For Quick Alerts
ALLOW NOTIFICATIONS  
For Daily Alerts

ನಿಮ್ಮ ಕೂದಲನ್ನು ಆಗಾಗ ತೊಳೆಯುವುದು ಸೂಕ್ತವೇ ?

By Arpitha Rao
|

ತಜ್ಞರು ನೀವು ಎಷ್ಟು ಬಾರಿ ಕೂದಲನ್ನು ತೊಳೆಯಲು ಅಂದರೆ ತಲೆಸ್ನಾನ ಮಾಡುವುದರಿಂದ ತೊಂದರೆಯಿಲ್ಲ ಎಂಬುದರ ಬಗ್ಗೆ ಹೀಗೆ ಹೇಳುತ್ತಾರೆ. ನೀವು ಜಿಮ್ ಗೆ ಹೋದಾಗ ಅಥವಾ ಕೆಲಸದಿಂದ ಮನೆಗೆ ಬರುವಾಗ ಬಿಸಿಲಿಗೆ ಬೆವರುವುದು ಖಂಡಿತ.ಈ ರೀತಿ ಅಧಿಕವಾಗಿ ಬೆವರುವುದರಿಂದ ಕೂದಲನ್ನು ಆಗಾಗ ತೊಳೆಯಬೇಕು,ತಲೆಸ್ನಾನ ಮಾಡಬೇಕು ಎಂದೆನಿಸುವುದು ಸಹಜ. ತಜ್ಞರು ಸಾಮಾನ್ಯವಾಗಿ ನೀವು ಎದುರಿಸಬಹುದಾದ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ.ಓದಿ ನೋಡಿ.

ಪ್ರತಿದಿನ ತಲೆಸ್ನಾನ ಸೂಕ್ತವೇ ?
ಪ್ರತಿದಿನ ತಲೆಸ್ನಾನ ಮಾಡುವ ಅವಶ್ಯಕತೆ ಇಲ್ಲ. ಈ ರೀತಿ ಮಾಡುವುದರಿಂದ ಶಾಂಪೂವಿನಲ್ಲಿರುವ ಅಧಿಕ ಕೆಮಿಕಲ್ಸ್ ನೆತ್ತಿಯಲ್ಲಿ ಅಗತ್ಯವಿರುವ ಎಣ್ಣೆ ಅಂಶವನ್ನು ಸಂಪೂರ್ಣ ಕಿತ್ತೊಗೆದು ತಲೆಯನ್ನು ಸಂಪೂರ್ಣವಾಗಿ ಒಣಗುವಂತೆ ಮಾಡುತ್ತದೆ. ವಾರದಲ್ಲಿ ಮೂರು ಬಾರಿ ತಲೆಸ್ನಾನ ಮಾಡಬಹುದು. ಅಧಿಕವಾಗಿ ಬೆವರಿದಾಗ ಕೇವಲ ನೀರನ್ನು ತಲೆಗೆ ಹಾಕಿಕೊಳ್ಳುವುದು ಸೂಕ್ತ. ಒಂದುವೇಳೆ ನೀವು ಬೆವರನ್ನು ತಡೆಯಲಾಗದಿದ್ದಲ್ಲಿ ಮೈಲ್ಡ್ ಶಾಂಪೂ ಬಳಸಿ ತಲೆಸ್ನಾನ ಮಾಡಿ.

ಮಳೆಗಾಲದಲ್ಲಿ ಕೂದಲಿನ ದುರ್ವಾಸನೆಯನ್ನು ತಡೆಗಟ್ಟುವುದು ಹೇಗೆ?

Is washing your hair too often okay?

ತಲೆಹೊಟ್ಟು ಸಮಸ್ಯೆ
ಬಿಸಿಲಿನ ಕಾರಣಕ್ಕೆ ತಲೆಹೊಟ್ಟು ಮತ್ತು ತಲೆ ಕೆರೆತ ಒಂದು ಸಾಮಾನ್ಯ ಸಮಸ್ಯೆ ಎನ್ನಬಹುದು.ಎರಡು ಬಗೆಯ ತಲೆಹೊಟ್ಟುಗಳು ಕಾಣಿಸಿಕೊಳ್ಳುತ್ತವೆ. ಒಂದು ಎಣ್ಣೆಯುಕ್ತ ತಲೆಹೊಟ್ಟು ,ಇನ್ನೊಂದು ಒಣ ತಲೆಹೊಟ್ಟು.ಎಣ್ಣೆ ತಲೆಹೊಟ್ಟು ನಿಮ್ಮ ವರ್ಣದ್ರವ್ಯವನ್ನು ಹೀರುವುದರಿಂದ ಇದು ಅಪಾಯಕರ, ಒಣ ತಲೆಹೊಟ್ಟು ಕೆಳಗೆ ಬೀಳುತ್ತವೆ. ತಲೆಯಲ್ಲಿರುವ ಹೊಟ್ಟುಗಳು ನೆತ್ತಿಯ ರಕ್ತಸಂಚಾರವನ್ನು ಕಡಿತಗೊಳಿಸುವುದರಿಂದ ಮೊಡವೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ನಿಮ್ಮದು ಎಣ್ಣೆಯುಕ್ತ ಕೂದಲಾದರೆ ಆಲೀವ್ ಎಣ್ಣೆ ಬಳಸಿ 15 ನಿಮಿಷ ಮಸಾಜ್ ಮಾಡಿ ಬಿಸಿ ಟವಲ್ ಕಟ್ಟಿ, ನಂತರ ತೊಳೆಯಿರಿ. ಮನೆ ಮದ್ದುಗಳಾದ ಶುಂಟಿ ರಸವನ್ನು ತಲೆಗೆ ಹಚ್ಚಿ ರಾತ್ರಿ ಬಿಟ್ಟು ಬೆಳಿಗ್ಗೆ ತಲೆಸ್ನಾನ ಮಾಡಬಹುದು. ದಿನ ಬಿಟ್ಟು ದಿನ ಮೈಲ್ಡ್ ಶಾಂಪೂ ಬಳಸಿ ತಲೆಸ್ನಾನ ಮಾಡಿ. ಹಸಿರು ತರಕಾರಿಗಳಾದ ಪಾಲಕ್ ಮತ್ತು ಮೆಂತ್ಯವನ್ನು ತಿನ್ನುವುದರ ಮೂಲಕ ಕೂಡ ತಲೆಹೊಟ್ಟು ಕಡಿಮೆ ಮಾಡಬಹದು.

ಗೋರಂಟಿ ಬಳಕೆ ಒಂದು ನಂಬಿಕೆ
ಮೆಹಂದಿಯ ಬಳಕೆಯಿಂದ ಕೂದಲು ಇನ್ನಷ್ಟು ಒರಟಾಗುತ್ತದೆ. ಡಾ ರಾಯ್ಸ್ ಹೇಳುವ ಪ್ರಕಾರ ಹೆನ್ನಾ ಬಳಕೆಯಿಂದ ಕೂದಲು ಕವಲೊಡೆದು ,ಸ್ಥಿರತೆಯನ್ನು ಕಳೆದುಕೊಳ್ಳುತ್ತದೆ. ಸಂಸ್ಕ್ರೀನ್ ಇರುವ ಕಂಡಿಷನರ್ ಬಳಕೆ ಸೂಕ್ತ ಎನ್ನಲಾಗುತ್ತದೆ.

ಹೇರ್ ಸೇರಮ್ಸ್ ಬಳಕೆ ಹೇಗೆ?
ಹೇರ್ ಸೇರಂ ಬಳಕೆಯಿಂದ ಕೂದಲು ಮೃದುವಾಗುತ್ತದೆ. ಬೇಸಿಗೆಯ ಒಣ ನೆತ್ತಿಗೆ ಇದು ಸೂಕ್ತವಾದುದು.ಯಾರಾದರೂ ಇದನ್ನು ಬಳಸಬಹುದು ಆದರೆ ಇದನ್ನು ಪಾಲಿಸಲು ಕೆಲವು ನಿಯಮಗಳಿವೆ.
ನೀವು ತುಂಬಾ ಬಳಸಿದರೆ ಕೂದಲು ಎಣ್ಣೆ ಎನಿಸುತ್ತದೆ ಆದ್ದರಿಂದ ಕೆಲವು ಹನಿಗಳನ್ನು ಕೈಯಲ್ಲಿ ತೆಗೆದುಕೊಂಡು ಕೂದಲಿಗೆ ಮಾತ್ರ ಹಚ್ಚಿ,ನೆತ್ತಿಗೆ ಹಚ್ಚಬೇಡಿ.

ಆರೋಗ್ಯಯುತ ಕೂದಲಿಗೆ ಕೆಲವು ಸಲಹೆ
*ಕವಲೊಡೆದ ಕೂದಲನ್ನು ಆಗಾಗ ಟ್ರಿಮ್ ಮಾಡಿ.
*ಸೂರ್ಯನ ಯು ವಿ ಕಿರಣಗಳಿಂದ ತಪ್ಪಿಸಲು ಹ್ಯಾಟ್, ಸ್ಕಾರ್ಫ್ ಬಳಸಿ.
*ಅಧಿಕ ಬಿಸಿಲಿರುವಾಗ ಅಂದರೆ 11 ರಿಂದ 4 ರ ಸಮಯದಲ್ಲಿ ಹೇರ್ ಸನ್ಸ್ಕ್ರೀನ್ ಬಳಸಿ.
*ಸ್ವಿಮ್ಮಿಂಗ್ ಹೋಗುವ ಮೊದಲು ಸ್ವಲ್ಪ ಕಂಡಿಷನರ್ ಬಳಸಿ.

ಕೂದಲ ಮಸಾಜ್ ಬಗ್ಗೆ
ನೈಸರ್ಗಿಕ ಹೇರ್ ಸ್ಪಾ ಆಯ್ದುಕೊಳ್ಳಿ.ಪ್ರಕೃತಿ ಒದಗಿಸುವ ಪೋಷಕಾಂಶಗಳ ಬಗ್ಗೆ ಗಮನ ಹರಿಸಿ. ದಾಸವಾಳವನ್ನು ಅರೆದು ಕೂದಲಿಗೆ ಹಚ್ಚಿ. ಇದು ನಿಮ್ಮ ಕೂದಲನ್ನು ಕಪ್ಪು ಮಾಡಿ ಬಲವನ್ನು ನೀಡುತ್ತದೆ. ಮೆಂತೆ ಮತ್ತು ಬೇವಿನ ಎಲೆಗಳ ಬಳಕೆಯಿಂದ ಕೂಡ ಕೂದಲು ಬಲಯುತವಾಗುತ್ತದೆ. ಆಲೋವೆರ ಉತ್ಕರ್ಷಣ ಶಕ್ತಿ ಹಿಂದಿದ್ದು ಕೂದಲ ಅಲರ್ಜಿಯನ್ನು ತಪ್ಪಿಸುತ್ತದೆ. ಇದು ಕೂದಲು ಶಕ್ತಿ ಪಡೆಯಲು ಸಹ ಸಹಾಯಕ. ಬೆಣ್ಣೆ ಹಣ್ಣು ಕೂಡ ಉತ್ಕರ್ಶಣ ಶಕ್ತಿ ಹೊಂದಿದ್ದು ಬಣ್ಣದ ಕೂದಲಿಗೆ ಸಹಾಯಕ.

English summary

Is washing your hair too often okay?

It's certainly hot and you're definitely sweating it out while commuting to work, at the gym or even at home. These increased levels of perspiration might make you feel like washing your hair every day. Experts tackle common questions that you may have about this predicament.
Story first published: Saturday, July 26, 2014, 16:01 [IST]
X
Desktop Bottom Promotion