For Quick Alerts
ALLOW NOTIFICATIONS  
For Daily Alerts

ಎಚ್ಚರ: ಪ್ಲಾಸ್ಟಿಕ್ ಬಳಕೆಯಿಂದ ಕಾಯಿಲೆಗಳು ಕಟ್ಟಿಟ್ಟ ಬುತ್ತಿ!

|

ಬೆಂಗಳೂರು ಮೂಲದ ಕೂದಲು ಮತ್ತು ಚರ್ಮದ ಕ್ಲಿನಿಕ್ ಹೇರ್‌ಲೈನ್ ಇಂಟರ್‌ನ್ಯಾಷನಲ್, ದೈನಂದಿನ ಜೀವನದಲ್ಲಿ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಕಾಯಿಲೆಗೆ ತುತ್ತಾಗಬಹುದು ಎಂಬ ಸಂಶೋಧನಾ ವರದಿಯೊಂದನ್ನು ಹೊರತಂದಿದೆ.

ಪ್ಲಾಸ್ಟಿಕ್ ಕೇವಲ ಪರಿಸರಕ್ಕಷ್ಟೇ ಹಾನಿಕಾರಕವಾಗಿಲ್ಲ, ಆರೋಗ್ಯ ಸಮಸ್ಯೆಗಳನ್ನೂ ಸೃಷ್ಟಿಸುತ್ತದೆ ಎಂಬ ಕುರಿತು ಅರಿವು ಮೂಡಿಸಲು ಹೇರ್ ಲೈನ್ ಇಂಟರ್‌ನ್ಯಾಷನಲ್, ಮೆರಿಸಿಸ್ ಥೆರಪಿಯಾಟಿಕ್ಸ್ ಜತೆ ಸೇರಿಕೊಂಡು ಪ್ಲಾಸ್ಟಿಕ್‍ನ ಹಾನಿಕಾರಕ ಪರಿಣಾಮಗಳ ಕುರಿತು ಜನರಿಗೆ ತಿಳುವಳಿಕೆ ನೀಡುವ ಜವಾಬ್ದಾರಿ ಹೊತ್ತುಕೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಸಂಶೋಧನಾ ವರದಿಯನ್ನು ಬಿಡುಗಡೆಗೊಳಿಸಿದ ಬಾಣಿ ಆನಂದ್, ನಿರ್ದೇಶಕರು ಹೇರ್ ಲೈನ್ ಇಂಟರ್‌ನ್ಯಾಷನಲ್ ರಿಸರ್ಚ್ ಆಂಡ್ ಟ್ರೀಟ್ ಮೆಂಟ್ ಸೆಂಟರ್, ಮಾತನಾಡಿ, ಕೂದಲು ಉದುರುವ ಸಮಸ್ಯೆ ಹೊಂದಿರುವ 100 ರೋಗಿಗಳ ಮೇಲೆ 8 ತಿಂಗಳ ಕಾಲ ಬೆಂಗಳೂರಿನ ನಮ್ಮ ನಾಲ್ಕು ಕೇಂದ್ರಗಳಲ್ಲಿ ನಾವು ಒಂದು ಸಂಶೋಧನೆಯನ್ನು ನಡೆಸಿದೆವು.

ಅದರಲ್ಲಿ ನಾವು ಕಂಡುಕೊಂಡ ಸಂಗತಿಯೆಂದರೆ, ಪ್ಲಾಸ್ಟಿಕ್‌ನಲ್ಲಿ ಸಾಮಾನ್ಯವಾಗಿ ಉಪಯೋಗಿಸುವ ರಾಸಾಯನಿಕವಾದ ಬಿಪಿಎ ಅಥವಾ ಬಿಸ್ಫಿನಾಲ್ ಎ ಅನ್ನು ಈ ರೋಗಿಗಳ ಪೈಕಿ ಶೇ.90ಕ್ಕೂ ಹೆಚ್ಚು ಮಂದಿ ತಮ್ಮ ರಕ್ತದಲ್ಲಿ ಅಧಿಕ ಮಟ್ಟದಲ್ಲಿ ಹೊಂದಿದ್ದಾರೆ. ರಕ್ತದಲ್ಲಿ ಬಿಪಿಎ ಇರುವುದು ದೈನಂದಿನ ಜೀವನದಲ್ಲಿ ತೀವ್ರವಾದ ಪ್ಲಾಸ್ಟಿಕ್ ಬಳಕೆಯನ್ನು ಸೂಚಿಸುತ್ತದೆ. ಇದು ಕ್ಯಾನ್ಸರ್ ಸೇರಿದಂತೆ ಅನೇಕ ವೈದ್ಯಕೀಯ ಸಮಸ್ಯೆಗಳಿಗೆ ಕಾರಣವಾಗುಬಹುದು'' ಎಂದರು.

ಬಿಪಿಎ ಇರುವಿಕೆಯು ನರ ಸಂಬಂಧಿ ಸಮಸ್ಯೆ, ಥೈರಾಯ್ಡ್ ತೊಂದರೆ, ಹೆಚ್ಚಿದ ಕ್ಯಾನ್ಸರ್ ಹಾಗೂ ಟ್ಯೂಮರ್‌ನ ಅಪಾಯ, ಅಸ್ತಮಾ ಹಾಗೂ ಹೃದಯದ ಕಾಯಿಲೆಗಳು, ಲೈಂಗಿಕ ದೌರ್ಬಲ್ಯ, ಜತೆಗೆ ಕೂದಲು ಮತ್ತು ಚರ್ಮದ ಸಮಸ್ಯೆಗಳಿಗೆ ಒಂದು ಕಾರಣವಾಗಬಹುದು ಎಂದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನಡೆಸಿದ ಅವಲೋಕನಾ ಅಧ್ಯಯನಗಳು ತೋರಿಸಿವೆ'' ಎಂದು ತಮ್ಮ ಪ್ರಯೋಗಾಲಯದಲ್ಲಿ ಬಿಪಿಎ ಪರೀಕ್ಷೆ ನಡೆಸಿದ ಡಾ.ಕೌಶಿಕ್ ಡಿ ದೇಬ್, ಸಂಸ್ಥಾಪಕ ನಿರ್ದೇಶಕರು, ಮೆರಿಸಿಸ್ ಥೆರಪಿಯಾಟಿಕ್ಸ್ ಹೇಳಿದರು.

ಪ್ಲಾಸ್ಟಿಕ್ ಬೇಡ ಎಂದು ಹೇಳಿ
ಬಾಣಿ ಆನಂದ್ ಪ್ರಕಾರ, ನಮ್ಮ ದೈನಂದಿನ ಜೀವನದಲ್ಲಿ ನಾವು ಏನನ್ನು ಉಪಯೋಗಿಸುತ್ತಿದ್ದೇವೆ ಎಂಬುದನ್ನು ಮರುವಿಮರ್ಶಿಸಬೇಕೆಂಬುದನ್ನು ಈ ಅಧ್ಯಯನವು ಒತ್ತಿ ಹೇಳುತ್ತದೆ. ಬಿಪಿಎ ಅನ್ನು ಹೇರಳವಾಗಿ ಹೊಂದಿರುವ ಉತ್ಪನ್ನಗಳು ಇತ್ತೀಚಿನ ದಿನಗಳಲ್ಲಿ ನಮ್ಮ ದೈನಿಕ ಜೀವನದ ಭಾಗವಾಗಿಬಿಟ್ಟಿವೆ. ಹಸಿರು ಜೀವನಶೈಲಿ ಅಳವಡಿಸಿಕೊಳ್ಳುವುದು ತುರ್ತು ಅಗತ್ಯವಾಗಿದೆ.
ತಕ್ಷಣಕ್ಕೆ, ಅಡುಗೆ ಮನೆಗಳಲ್ಲಿ ಪ್ಲಾಸ್ಟಿಕ್ ಪಾತ್ರೆ, ಡಬ್ಬಗಳ ಬದಲು ಸ್ಟೀಲ್ ಅಥವಾ ಗ್ಲಾಸ್ ಪಾತ್ರೆಗಳನ್ನು ಬಳಸುವುದರೊಂದಿಗೆ ಆರಂಭಿಸಬಹುದು. ಪ್ಲಾಸ್ಟಿಕ್ ತೀರಾ ಅಗತ್ಯವಾಗಿರುವಲ್ಲಿ ನಾವು ಬಿಪಿಎ-ಮುಕ್ತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಉಪಯೋಗಿಸಿಕೊಳ್ಳಬಹುದು'' ಎಂದು ಅವರು ಹೇಳುತ್ತಾರೆ.

ಅಧ್ಯಯನ ಮತ್ತು ಇದರ ಅವಲೋಕನಗಳು
ತನ್ನ ಸಂಶೋಧನೆಯ ಭಾಗವಾಗಿ, ಹೇರ್ ಲೈನ್ ಇಂಟರ್‌ನ್ಯಾಷನಲ್ ರೋಗಿಗಳು ದಿನಕ್ಕೆ ಎಷ್ಟು ಬಾರಿ ಪ್ಲಾಸ್ಟಿಕ್ ಉಪಯೋಗಿಸುತ್ತಾರೆ ಎಂಬುದೂ ಸೇರಿದಂತೆ ಜೀವನಶೈಲಿಯನ್ನು ಅಭ್ಯಸಿಸಿದೆ. ರೋಗಿಗಳಲ್ಲಿ ಉದುರುವ ಕೂದಲ ಸಂಖ್ಯೆ, ಋತುಚಕ್ರ ಹಾಗೂ ಪಿಸಿಒಡಿ ಇತಿಹಾಸ, ರಕ್ತದ ಲೆಕ್ಕಾಚಾರ, ಥೈರಾಯ್ಡ್ ಹಾರ್ಮೋನ್, ಹಾಗೂ ವಿಟಮಿನ್ ಡಿಯಂತಹ ರಕ್ತದ ತಪಾಸಣೆಯನ್ನು ಈ ಅಧ್ಯಯನವು ಒಳಗೊಂಡಿತ್ತು. ಇದಲ್ಲದೆ, ರಕ್ತ ಹಾಗೂ ಮೂತ್ರದಲ್ಲಿ ಬಿಪಿಎ ಮಟ್ಟವನ್ನು ಕೂಡಾ ತಪಾಸಣೆ ನಡೆಸಲಾಯಿತು.

ಪರೀಕ್ಷಿಸಿದ ಶೇ.70ರಷ್ಟು ಪ್ರಕರಣಗಳಲ್ಲಿ ಮೂತ್ರ ಹಾಗೂ ರಕ್ತದಲ್ಲಿ ಬಿಪಿಎ ಪಾಸಿಟಿವ್ ಬಂದಿದೆ ಎಂಬುದಾಗಿ ಅಧ್ಯಯನ ಹೊರಗೆಡಹಿದೆ. ರೋಗಿಗಳು ಮುಖ್ಯವಾಗಿ 21 ರಿಂದ 45 ವರ್ಷ ವಯೋಮಾನದವರಾಗಿದ್ದು, ಇವರು ವೃತ್ತಿಪರರಾಗಿದ್ದು, ಪ್ರತಿ ದಿನ ಕನಿಷ್ಠವೆಂದರೂ 4-6 ಬಾರಿ ಪ್ಲಾಸ್ಟಿಕ್ ಪಾತ್ರೆಗಳಿಂದ ಆಹಾರ ಸೇವಿಸುತ್ತಾರೆ.

ಅವಲೋಕನವನ್ನು ವಿವರಿಸಿದ ಡಾ. ದಿನೇಶ್ ಜಿ ಗೌಡ, ಡರ್ಮಟೋಸರ್ಜನ್, ಹೇರ್ ಲೈನ್ ಇಂಟರ್‌ನ್ಯಾಷನಲ್ ರಿಸರ್ಚ್ ಆಂಡ್ ಟ್ರೀಟ್ ಮೆಂಟ್ ಸೆಂಟರ್,
ಈ ಅಧ್ಯಯನ ತೋರಿಸಿರುವ ತೀರ್ಮಾನವೇನೆಂದರೆ, ಕ್ಲಿನಿಕ್ ಗೆ ಬರುವ ಕೂದಲು ಉದುರುವ ಸಮಸ್ಯೆಯ ಶೇ.92ರಷ್ಟು ಪ್ರಕರಣಗಳು ಬಿಪಿಎ ಪಾಸಿಟಿವ್ ಆಗಿರುತ್ತದೆ.

ಕೂದಲು ಉದುರುವುದು ರಾಸಾಯನಿಕ ಬಿಪಿಎನ ಎಸ್ಟ್ರೋಜನ್ ಮಿಮಿಕಿಂಗ್ ಲಕ್ಷಣದ ನೇರ ಪರಿಣಾಮ ಅಥವಾ ಲಿಪಿಡ್ ಮಟ್ಟ ಬದಲಾಗುವುದರಿಂದ ಪರೋಕ್ಷವಾಗಿ ಕೂದಲು ಉದುರಬಹುದು, ಹೆಚ್ಚುತ್ತಿರುವ ಬೊಜ್ಜು, ಥೈರಾಯ್ಡ್ ಹಾರ್ಮೋನ್ ಚಟುವಟಿಕೆಗೆ ತಡೆಯಾಗುವುದರಿಂದ ಅಥವಾ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚುವುದರಿಂದಲೂ ಕೂದಲು ಉದುರಬಹುದು'' ಎಂದು ಹೇಳಿದರು."

English summary

Use of excessive plastics in daily life can cause dreaded diseases

Hairline International Research & Treatment Centre along with Merisis Therapeutics held a Press Conference to create awareness on how plastic not just poses environmental hazards but causes health issues too. Please find here below and attached a press release
X
Desktop Bottom Promotion