For Quick Alerts
ALLOW NOTIFICATIONS  
For Daily Alerts

ಬೊಕ್ಕತಲೆ ನಿವಾರಣೆಗೆ ಗೃಹೋಪಾಯಗಳು

By Poornima Heggade
|

ಕೂದಲು ದೇಹ ಸೌಂದರ್ಯದ ಮೇಲೆ ಬಹಳ ಪ್ರಭಾವ ಬೀರುತ್ತವೆ. ಎಷ್ಟೇ ಸದೃಢ ಮೈಕಟ್ಟನ್ನು ಹೊಂದಿದ್ದರೂ ತಲೆಯ ಮೇಲೆ ಕೂದಲಿಲ್ಲ ಎಂದಾದರೆ ಸೌಂದರ್ಯ ಏನೂ ಇಲ್ಲ ಎಂಬಂತಾಗುತ್ತದೆ. ಹಾಗಾದರೆ ಕೂದಲು ಉದುರತ್ತವೆ ಎಂದಾದರೆ ಅದಕ್ಕೆ ಪರಿಹಾರವೇ ಇಲ್ಲವೇ? ಖಂಡಿತ ಇದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯಕರ ಕೂದಲಿಗೆ ಮನೆಮದ್ದುಗಳು

ಮೊದಲಿಗೆ ಕೂದಲು ಯಾವಾಗ ಉದುರುತ್ತದೆ ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಬೇಕು. ಆರೋಗ್ಯವಂತ ಮನುಷ್ಯನಲ್ಲಿ ಪ್ರತಿ ದಿನ 50 ರಿಂದ 100 ಕೂದಲು ಉದುರುತ್ತವೆ ಎಂದು ಸಂಶೊಧನೆಗಳು ಹೇಳುತ್ತವೆ. ಇದು ಸಾಮಾನ್ಯವಾಗಿದೆ ಹಾಗೂ ಒಂದು ಪ್ರಕ್ರಿಯೆಯಾಗಿದೆ.

ಆದರೆ ಇದರ ಮಿತಿ ಮೀರಿ ನಿಮ್ಮ ಕೂದಲು ಉದುರುತ್ತಿವೆ ಎಂದಾದರೆ ನಿರ್ಲಕ್ಷ ಮಾಡದಿರಿ. ಹೀಗೆ ಯಾವುದಾದರೂ ಸೂಚನೆಗಳು ಕಂಡು ಬಂದ ಕೂಡಲೆ ಚರ್ಮರೋಗ ತಜ್ಞರ ಬಳಿ ಸಂಪರ್ಕಿಸಿ. ಕೂದಲು ಉದುರುವಿಕೆ ಕೇವಲ ಕೂದಲಿಗೆ ಸಂಬಂಧ ಪಡದೆ ನಮ್ಮ ದೇಹದಲ್ಲಿರುವ ಯಾವುದೋ ಒಂದು ಅನಾರೋಗ್ಯದಿಂದ ಕೂದಲು ಉದುರುವ ಸಾಧ್ಯತೆಗಳಿವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕೂದಲಿನ ಸಾಮಾನ್ಯ ಸಮಸ್ಯೆಗಳಿಗೆ ಮನೆಮದ್ದು

ಪುರುಷರಲ್ಲಿ ಕೂದಲು ಉದುರುವಿಕೆಗೆ ಗಂಡಸರಲ್ಲಿರುವ ಹಾರ್ಮೋನುಗಳೇ ಕಾರಣ. ಇದಕ್ಕಾಗಿಯೇ ಮಹಿಳೆಯರಲ್ಲಿ ಬೊಕ್ಕ ತಲೆಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸುವುದಿಲ್ಲ. ಇದರ ಜೊತೆಗೆ ಇದು ವಂಶವಾಹಿಗಳಲ್ಲಿ ಮುಂದಿನ ಪೀಳಿಗೆಗಳಿಗೆ ಹರಿದು ಬರುವ ಒಂದು ಲಕ್ಷಣವೂ ಆಗಿದೆ.ಹೀಗಾಗಿ ಕೂದಲು ಉದುರಲು ಆರಂಭವಾಗಿವೆ ಎಂದಾದ ಕೂಡಲು ಮನೆಯಲ್ಲೇ ಮಾಡಬಹುದಾದ ಹಲವು ಕ್ರಮಗಳಿವೆ.

ಇದರಿಂದ ನೀವು ಬೊಕ್ಕ ತಲೆಯವರಾಗುವುದನ್ನು ತಡೆಯಲು ಕಷ್ಟ ಸಾಧ್ಯವಾದರೂ ಬಹಳ ದಿನಗಳ ವರೆಗೆ ಮುಂದೂಡುವುದಂತೂ ಸಾಧ್ಯವಿದೆ. ಕೂದಲು ಉದುರುವಿಕೆಯನ್ನು ತಡೆಯಲು ಹಲವು ವೈದ್ಯಕೀಯ ವಿಧಾನಗಳು ಇದ್ದರೂ ಇವುಗಳಲ್ಲಿ ಹಾರ್ಮೋನುಗಳ ಮೇಲೆ ಪ್ರಭಾವ ಆಗುತ್ತದೆ ಇದರಿಂದಾಗಿ ಪುರುಷರ ಸಂತಾನೋತ್ಪತ್ತಿಯ ಸಾಮರ್ಥ್ಯದಲ್ಲಿ ಪ್ರಭಾವ ಬೀರುವ ಸಾಧ್ಯತೆಗಳಿವೆ.

ಆದ್ದರಿಂದ ಮನೆಯಲ್ಲೇ ಮಾಡಬಹುದಾದ ಕೆಲವು ಸರಳ ಉಪಾಯಗಳ ಮೂಲಕ ಕೂದಲು ಉದುರುವಿಕೆಯನ್ನು ತಡೆಯಲು ಹೊರಟರೆ ಸೂಕ್ತ. ಇಲ್ಲಿ ಇವುಗಳಲ್ಲಿ ಕೆಲವನ್ನು ನೀಡಲಾಗಿದೆ. ಹೆಚ್ಚಿನವು ಬಹಳ ಸರಳ ಮತ್ತು ಪರಿಣಾಮಕಾರಿಯಾದ ವಿಧಾನಗಳಾಗಿವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗುಂಗುರು ಕೂದಲಿನ ಆರೈಕೆಗೆ ಬರಿಯ ಐದು ನಿಮಿಷಗಳು

1.ಎಣ್ಣೆ ಮಸಾಜ್

1.ಎಣ್ಣೆ ಮಸಾಜ್

ತೆಂಗಿನ ಎಣ್ಣೆ, ಬಾದಾಮಿ ಎಣ್ಣೆ, ಆಲೀವ್ ಎಣ್ಣೆ, ಹರಳೆಣ್ಣೆ, ನೆಲ್ಲಿಕಾಯಿ ಎಣ್ಣೆ ಹಾಗೂ ಇನ್ನಿತರ ಸ್ವಾಭಾವಿಕ ಎಣ್ಣೆಗಳಿಂದ ಮಸಾಜ್ ಮಾಡಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು ಬೊಕ್ಕ ತಲೆಯ ಸಮಸ್ಯೆಯನ್ನೂ ಬಹಳ ಮಟ್ಟಿಗೆ ನಿವಾರಿಸಬಹುದು. ಒಂದೇ ಎಣ್ಣೆ ಅಥವಾ ನಿಮಗೆ ಇಷ್ಟವಾಗುವ ಎರಡು ಎಣ್ಣೆಗಳಿಂದ ನಿಯಮಿತವಾಗಿ ಎಣ್ಣೆ ಮಸಾಜ್ ಮಾಡಿದಿರಿ ಎಂದಾದರೆ ಕುದಲು ಉದುರುವಿಕೆಯ ಸಮಸ್ಯೆಯನ್ನು ಬಹಳ ಮಟ್ಟಿಗೆ ನಿವಾರಿಸಬಹುದು.

2.ತೆಂಗಿನ ಹಾಲು

2.ತೆಂಗಿನ ಹಾಲು

ನಮ್ಮ ದೇಹದ ಜೀವಕಣಗಳ ಅಭಿವೃದ್ಧಿಗೆ ಬಳಸುವ ಅತ್ಯಂತ ಉಪಯುಕ್ತವಾದ ಒಂದು ಅಂಶವೆಂದರೆ ತೆಂಗಿನ ಹಾಲು. ತೆಂಗಿನ ತುರಿಯನ್ನು ಸಣ್ಣಗೆ ಅರೆದು ಅದನ್ನು ಹಿಂಡಿದಾಗ ತೆಂಗಿನ ಹಾಲು ಬರುತ್ತದೆ. ಇದರಿಂದಾಗಿ ತಲೆಯೆ ಮಸಾಜ್ ಮಾಡಿಕೊಂಡರೆ ಬಹಳ ಪ್ರಭಾವಶಾಲಿ.

3.ಗೋರಂಟಿ ಎಲೆಗಳು / ಮದರಂಗಿ ಎಲೆಗಳು

3.ಗೋರಂಟಿ ಎಲೆಗಳು / ಮದರಂಗಿ ಎಲೆಗಳು

ಇದು ಭಾರತದಲ್ಲಿ ಅತ್ಯಂತ ಪ್ರಸಿದ್ಧ ಕೇಶವರ್ಧಕ ಮತ್ತು ಕೂದಲನ್ನು ಕಪ್ಪಾಗಿಡಲು ಬಳಸುವ ಔಷಧ. ಇದು ಮದುವೆಯ ಸಮಯದಲ್ಲಿ ಕೈಯಲ್ಲಿ ಬಿಡಿಸುವ ವಿವಿಧ ಚಿತ್ತಾರಗಳ ಕಾರಣದಿಂದಲೂ ಬಹಳ ಪ್ರಸಿದ್ಧ. ಸಾಸಿವೆ ಎಣ್ಣೆಯಲ್ಲಿ ಮದರಂಗಿ ಎಲೆಗಳನ್ನು ಬೇಯಿಸಬೇಕು ಇದನ್ನು ಸಾಮಾನ್ಯ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಹಾಗೂ ತಲೆಯ ಮೇಲೆ ಹಚ್ಚಿಕೊಳ್ಳಿ.

4.ಭಾರತೀಯ ಗೂಸ್ ಬೆರ್ರಿ

4.ಭಾರತೀಯ ಗೂಸ್ ಬೆರ್ರಿ

ಇದನ್ನು ಭಾರತದಲ್ಲಿ ಸಾಮಾನ್ಯವಾಗಿ ಆಮ್ಲಾ ಎಂದು ಕರೆಯಲಾಗುತ್ತದೆ. ಇದನ್ನು ಕೂದಲು ವೃದ್ಧಿಯ ಕಾರಣಕ್ಕಾಗಿ ಹಾಗೂ ಕೂದಲನ್ನು ಸುಸ್ಥಿತಿಯಲ್ಲಿಡಲು ಬಳಸಲಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಬಹಳ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಇದರ ಕೊರೆತೆಯಿಂದಾಗಿ ಕೂದಲು ಉದುರಲು ಆರಂಭವಾಗುತ್ತವೆ. ಆಮ್ಲಾ ರಸ ಮತ್ತು ಲಿಂಬೆ ಹಣ್ಣಿನ ರಸಗಳ ಮಿಶ್ರಣವನ್ನು ಹಚ್ಚಿ ಹಾಗೂ ಒಂದು ದಿನ ಹಾಗೆಯೇ ಬಿಡಿ ಹಾಗೂ ಮುಂದಿನ ದಿನ ಸ್ನಾನ ಮಾಡುವಾಗ ಶಾಂಪೂ ಬಳಸಿ ಸ್ನಾನ ಮಾಡಿ.

5.ಮೆಂತ್ಯ ಗಿಡ

5.ಮೆಂತ್ಯ ಗಿಡ

ಮೆಂತ್ಯೆ ಗಿಡ ಮತ್ತು ಸೊಪ್ಪು ಕೂದಲು ಉದುರುವಿಕೆಯನ್ನು ತಡೆಯಲು ಬಹಳ ಸುಲಭದ ಮತ್ತು ಪರಿಣಮಕಾರಿ ದಾರಿಯಾಗಿದೆ. ಇವುಗಳಲ್ಲಿರುವ ಹಾರ್ಮೋನು ವರ್ಧಕ ಗುಣದಿಂದಾಗಿ ಕೂದಲು ಬಹಳ ಬೇಗನೆ ಮತ್ತು ಆರೋಗ್ಯಪೂರ್ಣವಾಗಿ ಬೆಳೆಯುತ್ತವೆ. ಇವುಗಳಲ್ಲಿ ನಿಕೊಟಿನಿಕ್ ಆಮ್ಲಗಳೂ ಇವೆ. ಮೆಂತ್ಯೆ ಸೊಪ್ಪುನಿಂದ ಪೇಸ್ಟ್ ತಯಾರಿಸಿ ಇದನ್ನು ಸ್ನಾನದ ಒಂದು ಗಂಟೆಗೆ ಮುನ್ನ ಹಚ್ಚಿ ಸ್ನಾನ ಮಾಡಿ.

6.ಈರುಳ್ಳಿ

6.ಈರುಳ್ಳಿ

ಇಡಿ ತಲೆಯಲ್ಲಿ ಅಲ್ಲದೆ ಅಲ್ಲಲ್ಲಿ ಬೊಕ್ಕ ತಲೆ ಉಂಟಾದಾಗ ಈರುಳ್ಳಿಯನ್ನು ಬಳಸಿ ಅದನ್ನು ಕಡಿಮೆ ಮಾಡಬಹುದು. ದೊಡ್ಡ ಈರುಳ್ಳಿಯನ್ನು ರುಬ್ಬಿ ಅದರಿಂದ ರಸವನ್ನು ತೆಗೆಯಿರಿ ಇದನ್ನು ಆಲೋವೆರಾದ ಜೊತೆಗೆ ಮಿಶ್ರಣ ಮಾಡಿ ಸ್ನಾನಕ್ಕೆ 10 - 15 ನಿಮಿಷಗಳ ಮುಂಚೆ ಹಚ್ಚಿ ಸ್ನಾನ ಮಾಡಿ.

English summary

Home remedies to get rid of baldness

Firstly it is important to know when you are balding. In general a healthy adult is said to lose hair between 50 to 100 strands every day. This is said to be normal and part of the process.
Story first published: Saturday, February 15, 2014, 9:37 [IST]
X
Desktop Bottom Promotion