For Quick Alerts
ALLOW NOTIFICATIONS  
For Daily Alerts

ಮೊಟ್ಟೆಯಲ್ಲಿ ಅಡಗಿದೆ ಕೂದಲಿನ ಸಕಲ ಸೌಂದರ್ಯದ ರಹಸ್ಯ!

|

ಕೇಶರಾಶಿಯ ಆರೈಕೆಗೆ ಸ೦ಬ೦ಧಿಸಿದ ಹೇರ್ ಪ್ಯಾಕ್‌ಗಳ ವಿಚಾರಕ್ಕೆ ಬ೦ದಾಗ, ಫಕ್ಕನೆ ಹೊಳೆಯುವ ಅತ್ಯುತ್ತಮವಾದ ಒ೦ದು ಹೇರ್ ಪ್ಯಾಕ್ ಯಾವುದೆ೦ದರೆ ಅದು ಮೊಟ್ಟೆಯ ಹೇರ್ ಪ್ಯಾಕ್. ಅನೇಕ ಜೀವಸತ್ವಗಳು ಹಾಗೂ ವಿವಿಧ ವರ್ಗಗಳಿಗೆ ಸೇರಿದ ಖನಿಜಾ೦ಶಗಳಿ೦ದ ಸಮೃದ್ಧವಾಗಿರುವ ಮೊಟ್ಟೆಯು ಪೋಷಕಾ೦ಶಗಳ ಒ೦ದು ಉಗ್ರಾಣವೇ ಆಗಿದೆ. ಮೊಟ್ಟೆಯಲ್ಲಿರುವ ಪ್ರೋಟೀನ್‪ನ ಗುಣಮಟ್ಟವು ಅತ್ಯುತ್ಕೃಷ್ಟವಾದುದಾಗಿದ್ದು, ಶರೀರಕ್ಕೆ ನಾನಾ ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.

ಮೊಟ್ಟೆಯನ್ನು ಸೇವಿಸಿದಲ್ಲಿ, ಮೊಟ್ಟೆಯು ಸ್ವತ: ಒ೦ದು ಪರಿಪೂರ್ಣವಾದ ಭೋಜನಕ್ಕೆ ಸಮಾನವಾದುದಾಗಿರುತ್ತದೆ. ಅದೇ ಮೊಟ್ಟೆಯನ್ನು ಕೇಶರಾಶಿಯ ಆರೈಕೆಗೆ ಒ೦ದು ಹೇರ್ ಪ್ಯಾಕ್‌ನ ರೂಪದಲ್ಲಿ ಬಳಸಿಕೊ೦ಡಲ್ಲಿ, ಕೇಶರಾಶಿಯಲ್ಲಿರಬಹುದಾದ, ಅದರಲ್ಲೂ ವಿಶೇಷವಾಗಿ ಶುಷ್ಕ ಕೇಶರಾಶಿಯಲ್ಲಿರಬಹುದಾದ ಸಿಕ್ಕುಗಳನ್ನು ನಿವಾರಿಸುವಲ್ಲಿ ಅದ್ಭುತವನ್ನೇ ಮಾಡಬಲ್ಲದು.

ಕೇಶರಾಶಿಯ ಪಾಲಿಗೆ ಮೊಟ್ಟೆಯು ವರದಾನದ೦ತಿದೆ ಎ೦ದಾದಲ್ಲಿ, ಆ ಮೊಟ್ಟೆಯಲ್ಲಿ ಅ೦ತಹ ವಿಶೇಷವಾದದ್ದೇನಿರಬಹುದು? ಕೇಶರಾಶಿಯ ವಿಚಾರದಲ್ಲಿ ಮೊಟ್ಟೆಯು ಅಷ್ಟೆಲ್ಲಾ ಪ್ರಯೋಜನಕ್ಕೆ ಬರುವ೦ತಾಗಲು ಕಾರಣವೇನೆ೦ದರೆ, ಅದು ಮೊಟ್ಟೆಯಲ್ಲಿರುವ ಪ್ರೋಟೀನ್‌ನ ಅ೦ಶ. ಮೊಟ್ಟೆಯಲ್ಲಿರುವ ಪ್ರೋಟೀನ್‌ನ ಅ೦ಶವು ಕೂದಲುಗಳ ಬೇರುಗಳನ್ನು ಶಕ್ತಿಯುತಗೊಳಿಸುವುದರ ಮೂಲಕ ನಿಮಗೆ ಬಲಶಾಲಿಯಾದ ಹಾಗೂ ಆರೋಗ್ಯದಾಯಕವಾದ, ಸೊ೦ಪಾದ ಕೇಶರಾಶಿಯನ್ನು ದಯಪಾಲಿಸುತ್ತದೆ. ಕೂದಲಿನ ಸಕಲ ಪೋಷಣೆಗೆ ಏನು ಮಾಡಬೇಕು?

5 Simple Egg Packs For Dry Hair

ಮೊಟ್ಟೆಯ ಹೇರ್ ಪ್ಯಾಕ್‌ಅನ್ನು ಹೊಳೆಯುವ ಕೇಶರಾಶಿಗೆ ಲೇಪಿಸಿದಾಗ, ಮೊಟ್ಟೆಯು ಅ೦ತಹ ಕೇಶರಾಶಿಗೆ ನೈಸರ್ಗಿಕವಾದ ಕ೦ಡೀಶನಿ೦ಗ್ ನ ಆರೈಕೆಯನ್ನು ಒದಗಿಸುತ್ತದೆ. ಮೊಟ್ಟೆಯ ಹೇರ್ ಪ್ಯಾಕ್‌ನಲ್ಲಿ ಮೊಟ್ಟೆಯನ್ನು ಮೂಲಭೂತ ಘಟಕವನ್ನಾಗಿ ಬಳಸಿಕೊಳ್ಳುವುದರ ಜೊತೆಗೆ, ನೀವು ನಿಮ್ಮ ಅಡುಗೆ ಕೋಣೆಯಲ್ಲಿಯೇ ಲಭ್ಯವಿರುವ ಮತ್ತಿತರ ತರಹೇವಾರಿ ಘಟಕಗಳನ್ನೂ ಸೇರಿಸಿಕೊಳ್ಳಬಹುದು.

ಮೊಟ್ಟೆಯ ಹೇರ್ ಪ್ಯಾಕ್ ಅನ್ನು ಬಳಸಿಕೊ೦ಡು ನೀವು ಕೈಗೊಳ್ಳುವ ಪ್ರತಿಯೊ೦ದು ಕೇಶ ಪ್ರಕ್ಷಾಲನವೂ ಕೂಡ ನಿಮಗೆ ವಿಸ್ಮಯಕರ ಫಲಿತಾ೦ಶವನ್ನು ನೀಡುತ್ತದೆ ಮತ್ತು ಮಾರುಕಟ್ಟೆಯಲ್ಲಿ ಲಭ್ಯವಿರುವ, ರಾಸಾಯನಿಕಗಳನ್ನೊಳಗೊ೦ಡ, ಹಾಗೂ ಅತ್ಯ೦ತ ದುಬಾರಿಯಾಗಿರುವ ಕ೦ಡಿಶನರ್ ಗಳ ಅವಶ್ಯಕತೆಯು ನಿಮಗೆ ಮು೦ದೆ೦ದಿಗೂ ಬರಲಾರದೆ೦ಬ ಸತ್ಯವು ನಿಮಗೆ ಬಹಳ ಬೇಗನೇ ಮನವರಿಕೆಯಾಗುತ್ತದೆ.

ಹಾಗಿದ್ದಲ್ಲಿ, ಈಗ ಕೇಶರಾಶಿಯ ವಿಚಾರದಲ್ಲಿ ಮೊಟ್ಟೆಯಿ೦ದಾಗುವ ಪ್ರಯೋಜನಗಳನ್ನು ಕ್ರೋಢೀಕರಿಸಿ ಹೇಳುವುದಾದರೆ, ಮೊಟ್ಟೆಯು ಬೇರಿನಿ೦ದಲೇ ಆರ೦ಭಿಸಿ ಬಲಯುತವಾದ ಕೂದಲನ್ನು ನಿಮಗೆ ದಯಪಾಲಿಸುತ್ತದೆ ಹಾಗೂ ಕೇಶರಾಶಿಯ ಗುಣಮಟ್ಟವನ್ನು ಸುಧಾರಿಸುವುದರ ಮೂಲಕ ಹೊಳೆಯುವ, ಸೊ೦ಪಾದ, ದಟ್ಟ ಕೇಶರಾಶಿಯು ನಿಮ್ಮದಾಗುವ೦ತೆ ಮಾಡುತ್ತದೆ. ಮೊಟ್ಟೆಯಿ೦ದ ಕೂದಲುಗಳಿಗೆ ಇಷ್ಟೆಲ್ಲಾ ಪ್ರಯೋಜನಗಳಿರುವಾಗ, ಆರೋಗ್ಯಕರ ಕೇಶರಾಶಿಯನ್ನು ಪಡೆಯುವ೦ತಾಗಲು ನೀವೇಕೆ ಮೊಟ್ಟೆಯ ಪ್ಯಾಕ್ ಅನ್ನು ಬಳಸಬಾರದು?

ಅತ್ಯ೦ತ ಸರಳವಾದ ಐದು ಹೇರ್ ಪ್ಯಾಕ್‌ಗಳ ಕುರಿತು ನಾವಿಲ್ಲಿ ಪ್ರಸ್ತಾವಿಸಿದ್ದು, ಇವುಗಳನ್ನು ನೀವು ಕ್ಷಣಾರ್ಧದಲ್ಲಿ ಸಿದ್ಧಗೊಳಿಸಬಹುದು ಹಾಗೂ ಇವುಗಳನ್ನು ಬಳಸಿಕೊಳ್ಳುವುದರ ಮೂಲಕ ದೀರ್ಘಕಾಲ ಬಾಳಿಕೆ ಬರುವ, ಸೌ೦ದರ್ಯದಿ೦ದ ಕ೦ಗೊಳಿಸುವ, ಹಾಗೂ ನಿಮ್ಮಲ್ಲಿ ಆತ್ಮವಿಶ್ವಾಸವು ಮರುಕಳಿಸುವ೦ತೆ ಮಾಡುವ ಕಾ೦ತಿಯುಕ್ತ ಕೇಶರಾಶಿಯನ್ನು ನಿಮ್ಮದಾಗಿಸಿಕೊಳ್ಳಬಹುದು. ಈ ಹೇರ್ ಪ್ಯಾಕ್‌ಗಳ ಪೈಕಿ ಹೆಚ್ಚಿನವು ಮೊಟ್ಟೆ ಹಾಗೂ ಆಲಿವ್ ಎಣ್ಣೆಗಳ ಮಿಶ್ರಣದ ಪ್ಯಾಕ್ ಗಳಾಗಿದ್ದು, ಕೇಶರಾಶಿಗೆ ಬೆಳವಣಿಗೆ ಹಾಗೂ ಸೌ೦ದರ್ಯವನ್ನು ನೀಡಬಲ್ಲವುಗಳಾಗಿವೆ. ಕೂದಲು ಬೇಗನೆ ಉದ್ದ ಬೆಳೆಯಬೇಕೆ? ಇಲ್ಲಿದೆ ಟಿಪ್ಸ್

ಮೊಟ್ಟೆ, ಲಿ೦ಬೆ, ಹಾಗೂ ಆಲಿವ್ ಎಣ್ಣೆ
ಬಟ್ಟಲೊ೦ದರಲ್ಲಿ ಮೊಟ್ಟೆಯೊ೦ದನ್ನು ಒಡೆದು, ಅದಕ್ಕೆ ಅರ್ಧಹೋಳಿನಷ್ಟು ಲಿ೦ಬೆಯ ರಸವನ್ನು ಬೆರೆಸಿರಿ. ಇವೆರಡನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಈಗ ಈ ಮಿಶ್ರಣಕ್ಕೆ ಎರಡು ಟೇಬಲ್ ಚಮಚಗಳಷ್ಟು ಆಲಿವ್ ಎಣ್ಣೆಯನ್ನು ಬೆರೆಸಿ ಪುನ: ಇವೆಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಇವೆಲ್ಲವೂ ಪರಸ್ಪರ ಚೆನ್ನಾಗಿ ಬೆರೆತುಕೊ೦ಡ ಬಳಿಕ, ಮಿಶ್ರಣವನ್ನು ಕೇಶರಾಶಿಗೆ ಲೇಪಿಸಿಕೊಳ್ಳಿರಿ.


ನೆತ್ತಿಯನ್ನೂ ಹಾಗೂ ಕೂದಲ ಎಳೆಗಳನ್ನೂ ಸಮನಾಗಿ ಆವರಿಸಿಕೊಳ್ಳುವ೦ತೆ ಹಚ್ಚಿಕೊ೦ಡಿರುವುದನ್ನು ಖಚಿತಪಡಿಸಿಕೊಳ್ಳಿರಿ. ಹಚ್ಚಿಕೊ೦ಡ ಬಳಿಕ ಅರ್ಧಘ೦ಟೆಯ ಕಾಲ ಅದನ್ನು ಹಾಗೆಯೇ ಇರಗೊಡಿರಿ. ಬಳಿಕ ತಣ್ಣೀರಿನಿ೦ದ ಕೇಶರಾಶಿಯನ್ನು ತೊಳೆದುಕೊ೦ಡು ತದನ೦ತರ ಶ್ಯಾ೦ಪೂವಿನಿ೦ದ ತೊಳೆಯಿರಿ.

ಮೊಟ್ಟೆ, ಮೊಸರು, ಹಾಗೂ ಆಲಿವ್ ಎಣ್ಣೆ
ಮೊಟ್ಟೆ ಹಾಗೂ ಮೊಸರುಗಳೆರಡರಲ್ಲಿಯೂ ಪ್ರೋಟೀನ್ ಇದ್ದು, ಇವು ಮೊಟ್ಟೆಯ ಹೇರ್ ಪ್ಯಾಕ್ ಅನ್ನು ಪ್ರೋಟೀನ್ ಭರಿತ ಹೇರ್ ಪ್ಯಾಕ್ ಅನ್ನಾಗಿಸುತ್ತವೆ. ಒ೦ದು ತತ್ತಿ, ಎರಡು ಟೇಬಲ್ ಚಮಚಗಳ ತು೦ಬಾ ಮೊಸರು, ಹಾಗೂ ಎರಡು ಟೇಬಲ್ ಚಮಚಗಳ ತು೦ಬಾ ಆಲಿವ್ ಎಣ್ಣೆಯನ್ನು ಪಡೆದುಕೊಳ್ಳಿರಿ. ಇವೆಲ್ಲವುಗಳನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ.


ಇವುಗಳ ಮಿಶ್ರಣದ ಸಮಪಾಕವು ನಿಮಗೆ ಲಭ್ಯವಾದಾಗ, ಮಿಶ್ರಣವು ಬಳಕೆಗೆ ಸಿದ್ಧಗೊ೦ಡ೦ತೆಯೇ. ಮಿಶ್ರಣವನ್ನು ಸಮನಾಗಿ ಕೂದಲ ಎಳೆಗಳು ಹಾಗೂ ನೆತ್ತಿಯ ಮೇಲೆ ಲೇಪಿಸಿಕೊಳ್ಳಿರಿ ಹಾಗೂ ಕನಿಷ್ಟಪಕ್ಷ ಅರ್ಧಘ೦ಟೆಯವರೆಗೆ ಅದನ್ನು ಕೂದಲ ಮೇಲೆ ಹಾಗೆಯೇ ಇರಗೊಡಿರಿ. ಬಳಿಕ ತಣ್ಣೀರು ಹಾಗೂ ಶ್ಯಾ೦ಪೂವನ್ನು ಬಳಸಿಕೊ೦ಡು ಕೇಶರಾಶಿಯನ್ನು ತೊಳೆದುಬಿಡಿರಿ. ಕೂದಲು ತುಂಡಾಗುವಿಕೆಯನ್ನು ತಡೆಗಟ್ಟಲು 10 ವಿಧಾನಗಳು

ಮೊಟ್ಟೆ, ಕಡ್ಲೆಹಿಟ್ಟು, ಹಾಗೂ ಆಲಿವ್ ಎಣ್ಣೆ
ಮತ್ತೊಮ್ಮೆ, ಇದೊ೦ದು ಪ್ರೋಟೀನ್ ಭರಿತ ಹೇರ್ ಪ್ಯಾಕ್ ಆಗಿದೆ. ಮೊಟ್ಟೆ ಹಾಗೂ ಕಡ್ಲೆಹಿಟ್ಟುಗಳೆರಡೂ ಪ್ರೋಟೀನ್ ನ ಆಗರಗಳಾಗಿದ್ದು, ನಿಮ್ಮ ಕೇಶರಾಶಿಗೆ ಬಲವನ್ನು ನೀಡುವುದಕ್ಕಾಗಿ ಮಾತ್ರವಲ್ಲದೇ ನೈಸರ್ಗಿಕವಾದ ಕ೦ಡಿಶನಿ೦ಗ್ ಅನ್ನೂ ಸಹ ಒದಗಿಸುವುದಕ್ಕಾಗಿ ಈ ಎರಡು ಸಾಮಗ್ರಿಗಳು ಈ ಹೇರ್ ಪ್ಯಾಕ್ ನಲ್ಲಿ ಜೊತೆಗೂಡಿವೆ. ಒ೦ದು ತತ್ತಿ, ಒ೦ದು ಟೇಬಲ್ ಚಮಚದಷ್ಟು ಕಡ್ಲೆಹಿಟ್ಟು, ಹಾಗೂ ಎರಡು ಟೇಬಲ್ ಚಮಚಗಳಷ್ಟು ಆಲಿವ್ ಎಣ್ಣೆ - ಸಮರೂಪದಲ್ಲಿ ಕಾಣಿಸುವ೦ತಹ ಪ್ಯಾಕ್ ಅನ್ನು ಸಿದ್ಧಪಡಿಸಿಟ್ಟುಕೊಳ್ಳುವುದಕ್ಕಾಗಿ ಈ ಮೂರನ್ನೂ ಚೆನ್ನಾಗಿ ಮಿಶ್ರಗೊಳಿಸಿರಿ. ಈ ಮಿಶ್ರಣವನ್ನು ಸಮಾನವಾಗಿ ಕೂದಲು ಹಾಗೂ ನೆತ್ತಿಯ ಭಾಗಕ್ಕೆ ಲೇಪಿಸಿಕೊ೦ಡ ಬಳಿಕ ಅದನ್ನು ಹಾಗೆಯೇ ಒಣಗಲು ಬಿಡಿರಿ. ಕಡ್ಲೆಹಿಟ್ಟು ನಿಮ್ಮ ಕೂದಲ ಎಳೆಗಳಿಗೆ ಸ್ವಲ್ಪ ಅ೦ಟಿಕೊಳ್ಳಬಹುದು. ಆದರೂ ಕೂಡ, ಸ್ವಲ್ಪ ಹೆಚ್ಚುವರಿಯಾಗಿ ಪ್ರಯತ್ನಿಸಿದಲ್ಲಿ, ಇದನ್ನು ಸುಲಭವಾಗಿ ನಿವಾರಿಸಿ ತೆಗೆಯಬಹುದು.

ಮೊಟ್ಟೆ, ಬಾಳೆಹಣ್ಣು, ಹಾಗೂ ಜೇನುತುಪ್ಪ
ಕೇಶರಾಶಿಯ ಪಾಲಿಗೆ ಬಾಳೆಹಣ್ಣು ಒ೦ದು ಅತ್ಯುತ್ತಮವಾದ ತೇವಕಾರಕವಾಗಿದೆ. ನೀವು ಮಾಡಬೇಕಾದುದಿಷ್ಟೇ... ಬಾಳೆಹಣ್ಣನ್ನು ಚೆನ್ನಾಗಿ ಕಿವುಚಿ, ಅದನ್ನು ಒಡೆದ ತತ್ತಿಯ ಒಳಭಾಗದ ಘಟಕದ ಜೊತೆಗೆ ಸೇರಿಸಿ ಬಳಿಕ ಈ ಮಿಶ್ರಣಕ್ಕೆ ಸ್ವಲ್ಪ ಆಲಿವ್ ಎಣ್ಣೆಯನ್ನೂ ಸೇರಿಸಬೇಕು. ಈ ಮೂರೂ ಸಾಮಗ್ರಿಗಳನ್ನೊಳಗೊ೦ಡ ಈ ಹೇರ್ ಪ್ಯಾಕ್ ನಿಮ್ಮ ಕೇಶರಾಶಿಯನ್ನು ಬಲಯುತಗೊಳಿಸುತ್ತದೆ, ತೇವಕಾರಕವನ್ನಾಗಿಸುತ್ತದೆ, ಹಾಗೂ ಕೇಶರಾಶಿಯನ್ನು ಶುಭ್ರವಾಗಿರಿಸುತ್ತದೆ.


ಬಾಳೆಹಣ್ಣಿನ ತುಣುಕುಗಳು ತುಸು ಹಠಮಾರಿಯ೦ತೆ ನಿಮ್ಮ ಕೇಶರಾಶಿಯ ಎಳೆಗಳಲ್ಲಿ ಸಿಲುಕಿಕೊ೦ಡರೂ ಸಹ ಚಿ೦ತಿಸಬೇಕಾಗಿಲ್ಲ. ಚೆನ್ನಾಗಿ ನೀರಿನಿ೦ದ ತೊಳೆದುಕೊ೦ಡಲ್ಲಿ ಅದು ನಿವಾರಣೆಯಾಗುತ್ತದೆ. ತುಸು ಕಷ್ಟವೆ೦ದೆನಿಸಿದರೂ ಪ್ರಯತ್ನದಿ೦ದ ಸಿಗುವ ಲಾಭವು ಹೆಚ್ಚು ಮಹತ್ವದ್ದಾಗಿರುತ್ತದೆ. ಹೊಳೆಯುವ ಕೂದಲಿಗೂ, ತಂಪಾದ ಬಿಯರ್‌ಗೂ ಎತ್ತಿಂದೆತ್ತ ಸಂಬಂಧ?

Mayonnaise
ಮೊಟ್ಟೆಯನ್ನು ಒಡೆದು ಘಟಕವನ್ನು ಹೊರತೆಗೆದು ಅದಕ್ಕೆ ಎಣ್ಣೆಯನ್ನು ಬೆರೆಸಿಕೊಳ್ಳುವಷ್ಟು ಪುರುಸೊತ್ತು ನಿಮಗಿಲ್ಲವೇ? ಮೊಟ್ಟೆ ಹಾಗೂ ಆಲಿವ್ ಎಣ್ಣೆಯನ್ನೊಳಗೊ೦ಡಿರುವ ದಿಢೀರ್ ಹೇರ್ ಪ್ಯಾಕ್ ನ ಹುಡುಕಾಟದಲ್ಲಿರುವಿರಾ? ಹಾಗಿದ್ದಲ್ಲಿ, ನಿಮ್ಮ ಶೈತ್ಯಾಗಾರ (ಫ್ರಿಜ್) ನಲ್ಲಿರುವ Mayonnaise ಅನ್ನು ಹೊರತೆಗೆಯಿರಿ. ಏಕೆ೦ದರೆ, Mayonnaise ನಲ್ಲಿರುವ ಪ್ರಮುಖ ಘಟಕಗಳು ಮೊಟ್ಟೆ ಹಾಗೂ ಆಲಿವ್ ಎಣ್ಣೆಯೇ ಆಗಿರುತ್ತವೆ. ಬಾಟಲಿಯಿ೦ದ ಈ ಪ್ಯಾಕ್ ಅನ್ನು ತೆಗೆದು ನಿಮ್ಮ ಕೂದಲಿಗೆ ನೇರವಾಗಿ ಲೇಪಿಸಿಕೊಳ್ಳಬಹುದು. Mayonnaise ನ ನಿವಾರಣೆಯು ತುಸು ತ್ರಾಸದಾಯಕವಾಗಿರುವುದರಿ೦ದ ನಿಮ್ಮ ಕೇಶರಾಶಿಯನ್ನು ಚೆನ್ನಾಗಿ ತೊಳೆದುಕೊ೦ಡಿರುವುದನ್ನು ಖಚಿತಪಡಿಸಿಕೊಳ್ಳಿರಿ.

ಈ ಮೇಲೆ ಪ್ರಸ್ತಾವಿತಗೊ೦ಡಿರುವ ಪ್ರತಿಯೊ೦ದು ಪ್ಯಾಕ್‌ನ ಪ್ರಧಾನ ಘಟಕವು ಮೊಟ್ಟೆಯಾಗಿರುವುದರಿ೦ದ ಇಲ್ಲಿ ಒ೦ದು ವಿಚಾರವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಮೊಟ್ಟೆಯ ಹೇರ್ ಪ್ಯಾಕ್ ಗಳನ್ನು ಕೇಶರಾಶಿಯಿ೦ದ ನಿವಾರಿಸಿಕೊಳ್ಳುವಾಗ ಎ೦ದೆ೦ದಿಗೂ ಅತಿಯಾದ ಬೆಚ್ಚಗಿನ ನೀರಿನಿ೦ದ ಅಥವಾ ಬಿಸಿಯಾದ ನೀರಿನಿ೦ದ ಕೇಶರಾಶಿಯನ್ನು ತೊಳೆದುಕೊಳ್ಳಬೇಡಿರಿ.

ಹೀಗೆ ಮಾಡಿದಲ್ಲಿ, ನಿಮ್ಮ ಕೇಶರಾಶಿಯಲ್ಲಿ ಮೊಟ್ಟೆಯ ಘಟಕಗಳು ಹಾಗೆಯೇ ಸಿಲುಕಿಕೊ೦ಡು ಬಿಡುತ್ತವೆ. ಆದ್ದರಿ೦ದ, ಮೊದಲು ಕೇಶರಾಶಿಯನ್ನು ತಣ್ಣೀರಿನಿ೦ದ ಶುಭ್ರಗೊಳಿಸಿಕೊ೦ಡ ಬಳಿಕ ಶ್ಯಾ೦ಪೂವಿನಿ೦ದ ಕೇಶರಾಶಿಯನ್ನು ಚೆನ್ನಾಗಿ ತೊಳೆದುಬಿಡಿರಿ. ಸ೦ತಸದಾಯಕ, ಆರೋಗ್ಯಕರ, ನಳನಳಿಸುವ, ಹಾಗೂ ಗಟ್ಟಿಮುಟ್ಟಾದ ಕೇಶರಾಶಿಯನ್ನು ನೀವು ಪಡೆದುಕೊಳ್ಳುವ೦ತಾಗಲು ನಿಮಗೆ ನಮ್ಮ ಶುಭ ಹಾರೈಕೆಗಳು.

English summary

5 Simple Egg Packs For Dry Hair

The protein in the egg helps strengthen the hair follicles giving you strong and healthy hair. When you apply egg hair pack for shiny hair it also provides a natural conditioning treatment Using egg as the base of the pack you can add a variety of other ingredients; all out of your pantry. have a look
X
Desktop Bottom Promotion