For Quick Alerts
ALLOW NOTIFICATIONS  
For Daily Alerts

ಗುಂಗುರು ಕೂದಲಿರುವವರು ತಲೆಬಾಚುವಾಗ ಮಾಡುವ ತಪ್ಪುಗಳು

By Su.Ra
|

ಒಬ್ಬೊಬ್ಬರಿಗೆ ಒಂದೊಂದು ಕೂದಲು ಇಷ್ಟವಾಗುತ್ತೆ. ಆದ್ರೆ ಮನುಷ್ಯನ ಸಹಜ ಗುಣ ಏನು ಅಂದ್ರೆ ತನ್ನಲ್ಲಿರುವುದನ್ನು ಇಷ್ಟ ಪಡದೇ ಅಸಡ್ಡೆ ಮಾಡಿ ಮತ್ತೊಬ್ಬರಲ್ಲಿರುವುದನ್ನು ಆಸೆ ಪಡೋದು. ಅದ್ರಲ್ಲೂ ಮಹಿಳೆಯರು ತಮ್ಮ ಕೂದಲಿನ ವಿಚಾರದಲ್ಲಿ ಅಯ್ಯೋ ಅವಳ ಕೂದಲು ನೋಡು ಎಷ್ಟು ಚೆನ್ನಾಗಿದೆ ಅಂತ ಮತ್ತೊಬ್ಬರ ಕೂದಲನ್ನು ಹೊಗಳ್ತಾರೇ ವಿನಃ ತಮ್ಮ ಕೂದಲಿನ ವಿಚಾರದಲ್ಲಿ ಕಾಳಜಿ ತೆಗೆದುಕೊಳ್ಳೋದಿಲ್ಲ. ಅದ್ರಲ್ಲೂ ಈ

ಗುಂಗುರು ಕೂದಲಿರುವವರಿಗೆ ತಮ್ಮ ಕೂದಲಿನ ಬಗ್ಗೆ ನಿರ್ಲಿಪ್ತ ಮನೋಭಾವವಿರುತ್ತೆ. ನನ್ನ ಕೂದಲು ಚೆನ್ನಾಗಿಲ್ಲ ಅನ್ನೋ ಬೇಸರ ಬೇರೆ. ಹಾಗಾಗಿ ಅವರು ತಮ್ಮ ಕೂದಲಿನ ಬಗ್ಗೆ ತೆಗೆದುಕೊಳ್ಳಬೇಕಾದ ಪ್ರಮುಖ ಕಾಳಜಿಯನ್ನು ತೆಗೆದುಕೊಳ್ಳದೇ ಹಾಳು ಮಾಡಿಕೊಳ್ತಾರೆ.

ಆದ್ರೆ ಸ್ವಲ್ಪ ಕಾಳಜಿ ತೆಗೆದುಕೊಂಡ್ರೆ ಗುಂಗುರು ಕೂದಲಿರುವವರು ಮೋಸ್ಟ್ ಬ್ಯೂಟಿಫುಲ್ ಆಗಿ ಕಾಣಿಸಿಕೊಳ್ಳಲು ಸಾಧ್ಯ. ಕಂಗನಾ ರಣಾವತ್ ರನ್ನೇ ನೋಡಿ ಅವ್ರ ಕೂದಲಿನಿಂದಲೇ ಎಷ್ಟು ಜನರನ್ನ ಸೆಳೆದಿಲ್ಲ ಹೇಳಿ... ಎಸ್, ನೀವು ಕೂಡ ನಿಮ್ಮದು ಗುಂಗುರು ಕೂದಲಾಗಿದ್ರೆ ಈ ಕೆಳಗಿನ ತಪ್ಪುಗಳನ್ನು ಮಾಡದೇ ನಿಮ್ಮ ಕೂದಲಿನ ಸಂರಕ್ಷಣೆಯ ಬಗ್ಗೆ ಸ್ವಲ್ಪ ಮುತುವರ್ಜಿ ವಹಿಸಿ...

ಒದ್ದೆ ಕೂದಲನ್ನೇ ಬಾಚಿಕೊಳ್ಳೋದು

ಒದ್ದೆ ಕೂದಲನ್ನೇ ಬಾಚಿಕೊಳ್ಳೋದು

ಗುಂಗುರು ಕೂದಲಿರುವವರ ಕೂದಲು ತೊಳೆದ ನಂತ್ರ ಒಣಗಲು ಸ್ವಲ್ಪ ಹೆಚ್ಚೇ ಸಮಯ ಬೇಕಾಗುತ್ತೆ. ನಿಮ್ಮ ಕೂದಲು ಒದ್ದೆಯಾಗಿದ್ದಾಗ ತುಂಬಾ ವೀಕ್ ಆಗಿರುತ್ತೆ. ಆಗ ನೀವು ತಲೆಬಾಚಿಕೊಳ್ಳೋದ್ರಿಂದ ಕೂದಲು ಕಟ್ ಆಗಿ ಉದುರುವುದು ಮಾತ್ರವಲ್ಲ, ತನ್ನ ಗಟ್ಟಿತನವನ್ನೂ ಕೂಡ ಕಳೆದುಕೊಳ್ಳುತ್ತೆ. ಅದ್ರಲ್ಲೂ ಗುಂಗುರು ಕೂದಲಿರುವವರ ಕೂದಲಲ್ಲಿ ಸಿಕ್ಕುಗಳು ಹೆಚ್ಚಿರುತ್ತೆ. ಅದ್ರಲ್ಲೂ ಒದ್ದೆ ಕೂದಲಿನಲ್ಲಂತೂ ಕೇಳೋದೆ ಬೇಡ. ಹಾಗಿರುವಾಗ ನೀವು ಒದ್ದೆ ಕೂದಲಿನ ಸಿಕ್ಕನ್ನು ಬಿಡಿಸಲು ಟ್ರೈ ಮಾಡಿದಾಗ ಮತ್ತಷ್ಟು ನೋವಾಗುವ ಸಾಧ್ಯತೆ ಇರುತ್ತೆ.

ಸಿಕ್ಕು ಬಿಡಿಸಲು ಕೂದಲನ್ನು ಎಳೆದು ಬಾಚುವುದು

ಸಿಕ್ಕು ಬಿಡಿಸಲು ಕೂದಲನ್ನು ಎಳೆದು ಬಾಚುವುದು

ಗುಂಗುರು ಕೂದಲಿನ ಸಿಕ್ಕು ಬಿಡಿಸುವುದು ಒಂದು ಹರಸಾಹಸದ ಕೆಲಸ ನಿಜ. ಹಾಗಂತ ಬಾಚಣಿಗೆಯಿಂದ ಅತಿಯಾಗಿ ಪ್ರೆಸ್ ಮಾಡಿ ಎಳೆದು ಎಳೆದು ಸಿಕ್ಕು ಬಿಡಿಸಿಲು ಮುಂದಾದ್ರೆ ಕೂದಲು ತುಂಡಾಗಿ ಬೀಳುತ್ತೆ ವಿನಃ ಯಾವುದೇ ಕಾರಣಕ್ಕೂ ಸಿಕ್ಕು ಬಿಡಿಸಿಕೊಳ್ಳೋದಿಲ್ಲ. ಹೀಗೆ ಮಾಡೋದ್ರಿಂದ ನಿಮ್ಮ ಸ್ಕ್ಯಾಲ್ಪ್ ಭಾಗಕ್ಕೂ ನೋವಾಗುತ್ತೆ ಮತ್ತು ಕೂದಲಿನ ಆರೋಗ್ಯ ಹಾಳಾಗಿ ಕೂದಲು ಉದುರುವ ಸಾಧ್ಯತೆಗಳು ಹೆಚ್ಚಾಗುತ್ತೆ.ಹಾಗಾಗಿ ನಿಮ್ಮ ಕೂದಲಿಗೆ ನೋವು ಮಾಡದೆ ಸಿಕ್ಕು ಬಿಡಿಸಲು ಮುಂದಾಗಿ. ಕೂದಲನ್ನು ಸಣ್ಣಸಣ್ಣ ಪಾರ್ಟೀಷಿಯನ್ ಅಥ್ವಾ ಭಾಗಗಳಾಗಿ ಮಾಡ್ಕೊಂಡು ನಂತರ ಸಿಕ್ಕು ಬಿಡಿಸಲು ಮುಂದಾದ್ರೆ ಸುಲಭದಲ್ಲಿ ಜಡಕು ಅಥ್ವಾ ಕೂದಲಿನ ಗಂಟುಗಳು ಬಿಡಿಸಿಕೊಳ್ಳುತ್ತೆ.

ಅತಿಯಾಗಿ ಕೂದಲನ್ನು ಬಿಸಿ ಮಾಡುವುದು

ಅತಿಯಾಗಿ ಕೂದಲನ್ನು ಬಿಸಿ ಮಾಡುವುದು

ಗುಂಗುರು ಕೂದಲಿರುವವರ ಶೋಕಿಯ ಕೆಲಸ ಇದು ಅಂತಲೇ ಹೇಳ್ಬಹುದು. ನೈಸರ್ಗಿಕವಾಗಿರುವ ಸುಂದರ ಕೂದಲು ಅವ್ರಿಗೆ ಇಷ್ಟವಾಗೋದಿಲ್ಲ. ಬದಲಾಗಿ ಐರನಿಂಗ್ ಮಾಡಿಕೊಳ್ತಾರೆ. ಗುಂಗುರು ಕೂದಲಿನಿಂದಲೇ ಬೆಸ್ಟ್ ಹೇರ್ ಸ್ಟೈಲ್ ಮಾಡಿಕೊಳ್ಳಬಹುದು. ಹಾಗೆ ಮಾಡದೇ ಕೂದಲನ್ನು ಅತಿಯಾಗಿ ಬಿಸಿ ಮಾಡಿಕೊಂಡು ಸ್ಟ್ರೈಟ್ ಹೇರ್ ಮಾಡಿಕೊಳ್ಳೋಕೆ ಮುಂದಾಗ್ತಾರೆ. ಇದು ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ. ಅಪರೂಪಕ್ಕೊಮ್ಮೆ ಸ್ಟ್ರೈಟನಿಂಗ್ ಮಾಡಿಕೊಳ್ಳೋದು ಓಕೆ. ಆದ್ರೆ ಯಾವಾಗಲೂ ಕೂಡ ಸ್ಟ್ರೈಟನಿಂಗ್ ಮಾಡಿಕೊಳ್ತಾ ಇದ್ರೆ ನಿಮ್ಮ ಕೂದಲು ತನ್ನ ಸೌಂದರ್ಯ ಕಳೆದುಕೊಂಡು ಹಾಳಾಗೋದ್ರಲ್ಲಿ ಯಾವುದೇ ಅನುಮಾನ ಬೇಡ

ಸರಿಯಾಗಿ ಕೂದಲಿಗೆ ಎಣ್ಣೆ ಹಚ್ಚಿಕೊಳ್ಳದೇ ಇರುವುದು

ಸರಿಯಾಗಿ ಕೂದಲಿಗೆ ಎಣ್ಣೆ ಹಚ್ಚಿಕೊಳ್ಳದೇ ಇರುವುದು

ಗುಂಗುರು ಕೂದಲಿಗೆ ಮತ್ತು ಸ್ಕಾಲ್ಪ್ ಗೆ ಎಣ್ಣೆ ಹಚ್ಚಿಕೊಳ್ಳೋದು ನಿಮ್ಮ ಕೂದಲಿನ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೇದು. ಅದ್ರಲ್ಲೂ ಪ್ರಮುಖವಾಗಿ ಕೂದಲಿನ ಗಂಟುಗಳಿಗೆ ಎಣ್ಣೆ ಹಚ್ಚಿದಾಗ ಆ ಕೂದಲು ಹೈಡ್ರೈಟ್ ಆಗಿದ್ದು ಸುಂದರವಾಗಿ ಕಾಣಲು ಸಾಧ್ಯವಾಗುತ್ತೆ. ಅಷ್ಟೇ ಅಲ್ಲ ಸ್ಕಾಲ್ಪ್ ಇನ್ಫೆಕ್ಷನ್ ಗಳಿಂದ ದೂರವಿರಬೇಕು ಅಂದ್ರೆ ಎಣ್ಣೆ ಹಚ್ಚಿಕೊಳ್ಳೋದು ತುಂಬಾ ಇಂಪಾರ್ಟೆಂಟ್... ಸರಿಯಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡಿಕೊಳ್ಳೋದ್ರಿಂದ ರಕ್ತಸಂಚಾರವೂ ಅಧಿಕವಾಗಿ ಕೂದಲಿನ ಬೆಳವಣಿಗೆಗೂ ನೆರವಾಗುತ್ತೆ. ಇನ್ನು ಗುಂಗುರು ಕೂದಲಿರುವವರಿಗೆ ಸ್ವಲ್ಪ ಹೆಚ್ಚೇ ಎಣ್ಣೆ ಬೇಕಾಗುತ್ತೆ. ಆದ್ರೆ ಕರ್ಲಿ ಹೇರ್ ಇರುವವರು ಸರಿಯಾಗಿ ಆಯಿಲ್ ಮಸಾಜ್ ಮಾಡಿಕೊಳ್ಳದ ಪರಿಣಾಮ ಕೂದಲು ಗಂಟು ಹಾಕಿಕೊಂಡಂತಾಗಿ ಅಂದ ಕೆಟ್ಟಿರುತ್ತೆ. ಇಂತಹ ತಪ್ಪನ್ನು ನೀವು ಮಾಡದೇ ನಿಮ್ಮ ಕೂದಲಿನ ರಕ್ಷಣೆ ಮಾಡಿಕೊಳ್ಳಿ. ಅಟ್ ಲೀಸ್ಟ್ ವಾರಕ್ಕೆ ಎರಡರಿಂದ ಮೂರು ಬಾರಿಯಾದ್ರೂ ಆಯಿಲ್ ಮಸಾಜ್ ಮಾಡ್ಕೊಳ್ಳಿ.

ಅತಿಯಾಗಿ ಕೂದಲಿನ ಪ್ರೊಡಕ್ಟ್ ಗಳನ್ನು ಬಳಕೆ ಮಾಡೋದು

ಅತಿಯಾಗಿ ಕೂದಲಿನ ಪ್ರೊಡಕ್ಟ್ ಗಳನ್ನು ಬಳಕೆ ಮಾಡೋದು

ಸರಿಯಾದ ಮೈಂಟೇನೆನ್ಸ್ ಇಲ್ಲದೇ ಕೂದಲು ಹಾಳಾಗಿರುವ ಕಾರಣಕ್ಕಾಗಿಯೋ ಅಥ್ವಾ ತಮ್ಮದು ಗುಂಗುರು ಕೂದಲು ಸ್ಟ್ರೈಲ್ ಇಲ್ಲವಲ್ಲ ಅನ್ನೋ ಬೇಸರದಿಂದಲೋ ಅತಿಯಾಗಿ ಹೇರ್ ಪ್ರೊಡಕ್ಟ್ ಗಳನ್ನು ಬಳಸುವ ಖಯಾಲಿ ಕರ್ಲಿ ಹೇರ್ ಇರುವವರಿಗೆ ಇರುತ್ತೆ. ಅವರು ಮಾಡುವ ಈ ತಪ್ಪು ಅವ್ರ ಕೂದಲಿನ ಸೌಂದರ್ಯ ಕೆಡಿಸಿ ಬಿಡುತ್ತೆ. ಅತಿಯಾಗಿ ಕಂಡೀಷನರ್, ಶಾಂಪೂ, ಸ್ಟ್ರೈಟನಿಂಗ್ ಪ್ರೊಡಕ್ಟ್ ಗಳು, ಕೆಮಿಕಲ್ ಗಳ ಬಳಕೆಯಿಂದ ಕೂದಲು ಡ್ಯಾಮೇಜ್ ಆಗುತ್ತೆ. ಅದೂ ಅಲ್ಲದೇ ಇಂತಹ ಪ್ರೊಡಕ್ಟ್ ಗಳನ್ನು ಸರಿಯಾಗಿ ವಾಷ್ ಮಾಡಿಕೊಳ್ಳದೇ ಇದ್ರೆ ಅದು ಕೂದಲಿನಲ್ಲಿಯೇ ಉಳಿದು ಮತ್ತಷ್ಟು ಹಾನಿ ಮಾಡುವ ಸಾಧ್ಯತೆ ಇರುತ್ತೆ.

ಸರಿಯಾಗಿ ಕೂದಲನ್ನು ತೊಳೆಯದೇ ಇರೋದು

ಸರಿಯಾಗಿ ಕೂದಲನ್ನು ತೊಳೆಯದೇ ಇರೋದು

ಗುಂಗುರು ಕೂದಲನ್ನು ತೊಳೆಯುವುದು ಸ್ವಲ್ಪ ಕಷ್ಟದ ಕೆಲಸವೇ,. ಅದೂ ಸ್ವಲ್ಪ ಉದ್ದ ಮತ್ತು ದಪ್ಪವಾಗಿರುವ ಗುಂಗುರು ಕೂದಲಾಗಿದ್ರೆ ಇನ್ನೂ ಕಷ್ಟ. ಕೂದಲಿನ ಎಲ್ಲಾ ಭಾಗಕ್ಕೆ ಶಾಂಪೂ, ಕಂಡೀಷನರ್ ಬಳಸೋದು ಮತ್ತು ಸರಿಯಾಗಿ ಅದನ್ನು ನೀರಿನಿಂದ ತೊಳೆಯುವುದು ತುಂಬಾ ಇಂಪಾರ್ಟೆಂಟ್. ಸರಿಯಾಗಿ ವಾಷ್ ಮಾಡದೇ ಇದ್ರೆ, ಕೂದಲು ವಾಸನೆ ಬರುವ ಮತ್ತು ಸ್ಕಾಲ್ಪ್ ನಲ್ಲಿ ಇನ್ಫೆಕ್ಷನ್ ಆಗುವ ಸಾಧ್ಯತೆಗಳು ಹೆಚ್ಚಾಗಿರುತ್ತೆ. ವಾರಕ್ಕೆ ಅಟ್ ಲೀಸ್ಟ್ ಮೂರು ಬಾರಿಯಾದ್ರೂ ಕೂದಲನ್ನು ತೊಳೆಯಲೇ ಬೇಕು.

ಅತಿಯಾಗಿ ಕೂದಲು ತೊಳೆಯುವುದು ಕೂಡ ತಪ್ಪು

ಅತಿಯಾಗಿ ಕೂದಲು ತೊಳೆಯುವುದು ಕೂಡ ತಪ್ಪು

ಅಪರೂಕಪಕ್ಕೊಮ್ಮೆ ಕೂದಲು ತೊಳೆಯುವುದು ಹೇಗೆ ತಪ್ಪೋ, ಅತಿಯಾಗಿ ಕೂದಲು ತೊಳೆಯುವುದು ಕೂಡ ಅಷ್ಟೇ ದೊಡ್ಡ ತಪ್ಪು. ಪ್ರತಿದಿನ ಗುಂಗುರು ಕೂದಲನ್ನು ತೊಳೆಯುವುದರಿಂದಲೂ ಕೂಡ ಕೂದಲು ಡ್ಯಾಮೇಜ್ ಆಗುತ್ತೆ. ಪ್ರತಿದಿನ ಶಾಂಪೂ ಹಚ್ಚೋದ್ರಿಂದ ನ್ಯಾಚುರಲ್ ಆಗಿರುವ ಎಣ್ಣೆ ಅಂಶ ಹೊರಟು ಹೋಗಿ ಕೂದಲು ಡ್ರೈ ಆಗುವ ಸಾಧ್ಯತೆಗಳಿರುತ್ತೆ. ಅತಿಯಾಗಿ ಕೆಮಿಕಲ್ ಬಳಕೆಯಿಂದ ನಿಮ್ಮ ಕೂದಲಿನ ರಂದ್ರಗಳು ಮುಚ್ಚಿಹೋಗಿ ಕೂದಲು ಬೆಳವಣಿಗೆ ಕುಂಠಿತಗೊಳ್ಳುವ ಸಾಧ್ಯತೆ ಇರುತ್ತೆ.

ಸರಿಯಾಗಿ ಕೂದಲನ್ನು ಬಾಚದೇ ಇರೋದು

ಸರಿಯಾಗಿ ಕೂದಲನ್ನು ಬಾಚದೇ ಇರೋದು

ಗುಂಗುರು ಕೂದಲಿರುವವರು ತಮ್ಮ ಕರ್ಲಿ ಸೆಟ್ ಆಗಿ ಕೂರಬೇಕು ಅನ್ನೋ ಕಾರಣಕ್ಕೆ ಕೆಲವೊಮ್ಮೆ ಸರಿಯಾಗಿ ತಲೆಯನ್ನು ಬಾಚಿಕೊಳ್ಳೋದೆ ಇಲ್ಲ. ಕೆಲವೊಮ್ಮೆ ಕರ್ಲಿ ಹೇರ್ ಬಾಚಿದಾಗ ಅದು ಹರಡಿಕೊಂಡಂತೆ ಕಾಣುತ್ತೆ ನಿಜ. ಆದ್ರೆ ಬಾಚಿಕೊಳ್ಳದೇ ಇದ್ರೆ ಕೂದಲಿನ ಬುಡಕ್ಕೆ ಪೆಟ್ಟು ಬಿದ್ದು, ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತೆ. ಸರಿಯಾಗಿ ತಲೆಯಲ್ಲಿ ಬ್ಲಡ್ ಸರ್ಕ್ಯುಲೇಷನ್ ಆಗ್ಬೇಕು ಅಂದ್ರೆ ನೀವು ಪ್ರತಿದಿನ ಗುಂಗುರು ಕೂದಲಿನ ಸಿಕ್ಕು ಬಿಡಿಸಿ ಸರಿಯಾದ ಕ್ರಮದಲ್ಲಿ ಕೂದಲು ಬಾಚಿಕೊಳ್ಳೋದು ಕೂಡ ಇಂಪಾರ್ಟೆಂಟ್..

ಕೂದಲನ್ನು ಆಗಾಗ ಮುಟ್ಟುತ್ತಲೇ ಇರುವುದು

ಕೂದಲನ್ನು ಆಗಾಗ ಮುಟ್ಟುತ್ತಲೇ ಇರುವುದು

ಇದು ಗುಂಗುರು ಕೂದಲಿರುವವರು ಮಾತ್ರ ಮಾಡುವ ತಪ್ಪಲ್ಲ. ಸ್ಟ್ರೈಟ್ ಹೇರ್ ಇರುವವರೂ ಕೂಡ ಈ ತಪ್ಪನ್ನ ಮಾಡ್ತಾರೆ. ತಮ್ಮ ಕೂದಲು ಸೆಟ್ ಆಗಿ ಕೂತಿದ್ಯೋ ಇಲ್ವೋ, ಹೀಗೆ ಕೂತಿದ್ರೆನೇ ಚೆಂದ, ಹಾಗೆ ಇದ್ರೆನೇ ಚೆಂದ ಅನ್ನೋ ಕಾರಣಕ್ಕೆ ಆಗಾಗ ಕೂದಲನ್ನು ಟಚ್ ಮಾಡ್ತಲೇ ಇರ್ತಾರೆ. ನಿಮ್ಗೆ ಕೂದಲು ಮುಟ್ಟಿಕೊಳ್ತಾ ಇರುವ ಅಭ್ಯಾಸ ಖುಷಿ ನೀಡ್ಬಹುದು. ಆದ್ರೆ ಅದು ನಿಮ್ಮ ಕೂದಲಿಗೆ ಇಷ್ಟವಾಗ್ತಾ ಇರೋದಿಲ್ಲ ಅನ್ನೋದು ನೆನಪಿರಲಿ, ಅತಿಯಾಗಿ ಕೂದಲನ್ನು ಮುಟ್ಟುತ್ತಲೇ ಇರೋದ್ರಿಂದ ಕೂದಲಿನ ಆರೋಗ್ಯ ಹಾಳಾಗುತ್ತೆ ಮತ್ತು ಕೂದಲು ತುಂಡಾಗಿ ಉದುರುವ ಸಾಧ್ಯತೆ ಹೆಚ್ಚಿರುತ್ತೆ.

ಕಂಡೀಷನರ್ ಬಳಕೆ ಮಾಡದೇ ಇರೋದು

ಕಂಡೀಷನರ್ ಬಳಕೆ ಮಾಡದೇ ಇರೋದು

ಗುಂಗುರು ಕೂದಲು ಸರಿಯಾಗಿ ಕಂಡೀಷನರ್ ಬಳಕೆ ಮಾಡಲು ಇಚ್ಛಿಸುತ್ತೆ. ನೀವು ನಿಮ್ಮ ಕೂದಲಿಗೆ ಸರಿಯಾಗಿ ಕಂಡೀಷನರ್ ನೀಡದೇ ಇದ್ರೆ ಖಂಡಿತ ನಿಮ್ಮ ಕೂದಲು ಉದುರುವ ಸಾಧ್ಯತೆ ಹೆಚ್ಚಿರುತ್ತೆ ಮತ್ತು ಕೂದಲು ರಫ್ ಆಗುತ್ತೆ.ಹಾಗಾಗಿ ಕೆಲವು ನೈಸರ್ಗಕವಾಗ ಕೂದಲಿನ ಕಂಡೀಷನರ್ ಗಳನ್ನು ಬಳಕೆ ಮಾಡಿ..

ಪರ್ಮನೆಂಟ್ ಸ್ಟ್ರೈಟನಿಂಗ್ ಮಾಡಿಸಿಕೊಳ್ಳೋದು

ಪರ್ಮನೆಂಟ್ ಸ್ಟ್ರೈಟನಿಂಗ್ ಮಾಡಿಸಿಕೊಳ್ಳೋದು

ಗುಂಗುರು ಕೂದಲು ನಿಮ್ಮ ಸೌಂದರ್ಯದ ಪ್ರತೀಕ ಅಂತ ಭಾವಿಸದೇ ಪರ್ಮನೆಂಟ್ ಸ್ಟ್ರೈಟನಿಂಗ್ ಇಲ್ಲವೇ ಸ್ಮೂತಿಂಗ್ ಮಾಡಿಸವು ಮುಂದಾಗುವ ಮಹಿಳೆಯರಿಗೇನೋ ಕಡಿಮೆ ಇಲ್ಲ ಬಿಡಿ. ಹೀಗೆ ಮಾಡೋದ್ರಿಂದ ನಿಮ್ಮ ಕೂದಲಿನ ನ್ಯಾಚುರಲ್ ಸೌಂದರ್ಯ ಹಾಳಾಗುತ್ತೆ ಮತ್ತು ನಿಮ್ಮ ಕೂದಲು ಕೆಮಿಕಲ್ ಮಯವಾಗಿ ಪರಿವರ್ತಿತವಾಗುತ್ತೆ. ಅಷ್ಟೇ ಅಲ್ಲ ಸ್ಪ್ಲಿಟ್ ಎಂಡ್ ಸಮಸ್ಯೆಯಾಗಿ ಕೂದಲ ಬೆಳವಣಿಗೆ ಕೂಡ ಕುಂಟಿತವಾಗಬಹುದು. ಜೊತೆಗೆ ಕೂದಲುದುರುವ ಸಮಸ್ಯೆ ಅಧಿಕವಾಗ್ಬಹುದು. ಅಷ್ಟೇ ಅಲ್ಲ ಪರ್ಮನೆಂಟ್ ಸ್ಟ್ರೈಟನಿಂಗ್ ಅಂದ್ರೆ ಅದೂ ಕೂಡ ಕೇವಲ ಆರೇಳು ತಿಂಗಳಿಗೆ ಮಾತ್ರ ಸೀಮಿತ ಅನ್ನೋದು ನೆನಪಿರಲಿ..

English summary

Common Mistakes Women Make with Curly Hair

When you learn to stop making these common mistakes, gorgeous shiny curly hair can be yours on a daily basis. Are you making these curly hair mistakes...? here are few steps to follow, when you a have a curley hair...
Story first published: Thursday, December 17, 2015, 20:06 [IST]
X
Desktop Bottom Promotion