿಸಿ ಇರುವ ನೀರಿನಿಂದ ತೊಳೆದುಕೊಳ್ಳಿ. (ಸೋಪು ಉಪಯೋಗಿಸಬಾರದು, ಹಾಗೂ ತೊಳೆದುಕೊಂಡ ತಕ್ಷಣವೇ ಜಡೆ ಕಟ್ಟಬಾರದು, ಬಿಡಿಯಾಗಿಯೇ ಇರಲಿ) ತಲೆ ತುರಿಸುತ್ತಿದ್ದರೆ ಇಲ್ಲಿದೆ ಪರಿಹಾರ

ಸೇಬಿನ ಶಿರ್ಕಾ (Apple Cider Vinegar)


ಒಂದು ವೇಳೆ ತುರಿಕೆ ಹೇನು ಮತ್ತು ಸೀರುಗಳಿಂದ ಉಂಟಾಗಿದ್ದು ಕೂದಲ ಬುಡದಲ್ಲಿ ಅತಿ ಸೂಕ್ಷ್ಮ ಸೀರುಗಳು ಪ್ರತಿ ಕೂದಲ ಬುಡಕ್ಕೆ ಅಂಟಿಕೊಂಡಂತಿದ್ದರೆ ಲಿಂಬೆಯ ರಸದ ಕ್ಷಮತೆ ಸಾಕಾಗುವುದಿಲ್ಲ. ಇದಕ್ಕಾಗಿ ಸೇಬಿನ ಶಿರ್ಕಾವನ್ನು ಉಪಯೋಗಿಸಬಹುದು. ಈ ದ್ರವವೂ ಲಿಂಬೆರಸಕ್ಕಿಂತ ಹೆಚ್ಚು ಪ್ರಬಲವಾಗಿದ್ದು ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿ ಈ ದ್ರವವನ್ನು ತಲೆಯ ಮೇಲೆ ಸುರಿದುಕೊಂಡು ತಲೆಯಿಡೀ ತೋಯುವಂತೆ ಮಾಡಿಕೊಳ್ಳಿ (ಕಣ್ಣುಗಳಿಗೆ ಮತ್ತು ಮೂಗಿನೊಳಗೆ ಹೋಗದಂತೆ ಅತ್ಯಂತ ಹೆಚ್ಚಿನ ಜಾಗ್ರತೆ ವಹಿಸಬೇಕು, ಉತ್ತಮ ವಿಧಾನವೆಂದರೆ ಮುಖವಡಿಯಾಗಿ ಕುಳಿತು ಮುಖ, ಮೂಗು ಮತ್ತು ಕಣ್ಣುಗಳನ್ನು ಬಟ್ಟೆಯಿಂದ ಮುಚ್ಚಿಕೊಂಡು ಇನ್ನೊಬ್ಬರು ದ್ರವನ್ನು ತಲೆಗೆ ಹಾಕುವುದು).
ಚೆನ್ನಾಗಿ ತಲೆಗೂದಲು ತೊಯ್ದ ಬಳಿಕ ಸುಮಾರು ಮೂರದಿಂದ ಐದು ನಿಮಿಷ ಹಾಗೇ ಬಿಟ್ಟು ನಂತರ ಸ್ವಚ್ಛ ಟವೆಲ್ ಬಳಸಿ ಕೂದಲನ್ನು ಒರೆಸಿಕೊಳ್ಳಿ ಮತ್ತು ಒಣಗಲು ಬಿಡಿ. ಕೂಡಲು ಜಡೆ ಕಟ್ಟಬೇಡಿ. ಸುಮಾರು ಅರ್ಧ ಅಥವಾ ಒಂದು ಘಂಟೆಯ ಬಳಿಕ (ಸೀರು ಹೆಚ್ಚಿದ್ದರೆ ಹೆಚ್ಚು ಸಮಯ) ಸ್ವಚ್ಛವಾದ ತಣ್ಣೀರಿನಿಂದ ತೊಳೆದುಕೊಳ್ಳಿ. (ಈಗಲೂ ಕಣ್ಣಿಗೆ ನೀರು ಹೋಗದಂತೆ ಎಚ್ಚರಿಕೆ ವಹಿಸಬೇಕು) ಬಳಿಕ ಚಿಕ್ಕ ಹಲ್ಲುಗಳುಳ್ಳ ಬಾಚಣಿಕೆಯಿಂದ ತಲೆ ಬಾಚಿಕೊಂಡರೆ ಸತ್ತ ಸೀರುಗಳು ಬಾಚಣಿಗೆಯ ಮೂಲಕ ಹೊರಬರುತ್ತವೆ.

ಕಿತ್ತಳೆ ಸಿಪ್ಪೆಯ ಲೇಪನ


ಕಿತ್ತಳೆ ಸಿಪ್ಪೆಯಲ್ಲಿಯೂ ವಿಟಮಿನ್ ಸಿ ಹೇರಳವಾಗಿದೆ. ಜೊತೆಗೇ ಸಿಟ್ರಿಕ್ ಆಮ್ಲವೂ ಬೆರೆತಿರುವುದರಿಂದ ತಲೆಹೊಟ್ಟನ್ನು ನಿವಾರಿಸಲು ಹೆಚ್ಚು ಸಮರ್ಪಕವಾಗಿದೆ. ತಲೆಹೊಟ್ಟಿನ ಕಾರಣದಿಂದ ತುರಿಕೆಯುಂಟಾಗಿದ್ದರೆ ಮತ್ತು ತುರಿಸಿದಾದ ಉಗುರಿನಲ್ಲಿ ಬೆಳ್ಳಗಿನ ಹೊಟ್ಟು ಹೊರಬರುತ್ತಿದ್ದರೆ ಈ ಲೇಪನ ಅತ್ಯುತ್ತಮವಾಗಿದೆ. ಇದಕ್ಕಾಗಿ ಸಿಪ್ಪೆಗಳನ್ನು ಚೆನ್ನಾಗಿ ತೊಳೆದು ಮಿಕ್ಸಿಯಲ್ಲಿ ಅರೆದು ಲೇಪನ ತಯಾರಿಸಿ. ಒಂದು ಬ್ರಶ್ ಉಪಯೋಗಿಸಿ ತಲೆಗೂದಲು ಮುಳುಗುವಂತೆ ಹಚ್ಚಿ ಸುಮಾರು ಅರ್ಧಗಂಟೆ ಒಣಗಲು ಬಿಡಿ. (ಈ ಲೇಪನ ಹಚ್ಚುವಾಗ ಕಿಟಕಿ ತೆರೆದಿರಲಿ, ಏಕೆಂದರೆ ಕಿತ್ತಳೆ ಸಿಪ್ಪೆಯ ಲೇಪನದಲ್ಲಿ ಕಣ್ಣಿಗೆ ಉರಿಯುಂಟು ಮಾಡುವ ಸೂಕ್ಷ್ಮಕಣಗಳಿದ್ದು ಗಾಳಿಯಲ್ಲಿ ಹಾರಾಡುತ್ತಾ ಕಣ್ಣಿಗೆ ಉರಿ ತರಿಸಬಹುದು).
ಬಳಿಕ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಿ. ಸಡಿಲವಾಗಿದ್ದ ಹೊಟ್ಟು ಉದುರಿಹೋದರೂ ಕೊಂಚ ಉಳಿದಿರುತ್ತದೆ. ಈ ವಿಧಾನವನ್ನು ಎರಡು ದಿನಗಳಿಗೊಮ್ಮೆ ನಡೆಸುವುದರಿಂದ (ಪ್ರತಿದಿನ ಬೇಡ, ಕೂದಲ ಬುಡ ಸಡಿಲವಾಗುವುದರಿಂದ ಕೂದಲು ಉದುರುವ ಅಪಾಯವಿರುತ್ತದೆ) ಆರೋಗ್ಯಕರ ಮತ್ತು ಸೊಂಪಾದ ಕೂದಲನ್ನು ಪಡೆಯಬಹುದು ಹಾಗೂ ತುರಿಕೆಯನ್ನು ತಡೆಗಟ್ಟಬಹುದು. ಸಣ್ಣ ಪ್ರಾಯದಲ್ಲಿಯೇ ಬಿಳಿ ಕೂದಲು ಬರಲು ಕಾರಣವೇನು?

ಲಿಂಬೆರಸ, ನೆಲ್ಲಿಕಾಯಿಯ ಲೇಪನ


ಸೋಂಕು ಉಂಟಾಗಿ ಚರ್ಮದಲ್ಲಿ ಚಿಕ್ಕ ಚಿಕ್ಕ ಗುಳ್ಳೆಗಳಾಗಿದ್ದು ತುರಿಕೆಯುಂಟುಮಾಡುತ್ತಿದ್ದಲ್ಲಿ ಈ ಲೇಪನ ಅತ್ಯುತ್ತಮವಾಗಿದೆ. ಇದಕ್ಕಾಗಿ ಸಮಪ್ರಮಾಣದಲ್ಲಿ ಲಿಂಬೆ ಮತ್ತು ನೆಲ್ಲಿಕಾಯಿಯ ರಸಗಳನ್ನು ಹಿಂಡಿಕೊಳ್ಳಿ. ಈ ಮಿಶ್ರಣವನ್ನು ತಲೆಯ ಬುಡಕ್ಕೆ ನಯವಾಗಿ ಮಸಾಜ್ ಮಾಡಿ ಸುಮಾರು ಅರ್ಧ ಘಂಟೆ ಹಾಗೇ ಬಿಡಿ. ಬಳಿಕ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆದುಕೊಳ್ಳಿ. ನಿಯಮಿತವಾಗಿ ಈ ವಿಧಾನವನ್ನು ಅನುಸರಿಸುವುದರಿಂದ ತುರಿಕೆ ಕಡಿಮೆಯಾಗುವುದು ಮಾತ್ರವಲ್ಲ, ಕೂದಲಿಗೆ ಹೊಳಪು ನೀಡುವುದು ಮತ್ತು ಸೊಂಪಾಗಿ ಬೆಳೆಯಲೂ ನೆರವಾಗುತ್ತದೆ.
English summary

Get Rid Of Itchy Scalp With Citrus Pack

Are you suffering from an itchy scalp? It is a very common problem and it can make you feel embarrassed in front of others. Using citrus hair pack for itchy scalp can be a solution. Wondering how? Read on, to know more.
X
Desktop Bottom Promotion