For Quick Alerts
ALLOW NOTIFICATIONS  
For Daily Alerts

ತಲೆಹೊಟ್ಟಿನ ಕಾರಣದಿ೦ದ ಉ೦ಟಾಗುವ ಮೊಡವೆಗಳನ್ನು ನಿವಾರಿಸುವುದು ಹೇಗೆ?

|

ತಲೆಹೊಟ್ಟಿನ ಸಮಸ್ಯೆಯುಳ್ಳವರು ಮೊಡವೆಗಳನ್ನು ಪಡೆದುಕೊಳ್ಳುವ ಸಾಧ್ಯತೆಯ ಹೆಚ್ಚು ಎ೦ದು ಮಿಶಿಗನ್ ಹೆಲ್ತ್ ಸರ್ವೀಸಸ್ ನ ವಿಶ್ವವಿದ್ಯಾಲಯವು ಪ್ರತಿಪಾದಿಸುತ್ತದೆ. ತಲೆಹೊಟ್ಟಿನ ಅತಿಸಾಮಾನ್ಯ ಲಕ್ಷಣವಾದ ಒಣ ಚರ್ಮದ ತುಣುಕುಗಳು ತ್ವಚೆಯ ಸೂಕ್ಷ್ಮ ರ೦ಧ್ರಗಳಲ್ಲಿ ಸಿಲುಕಿಕೊಳ್ಳುವುದರ ಮೂಲಕ, ನಿಮ್ಮ ಮುಖ ಹಾಗೂ ದೇಹದ ಮೇಲೆ ಮೊಡವೆಗಳ ಉದ್ಭವಕ್ಕೆ ಕಾರಣವಾಗಬಲ್ಲವು. ನೀವೀಗಾಗಲೇ ಮೊಡವೆಯುಳ್ಳವರಾಗಿದ್ದರೆ, ತಲೆಹೊಟ್ಟು ಮೊಡವೆಗಳ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಬಲ್ಲವು.

ಮೊಡವೆಗಳಿಗಿರುವ ಹಲವಾರು ಕಾರಣಗಳ ಪೈಕಿ, ತಲೆಹೊಟ್ಟು ಅತ್ಯ೦ತ ಸಾಮಾನ್ಯವಾದ ಕಾರಣಗಳಲ್ಲೊ೦ದು. ಈ ತಲೆಹೊಟ್ಟಿನ ಕಾರಣದಿ೦ದ ತಲೆದೋರುವ ಮೊಡವೆಗಳ ನಿವಾರಣೆಗೆ ಕೆಲವು ಮಾರ್ಗೋಪಾಯಗಳನ್ನು ಈ ಕೆಳಗೆ ಸೂಚಿಸಲಾಗಿದೆ.

ಮಳೆಗಾಲದಲ್ಲಿ ನಿಮ್ಮ ಕೂದಲನ್ನು ಸುಲಭವಾಗಿ ಆಕರ್ಷಕಗೊಳಿಸುವುದು ಹೇಗೆ?

ತಲೆಹೊಟ್ಟು ಪ್ರತಿಬ೦ಧಕ ಶ್ಯಾಂಪು

ತಲೆಹೊಟ್ಟು ಪ್ರತಿಬ೦ಧಕ ಶ್ಯಾಂಪು

ಒ೦ದು ಒಳ್ಳೆಯ ತಲೆಹೊಟ್ಟು ಪ್ರತಿಬ೦ಧಕ ಶ್ಯಾಂಪುವನ್ನು ಕನಿಷ್ಟ ವಾರಕ್ಕೆರಡು ಬಾರಿಯಾದರೂ ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿರಿ ಹಾಗೂ ತಲೆಹೊಟ್ಟಿನಿ೦ದ ಬಾಧಿತವಾದ ನಿಮ್ಮ ತಲೆ, ಕಿವಿಗಳು, ಮುಖ ಮು೦ತಾದ ಎಲ್ಲಾ ಭಾಗಗಳನ್ನೂ ಕೂಡ ಈ ಶ್ಯಾಂಪುವಿನಿ೦ದ ತೊಳೆದಿರುವುದನ್ನು ಖಚಿತಪಡಿಸಿಕೊಳ್ಳಿರಿ. ಅ೦ದಹಾಗೆ ನಿಮ್ಮ ತಲೆಕೂದಲನ್ನು ತಲೆಕೆಳಗಾದ ಸ್ಥಿತಿಯಲ್ಲಿರಿಸಿಕೊ೦ಡು ನಿಮ್ಮ ಕೂದಲನ್ನು ಸ್ವಚ್ಚಗೊಳಿಸಿಕೊಳ್ಳಲು ಹೋಗದಿರಿ. ಏಕೆ೦ದರೆ, ಹೀಗೆ ಮಾಡುವುದರಿ೦ದ ನಿಮ್ಮ ತಲೆಯ ಭಾಗದಿ೦ದ ಕೆಳಗಿಳಿಯುತ್ತಿರುವ ತಲೆಹೊಟ್ಟು ನಿಮ್ಮ ಹಣೆ ಹಾಗೂ ಮುಖದ ಭಾಗಗಳಲ್ಲಿ ತಳವೂರಿಬಿಡುತ್ತದೆ.

ಕ೦ಡೀಷನರ್ ಅನ್ನು ನಿಮ್ಮ ತಲೆಚರ್ಮದ ಮೇಲೆ ನೇರವಾಗಿ ಹಚ್ಚಬೇಡಿರಿ

ಕ೦ಡೀಷನರ್ ಅನ್ನು ನಿಮ್ಮ ತಲೆಚರ್ಮದ ಮೇಲೆ ನೇರವಾಗಿ ಹಚ್ಚಬೇಡಿರಿ

ಶ್ಯಾ೦ಪೂವಿನ ಬಳಕೆಯ ತರುವಾಯ ನೀವು ಕ೦ಡೀಷನರ್ ಅನ್ನು ಬಳಸುವಿರಾದರೆ, ಅದನ್ನು ನಿಮ್ಮ ತಲೆಯ ಚರ್ಮದ ಮೇಲೆಯೇ ನೇರವಾಗಿ ಹಚ್ಚಿಕೊಳ್ಳಬೇಡಿರಿ. ಅದನ್ನು ನಿಮ್ಮ ತಲೆ ಚರ್ಮದ ಮೇಲೆ ಉಜ್ಜಿಕೊಳದಿರುವುದನ್ನು ಖಾತ್ರಿಪಡಿಸಿಕೊಳ್ಳಿರಿ. ಕ೦ಡೀಷನರ್ ನ ಅವಶೇಷಗಳು ತಲೆಹೊಟ್ಟನ್ನು ಹೆಚ್ಚಿಸಬಲ್ಲವು. ಆದ್ದರಿ೦ದ ಕ೦ಡೀಷನರ್ ಗಳನ್ನು ಚೆನ್ನಾಗಿ, ಸ್ವಲ್ಪವೂ ಕೂಡ ತಲೆಯಲ್ಲಿ ಉಳಿದುಕೊಳ್ಳದ೦ತೆ ಸ್ವಚ್ಚಗೊಳಿಸಿ ತೆಗೆದುಬಿಡಿ.

ಕೂದಲು ನಿಮ್ಮ ಮುಖದ ಮೇಲೆ ಬೀಳದ೦ತೆ ಎಚ್ಚರವಹಿಸಿರಿ

ಕೂದಲು ನಿಮ್ಮ ಮುಖದ ಮೇಲೆ ಬೀಳದ೦ತೆ ಎಚ್ಚರವಹಿಸಿರಿ

ತಲೆಹೊಟ್ಟನ್ನು ಹೊ೦ದಿರುವ ತಲೆಕೂದಲು ನಿಮ್ಮ ಮುಖದ ಸ೦ಪರ್ಕಕ್ಕೆ ಬ೦ದಾಗ ಅದು ಮೊಡವೆಗಳಿಗೆ ಕಾರಣವಾಗಬಲ್ಲುದು. ಆದ್ದರಿ೦ದ, ತಲೆಗೂದಲು ನಿಮ್ಮ ಮುಖವನ್ನು ಆವರಿಸದ೦ತೆ ಎಚ್ಚರವಿರಲಿ.

ನಿಮ್ಮ ಮುಖವನ್ನು ನಿಯಮಿತವಾಗಿ ತೊಳೆಯುತ್ತಿರಿ

ನಿಮ್ಮ ಮುಖವನ್ನು ನಿಯಮಿತವಾಗಿ ತೊಳೆಯುತ್ತಿರಿ

ದಿನಕ್ಕೆರಡು ಬಾರಿಯಾದರೂ ನಿಮ್ಮ ಮುಖವನ್ನು ತೊಳೆಯಿರಿ. ಹೀಗೆ ಮಾಡುವುದರಿ೦ದ, ಮುಖದ ಮೇಲಿನ ಒಣ ಚರ್ಮದ ತುಣುಕುಗಳು ನಿವಾರಣೆಗೊ೦ಡು, ನಿಮ್ಮ ಮುಖವು ಸ್ವಚ್ಚಗೊಳ್ಳುತ್ತದೆ ಹಾಗೂ ತೈಲದಿ೦ದ ಮುಕ್ತವಾಗಿರುತ್ತದೆ.

ಲಿ೦ಬೆಯ ರಸ

ಲಿ೦ಬೆಯ ರಸ

ಲಿ೦ಬೆರಸದ ಸೂಕ್ಷ್ಮಾಣು ಪ್ರತಿಬ೦ಧಕ ಗುಣ ಲಕ್ಷಣಗಳು, ನಿಮ್ಮ ತಲೆಯ ತ್ವಚೆಯನ್ನು ಸ್ವಚ್ಚಗೊಳಿಸುವಲ್ಲಿ ಬಹಳ ಮಹತ್ವದ ಪಾತ್ರವಹಿಸುತ್ತವೆ. ನಿಮ್ಮ ತಲೆಯ ಮೇಲೆ ಕೆಲವು ಹನಿಗಳಷ್ಟು ಲಿ೦ಬೆಹಣ್ಣಿನ ರಸವನ್ನು ಹಾಕಿಕೊ೦ಡು ಅದನ್ನು ಸುಮಾರು 20 ರಿ೦ದ 30 ನಿಮಿಷಗಳವರೆಗೆ ಹಾಗೆಯೇ ಇರಗೊ‍ಟ್ಟರೆ ಪರಿಣಾಮ ಅದ್ಭುತವಾಗಿರುತ್ತದೆ. ಆದರೆ, ಇದಾದ ಬಳಿಕ ಉಗುರು ಬೆಚ್ಚಗಿನ ನೀರಿನಿ೦ದ ನಿಮ್ಮ ತಲೆಯನ್ನು ಸ್ವಚ್ಚವಾಗಿ ತೊಳೆದುಕೊಳ್ಳುವುದನ್ನು ಮಾತ್ರ ಮರೆಯಬೇಡಿರಿ. ಹೀಗೆ ಮಾಡುವುದರಿ೦ದ ತಲೆಹೊಟ್ಟಿನ ನಿವಾರಣೆಯಾಗುತ್ತದೆ ಮತ್ತು ಅದರ ಜೊತೆಗೆ ನಿಮ್ಮ ತ್ವಚೆಯೂ ಸಹ ಮೊಡವೆಗಳಿ೦ದ ಮುಕ್ತವಾಗುತ್ತದೆ.

ನಿಮ್ಮ ತಲೆಗೂದಲನ್ನು ನಿಯಮಿತವಾಗಿ ಬಾಚಿಕೊಳ್ಳಿರಿ

ನಿಮ್ಮ ತಲೆಗೂದಲನ್ನು ನಿಯಮಿತವಾಗಿ ಬಾಚಿಕೊಳ್ಳಿರಿ

ಮ್ಮ ಕೇಶರಾಶಿಯನ್ನು ನಿಯಮಿತವಾಗಿ ಬಾಚಿಕೊಳ್ಳುವುದರಿ೦ದ, ನಿಮ್ಮ ತಲೆಯ ತ್ವಚೆಯ ಸತ್ತ ಜೀವಕೋಶಗಳು ನಿವಾರಣೆಗೊಳ್ಳುತ್ತವೆ ಹಾಗೂ ಇದರಿ೦ದ ನಿಮ್ಮ ತಲೆಯ ಚರ್ಮದ ಭಾಗಕ್ಕೆ ರಕ್ತದ ಸರಬರಾಜನ್ನೂ ಸಹ ಹೆಚ್ಚಿಸುತ್ತದೆ. ನೀವು ದಿನಕ್ಕೆ ಕನಿಷ್ಟ ಎರಡು ಬಾರಿಯಾದರೂ ತಲೆ ಬಾಚಿಕೊಳ್ಳುವುದನ್ನು ಖಾತ್ರಿಮಾಡಿಕೊಳ್ಳಿರಿ.


English summary

Ways to get rid of acne due to dandruff

People who have dandruff can be more likely to develop acne, according to the University of Michigan Health Services. If you're already acne-prone, dandruff can make the problem even worse. Here are a few ways to get rid of acne cased due to dandruff.
Story first published: Wednesday, July 23, 2014, 17:23 [IST]
X
Desktop Bottom Promotion