For Quick Alerts
ALLOW NOTIFICATIONS  
For Daily Alerts

ತಲೆಹೊಟ್ಟು ಸಮಸ್ಯೆಗೆ ಪ್ರಮುಖ 5 ಲಕ್ಷಣಗಳು ಯಾವುದು?

By Arpitha Rao
|

ತಲೆಹೊಟ್ಟು ನೆತ್ತಿಯ ಸಾಮಾನ್ಯ ಸಮಸ್ಯೆ. ವೈದ್ಯಕೀಯ ತಜ್ಞರಿಂದಲೂ ಕೂಡ ತಲೆಹೊಟ್ಟಿನ ನಿಜವಾದ ಕಾರಣ ತಿಳಿದಿಲ್ಲ. ಎಣ್ಣೆಯುಕ್ತ ಕೂದಲು ತಲೆಹೊಟ್ಟಿಗೆ ಕಾರಣ ಎಂದುಕೊಂಡರೆ ಒಣ ನೆತ್ತಿ ಹೊಂದಿದವರೂ ಕೂಡ ತಲೆಹೊಟ್ಟಿನ ಸಮಸ್ಯೆ ಅನುಭವಿಸುತ್ತಾರೆ. ಸಾಕಷ್ಟು ಸಂಶೋಧನೆಗಳ ನಂತರ ತಿಳಿದು ಬಂದದ್ದೆಂದರೆ ತಲೆಹೊಟ್ಟಿನಲ್ಲಿ ಸಾಕಷ್ಟು ವಿಧಗಳಿವೆ. ಪ್ರತಿಯೊಂದು ರೀತಿಯ ತಲೆಹೊಟ್ಟಿಗೂ ಕೂಡ ಬೇರೆಬೇರೆ ಕಾರಣಗಳಿವೆ.

ನೆತ್ತಿ ಕೆರೆತ
ನೆತ್ತಿಯ ಕೆರೆತ ತಲೆಹೊಟ್ಟಿನ ಮೊದಲ ಲಕ್ಷಣ. ತಲೆಹೊಟ್ಟು ಇದ್ದರೆ ಪ್ರತಿದಿನ ನೀವು ನೆತ್ತಿಯ ತುರಿಕೆ ಅನುಭವಿಸುತ್ತೀರಿ. ಸಡಿಲ ಪದರಗಳನ್ನು ಹೊಂದಿರುವುದರಿಂದ ನೀವು ತಲೆ ಕೆರೆತ ಅನುಭವಿಸುತ್ತೀರಿ. ಈ ಪದರಗಳು ನೆತ್ತಿಯಿಂದ ಬಂದ ಸತ್ತ ಜೀವಕೋಶಗಳು ಎನ್ನಲಾಗುತ್ತದೆ. ಈ ರೀತಿಯ ತಲೆಹೊಟ್ಟನ್ನು ನೀವು ಚಳಿಗಾಲದಲ್ಲಿ ಕಾಣಬಹುದು. ಈ ರೀತಿಯ ತಲೆಹೊಟ್ಟಿಗೆ ಮುಖ್ಯ ಕಾರಣ ಚಳಿ. ಈ ರೀತಿಯ ತಲೆಹೊಟ್ಟು ಕಂಡುಬಂದಾಗ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಏಕೆಂದರೆ ಅದು ಸುಲಭವಾಗಿ ಹೋಗಲಾಡಿಸಬಹುದು.

Top 5 Symptoms Of Dandruff

ಕೂದಲು ಉದುರುವುದು
ಕೂದಲಿನಲ್ಲಿ ತಲೆಹೊಟ್ಟು ಇರುವುದು ಕೂದಲು ಉದುರಲು ಇನ್ನೊಂದು ಕಾರಣ. ಯಾವುದೇ ರೀತಿಯ ತಲೆಹೊಟ್ಟು ಆದರೂ ಕೂಡ ತಲೆಕೂದಲು ಉದುರುವುದು ಸರ್ವೇ ಸಾಮಾನ್ಯ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಪ್ರತಿದಿನ 20 ರಿಂದ 50 ಕೂದಲು ಉದುರುತ್ತದೆ. ಇದು ಕೂದಲು ಉದುರುವಿಕೆಯ ಸಹಜ ಸ್ಥಿತಿ. ಆದರೆ ಅಧಿಕ ಕೂದಲು ಉದುರುವಿಕೆ ತಲೆಹೊಟ್ಟಿನ ಸಮಸ್ಯೆಯಿಂದಾಗಿ ಎನ್ನಬಹುದು.

ಕೂದಲು ಉದುರುವಿಕೆಯ ಸಮಸ್ಯೆಗೆ ಸೂಕ್ತ ಪರಿಹಾರ

ಒಣ ಕೂದಲು
ತಲೆಹೊಟ್ಟು ಕೂದಲಿನ ಎಣ್ಣೆಯನ್ನು ಹೀರಿಕೊಂಡು ಕೂದಲು ಒಣಗುವಂತೆ ಮಾಡಿಬಿಡುತ್ತದೆ.ಸರಿಯಾಗಿ ಕೂದಲನ್ನು ಬಾಚಿದಾಗಲೂ ಕೂಡ ಕೂದಲು ಒಣಗಿದಂತೆ ಕಾಣಿಸುತ್ತದೆ. ಇಂತಹ ಸಮಯದಲ್ಲಿ ನೀವು ಹೆಚ್ಚು ಕಾಳಜಿಯುತವಾಗಿ ನೋಡಿಕೊಳ್ಳಬೇಕಾಗುತ್ತದೆ.

ಮೊಡವೆಗಳು
ಮೊಡವೆಗಳಿಗೆ ಮತ್ತು ಕೂದಲಿಗೆ ನೇರ ಸಂಬಂಧವಿಲ್ಲದಿದ್ದರೂ ಕೂಡ ತಲೆಹೊಟ್ಟು ಹೆಚ್ಚಾದಾಗ ಮೊಡವೆಗಳು ಹೆಚ್ಚು ಕಾಣಿಸಿಕೊಳ್ಳುವುದನ್ನು ಗಮನಿಸಿರಬಹುದು. ತಲೆಹೊಟ್ಟಿನಿಂದಾಗಿ ಕಾಣಿಸಿಕೊಳ್ಳುವ ಮೊಡವೆಗಳು ಕೆಂಪು ಬಣ್ಣದಲ್ಲಿರುತ್ತವೆ. ಜೊತೆಗೆ ಇವು ನೋವಿನಿಂದ ಕೂಡ ಕೂಡಿರಬಹುದು. ಸಾಕಷ್ಟು ಜನರು ತಲೆಹೊಟ್ಟಿನಿಂದ ಮುಕ್ತಿ ಹೊಂದಿದ ನಂತರವಷ್ಟೇ ಈ ಮೊಡವೆ ಸಮಸ್ಯೆಯನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗಿದೆ.

ತಲೆಹೊಟ್ಟಿನ ಸಮಸ್ಯೆ ನಿವಾರಣೆಯಲ್ಲಿ ಈರುಳ್ಳಿಯ ಪಾತ್ರವೇನು?

ಮಲಬದ್ಧತೆ ಮತ್ತು ಹೊಟ್ಟೆ ತೊಳೆಸುವಿಕೆ
ಅಧ್ಯಯನಗಳು ತಿಳಿಸುವ ಪ್ರಕಾರ ಮಲಬದ್ಧತೆ ಮತ್ತು ಹೊಟ್ಟೆ ತೊಳೆಸುವಿಕೆಗೆ ತಲೆ ಹೊಟ್ಟು ಕೂಡ ಕಾರಣವಾಗಬಹುದು. ಇದಕ್ಕೆ ಸರಿಯಾದ ಕಾರಣ ತಿಳಿಯದಿದ್ದರೂ ಕೂಡ ತಲೆಹೊಟ್ಟು ಇರುವ ಸಾಕಷ್ಟು ಜನರು ಈ ಸಮಸ್ಯೆಯನ್ನು ಅನುಭವಿಸಿದ್ದಾರೆ.

ತಲೆಹೊಟ್ಟಿಗೆ ಸಾಮಾನ್ಯ ಪರಿಹಾರ
ತಲೆ ಹೊಟ್ಟಿಗೆ ಕಾರಣದಂತೆಯೇ ಅದಕ್ಕೆ ಪರಿಹಾರವೂ ಕೂಡ ಯಾವ ರೀತಿಯ ತಲೆ ಹೊಟ್ಟು ಎಂಬುದರ ಮೇಲೆ ಅವಲಂಬಿತವಾಗುತ್ತದೆ. ನೀವು ಈ ರೀತಿಯಾದಾಗ ಚರ್ಮ ತಜ್ಞರ ಸಲಹೆ ಪಡೆಯುವುದು ಸೂಕ್ತ. ಸಾಮಾನ್ಯ ರೀತಿಯ ತಲೆ ಹೊಟ್ಟಿಗೆ ಕೆಲವು ಮನೆ ಮದ್ದುಗಳಿವೆ.

1)ತಲೆ ಹೊಟ್ಟಿನ ಪರಿಹಾರಕ್ಕೆ ಶಾಂಪೂ
ಆಂಟಿ ಡ್ಯಾಂಡ್ರಫ್ ಶಾಂಪೂ ಸಾಕಷ್ಟು ಸಿಗುತ್ತದೆ. ಆದರೆ ನೀವು ಮೈಲ್ಡ್ ಇರುವ ಶಾಂಪೂ ಬಳಸಬೇಕು ಇದರಿಂದ ನಿಮಗೆ ಬೇಕಾದಾಗ ಶಾಂಪೂವನ್ನು ಬಳಸಬಹುದು. ಮೈಲ್ಡ್ ಶಾಂಪೂ ನಿಮ್ಮ ಕೂದಲಿಗೆ ಹೆಚ್ಚು ಮೃದುತ್ವ ನೀಡಿ ತಲೆ ಹೊಟ್ಟು ನಿವಾರಿಸುತ್ತದೆ.

2)ಮೊಸರು ಮತ್ತು ನಿಂಬೆಹಣ್ಣು
ನಿಂಬೆ ಹಣ್ಣು ಮತ್ತು ಮೊಸರು ತಲೆ ಹೊಟ್ಟಿಗೆ ಉತ್ತಮ ಮನೆಮದ್ದು. ಮೊಸರಿಗೆ ಒಂದೆರಡು ಹನಿ ನಿಂಬು ಹಾಕಿ ನೆತ್ತಿಗೆ ಹಚ್ಚಿ.ಅರ್ಧ ಗಂಟೆ ಬಿಟ್ಟು ನಂತರ ಸಾಕಷ್ಟು ನೀರು ಹಾಕಿ ಸಂಪೂರ್ಣವಾಗಿ ತೊಳೆಯಿರಿ. ವಾರದಲ್ಲಿ ಮೂರು ಬಾರಿ ಇದನ್ನೇ ಮುಂದುವರೆಸಿ.

English summary

Top 5 Symptoms Of Dandruff

Dandruff is a common scalp disorder. Exact causes of dandruff are still unknown to the medical experts Multiple researches conducted on dandruff have yielded the conclusion that there are various types of dandruff. Causes of each type of dandruff are different.
X
Desktop Bottom Promotion