For Quick Alerts
ALLOW NOTIFICATIONS  
For Daily Alerts

ಸಾಂಪ್ರದಾಯಿಕ ದಿರಿಸಿನಲ್ಲಿ ನಿಮ್ಮ ಕೇಶವಿನ್ಯಾಸ ಹೇಗಿರಬೇಕು?

|

ನೀವು ಸಾಂಪ್ರದಾಯಿಕ ದಿರಿಸನ್ನು ತೊಟ್ಟಾಗ ಅದಕ್ಕೆ ತಕ್ಕಂತೆ ಅಲಂಕಾರ ಮಾಡಿಕೊಳ್ಳುವುದು ಸಹಜ. ಅಲ್ಲದೆ ಸಾಂಪ್ರದಾಯಿಕ ಉಡುಗೆಗಳಲ್ಲಿ ಇನ್ನಷ್ಟು ಸುಂದರಿಯಾಗಿ ಕಾಣಲು ಕೂಡ ನೀವು ಪ್ರಯತ್ನಪಡುತ್ತೀರಿ, ಜೊತೆಗೆ ಉಡುಗೆಗೆ ಹೊಂದಿಕೆಯಾಗುವ ಬಳೆಗಳು ಅಥವಾ ಬ್ರಾಸ್‌ಲೆಟ್ ಅಥವಾ ತಕ್ಕುದಾದ ಚಪ್ಪಲಿಯನ್ನು ಆಯ್ಕೆಮಾಡಿಕೊಳ್ಳುವುದರಲ್ಲಿಯೇ ಕಾಲ ಕಳೆಯುತ್ತೀರಿ.

ಆದರೆ ನೀವು ಯಾವುದೇ ಉಡುಗೆಗೆಯನ್ನು ಧರಿಸಿದರೂ ಕೂಡ ಅದಕ್ಕೆ ಸೂಕ್ತವಾದ ಕೇಶವಿನ್ಯಾಸವನ್ನು ನೀವು ಮಾಡಿಕೊಳ್ಳುವುದು ಕೂಡ ಅತ್ಯವಶ್ಯಕ. ಏಕೆಂದರೆ ಕೇಶವಿನ್ಯಾಸವು ನಿಮ್ಮ ಎಲ್ಲಾ ನೋಟವನ್ನು ಸಂಪೂರ್ಣಗೊಳಿಸುತ್ತದೆ ಮಾತ್ರವಲ್ಲ ನಿಮ್ಮನ್ನು ಇನ್ನುಷ್ಟು ಅದ್ಭುತರನ್ನಾಗಿಸುತ್ತದೆ. ಅಲ್ಲದೆ ಸುಂದರವಾದ ಕೇಶವಿನ್ಯಾಸವು ನಿಮ್ಮ ಸಾಂಪ್ರದಾಯಿಕ ಉಡುಗೆಯನ್ನು ಇನ್ನಷ್ಟು ವಿಶೇಷವಾಗಿಸುತ್ತದೆ.

ಸಾಮಾನ್ಯವಾಗಿ ಸಾಂಪ್ರದಾಯಿಕ ಭಾರತೀಯ ಜಡೆಯನ್ನು ಹಾಕಿಕೊಳ್ಳಬಹುದು ಇಲ್ಲವೇ ತುರುಬು ಹಾಕಿ ನಿಮ್ಮ ಸಾಂಪ್ರದಾಯಿಕ ನೋಟವನ್ನು ಸುಂದರಗೊಳಿಸಬಹುದು. ಸಾಂಪ್ರದಾಯಿಕ ಉಡುಗೆಗೆ ತಕ್ಕಂತಹ ಕೆಲವೊಂದು ಕೇಶವಿನ್ಯಾಸಗಳನ್ನು ನಾವು ನಿಮಗಾಗಿ ನೀಡುತ್ತಿದ್ದು ಇದನ್ನು ನೀವೂ ಪ್ರಯತ್ನಿಸಿ ಸುಂದರಗೊಳ್ಳಿ.

Hairstyles to go with Indian Traditional Outfits

ಪಿನ್ ಮಾಡಿದ ಕೂದಲು
ಸ್ವಲ್ಪ ಕೂದಲನ್ನು ಹಾಗೆಯೇ ಗಾಳಿಗೆ ಹಾರಲು ಬಿಡುವುದು ಸಾಂಪ್ರದಾಯಿಕ ಕೇಶವಿನ್ಯಾಸವಾಗಿದೆ ಯಾವುದೇ ಸಾಂಪ್ರದಾಯಿಕ ಉಡುಗೆಗೆ ಹೇಳಿಮಾಡಿಸಿದಂತಿರುತ್ತದೆ. ನೀವು ಕೂದಲಿಗೆ ಪಿನ್ ಹಾಕಿ ಸಣ್ಣ ಪಫ್‌ನಂತ ಕೇಶ ವಿನ್ಯಾಸ ಕೂಡ ಮಾಡಬಹುದು. ಕೂದಲಿನ ಆರೈಕೆಯಲ್ಲಿ ಪಾಲಿಸಬಹುದಾದ 10 ವಿಧಾನಗಳು

ಹೇರ್ ಬನ್
ಸಾಂಪ್ರದಾಯಿಕ ಉಡುಗೆಗೆ ಈ ಕೇಶ ವಿನ್ಯಾಸ ನಿಮ್ಮನ್ನು ಇನ್ನಷ್ಟು ಸುಂದರವಾಗಿರುತ್ತದೆ. ನೀವು ಸೀರೆ ಅಥವಾ ಲೆಹಂಗಾವನ್ನು ಧರಿಸಿದ್ದರೆ, ಹೇರ್ ಬನ್ ಮಾಡಿಕೊಳ್ಳಿ. ಹೇರ್ ಪಿನ್ ಅಥವಾ ಕ್ಲಿಪ್‌ಗಳನ್ನು ಅಲಂಕಾರಿಕವಾಗಿ ಬನ್‌ಗೆ ಬಳಸಿಕೊಳ್ಳಬಹುದು. ಕೂದಲಿನ ಸಮಸ್ಯೆಗೆ ಅತಿ ಸರಳವಾದ ಮನೆ ಮದ್ದು

ಸೈಡ್ ಹೇರ್
ಸಾಂಪ್ರದಾಯಿಕ ಔಟ್‌ಫಿಟ್‌ನಲ್ಲಿ ಕ್ಲಾಸಿಕ್ ಮತ್ತು ಸ್ಟೈಲಿಶ್ ಆಗಿ ಕಾಣಬೇಕೆಂಬ ಬಯಕೆ ನಿಮ್ಮದಾಗಿದ್ದರೆ, ಈ ಹೇರ್‌ಸ್ಟೈಲ್ ಅನ್ನು ಅನುಸರಿಸಿ. ಸೈಡ್ ಹೇರ್‌ಸ್ಟೈಲ್ ನಿಮ್ಮನ್ನು ಇನ್ನಷ್ಟು ಸುಂದರಿಯನ್ನಾಗಿಸುತ್ತದೆ.

ರಫ್ ಬನ್
ನಿಮ್ಮ ಕೂದಲನ್ನು ಬನ್ ರೀತಿಯಲ್ಲಿ ಕಟ್ಟುವುದು ಸಾಂಪ್ರದಾಯಿಕ ಕೇಶವಿನ್ಯಾಸಕ್ಕೆ ಚೆನ್ನಾಗಿರುತ್ತದೆ. ನಿಮಗೆ ಬಿಗಿಯಾದ ತುರುಬು ಇಷ್ಟವಾಗದಿದ್ದರೆ, ರಫ್ ಬನ್‌ ಅನ್ನು ಅನುಸರಿಸಿ.

ಸೈಡ್ ಸ್ವೆಪ್ಟ್ ಹೇರ್
ಸಾಮಾನ್ಯ ಸಾಂಪ್ರದಾಯಿಕ ಉಡುಗೆಗಳಾದ ಸಲ್ವಾರ್ ಅಥವಾ ಕುರ್ತಾಗೆ ಸೈಡ್ ಸ್ವೆಪ್ಟ್ ಹೇರ್ ಅನ್ನು ಅನುಸರಿಸಿ.

English summary

Hairstyles to go with Indian Traditional Outfits

Indian outfits like saree, salwar kameez, anarkali suits and lehengas are meant to be accessorized. Along with accessories, what also matters is the way you style your hair when you wear Indian outfits. There are plenty of options out there to try with regard to hair styles.
Story first published: Tuesday, November 4, 2014, 17:48 [IST]
X
Desktop Bottom Promotion