For Quick Alerts
ALLOW NOTIFICATIONS  
For Daily Alerts

ಹೊಳೆಯುವ ಕೂದಲಿಗೂ, ತಂಪಾದ ಬಿಯರ್‌ಗೂ ಎತ್ತಿಂದೆತ್ತ ಸಂಬಂಧ?

By Super
|

ಬಿಯರ್ ಎಲ್ಲಾ ವಿಚಾರಗಳಿಗು ಕೆಟ್ಟದ್ದಲ್ಲ. ಹೌದು!, ನೀವು ಓದಿದ್ದು ಸರಿಯಾಗಿಯೇ ಇದೆ. ನಿಮ್ಮ ವೈದ್ಯರು ಮತ್ತು ಸ್ವತಃ ಬಿಯರ್ ಬಾಟಲ್ ಮೇಲಿನ ವ್ಯಾಖ್ಯಾನವು ಇದು ಆರೋಗ್ಯಕ್ಕೆ ಹಾನಿಕಾರಕ ಎಂದೇ ತಿಳಿಸುತ್ತದೆ. ಆದರೆ ನಿಮ್ಮ ಬ್ಯೂಟೀಷಿಯನ್ ಈ ಕುರಿತಾಗಿ ಬೇರೆಯದೆ ಆದ ಅಭಿಪ್ರಾಯವನ್ನು ಹೊಂದಿರುತ್ತಾರೆ. ಏಕೆಂದರೆ ಬಿಯರ್ ಅನ್ನು ಕೂದಲಿನ ಆರೈಕೆಗಾಗಿ ವ್ಯಾಪಕವಾಗಿ ಬಳಸುತ್ತಾರೆ. ಬಿಯರ್ ಎಂಬುದು ಬಾರ್ಲಿ, ಹಾಪ್‍ಗಳು, ಯೀಸ್ಟ್ ಮತ್ತು ನೀರಿನಿಂದ ತಯಾರಿಸುವ ಒಂದು ಆಲ್ಕೋಹಾಲಿಕ್ ಪೇಯವಾಗಿದೆ.

ಇದರ ಜೊತೆಗೆ ಗೋಧಿ, ಜೋಳ ಮತ್ತು ಅಕ್ಕಿಗಳನ್ನು ಸಹ ಸೇರಿಸಿ ವಿವಿಧ ಬಗೆಯ ಸ್ವಾದದ ಬಿಯರ್‌ಗಳನ್ನು ತಯಾರಿಸುತ್ತಾರೆ. ಮಾಲ್ಟ್ ಮತ್ತು ಹಾಪ್‍ಗಳನ್ನು ಸೇರಿಸಿ ಅಧಿಕ ಪ್ರೋಟೀನ್ ಯುಕ್ತ ಬೀಯರ್ ತಯಾರಿಸುತ್ತಾರೆ. ಇವುಗಳು ಕೂದಲಿಗೆ ಆರೈಕೆ ಮತ್ತು ಸದೃಢತೆಯನ್ನು ನೀಡಲು ಸಹಕರಿಸುತ್ತವೆ.

ಕೂದಲುಗಳು, ನಿರ್ಜಲೀಕರಣ, ಒಣಗುವಿಕೆ, ನೇರವಾಗಿಸುವಿಕೆ ಮತ್ತು ಕೆಟ್ಟ ಹವಾಮಾನದ ಕಾರಣವಾಗಿ ಹಾಳಾಗುತ್ತವೆ. ಬಿಯರ್ ಒಣ ಕೂದಲನ್ನು ಮತ್ತು ಹಾಳಾದ ಕೂದಲನ್ನು ಸರಿಪಡಿಸಿ ಅವುಗಳ ನೈಜ ಸೌಂದರ್ಯವನ್ನು ಹಿಂಪಡೆಯುವಂತಹ ಪೋಷಕಾಂಶಗಳನ್ನು ತನ್ನೊಳಗೆ ಒಳಗೊಂಡಿದೆ ಎಂಬ ಅಂಶವನ್ನು ಅಧ್ಯಯನಗಳು ಖಚಿತಪಡಿಸಿವೆ. ಬೀರ್‌ನಿಂದ ನಿಮ್ಮ ಕೂದಲಿಗೆ ದೊರೆಯುವಂತಹ ಕೆಲವೊಂದು ಉಪಯೋಗಗಳನ್ನು ಈ ಕೆಳಗೆ ಪಟ್ಟಿ ಮಾಡಿದ್ದೇವೆ, ಓದಿಕೊಳ್ಳಿ: ಬಿಯರ್ ನಿಂದ ನಿಮ್ಮ ಕೂದಲಿಗೆ ಹೇಳಿ ಚಿಯರ್ಸ್

ಸದೃಢಗೊಳಿಸಲು

ಸದೃಢಗೊಳಿಸಲು

ಬಿಯರ್ ಅನ್ನು ತಲೆಗೆ ಹಚ್ಚಿದ ಮೇಲೆ ಅದು ಒಣಗಲು ಆರಂಭಿಸುತ್ತದೆ. ಇದು ಒಣಗಿದ ಮೇಲೆ ಕಾರ್ಬೋನೆಷನ್ ಪ್ರಕ್ರಿಯೆ ಆರಂಭವಾಗುತ್ತದೆ. ಇದರಲ್ಲಿರುವ ಗೋಧಿ, ಮಾಲ್ಟ್ ಮತ್ತು ಹಾಪ್‍ಗಳು ಕೂದಲಿನ ಹಾರೈಕೆಗೆ ನೆರವು ನೀಡುತ್ತದೆ.

ಕಂಡೀಶನರ್

ಕಂಡೀಶನರ್

ಕೂದಲಿಗೆ ಮಾಮೂಲಿನಂತೆ ಶಾಂಪೂ ಹಾಕಿ. ನಂತರ ಅದರ ಮೇಲೆ ಸ್ವಲ್ಪ ಬಿಯರ್ ಚಿಮುಕಿಸಿ. ಇದು ಬೀಯರನ್ನು ನಿಮ್ಮ ಕೂದಲಿಗೆ ಬಳಸಿಕೊಳ್ಳಲು ಇರುವ ಉಪಯೋಗಗಳಲ್ಲಿ ಒಂದಾಗಿದೆ. ಕೂದಲಿಗೆ ಕಂಡೀಶನಿಂಗ್ ನೀಡಲು ಮೊಟ್ಟೆಗಳು ಸಹ ಕೆಲಸ ಮಾಡುತ್ತವೆ. ಆದರೆ ಬೀಯರನ್ನು ನಿಮ್ಮ ಕೂದಲಿನ ಮೇಲೆ ಚಿಮುಕಿಸುವುದರಿಂದ ಒಳ್ಳೆಯ ಫಲಿತಾಂಶಗಳನ್ನು ಪಡೆಯಬಹುದು.

ಹಾಳಾದ ಕೂದಲಿನ ಬುಡವನ್ನು ರಿಪೇರಿ ಮಾಡಲು

ಹಾಳಾದ ಕೂದಲಿನ ಬುಡವನ್ನು ರಿಪೇರಿ ಮಾಡಲು

ಬೀಯರ್‌ನಲ್ಲಿರುವ ಪ್ರೋಟೀನ್ ಹಾಳಾದ ಕೂದಲಿನ ಬುಡಗಳನ್ನು ಸರಿಪಡಿಸಲು ನೆರವು ನೀಡುತ್ತದೆ. ಇದನ್ನು ಮಾಡಲು ವಿಶೇಷ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. 2 ವಾರಕ್ಕೊಮ್ಮೆ ಇದನ್ನು ಮಾಡುವುದರಿಂದ ಒಳ್ಳೆಯ ಫಲಿತಾಂಶಗಳನ್ನು ಪಡೆಯಬಹುದು.

ಕೂದಲಿನ ಕಾಂಡಕ್ಕೆ ಪೋಷಕಾಂಶ ನೀಡುತ್ತದೆ

ಕೂದಲಿನ ಕಾಂಡಕ್ಕೆ ಪೋಷಕಾಂಶ ನೀಡುತ್ತದೆ

ಬೀಯರ್ ಕೇವಲ ಹಾಳಾದ ಕೂದಲಿಗೆ ಆರೈಕೆಯನ್ನು ನೀಡುವುದಿಲ್ಲ. ಜೊತೆಗೆ ಅದು ಕೂದಲಿನ ಕಾಂಡವನ್ನು ಸದೃಢಗೊಳಿಸುತ್ತದೆ.

ಕೂದಲಿಗೆ ಮೃದುತ್ವವನ್ನು ಮತ್ತು ಹೊಳಪನ್ನು ನೀಡುತ್ತದೆ

ಕೂದಲಿಗೆ ಮೃದುತ್ವವನ್ನು ಮತ್ತು ಹೊಳಪನ್ನು ನೀಡುತ್ತದೆ

ಮೃದುವಾದ, ಹೊಳೆಯುವ ಕೂದಲನ್ನು ಖಂಡಿತ ಪಡೆಯಲು ಇರುವ ಅತ್ಯುತ್ತಮ ಮಾರ್ಗಗಳಲ್ಲಿ ಬೀಯರ್ ಸಹ ಒಂದು. ಇದಕ್ಕಾಗಿ ಬೀಯರ್ ಅನ್ನು ಒದ್ದೆಯಾದ ಕೂದಲಿನ ಮೇಲೆ ಚಿಮುಕಿಸಿ ಮತ್ತು ಇದನ್ನು ಸ್ವಾಭಾವಿಕವಾಗಿ ಒಣಗಲು ಬಿಡಿ ಅಥವಾ ಇದನ್ನು ಬ್ಲೋ ಡ್ರೈಯಿಂಗ್ ಅಥವಾ ಕೂದಲಿನ ಸ್ಟೈಲಿಂಗ್ ಮಾಡುವ ಮುನ್ನ ಬಳಸಿ.

ಮೊಯಿಶ್ಚರನ್ನು ಮರಳಿ ಪಡೆಯಲು

ಮೊಯಿಶ್ಚರನ್ನು ಮರಳಿ ಪಡೆಯಲು

ಕೂದಲಿನ ಆರೈಕೆಗೆ ಬೀರನ್ನು ಸುಮ್ಮನೆ ಕೂದಲಿನ ಮೇಲೆ ಲೇಪಿಸಿ ಸಾಕು. ಬೀಯರ್‌ನಲ್ಲಿರುವ ಪ್ರೋಟೀನ್ ಕೂದಲಿನ ಮೊಯಿಶ್ಚರನ್ನು ಮರಳಿ ದೊರಕಿಸುತ್ತದೆ. ತಣ್ಣೀರು ಕೂದಲು ಸಿಕ್ಕಿನ ಸಮಸ್ಯೆ ಕಡಿಮೆ ಮಾಡುತ್ತದೆ ಮತ್ತು ಕೂದಲಿಗೆ ಹೊಳಪನ್ನು ನೀಡುತ್ತದೆ.

ಪೋಷಕಾಂಶಗಳು

ಪೋಷಕಾಂಶಗಳು

ಬೀಯರ್‪‌ನಲ್ಲಿ ಕೂದಲಿಗೆ ಬೇಕಾದ ಪೋಷಕಾಂಶಗಳು, ವಿಟಮಿನ್‍ಗಳು, ಅಮೈನೊ ಆಮ್ಲಗಳು ಮತ್ತು ಆಂಟಿಆಕ್ಸಿಡೆಂಟ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಶಾಂಪೂ ಮತ್ತು ಕಂಡೀಶನರ್‌ನ ಮಿಶ್ರಣವನ್ನು ಕೂದಲನ್ನು ತೊಳೆಯಲು ಬಳಸಬಹುದು.

ಒಡೆದ ತುದಿಗಳು

ಒಡೆದ ತುದಿಗಳು

ಬೀಯರ್ ಅನ್ನು ಬಳಸಿಕೊಂಡು ಕೂದಲಿಗೆ ಮಸಾಜ್ ಮಾಡುವುದರಿಂದ ಈ ಸಮಸ್ಯೆಯನ್ನು ನಿವಾರಿಸಬಹುದು. ಇದಕ್ಕಾಗಿ ಬೀಯರ್‌ನ ಸಹಾಯದಿಂದ ಕೂದಲನ್ನು ಚೆನ್ನಾಗಿ ನೆನೆಸಿ. ನಂತರ ಇದನ್ನು ತಣ್ಣೀರಿನ ಸಹಾಯದಿಂದ ಸಂಪೂರ್ಣವಾಗಿ ತೊಳೆಯಿರಿ. ಒಡೆದ ತುದಿಗಳ ಸಮಸ್ಯೆಯಿಂದ ಮುಕ್ತಿ ಹೊಂದಿ.

ಒಣ ಕೂದಲು

ಒಣ ಕೂದಲು

ಬೀಯರ್ ಕೂದಲಿಗೆ ಮೊಯಿಶ್ಚರನ್ನು ಮರಳಿಪಡೆಯಲು ಸಹಾಯ ಮಾಡುತ್ತದೆ. ಬೀಯರ್‪ನಲ್ಲಿರುವ ಪ್ರೋಟೀನ್‍ಗಳು, ಮೊಯಿಶ್ಚರನ್ನು ಮರಳಿ ಒದಗಿಸುವ ಕೆಲಸ ಮಾಡುತ್ತವೆ. ವಾರಕ್ಕೊಮ್ಮೆ ಬೀಯರ್ ಅನ್ನು ಬಳಸುವುದರಿಂದ ನೀವು ಈ ಅನುಕೂಲವನ್ನು ಪಡೆಯಬಹುದು.

ಸಿಕ್ಕಾದ ಕೂದಲು

ಸಿಕ್ಕಾದ ಕೂದಲು

ಇಂತಹ ಕೂದಲನ್ನು ನಿಭಾಯಿಸುವುದು ಕಷ್ಟ. ಸಿಕ್ಕು ಸಿಕ್ಕಾದ ಕೂದಲಿಗಾಗಿ ಬೀರನ್ನು ಬಳಸುವುದು ಉತ್ತಮ. ಬೀಯರ್‌ನಲ್ಲಿರುವ ಪ್ರೋಟೀನ್‍ಗಳು ಕೂದಲಿಗೆ ಮೃದುತ್ವವನ್ನು ಮತ್ತು ಹೊಳಪನ್ನು ನೀಡಿ, ಅದರ ಲುಕ್ ಅನ್ನು ಸುಧಾರಿಸುತ್ತವೆ ಮತ್ತು ನಿಮ್ಮ ಕೂದಲ ನಿರ್ವಹಣೆಯನ್ನು ಸುಲಭ ಮಾಡುತ್ತವೆ.

English summary

How To Use Beer For Shiny Hair

Beer is not always bad! Yes, you heard it right. Your doctor will say beer is not good for your health. However, your beautician will have a different opinion on this. Beer is widely used for hair care. The following are some tips on how to use beer for hair.
X
Desktop Bottom Promotion