For Quick Alerts
ALLOW NOTIFICATIONS  
For Daily Alerts

ಎಲ್ಲಾ ಬಗೆಯ ಕೂದಲಿನ ಸಮಸ್ಯೆಗೆ ಒಂದೇ ರಾಮಬಾಣ- ಹರಳೆಣ್ಣೆ

|

ಉದ್ದವಾದ, ಬೆನ್ನ ಹಿಂದೆ ಬಳುಕುವ ಮತ್ತು ರೇಷ್ಮೆಯಂತಹ ಕೂದಲು ಪ್ರತಿಯೊಬ್ಬ ಹೆಣ್ಣಿನ ಒಂದು ಕನಸಾಗಿರುತ್ತದೆ. ಕೊಂಡೆ ಹಾಕುತ್ತೀರೋ ಅಥವಾ ಸುಮ್ಮನೆ ಕೂದಲು ಹಿಂದೆ ಬಿಡುತ್ತೀರೋ, ಅದು ನಿಮ್ಮ ಇಷ್ಟ. ಆದರೆ ನೀವೇನೆ ಮಾಡಿದರು ಅದನ್ನು ನಿಮ್ಮ ಕೂದಲು ತಡೆಯುವ ತಾಕತ್ತಿರಬೇಕು ಎಂಬುದನ್ನು ಮರೆಯಬೇಡಿ. ನಿಮಗೆ ಒಪ್ಪಿಗೆಯಾದಲ್ಲಿ ಕೂದಲನ್ನು ಕತ್ತರಿಸಬಹುದು, ನಿಮಗೆ ಒಪ್ಪುವಂತಹ ಶೈಲಿಯನ್ನು ಬಳಸಬಹುದು.

ಆದರೆ ಇದೆಲ್ಲದ್ದಕ್ಕು ನಿಮ್ಮ ಕೂದಲು ಆರೋಗ್ಯವಂತವಾಗಿರಬೇಕು ಎಂಬುದನ್ನು ಮರೆಯಬೇಡಿ. ಕೂದಲಿನ ಯಾವ ಸಮಸ್ಯೆಯು ನಿಮ್ಮನ್ನು ವಿಪರೀತವಾಗಿ ಭಾದಿಸುತ್ತಿದೆ? ತಲೆ ಹೊಟ್ಟು, ಕೂದಲು ಉದುರುವಿಕೆ, ಬಕ್ಕ ತಲೆ, ತುದಿ ಮೊಂಡಾಗುವಿಕೆ, ಕೂದಲು ಕಡಿಮೆ ಬೆಳೆಯುತ್ತಿರುವುದು ಇತ್ಯಾದಿಯಂತಹವು. ಇಂತಹ ಸಮಸ್ಯೆಗಳನ್ನು ನೀವೇಕೆ ಎದುರಿಸುತ್ತಿರುವಿರಿ? ಇದಕ್ಕೆ ನಿಮ್ಮ ಬಿಡುವಿಲ್ಲದ ಜೀವನ ಶೈಲಿಯು ಸಹ ಒಂದು ಕಾರಣವಾಗಿರುತ್ತದೆ. ಹರಳೆಣ್ಣೆಯಲ್ಲಿದೆ ಹಲವು ಪ್ರಯೋಜನ

ನಿಮ್ಮ ಕೂದಲಿನ ಸಮಸ್ಯೆಯು ಕೇವಲ ಒಂದು ಉತ್ಪನ್ನವನ್ನು ಬಳಸುವುದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲದೆ ಪರಿಹಾರವಾದರೆ ಹೇಗನಿಸುತ್ತದೆ? ಹೌದು, ಹರಳೆಣ್ಣೆಯು ಅಂತಹ ಒಂದು ಉತ್ಪನ್ನವಾಗಿದೆ. ಹಲವಾರು ದಶಕಗಳ ಕಾಲ ಹರಳೆಣ್ಣೆಯನ್ನು ವಿಶ್ವದೆಲ್ಲೆಡೆ ಬಳಸಲಾಗುತ್ತಿತ್ತು. ಇದು ಕೂದಲಿನ ಸಮಸ್ಯೆಗಳನ್ನು ಪರಿಹರಿಸಲು ಹಲವು ರೀತಿಯ ಪ್ರಯೋಜನಗಳನ್ನು ಹೊಂದಿದೆ.

ಕೂದಲಿನ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ

ಕೂದಲಿನ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ

ಹರಳೆಣ್ಣೆಯು ಕೂದಲಿನ ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ. ಹರಳೆಣ್ಣೆಯನ್ನು ಸಮ ಪ್ರಮಾಣದಲ್ಲಿ ತೆಂಗಿನ ಎಣ್ಣೆ ಮತ್ತು ಆಲೀವ್ ಎಣ್ಣೆಯೊಂದಿಗೆ ಬೆರೆಸಿ. ಕೂದಲುಗಳನ್ನು ಭಾಗಗಳಾಗಿ ವಿಂಗಡಿಸಿಕೊಂಡು ಸಂಪೂರ್ಣವಾಗಿ ಈ ಮಿಶ್ರಣವನ್ನು ಲೇಪಿಸಿ. 3-8 ಗಂಟೆಗಳ ಕಾಲ ಬಿಡಿ. ಈ ವಿಧಾನವನ್ನು ವಾರಕ್ಕೆ ಮೂರು ಸಲ ಮಾಡಿ. ಕೂದಲು ಬೆಳೆಯುತ್ತದೆ.

ಹೊಳೆಯುವ ಕೂದಲಿಗೆ

ಹೊಳೆಯುವ ಕೂದಲಿಗೆ

ಹರಳೆಣ್ಣೆಯು ನಿಮ್ಮ ಕೂದಲಿನ ಮೇಲೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಇದು ನಿಮ್ಮ ಕೂದಲನ್ನು ಮೃದು ಮತ್ತು ಹೊಳಪಿನಿಂದ ಕಂಗೊಳಿಸುವಂತೆ ಮಾಡುತ್ತದೆ. ಈ ಎಣ್ಣೆಯನ್ನು ಆಯಿಲ್ ಥೆರಪಿಯಾಗಿ ಅಥವಾ ಕಂಡೀಶನರ್ ಆಗಿ ವಾರಕ್ಕೊಮೆ ಬಳಸಿ.

ಕೂದಲು ಉದುರುವುದನ್ನು ತಡೆಯುತ್ತದೆ

ಕೂದಲು ಉದುರುವುದನ್ನು ತಡೆಯುತ್ತದೆ

ಹರಳೆಣ್ಣೆಯಿಂದ ಕೂದಲು ಉದುರುವುದನ್ನು ಸುಲಭವಾಗಿ ತಡೆಯಬಹುದು. ಕೂದಲು ಉದುರುವುದನ್ನು ತಡೆಯಲು ಸ್ನಾನಕ್ಕೆ 30 ನಿಮಿಷ ಮೊದಲು ಹರಳೆಣ್ಣೆಯಿಂದ ನಿಮ್ಮ ಕೂದಲನ್ನು ಮೃದುವಾಗಿ ಮಸಾಜ್ ಮಾಡಿ.

ಒಡೆದ ತುದಿಗಳಿಗೆ ಚಿಕಿತ್ಸೆ ನೀಡುತ್ತದೆ

ಒಡೆದ ತುದಿಗಳಿಗೆ ಚಿಕಿತ್ಸೆ ನೀಡುತ್ತದೆ

ಹರಳೆಣ್ಣೆಯಲ್ಲಿ ವಿಟಮಿನಿ ಇ, ಒಮೆಗಾ-6 ಕೊಬ್ಬಿನ ಆಮ್ಲಗಳು ಮತ್ತು ಅತ್ಯಗತ್ಯವಾಗಿ ಬೇಕಾಗುವ ಅಮೈನೊ ಆಮ್ಲಗಳ ಪ್ರಮಾಣವು ಅಧಿಕವಾಗಿರುತ್ತದೆ. ಹಾಗಾಗಿ ಇದು ಕೂದಲು ಕಳೆದುಕೊಂಡಿರುವ ಆರೋಗ್ಯವನ್ನು ಪುನಃ ಒದಗಿಸುತ್ತದೆ. ಹರಳೆಣ್ಣೆಯನ್ನು ಸ್ವಲ್ಪ ಪ್ರಮಾಣದ ಆಲೀವ್ ಮತ್ತು ಜೊಜೊಬಾ ಎಣ್ಣೆಗಳ ಜೊತೆಗೆ ಬೆರೆಸಿ. ಸ್ನಾನಕ್ಕೆ ಮೊದಲು ನಿಮ್ಮ ಕೂದಲಿಗೆ ಮೃದುವಾಗಿ ಲೇಪಿಸಿ.

ತಲೆಹೊಟ್ಟಿನಿಂದ ರಕ್ಷಣೆಯೊದಗಿಸುತ್ತದೆ

ತಲೆಹೊಟ್ಟಿನಿಂದ ರಕ್ಷಣೆಯೊದಗಿಸುತ್ತದೆ

ಹರಳೆಣ್ಣೆಯಲ್ಲಿ ಸಮೃದ್ಧವಾದ ಆಂಟಿ-ವೈರಲ್ ಮತ್ತು ಆಂಟಿ-ಫಂಗಲ್ ಅಂಶಗಳು ಇರುತ್ತವೆ. ಹೀಗಾಗಿ ಇವು ನಿಮ್ಮ ತಲೆ ಹೊಟ್ಟಿನ ಮೇಲೆ ಸಮರ್ಪಕವಾಗಿ ಹೋರಾಡುತ್ತವೆ. ಹರಳೆಣ್ಣೆಯನ್ನು ಆಲೀವ್ ಎಣ್ಣೆ ಮತ್ತು ನಿಂಬೆರಸದ ಜೊತೆಗೆ ಮಿಶ್ರಣ ಮಾಡಿಕೊಳ್ಳಿ. ಸ್ನಾನಕ್ಕೆ ಅರ್ಧ ಗಂಟೆ ಮೊದಲು ಈ ಮಿಶ್ರಣವನ್ನು ಕೂದಲಿಗೆ ಹಚ್ಚಿಕೊಂಡು ನಂತರ ಸ್ನಾನ ಮಾಡಿ.

English summary

Benefits Of Castor Oil On Your Hair

How will you feel if all your hair problems can be solved just by one product and without any side effects? Yes, castor oil is that product. For many decades, castor oil is being used throughout many countries of the world. It has certain benefits in solving your hair trouble
Story first published: Tuesday, February 3, 2015, 14:19 [IST]
X
Desktop Bottom Promotion