For Quick Alerts
ALLOW NOTIFICATIONS  
For Daily Alerts

ಸೊಂಪಾದ ಕೂದಲಿಗಾಗಿ ತಯಾರಿಸಿ- ನೈಸರ್ಗಿಕ ಹೇರ್ ಮಾಸ್ಕ್

|

ಆರೈಕೆಯ ವಿಷಯ ಬಂದಾಗ ಹೆಚ್ಚಿನ ಸಮಯ ಕಬಳಿಸುವ ಮತ್ತು ಹೆಚ್ಚಿನ ಆರೈಕೆ ಬೇಡುವ ಅಂಗಗಳೆಂದರೆ ಮುಖ ಮತ್ತು ಕೇಶ. ಇಂದಿನ ವ್ಯಸ್ತ ಜೀವನದಲ್ಲಿ ಈ ಆರೈಕೆಗೆ ಸಮಯ ನೀಡಲು ಎಲ್ಲರಿಗೂ ಸಾಧ್ಯವಿಲ್ಲ. ಇವರಿಗೆಂದೇ ನಗರದ ತುಂಬಾ ಸಿಂಗಾರ ಮಳಿಗೆಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಕೇಶದ ಆರೈಕೆಗಾಗಿ ಇಲ್ಲಿ ವಿವಿಧ ರೂಪದ ಸೇವೆಗಳು ಲಭ್ಯವಿವೆ.

ಗುಂಗುರು ಕೂದಲನ್ನು ನೇರಗೊಳಿಸುವ, ನೇರಕೂದಲನ್ನು ಗುಂಗುರುಗೊಳಿಸುವ, ಕೇಶವನ್ನು ಒಂದು ವಿಭಿನ್ನ ವಿನ್ಯಾಸದಲ್ಲಿ ಕತ್ತರಿಸುವ, ವಿವಿಧ ರೀತಿಯ ಕೇಶವಿನ್ಯಾಸ ರಚಿಸುವ ಈ ಮಳಿಗೆಗಳು ಕೂದಲ ಆರೈಕೆಗೂ ಹಲವು ರೀತಿಯ ಸೇವೆಗಳನ್ನು ನೀಡುತ್ತವೆ.

ಆದರೆ ಈ ಆರೈಕೆಗಾಗಿ ಬಳಸಲಾಗುವ ರಾಸಾಯನಿಕಗಳು ಮೇಲ್ನೋಟಕ್ಕೆ ಸುಂದರ, ಸುರಕ್ಷಿತವೆಂದು ಕಂಡುಬಂದರೂ ಸತತ ಬಳಕೆ ಹಾನಿ ಎಸಗಬಹುದು. ಜೊತೆಗೇ ವಾಯುಮಾಲಿನ್ಯ, ನೀರಿನಲ್ಲಿ ಬೆರೆತಿರುವ ರಾಸಾಯನಿಕಗಳು, ಸೇವಿಸುವ ಸಿದ್ಧ ಆಹಾರಗಳಲ್ಲಿರುವ ಅನಗತ್ಯ ಪೋಷಕಾಂಶಗಳಿಂದ ಶರೀರದಲ್ಲಾಗುವ ಏರುಪೇರು ಮೊದಲಾದವು ನಿಮ್ಮ ಕೇಶವನ್ನು ಕಳೆಗುಂದಿಸಿ, ಎಣ್ಣೆಜಿಡ್ಡು ಮತ್ತು ಸಿಕ್ಕುಸಿಕ್ಕಾಗುವಂತೆ ಮಾಡುತ್ತವೆ.

ಇದರಿಂದ ಹೊರಬರಲು ಮತ್ತಷ್ಟು ಹೆಚ್ಚಿನ ಮತ್ತು ಪ್ರಬಲವಾದ ರಾಸಾಯನಿಕಗಳ ಮೊರೆ ಹೋದರೆ ಇದು ಇನ್ನಷ್ಟು ಹದಗೆಡುತ್ತಾ ಹೋಗುತ್ತದೆ. ಪರಿಣಾಮವಾಗಿ ನಿಮ್ಮ ಸೌಂದರ್ಯ ಮತ್ತು ನೋಟವೇ ಬದಲಾಗುತ್ತಾ ಹೋಗುತ್ತದೆ. ಒಣಗಿದ ಮತ್ತು ಮಂಕಾದ ಕೂದಲಿಗೆ 9 ಮಾಸ್ಕ್‪‌ಗಳು

ಇದಕ್ಕೆ ಪರ್ಯಾಯವಾಗಿ ಇಂದು ಹಲವು ಮನೆಮದ್ದುಗಳು ಲಭ್ಯವಿವೆ. ಇದರ ಬಗ್ಗೆ ಅರಿವು ಇಲ್ಲದಿರುವುದು ಮತ್ತು ಹಿತ್ತಲ ಗಿಡ ಮದ್ದಲ್ಲ ಎಂಬ ನಮ್ಮ ಭಾವನೆಯೇ ಇವುಗಳನ್ನು ಬಳಸಲು ಅಡ್ಡಿಯಾಗಿವೆ. ಈ ಬಗ್ಗೆ ಧನಾತ್ಮಕವಾಗಿ ಚಿಂತಿಸಿ ವರ್ಷಾಂತರಗಳಿಂದ ಪೋಷಣೆ ನೀಡುತ್ತಾ ಬಂದಿರುವ ಈ ವಿಧಾನಗಳನ್ನು ಯತ್ನಿಸಿ. ಥಟ್ಟನೇ ಅಲ್ಲದಿದ್ದರೂ ನಿಧಾನವಾಗಿ ನಿಮ್ಮ ಕೂದಲಿಗೆ ಉತ್ತಮ ಆರೈಕೆಯ ಪರಿಣಾಮಗಳು ಕಂಡುಬರುತ್ತವೆ...

ತೆಂಗಿನಕಾಯಿಹಾಲು ಮತ್ತು ಜೇನಿನ ಲೇಪನ

ತೆಂಗಿನಕಾಯಿಹಾಲು ಮತ್ತು ಜೇನಿನ ಲೇಪನ

ಒಂದು ದೊಡ್ಡಚಮಚ ಜೇನುತುಪ್ಪ, ಅರ್ಧ ಕಪ್ ಈಗತಾನೇ ಹಿಂಡಿತೆಗೆದ ಕಾಯಿಹಾಲನ್ನು ಚೆನ್ನಾಗಿ ಮಿಶ್ರಣ ಮಾಡಿ. ತಣ್ಣೀರಿನಿಂದ ತೊಳೆದ ಬಳಿಕ ನವಿರಾಗಿ ಒರೆಸಿಕೊಂಡು ಇನ್ನೂ ಸ್ವಲ್ಪ ಹಸಿಯಿರುವಂತಿದ್ದಾಗಲೇ ಜೇನು ಮತ್ತು ಕಾಯಿಹಾಲಿನ ಮಿಶ್ರಣವನ್ನು ಕೂದಲ ಬುಡಕ್ಕೆ ತಗಲುವಂತೆ ನಯವಾಗಿ ಮಸಾಜ್ ಮಾಡಿ ಸುಮಾರು ಇಪ್ಪತ್ತು ನಿಮಿಷ ಬಿಡಿ.

ತೆಂಗಿನಕಾಯಿಹಾಲು ಮತ್ತು ಜೇನಿನ ಲೇಪನ

ತೆಂಗಿನಕಾಯಿಹಾಲು ಮತ್ತು ಜೇನಿನ ಲೇಪನ

ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ಉಪಯೋಗಿಸಬೇಡಿ. ಇದು ಕೂದಲಿನ ಸುಕ್ಕು ಬಿಡಿಸಲು ಸುಲಭವಾಗಿ ಕೂದಲಿಗೆ ಕಾಂತಿಯನ್ನು ನೀಡುತ್ತದೆ. ಈ ವಿಧಾನವನ್ನು ತಿಂಗಳಿಗೆ ಒಮ್ಮೆ ಮಾತ್ರ ಉಪಯೋಗಿಸಿ.

ಬಾಳೆಹಣ್ಣು, ಮೊಟ್ಟೆ ಮತ್ತು ಆಲಿವ್ ಎಣ್ಣೆಯ ಮಿಶ್ರಣ

ಬಾಳೆಹಣ್ಣು, ಮೊಟ್ಟೆ ಮತ್ತು ಆಲಿವ್ ಎಣ್ಣೆಯ ಮಿಶ್ರಣ

ಒಂದು ಚೆನ್ನಾಗಿ ಕಳಿತ ಬಾಳೆಹಣ್ಣು, ಮೊಟ್ಟೆಯ ಬಿಳಿಭಾಗವನ್ನು ಸಮಪ್ರಮಾಣದಲ್ಲಿ ಬೆರೆಸಿ ಮಿಶ್ರಣ ಮಾಡಿ. ಇದಕ್ಕೆ ಎರಡು ದೊಡ್ಡ ಚಮಚ ತಣ್ಣನೆಯ ವಿಧಾನದಲ್ಲಿ ಹಿಂಡಿರುವ (cold processed) ಆಲಿವ್ ಎಣ್ಣೆಯನ್ನು ಸೇರಿಸಿ ಮಿಶ್ರಣಮಾಡಿ.

ಬಾಳೆಹಣ್ಣು, ಮೊಟ್ಟೆ ಮತ್ತು ಆಲಿವ್ ಎಣ್ಣೆಯ ಮಿಶ್ರಣ

ಬಾಳೆಹಣ್ಣು, ಮೊಟ್ಟೆ ಮತ್ತು ಆಲಿವ್ ಎಣ್ಣೆಯ ಮಿಶ್ರಣ

ಈಗತಾನೇ ತಣ್ಣೀರಿನಿಂದ ತೊಳೆದು ನವಿರಾಗಿ ಒಣಗಿಸಿದ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ. ಈ ವಿಧಾನವನ್ನು ತಿಂಗಳಿಗೊಂದು ಬಾರಿ ಮಾತ್ರ ಪ್ರಯೋಗಿಸಿ. ಇದರಿಂದ ಕೂದಲಿಗೆ ಉತ್ತಮ ಪೋಷಣೆ ದೊರೆತು ಸೊಂಪಾಗಿ ಬೆಳೆಯುತ್ತದೆ ಹಾಗೂ ಕಾಂತಿಯೂ ಹೆಚ್ಚುತ್ತದೆ.

ಬೆಣ್ಣೆಹಣ್ಣಿನ ಮಿಶ್ರಣ

ಬೆಣ್ಣೆಹಣ್ಣಿನ ಮಿಶ್ರಣ

ಚೆನ್ನಾಗಿ ಕಳಿತ ಬೆಣ್ಣೆಹಣ್ಣಿನ ತಿರುಳಿಗೆ ಕೊಂಚವೇ ನೀರು ಬೆರೆಸಿ ಲೇಪನವನ್ನು ತಯಾರಿಸಿ. ಈಗತಾನೇ ತಣ್ಣೀರಿನಿಂದ ತೊಳೆದು ನವಿರಾಗಿ ಒಣಗಿಸಿದ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ.

ಬೆಣ್ಣೆಹಣ್ಣಿನ ಮಿಶ್ರಣ

ಬೆಣ್ಣೆಹಣ್ಣಿನ ಮಿಶ್ರಣ

ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ. ಈ ವಿಧಾನ ಕಳೆಗುಂದಿದ್ದ, ತುದಿಸೀಳಿದ ಕೂದಲಿಗೆ ಮತ್ತು ಮಧ್ಯದಲ್ಲಿ ತುಂಡುತುಂಡಾಗಿ ಹೋಗಿರುವ ಕೂದಲಿಗೆ ಉತ್ತಮವಾಗಿದೆ. ಈ ಮಿಶ್ರಣವನ್ನು ತಿಂಗಳಿಗೆ ಎರಡು ಬಾರಿ ಉಪಯೋಗಿಸಿ. ಇದರಿಂದ ಕೂದಲು ರೇಶ್ಮೆಯಂತೆ ನುಣುಪಾಗಿ ಮತ್ತು ನೇರ ಮತ್ತು ಉದ್ದವಾಗುತ್ತದೆ.

ಮೊಟ್ಟೆ, ಲಿಂಬೆ ಮತ್ತು ಮೊಸರಿನ ಮಿಶ್ರಣ

ಮೊಟ್ಟೆ, ಲಿಂಬೆ ಮತ್ತು ಮೊಸರಿನ ಮಿಶ್ರಣ

ಸಮಪ್ರಮಾಣದಲ್ಲಿ ಮೊಸರು ಮತ್ತು ಮೊಟ್ಟೆಯ ಬಿಳಿಭಾಗವನ್ನು ಮಿಶ್ರಣ ಮಾಡಿ ಇದಕ್ಕೆ ಒಂದು ಚಿಕ್ಕಚಮಚ ಲಿಂಬೆರಸವನ್ನು ಸೇರಿಸಿ ಮಿಶ್ರಣ ಸಿದ್ಧಪಡಿಸಿ. ಈಗತಾನೇ ತಣ್ಣೀರಿನಿಂದ ತೊಳೆದು ನವಿರಾಗಿ ಒಣಗಿಸಿದ ಕೂದಲಿಗೆ ಈ ಮಿಶ್ರಣವನ್ನು ಹಚ್ಚಿ ಸುಮಾರು ಇಪ್ಪತ್ತು ನಿಮಿಷ ಒಣಗಲು ಬಿಡಿ. ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಉಪಯೋಗಿಸಬೇಡಿ. ಈ ವಿಧಾನ ಕಳೆಗುಂದಿದ್ದ ಕೂದಲಿಗೆ, ಕೂದಲ ಬುಡದಲ್ಲಿ ಹೊಟ್ಟು ಉಂಟಾಗಿದ್ದರೆ, ತುರಿಕೆ ಮತ್ತು ಸೀರುಗಳ ತೊಂದರೆಯಿದ್ದವರಿಗೆ ಅತ್ಯುತ್ತಮವಾಗಿದೆ.

ಮೊಟ್ಟೆ, ಲಿಂಬೆ ಮತ್ತು ಮೊಸರಿನ ಮಿಶ್ರಣ

ಮೊಟ್ಟೆ, ಲಿಂಬೆ ಮತ್ತು ಮೊಸರಿನ ಮಿಶ್ರಣ

ಮೊಸರಿನ ಆರ್ದ್ರತೆ, ಮೊಟ್ಟೆಯ ಪ್ರೋಟೀನ್ ಮತ್ತು ಲಿಂಬೆಯಲ್ಲಿರುವ ವಿಟಮಿನ್ ಸಿ ಕೂದಲಿಗೆ ಪೋಷಣೆ ನೀಡಿದರೆ ಲಿಂಬೆಯ ಸಿಟ್ರಿಕ್ ಆಮ್ಲ ಹೊಟ್ಟಿಗೆ ಕಾರಣವಾದ ಕೀಟಾಣುಗಳನ್ನು ನಿವಾರಿಸಿ ಎಲ್ಲಾ ತೊಂದರೆಗಳಿಂದ ಕೂದಲನ್ನು ಮುಕ್ತಗೊಳಿಸುತ್ತದೆ. ಉತ್ತಮ ಪರಿಣಾಮಕ್ಕಾಗಿ ಪ್ರತಿ ಎರಡು ವಾರಗಳಿಗೊಮ್ಮೆ ಉಪಯೋಗಿಸಿ.

English summary

Best Home-Made Hair Masks

Due to lifestyle changes, maintaining hair has become a tough task. The regular usage of harsh chemicals, various hair treatments, hair straightening, pollution and sun damage results in dull, oily, frizzy and unmanageable hair. Maintaining your tresses holds paramount importance because it makes a great difference to your looks.
X
Desktop Bottom Promotion