For Quick Alerts
ALLOW NOTIFICATIONS  
For Daily Alerts

ಕೂದಲು ಉದುರುವಿಕೆ ತಡೆಯಲು ನೈಸರ್ಗಿಕ 5 ವಿಧಾನಗಳು

By Hemanth P
|

ಪ್ರತಿಯೊಬ್ಬರನ್ನು ಕಾಡುವ ದೊಡ್ಡ ಸಮಸ್ಯೆಯೆಂದರೆ ಅದು ಕೂದಲು ಉದುರುವುದು. ಕಲುಷಿತ ವಾತಾವರಣ, ಅನಾರೋಗ್ಯಕರ ಜೀವನ ಮತ್ತು ಹವ್ಯಾಸಗಳಿಂದ ಕೂದಲಿನ ಸಮಸ್ಯೆಗಳಾದ ಕೂದಲು ಉದುರುವುದು, ಕೂದಲ ತುಂಡಾಗುವುದು, ಒರಟು ಅಥವಾ ಒಣ ಕೂದಲು ಇತ್ಯಾದಿ ಬರಬಹುದು. ನಿಮ್ಮ ಕೂದಲು ಬಲ ಮತ್ತು ಹೊಳಪು ನೀಡಲು ಅದರ ಆರೈಕೆ ಮಾಡುವುದು ತುಂಬಾ ಮುಖ್ಯ.

ಕೂದಲು ನಷ್ಟವಾಗುವುದು ಕೂದಲಿನ ಪ್ರಮುಖ ಸಮಸ್ಯೆ. ಕೂದಲು ನಷ್ಟವಾಗಲು ಪ್ರಮುಖ ಕಾರಣವೆಂದರೆ ತಲೆಹೊಟ್ಟು, ಒಣ ಕೂದಲು, ಕೂದಲನ್ನು ಗಡಸು ನೀರಿನಿಂದ ತೊಳೆಯುವುದು ಮತ್ತು ಕೂದಲಿನ ಆರೈಕೆ ಸರಿಯಾಗಿ ಮಾಡದಿರುವುದು. ಕೂದಲು ಉದುರುವಿಕೆಯನ್ನು ತಡೆಯಲು ಹಲವಾರು ರಾಸಾಯನಿಕ ಶಾಂಪೂ ಮತ್ತು ಸೀರಮ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ರಾಸಾಯನಿಕ ಚಿಕಿತ್ಸೆ ಅತ್ಯಂತ ತ್ವರಿತ ಮತ್ತು ಸ್ವಲ್ಪ ಸಮಯದವರೆಗೆ ಮಾತ್ರ. ಈ ರಾಸಾಯನಿಕಗಳಿಂದ ಅಡ್ಡ ಪರಿಣಾಮಗಳಾಗಬಹುದು ಮತ್ತು ಕೂದಲಿಗೆ ಇದು ಹಾನಿಕಾರಕವಾಗಬಹುದು.

Top Natural tips to prevent hair loss

ತಲೆಹೊಟ್ಟಿನ ಸಮಸ್ಯೆ ನಿವಾರಣೆಯಲ್ಲಿ ಈರುಳ್ಳಿಯ ಪಾತ್ರವೇನು?

ನೈಸರ್ಗಿಕವಾಗಿ ಕೂದಲು ಉದುರುವುದನ್ನು ತಡೆಯುವುದು ಹೇಗೆಂದು ತಿಳಿದುಕೊಳ್ಳಬೇಕು. ಕೂದಲು ಉದುರುವಿಕೆ ತಡೆಯಲು ಹಲವಾರು ನೈಸರ್ಗಿಕ ಪರಿಹಾರಗಳಿವೆ. ಇದರಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲ. ನೈಸರ್ಗಿಕ ಚಿಕಿತ್ಸೆಗೆಳು ಪರಿಣಾಮ ತೋರಿಸಲು ದೀರ್ಘ ಸಮಯ ಬೇಕಾಗಬಹುದು. ಆದರೆ ಪರಿಣಾಮ ದೀರ್ಫ ಕಾಲದ್ದು ಮತ್ತು ಶಾಶ್ವತ. ಪ್ರಾಕೃತಿಕವಾಗಿ ಕೂದಲು ಉದುರುವುದನ್ನು ತಡೆಯುವುದು ಹೇಗೆಂದು ಕೆಲವೊಂದು ವಿಧಾನಗಳಲ್ಲಿ ಇಲ್ಲಿ ನೀಡಲಾಗಿದೆ.

ಬಿಸಿ ಎಣ್ಣೆಯ ಮಸಾಜ್
ಕೂದಲು ಉದುರುವುದನ್ನು ತಡೆಯಲು ಇರುವ ಅತ್ಯುತ್ತಮ ವಿಧಾನವೆಂದರೆ ಬಿಸಿ ಎಣ್ಣೆಯಿಂದ ನಿಯಮಿತವಾಗಿ ಮಸಾಜ್ ಮಾಡುವುದು. ಬಿಸಿ ಎಣ್ಣೆಯ ಮಸಾಜ್ ನೈಸರ್ಗಿಕವಾಗಿ ಕೂದಲು ಉದುರುವುದನ್ನು ತಡೆಯುತ್ತದೆ. ಇದು ಹಾನಿಗೊಳಗಾದ ಕೂದಲನ್ನು ತೆಗೆಯುತ್ತದೆ ಮತ್ತು ಕೂದಲಿಗೆ ಬೇಕಿರುವ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಬಿಸಿ ಎಣ್ಣೆಯ ಮಸಾಜ್ ನಿಂದ ಕೂದಲು ಬಲವಾಗುತ್ತದೆ ಮತ್ತು ಇದು ಉದುರುವಿಕೆಯನ್ನು ತಡೆಯುತ್ತದೆ. ವಾರದಲ್ಲಿ ಒಂದು ದಿನವಾದರೂ ಕೂದಲಿಗೆ ಬಿಸಿ ಎಣ್ಣೆಯ ಮಸಾಜ್ ಮಾಡಬೇಕು.

ತಲೆಹೊಟ್ಟು ಸಮಸ್ಯೆಗೆ ಪ್ರಮುಖ 5 ಲಕ್ಷಣಗಳು ಯಾವುದು?

ತೆಂಗಿನಕಾಯಿ ಎಣ್ಣೆ
ತೆಂಗಿನಕಾಯಿ ತುಂಬಾ ಆರೋಗ್ಯಕಾರಿ. ಇದರಲ್ಲಿ ಹಲವಾರು ರೀತಿಯ ಲಾಭಗಳಿವೆ. ಇದು ಕೂದಲಿಗೆ ಪೋಷಕಾಂಶವನ್ನು ಒದಗಿಸುತ್ತದೆ. ತೆಂಗಿನ ಎಣ್ಣೆ ಮತ್ತು ತೆಂಗಿನ ಕಾಯಿ ಹಾಲು ಕೂದಲು ಉದುರುವಿಕೆಗೆ ಒಳ್ಳೆಯ ಚಿಕಿತ್ಸೆ. ಇದು ಕೂದಲಿಗೆ ಪೋಷಕಾಂಶ ಒದಗಿಸುವುದರೊಂದಿಗೆ ಅದನ್ನು ನಯ ಮತ್ತು ಬಲವಾಗಿಸುತ್ತದೆ. ತೆಂಗಿನಕಾಯಿ ಕೂದಲು ಉದುರುವ ಸಮಸ್ಯೆಗೆ ನೈಸರ್ಗಿಕ ಪರಿಹಾರ.

ಅಲೋವೆರಾ
ಕೂದಲಿನ ನೈಸರ್ಗಿಕ ಚಿಕಿತ್ಸೆಗೆ ಅಲೋವೆರಾ ತುಂಬಾ ಉಪಯುಕ್ತ. ಇದನ್ನು ನಿಮ್ಮ ತೋಟದಲ್ಲಿ ಸುಲಭವಾಗಿ ಬೆಳೆಸಬಹುದು. ಅಲೋವೆರಾವನ್ನು ಪೇಸ್ಟ್ ಅಥವಾ ಒಣ ಪೌಡರ್ ರೂಪದಲ್ಲಿ ಬಳಸಬಹುದು. ಕೂದಲಿಗೆ ಪೇಸ್ಟ್ ನ್ನು ಹಚ್ಚಿ ಸುಮಾರು 15-30 ನಿಮಿಷ ತನಕ ಬಿಡಿ. ಅಲೋವೆರಾ ಕೂದಲಿನ ಅಂಗಾಂಶಗಳನ್ನು ಬಲಪಡಿಸಿ ಅದು ಬೆಳೆಯಲು ನೆರವಾಗುತ್ತದೆ. ಕೂದಲಿಗೆ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ಅಲೋವೆರಾವನ್ನು ವಾರಕ್ಕೆ ಎರಡು ಸಲ ಬಳಸಬಹುದು. ಕೂದಲಿನ ಉದುರುವಿಕೆಗೆ ತಡೆಯಲು ಅಲೋವೆರಾ ನೈಸರ್ಗಿಕ ವಿಧಾನ

ನೈಸರ್ಗಿಕ ಹೇರ್ ಮಾಸ್ಕ್
ಕೂದಲು ಉದುರುವಿಕೆ ತಡೆಯಲು ಒಳ್ಳೆಯ ಫಲಿತಾಂಶಗಾಗಿ ಹೇರ್ ಮಾಸ್ಕ್ ಗಳನ್ನು ಉಪಯೋಗಿಸಬಹುದು. ವಾರದಲ್ಲಿ ಒಂದು ಸಲ ಈ ಹೇರ್ ಮಾಸ್ಕ್ ನ್ನು ಬಳಸಿದರೆ ಒಳ್ಳೆಯ ಫಲಿತಾಂಶ ಕಾಣಬಹುದು. ಹೆನ್ನಾ, ಅಲೋವೆರಾ, ಮೊಸರು, ಕಹಿಬೇವು ಮತ್ತು ಇತರ ಗಿಡಮೂಲಿಕೆಗಳನ್ನು ಬಳಸಿಕೊಂಡು ಮನೆಯಲ್ಲಿಯೇ ಹೇರ್ ಮಾಸ್ಕ್ ತಯಾರಿಸಬಹುದು. ಈ ಹೇರ್ ಮಾಸ್ಕ್ ಕೂದಲು ತುಂಡಾಗುವುದನ್ನು ತಡೆಯುತ್ತದೆ. ಕೂದಲಿನ ಬುಡಕ್ಕೆ ಪೋಷಕಾಂಶಗಳನ್ನು ನೀಡುತ್ತದೆ. ಇದನ್ನು ಕೂದಲು ಉದುರುವ ಸಮಸ್ಯೆಗೆ ಅತ್ಯಂತ ಉಪಯುಕ್ತ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ.

ಆವ್ಲಾ
ಅವ್ಲಾದ ಪ್ರಮುಖ ಗುಣಗಳೆಂದರೆ ಅದು ನಿಮ್ಮ ಕೂದಲಿಗೆ ಪೋಷಕಾಂಶಗಳನ್ನು ನೀಡಿ ಕೂದಲನ್ನು ರಕ್ಷಿಸುತ್ತದೆ ಮತ್ತು ಅದನ್ನು ನಯವಾಗಿಸುತ್ತದೆ. ಅವ್ಲಾ ಜೂಸ್ ನ್ನು ಕೂದಲಿಗೆ ಹಚ್ಚಿ 10-15 ನಿಮಿಷ ಹಾಗೆ ಬಿಡಬೇಕು. ಇದರ ಬಳಿಕ ನೀರಿನಿಂದ ತೊಳೆಯಬೇಕು. ವಾರದಲ್ಲಿ ಒಂದು ಸಲ ಹೀಗೆ ಮಾಡಿ ಮತ್ತು ಕೂದಲು ಉದುರುವಿಕೆಯಲ್ಲಿ ನೀವು ತುಂಬಾ ಭಿನ್ನ ಪರಿಣಾಮ ಕಾಣಬಹುದು. ಅವ್ಲಾವನ್ನು ಎಣ್ಣೆ, ಹೇರ್ ಪ್ಯಾಕ್ ಇತ್ಯಾದಿಗಳ ರೂಪದಲ್ಲಿ ಉಪಯೋಗಿಸಬಹುದು. ಆಹಾರ ಕ್ರಮದಲ್ಲಿ ಅವ್ಲಾವನ್ನು ಪ್ರತೀದಿನ ಬಳಸುವುದರಿಂದ ನಿಮ್ಮ ಕೂದಲಿನ ಗುಣಮಟ್ಟ ಒಳ್ಳೆಯದಾಗುತ್ತದೆ.
ಕೂದಲು ಉದುರುವ ಸಮಸ್ಯೆಗೆ ಇದು ಕೆಲವೊಂದು ನೈಸರ್ಗಿಕ ಚಿಕಿತ್ಸೆ ಮತ್ತು ನಿಮ್ಮ ಕೂದಲನ್ನು ಆರೋಗ್ಯಕರ ಮತ್ತು ಹೊಳೆಯುವಂತೆ ಮಾಡಿ.

English summary

Top Natural tips to prevent hair loss

Hair loss is one major hair problems faced. The major reasons for hair loss are dandruff, dry hair, use of hard water for hair wash and ill maintenance of hair. But chemical treatment is very instant and short lived. The chemicals can also have side effects and may prove more harmful to the hair. 
Story first published: Thursday, August 14, 2014, 17:47 [IST]
X
Desktop Bottom Promotion