For Quick Alerts
ALLOW NOTIFICATIONS  
For Daily Alerts

ಯುವ ಜನರಲ್ಲಿ ಕಂಡುಬರುವ ತಲೆಕೂದಲಿನ ಸಮಸ್ಯೆಗೆ ಕಾರಣವೇನು?

|

ಸುಮಾರು 450ಕ್ಕೂ ಹೆಚ್ಚು ಪುರುಷರು ಹಾಗೂ ಮಹಿಳೆಯರು ಹೇರ್‌ಲೈನ್ ಇಂಟರ್ ನ್ಯಾಶನಲ್ ಹೇರ್ ಆಂಡ್ ಸ್ಕಿನ್ ಟ್ರೀಟ್‍ಮೆಂಟ್ ಸೆಂಟರ್, ಇಂದು ಮೈಸೂರಿನ ಜಯಲಕ್ಷ್ಮಿಪುರಂನ ಬೃಂದಾವನ್ ಹಾಸ್ಪಿಟಲ್‍ನಲ್ಲಿ ಆಯೋಜಿಸಿದ್ದ ತಲೆಕೂದಲು ಮತ್ತು ಚರ್ಮದ ಉಚಿತ ಸಮಾಲೋಚನೆ ಹಾಗೂ ತಪಾಸಣಾ ಶಿಬಿರದಲ್ಲಿ ಭಾಗವಹಿಸಿದರು. ಈ ಶಿಬಿರವು ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯ ತನಕ ನಡೆಯಿತು.

ರೋಗನಿರ್ಣಯ ಮಾಡಲಾದ 450 ರೋಗಿಗಳಲ್ಲಿ ಶೇ.35ರಿಂದ 40ಕ್ಕೂ ಹೆಚ್ಚು ಮಂದಿ 18 ರಿಂದ 30 ವಯೋಮಾನದವರು ಹಾಗೂ ತಲೆಕೂದಲು ಉದುರುವುದು, ಮುಂಭಾಗ ಬೋಳಾಗುವುದು, ಅವಧಿಪೂರ್ವವಾಗಿ ನರೆಯುವುದು, ಚರ್ಮದ ಕೆಂಪುಗುಳ್ಳೆಗಳು, ಒಣಗುವಿಕೆ ಹಾಗೂ ಮೊಡವೆಯಂತಹ ಗಂಭೀರವಾದ ತಲೆಕೂದಲು ಹಾಗೂ ಚರ್ಮದ ಸಮಸ್ಯೆಯನ್ನು ಎದುರಿಸುತ್ತಿದ್ದರು.

Reasons why Hair and skin problems are in 18 to 30 years age group

ತಪಾಸಣಾ ಶಿಬಿರದಲ್ಲಿ ಇಂದು ಭಾಗವಹಿಸಿದ ಪುರುಷರಲ್ಲಿ ಶೇ.50ಕ್ಕೂ ಹೆಚ್ಚು ಮಂದಿ 20ರ ಆರಂಭದ ಹರೆಯದವರು ಹಾಗೂ ಮುಂಭಾಗ ಬೋಳಾಗುವ ಅನುಭವ ಹೊಂದಿದವರಾಗಿದ್ದರು. ರೋಗ ನಿರ್ಣಯ ಮಾಡಿದವರ ಪೈಕಿ ಶೇ. 30 ಮಂದಿ ಚರ್ಮದ ಕೆಂಪುಗುಳ್ಳೆಗಳು, ಒಣಗುವಿಕೆ ಹಾಗೂ ಮೊಡವೆ ಇತ್ಯಾದಿ ಚರ್ಮದ ಸಮಸ್ಯೆಗಳನ್ನು ಹೊಂದಿದ್ದರು ಹಾಗೂ 30 ಮಂದಿ ಎರಡೂ ಸಮಸ್ಯೆಗಳನ್ನು ಹೊಂದಿದ್ದರು.

ಹೇರ್‍‌ಲೈನ್ ವತಿಯಿಂದ ಬಿಳಿ ಕೂದಲು ತಡೆಗೆ ಆ್ಯಂಟಿ ಗ್ರೇ- ಹರ್ಬಲ್ ಕ್ಯಾಪ್ಸೂಲ್

ತಪಾಸಣಾ ಶಿಬಿರದಲ್ಲಿ ಭಾಗವಹಿಸಿದ್ದ ಹೇರ್‌ಲೈನ್ ಇಂಟರ್ ನ್ಯಾಶನಲ್‌ನ ಹಿರಿಯ ಡೆರ್ಮಟಾಲಜಿಸ್ಟ್, ಡಾ.ದಿನೇಶ್ ಜಿ.ಗೌಡ ಅವರು ರೋಗಿಗಳ ಪರಿಸ್ಥಿತಿಯನ್ನು ವಿಶ್ಲೇಷಿಸುತ್ತಾ, ಐತಿಹಾಸಿನ ನಗರಿ ಮೈಸೂರು ಐಟಿ ತಾಣವಾದ ಬಳಿಕ ವೇಗವಾಗುತ್ತಿದೆ.

ಕಳೆದ ಕೆಲವು ವರ್ಷಗಳಲ್ಲಿ ಬಿಪಿಒ ರಾತ್ರಿ ಪಾಳಿ ಕೆಲಸಗಳು ತೀರಾ ಹೆಚ್ಚಳವಾಗಿದೆ ಹಾಗೂ ಅದಕ್ಕೆ ಅನುಗುಣವಾಗಿ ಜೀವನಶೈಲಿಯೂ ಬದಲಾವಣೆಯಾಗಿದೆ ಹಾಗೂ ವಾಹನಗಳ ಮಾಲಿನ್ಯವೂ ಹೆಚ್ಚಾಗಿದ್ದು, ಇದುವೇ ತಲೆಕೂದಲು ಹಾಗೂ ಚರ್ಮದ ಕುರಿತ ವೈದ್ಯಕೀಯ ಸ್ಥಿತಿಗಳಿಗೆ ಮುಖ್ಯ ಕಾರಣವಾಗಿದೆ'' ಎಂದು ಹೇಳಿದರು.

ತಲೆಕೂದಲು ಉದುರುವುದು, ಅವಧಿಪೂರ್ವ ನರೆಯುವಿಕೆ, ಮುಂಭಾಗ ಬೋಳಾಗುವುದು, ಚರ್ಮದ ಒಣಗುವಿಕೆ, ಮೊಡವೆ ಹಾಗೂ ಕೆಂಪುಗುಳ್ಳೆಗಳು ದೊಡ್ಡ ಆರೋಗ್ಯ ಸಮಸ್ಯೆಗಳ ಲಕ್ಷಣಗಳಾಗಿವೆ. ನಾವು ನಮ್ಮ ರೋಗಿಗಳ ನಿರ್ಣಯ ಮಾಡುವಾಗ, ಸಂಪೂರ್ಣ ಆರೋಗ್ಯ ತಪಾಸಣೆಗಾಗಿ ನಾವು ಅವರಿಗೆ ಬೇರೆ ವೈದ್ಯರನ್ನೂ ಶಿಫಾರಸು ಮಾಡುತ್ತೇವೆ'' ಎಂದು ಹೇಳಿದರು.

ಮೈಸೂರಿನಲ್ಲಿ ಹೆಚ್ಚುತ್ತಿರುವ ವಾಹನಗಳ ಮಾಲಿನ್ಯವು ಚರ್ಮದ ಕೆಂಪುಗುಳ್ಳೆಗಳು ಹಾಗೂ ಒಣಗುವಿಕೆಗೆ ಕಾರಣವಾಗುತ್ತಿದೆ. ಜತೆಗೆ ಯುವಕರು ಆಯ್ದುಕೊಂಡಿರುವ ಕುಳಿತುಕೊಂಡೇ ಇರುವ ಜೀವನಶೈಲಿಯೊಂದಿಗೆ ಅನಿರ್ದಿಷ್ಟ ಆಹಾರ ಸೇವನಾ ಸಮಯ ಹಾಗೂ ಹೆಚ್ಚಿದ ಜಂಕ್ ಫುಡ್‍ಗಳ ಸೇವನೆ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಿದೆ. ಬಿಪಿಒ ರಾತ್ರಿ ಪಾಳಿ ಉದ್ಯೋಗಗಳು ಹಾಗೂ ಅದರ ಫಲವಾದ ಒತ್ತಡದಿಂದಾಗಿ ಈ ಹಿಂದೆಂದಿಗಿಂತಲೂ ಹೆಚ್ಚಿನ ಆರೋಗ್ಯಪೂರ್ಣ ಜೀವನಶೈಲಿಯ ಅಗತ್ಯ ಈಗ ಇದೆ ಎಂದು ಅವರು ಹೇಳಿದರು.

ರೋಗಿಗಳ ಸಂಖ್ಯೆಯನ್ನು ವಿಶ್ಲೇಷಿಸಿದ ಡಾ.ದಿನೇಶ್ ಗೌಡ ಅವರು, ಕಳೆದ 3 ವರ್ಷಗಳಲ್ಲಿ, ನಮ್ಮ ಬೆಂಗಳೂರಿನ ಹೇರ್‍ಲೈನ್ ಇಂಟರ್ ನ್ಯಾಶನಲ್ ಕೇಂದ್ರದಲ್ಲಿ 18ರಿಂದ 30 ವಯೋಮಾನದ ರೋಗಿಗಳ ಸಂಖ್ಯೆಯಲ್ಲಿ ಗಣನೀಯವಾದ ಏರಿಕೆಯನ್ನು ನಾವು ಕಂಡಿದ್ದೇವೆ. ಇವರ ಪೈಕಿ, ಶೇ.8ರಿಂದ 10ಕ್ಕೂ ಹೆಚ್ಚು ಮಂದಿ ರೋಗಿಗಳು ಮೈಸೂರಿನವರಾಗಿದ್ದಾರೆ. ಈ ನಗರದಲ್ಲಿ ತುರ್ತಾಗಿ ತಪಾಸಣಾ ಶಿಬಿರ ನಡೆಸಲು ಇದು ಕಾರಣವಾಗಿದೆ'' ಎಂದು ಉಲ್ಲೇಖಿಸಿದರು.

ಹೇರ್‌ಲೈನ್ ಇಂಟರ್ ನ್ಯಾಶನಲ್ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಬನಿ ಆನಂದ್ ಮಾತನಾಡಿ, ಈ ತಪಾಸಣಾ ಶಿಬಿರಕ್ಕೆ ದೊರೆತಿರುವ ಪ್ರತಿಕ್ರಿಯೆಗೆ ನಾವು ಋಣಿಯಾಗಿದ್ದೇವೆ, ಮೈಸೂರಿನಲ್ಲಿ ನಮ್ಮ ಹೆಜ್ಜೆಯನ್ನು ವಿಸ್ತರಿಸಲ ನಾವು ಯೋಜಿಸಿದ್ದೇವೆ. ಮೈಸೂರಿನಲ್ಲಿ ಒಂದು ಆಸ್ಪತ್ರೆಯಲ್ಲಿ ಟ್ರೈಕಾಲಜಿ ಕೇಂದ್ರ ತೆರೆಯಲು ಅಥವಾ ಪ್ರತ್ಯೇಕ ಹೇರ್‌ಲೈನ್ ಇಂಟರ್ ನ್ಯಾಶನಲ್ ಕೇಂದ್ರ ತೆರೆಯುವ ಉದ್ದೇಶ ಇದೆ'' ಎಂದರು.

ತಲೆಕೂದಲು ಹಾಗೂ ಚರ್ಮದ ಪರೀಕ್ಷೆಗಳು
ತಪಾಸಣಾ ಶಿಬಿರದಲ್ಲಿ, ಬೆಂಗಳೂರಿನಿಂದ ಶ್ರೇಷ್ಠ ಸರ್ಜನ್ ಹಾಗೂ ಡರ್ಮಟಾಲಜಿಸ್ಟ್‌ಗಳಾಗಿರುವ ಕ್ರಮವಾಗಿ ಡಾ.ದಿನೇಶ್ ಜಿ.ಗೌಡ ಹಾಗೂ ಡಾ.ಸಾಧನಾ ಅವರು ಪರೀಕ್ಷೆಗಳನ್ನು ನಡೆಸಿದರು. ರೋಗಿಗಳ ಜತೆ ಸಂಭಾಷಿಸಿ ತಲೆಕೂದಲು ಹಾಗೂ ಚರ್ಮದ ಆರೋಗ್ಯದ ಕುರಿತು ಅವರಿಗಿರುವ ಸಂದೇಹಗಳನ್ನು ಪರಿಹರಿಸಿದರು ಹಾಗೂ ಆರೋಗ್ಯಕರ ಜೀವನಶೈಲಿಯ ಪ್ರಯೋಜನಗಳನ್ನು ವಿವರಿಸಿದರು.

ತಲೆಕೂದಲ ಆರೈಕೆಯ ರೋಗಿಗಳು ನೆತ್ತಿಯ ವಿಶ್ಲೇಷಣೆಗೆ ಒಳಪಡಬೇಕಾಗಿತ್ತು ಹಾಗೂ ಅದರ ಫಲಿತಾಂಶದ ಆಧಾರದಲ್ಲಿ ಅವರಿಗೆ ಪ್ರಾಥಮಿಕ ಚಿಕಿತ್ಸೆಯನ್ನು ಶಿಫಾರಸು ಮಾಡಲಾಯಿತು. ಚರ್ಮದ ಸಮಸ್ಯೆಯಿರುವ ರೋಗಿಗಳಿಗೆ, ಚರ್ಮದ ವಿಧವನ್ನು ಗಮನಿಸಿ, ಇಸಬು, ಮೊಡವೆ, ಸೀತಾಳೆ, ಸೋರ ಇತ್ಯಾದಿ ಸಮಸ್ಯೆಗಳನ್ನು ತಪಾಸಣೆ ನಡೆಸಲಾಯಿತು. ಚರ್ಮದ ಆರೈಕೆಯ ಶಿಫಾರಸಿನೊಂದಿಗೆ ಪ್ರಾಥಮಿಕ ಚಿಕಿತ್ಸೆಯನ್ನು ಒದಗಿಸಲಾಯಿತು. ಶಿಬಿರದಲ್ಲಿ ಭಾಗವಹಿಸಿದ ರೋಗಿಗಳಿಗೆ ಬೆಂಗಳೂರಿನಲ್ಲಿರುವ ಹೇರ್ ಲೈನ್ ಇಂಟರ್ ನ್ಯಾಶಲ್ ನಲ್ಲಿ ಭವಿಷ್ಯದ ಸಮಾಲೋಚನೆಗೆ ರಿಯಾಯ್ತಿ ನೀಡಲಾಗಿದೆ.

English summary

Reasons why Hair and skin problems are in 18 to 30 years age group

Over 450 men and women thronged the free hair and skin consultation and check up camp organised by Hairline International Hair and Skin Treatment Centre at Brindavan Hospital. More than 35 to 40% of the 450 patients diagnosed were in 18 to 30 years age group and faced serious hair problems
X
Desktop Bottom Promotion