For Quick Alerts
ALLOW NOTIFICATIONS  
For Daily Alerts

ಹೇರ್‌ಲೈನ್ ಇಂಟರ್‌ನ್ಯಾಷನಲ್: ಕೇಶ ಕಸಿಯಲ್ಲೇ ಒಂದು ವಿನೂತನ ಪ್ರಯೋಗ

By Super
|

ನಗರದ ಹೆಸರುವಾಸಿ ಕೇಶ ಮತ್ತು ಚರ್ಮ ಪರೀಕ್ಷಾ ಕ್ಲಿನಿಕ್ ಮತ್ತು ಸಂಶೋಧನಾ ಕೇಂದ್ರವಾಗಿರುವ ಹೇರ್‌ಲೈನ್ ಇಂಟರ್‌ನ್ಯಾಷನಲ್ ಮೊಟ್ಟಮೊದಲ ಬಾರಿಗೆ ವಿನೂತನ ಕೇಶ ಕಸಿ ವಿಧಾನವಾಗಿರುವ 'ಸ್ಕಾರ್‍ಲೆಸ್ ಹೇರ್ ಟ್ರಾನ್ಸ್‍ಪ್ಲ್ಯಾಂಟ್ ವಿತ್ ಎಸೆಲ್ ಮ್ಯಾಟ್ರಿಕ್' ಅನ್ನು ಭಾರತಕ್ಕೆ ಪರಿಚಯಿಸುತ್ತಿದೆ.

ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ತಂತ್ರಜ್ಞಾನವನ್ನು ಬಿಡುಗಡೆ ಮಾಡಿ ಮಾತನಾಡಿದ ಹೇರ್‌ಲೈನ್ ಇಂಟರ್‌ನ್ಯಾಷನಲ್ ಹೇರ್ ಮತ್ತು ಸ್ಕಿನ್ ಕ್ಲಿನಿಕ್‍ನ ಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀಮತಿ ಬಾನಿ ಆನಂದ್ "ಹೇರ್‌ಲೈನ್ ಕ್ಲಿನಿಕ್‍ನಲ್ಲಿ ನಾವು ರೋಗಿಯ ಕೋರಿಕೆಗೆ ತಕ್ಕ ಹಾಗೆ ಚಿಕಿತ್ಸೆ ನೀಡುವಲ್ಲಿ ಸದಾ ಪ್ರಯತ್ನಿಸುತ್ತೇವೆ. ಅದರ ಮುಂದುವರಿದ ಭಾಗವೇ ಸ್ಕಾರ್‍ಲೆಸ್ ಹೇರ್ ಟ್ರಾನ್ಸ್‍ಪ್ಲ್ಯಾಂಟ್. ಅದೇ ರೀತಿ ಕೂದಲ ಕಸಿ ವಿಧಾನದಲ್ಲಿ ಸ್ಕಾರ್‍ಲೆಸ್ ಹೇರ್ ಟ್ರಾನ್ಸ್‍ಪ್ಲ್ಯಾಂಟ್ ಒಂದು ಮೈಲುಗಲ್ಲಾಗಿದೆ.

ತಲೆಯಲ್ಲಿ ಕಲೆಯು ಉಳಿದುಕೊಳ್ಳಬಹುದು ಎನ್ನುವ ಭಯದಿಂದಲೇ ನಮ್ಮಲ್ಲಿಗೆ ಬರುವ ಸಾಕಷ್ಟು ಮಂದಿ ರೋಗಿಗಳು ಕೂದಲ ಕಸಿ ಚಿಕಿತ್ಸೆಯನ್ನು ಪಡೆಯಲು ಹಿಂಜರಿಯುತ್ತಾರೆ. ಅವರೆಲ್ಲರ ಭಯವನ್ನು ಹೋಗಲಾಡಿಸುವ ಸಾಮರ್ಥ್ಯವನ್ನು ಈ ಸ್ಕಾರ್‍ಲೆಸ್ ವಿಧಾನವು ಹೊಂದಿದೆ,'' ಎಂದರು.

Hairline International Hair and Skin Clinic launches Scarless Hair Transplant

ತಲೆಯ ಮಾದರಿ ಹಾಗೂ ನಿರೂಪಣೆಯ ಮೂಲಕ ಕೂದಲ ಕಸಿಯ ಕುರಿತು ಪ್ರದರ್ಶನ ನೀಡಿದ ಹೇರ್‌ಲೈನ್ ಇಂಟರ್‌ನ್ಯಾಷನಲ್ ‍ನ ಡರ್ಮೆಟೋಸರ್ಜನ್ ಡಾ. ದಿನೇಶ್ ಜಿ. ಗೌಡ ಮಾತನಾಡಿ ಸ್ಟ್ರಿಪ್ ಹಾರ್ವೆಸ್ಟಿಂಗ್‍ನಂತಹ ಸಾಂಪ್ರದಾಯಿಕ ಕೇಶ ಕಸಿ ವಿಧಾನದಲ್ಲಿ ತಲೆಯ ಹಿಂಭಾಗ ರೇಖೆಗಳಂತಹ ಕಲೆಗಳು ಉಳಿದುಬಿಡುತ್ತವೆ. ಅಂತೆಯೇ ಫಾಲಿಕ್ಯುಲರ್ ಕಸಿ ವಿಧಾನದಲ್ಲೂ ತಲೆಯಲ್ಲಿ ಕಲೆಗಳು ಉಳಿದುಕೊಂಡು ಬಿಡುತ್ತವೆ. ಆದರೆ ಸ್ಕಾರ್‍ಲೆಸ್ ಕೇಶ ಪ್ರಕ್ರಿಯೆಯಲ್ಲಿ ಹೆಸರೇ ಹೇಳುವಂತೆ ಕಸಿಯ ಬಳಿಕ ಅತಿ ಕಡಿಮೆ ಅಥವಾ ಕಲೆಗಳೇ ಉಳಿಯುವುದಿಲ್ಲ'' ಎಂದರು.

ಹೇರ್‌ಲೈನ್ ನಲ್ಲಿ ನಾವು ಎಸೆಲ್ ಮ್ಯಾಟ್ರಿಕ್ಸ್ ಮತ್ತು ಪಿಆರ್‍ಪಿ ಸೇರಿಸಿ ಸ್ಕಾರ್‍ಲೆಸ್ ಕೇಶ ಕಸಿ ಮಾಡುತ್ತೇವೆ. ತಲೆಯಲ್ಲಿ ಕಲೆಗಳು ಉಳಿಯದಂತೆ ಮಾಡುವಲ್ಲಿ ಇದು ಸಹಕಾರಿ. ಇದು ತಲೆಯಲ್ಲಿ ಅಡಗಿಕೊಂಡಿರುವ ನಿಷ್ಕ್ರಿಯ ಕೇಶವನ್ನು ಮತ್ತೆ ಉದ್ದೀಪನಗೊಳಿಸಿ, ಹೊಸ ಫಾಲಿಕಲ್‍ಗಳ ಬೆಳವಣಿಗೆಗೆ ಉತ್ತೇಜನ ನೀಡುತ್ತದೆ. ಅಂದರೆ ಇದು ಚದರ ಸೆಂಟಿ ಮೀಟರ್‍ಗೆ ಕೇಶದ ಸಾಂದ್ರತೆಯನ್ನೂ ಹೆಚ್ಚಿಸುತ್ತದೆ. ಒಟ್ಟಾರೆಯಾಗಿ ಇದರ ಅತ್ಯಂತ ದೊಡ್ಡ ಲಾಭವೆಂದರೆ, ಈ ಪ್ರಕ್ರಿಯೆಯು ರೋಗಿ-ಸ್ನೇಹಿಯಾಗಿದ್ದು, ಕಡಿಮೆ ಅಥವಾ ಯಾವುದೇ ಅಡ್ಡ ಪರಿಣಾಮದಿಂದ ಮುಕ್ತವಾಗಿರುತ್ತದೆ ಎಂದೂ ಡಾ. ದಿನೇಶ್ ಗೌಡ ಹೇಳಿದರು.

ಸ್ಕಾರ್‍ಲೆಸ್ ಕೇಶ ಕಸಿ ಆಯ್ಕೆಯು ಬೆಂಗಳೂರಿನಲ್ಲಿರುವ ಎಲ್ಲ 6 ಹೇರ್‍ಲೈನ್ ಕೇಂದ್ರಗಳಲ್ಲಿ ಲಭ್ಯವಿದ್ದು, ಹೇರ್‍ಲೈನ್‍ನಲ್ಲಿನ ಸಮರ್ಥ ಡೆರ್ಮಟೋಸರ್ಜನ್‍ಗಳೇ ಈ ಪ್ರಕ್ರಿಯೆಯನ್ನು ನಡೆಸುತ್ತಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೇರ್‌ಲೈನ್ ಡರ್ಮೆಟಾಲಜಿಸ್ಟ್ ಡಾ. ಪ್ರಫುಲ್ಲಾ, ಕಳೆದ 2 ರಿಂದ 3 ವರ್ಷಗಳಲ್ಲಿ ಕೇಶ ಕಸಿಯಂತಹ ಕಾಸ್ಮೆಟಿಕ್ ವಿಧಾನಗಳು ಹೆಚ್ಚು ಜನಪ್ರಿಯವಾಗಿವೆ ಎಂದು ಅಭಿಪ್ರಾಯಪಟ್ಟರು.

ಬೋಳು ತಲೆಯ ಯುವ ಭಾರತ
ಹೇರ್‌ಲೈನ್ ಸಂಶೋಧನಾ ಕೇಂದ್ರವು ನಡೆಸಿರುವ ಸಂಶೋಧನೆಯ ಬಗ್ಗೆ ಪ್ರಸ್ತಾಪಿಸಿದ ಡಾ. ಪ್ರಫುಲ್ಲಾ ಅವರು, ಇತ್ತೀಚಿನ ದಿನಗಳಲ್ಲಿ ವಯಸ್ಸಿಗೆ ಮೊದಲೇ ತಲೆ ಬೋಳಾಗುವ ಸಮಸ್ಯೆ ಪುರುಷರು ಮತ್ತು ಮಹಿಳೆಯರನ್ನು ಭಾದಿಸತೊಡಗಿದೆ. ಹೇರ್‌ಲೈನ್ ನಡೆಸಿದ ಸಂಶೋಧನೆಯೇ ಹೇಳುವಂತೆ, ಪುರುಷರು ಮತ್ತು ಮಹಿಳೆಯರಲ್ಲಿ 16 ವರ್ಷಗಳು ತುಂಬುವಾಗಲೇ ತೀವ್ರಗತಿಯ ಕೂದಲುದುರುವಿಕೆ ಸಮಸ್ಯೆ ಇತ್ತೀಚೆಗೆ ಕಾಣಿಸಿಕೊಳ್ಳತೊಡಗಿದೆ. ಇದಕ್ಕೆ ಅನುವಂಶೀಯತೆ ಮತ್ತು ಬದಲಾದ ಜೀವನಶೈಲಿಯೇ ಕಾರಣ'' ಎಂದರು.

ಈಗ ಕೂದಲುದುರುವಿಕೆ ಎಂಬುದು ಸಾಮಾನ್ಯ ಸಮಸ್ಯೆಯಾಗಿರುವ ಕಾರಣ, ಸಹಜವಾಗಿಯೇ ಕೇಶ ಕಸಿಗೆ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಇದಕ್ಕೆ ಕಾರಣ ಕೇಶ ಕಸಿ ಶೇ.95ರಷ್ಟು ಯಶಸ್ವಿಯಾಗುತ್ತಿರುವುದು. ಕಳೆದ 2 ವರ್ಷಗಳಲ್ಲಿ ಹೇರ್‍ಲೈನ್‍ನಲ್ಲಿ ಕೇಶ ಕಸಿ ಪ್ರಕ್ರಿಯೆಯಲ್ಲಿ ಶೇ.40ರಷ್ಟು ಬೆಳವಣಿಗೆಯಾಗಿರುವುದೇ ಇದಕ್ಕೆ ಸಾಕ್ಷಿ.

ಹೇರ್‌ಲೈನ್ ಇಂಟರ್‌ನ್ಯಾಷನಲ್ ಸಂಸ್ಥೆಯು ಕಳೆದ 2-3 ವರ್ಷಗಳಲ್ಲಿ ಸುಮಾರು 2000 ಕೇಶ ಕಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಈ ಪೈಕಿ, ಶೇ.50ರಷ್ಟು ರೋಗಿಗಳು 21ರಿಂದ 30 ವರ್ಷದೊಳಗಿನವರು'' ಎಂದೂ ಡಾ. ಪ್ರಫುಲ್ಲಾ ತಿಳಿಸಿದರು.

ಎಸೆಲ್ ಮತ್ತು ಪಿಆರ್‍ಪಿ ಸಂಯೋಜಿತ ಶಕ್ತಿ
ಕಲೆರಹಿತ(ಸ್ಕಾರ್‍ಲೆಸ್) ಕೇಶ ಕಸಿ ಚಿಕಿತ್ಸೆ ಮತ್ತು ಸಾಂಪ್ರದಾಯಿಕ ಮಾದರಿಯ ಕೇಶ ಕಸಿಯ ನಡುವಿನ ವ್ಯತ್ಯಾಸ ತೋರಿಸುವ ಪ್ರಮುಖ ಅಂಶವೇ ಎಸೆಲ್ ಮತ್ತು ಪಿಆರ್‍ಪಿ ಸಂಯೋಜನೆ. ಈ ಸಂಯೋಜನೆಯು ತಲೆಯಲ್ಲಿ ಅಡಗಿರುವ ಫಾಲಿಕಲ್‍ಗಳನ್ನು ಉದ್ದೀಪನಗೊಳಿಸಿ, ಹೊಸ ಫಾಲಿಕಲ್‍ಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ.

ಎಸೆಲ್ ಎಂಬುದು ಇಸಿಎಂ(ಎಕ್ಸ್ ಟ್ರಾ ಸೆಲ್ಯುಲರ್ ಮ್ಯಾಟ್ರಿಕ್ಸ್) ಅಂದರೆ, ನಮ್ಮ ದೇಹದ ಅಂಗಗಳು ಹಾಗೂ ಅಂಗಾಂಶದಲ್ಲಿರುವ ಎಲ್ಲ ಜೀವಕೋಶಗಳನ್ನು ಸುತ್ತುವರಿದಿರುವ ಅತ್ಯಂತ ತೆಳುವಾದ ಪದರವಾಗಿದೆ. ಎಸೆಲ್ ಎಂಬುದು ಕೂಡ ನಮ್ಮ ದೇಹದಲ್ಲಿರುವ ಒಂದು ಇಸಿಎಂ ಆಗಿದೆ. ಎಸೆಲ್ ನಿರ್ವಹಿಸುವ ಮುಖ್ಯ ಕಾರ್ಯಗಳೆಂದರೆ,

ಎಸೆಲ್ ಹೇಗೆ ಕಾರ್ಯನಿರ್ವಹಿಸುತ್ತದೆ?
ಎಸೆಲ್ ಎಂಬುದು ಎಕ್ಸ್‍ಟ್ರಾ ಸೆಲ್ಯುಲರ್ ಮ್ಯಾಟ್ರಿಕ್ಸ್(ಇಸಿಎಂ) ಆಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಅತಿ ದೊಡ್ಡ ಸಂಸ್ಥೆಯಾದ ಯುಎಸ್‍ಎಫ್‍ಡಿಎ ಅನುಮತಿ ಪಡೆದಿರುವ ಪುನರುಜ್ಜೀವಕ ಔಷಧವಾಗಿದೆ. ಇದು ಗಾಯ ಉಪಶಮನಗೊಳಿಸುವ ಮತ್ತು ಫಾಲಿಕ್ಯುಲರ್ ಕೇಶ ಕಸಿ ಚಿಕಿತ್ಸೆ ವೇಳೆ ಹಾನಿಗೊಳಗಾದ ಅಂಗಾಂಶಗಳು ಮರುಬೆಳವಣಿಗೆ ಆಗುವಂತೆ ಮಾಡುವ ಕೆಲಸ ಮಾಡುತ್ತವೆ.

ದೇಹದಲ್ಲಿ ಹಾನಿಗೊಳಗಾದ ಭಾಗವನ್ನು ಕಂಡೊಡನೆ ಎಸೆಲ್ ಒಂದು ತುರ್ತು ವೈದ್ಯಕೀಯ ತಂಡದಂತೆ ಕಾರ್ಯನಿರ್ವಹಿಸುತ್ತದೆ. ಅಂದರೆ ತಕ್ಷಣವೇ ಆ ಪ್ರದೇಶವನ್ನು ಸ್ವಚ್ಚಗೊಳಿಸಿ, ಗಾಯ ಶಮನಗೊಳಿಸುತ್ತದೆ. ದೇಹದಲ್ಲಿರುವ ಇತರೆ ಕೋಶಗಳೊಂದಿಗೆ ಸಂವಹನ ನಡೆಸಿ, ಎಲ್ಲ ಕೋಶಗಳನ್ನು ಒಟ್ಟುಗೂಡಿಸಿ ಉಪಶಮನ ಕಾರ್ಯದಲ್ಲಿ ನೆರವಾಗುವಂತೆ ಮಾಡುತ್ತದೆ. ನಂತರ ಎಸೆಲ್ ಹೊಸ ರಕ್ತ ನಾಳಗಳನ್ನು ಸೃಷ್ಟಿಸುವ ಕೆಲಸ ಮಾಡುತ್ತದೆ ಹಾಗೂ ಉಪಶಮನ ಪ್ರಕ್ರಿಯೆಯಲ್ಲಿ ಇತರೆ ಕೋಶಗಳು ತಮ್ಮ ತಮ್ಮ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ.

ಹಾನಿಗೀಡಾದ ಸ್ಥಳದಲ್ಲಿ ಎಸೆಲ್ ಇದೆಯೆಂದಾದರೆ, ಅದು ಕಲೆಗಳ ಉದ್ಧವದತ್ತ ಗಮನ ಹರಿಸುವ ಬದಲಾಗಿ ಅಂಗಾಂಶಗಳಿಗೆ ಮರುರೂಪ ಕೊಟ್ಟು, ಅವುಗಳಿಗೆ ಪುನರುಜ್ಜೀವನ ನೀಡಿ, ಅವುಗಳು ತಮ್ಮ ಮೂಲ ರೂಪಕ್ಕೆ ಬರುವಂತೆ ನೋಡಿಕೊಳ್ಳುತ್ತದೆ. ಅಂಗಾಂಶದಲ್ಲಿರುವ ಬೆಳೆದ ಕಾಂಡ ಕೋಶವನ್ನು ಕ್ರಿಯಾಕಾರಿಯನ್ನಾಗಿಸುವ ಮೂಲಕ ಈ ಕೆಲಸವನ್ನು ಮಾಡಲಾಗುತ್ತದೆ. ಗಾಯವನ್ನು ಮುಚ್ಚುವ ಬದಲಾಗಿ ಗಾಯಗೊಂಡ ಸ್ಥಳವನ್ನು ಮೂಲ ರೂಪಕ್ಕೆ ಮರಳಿಸುವ ಸಾಮರ್ಥ್ಯವೇ ಎಸೆಲ್‍ನ ವೈಶಿಷ್ಟ್ಯವಾಗಿದೆ.

ಪಿಆರ್‍ಪಿ ಎಂದರೇನು?
ಪಿಆರ್‍ಪಿ ಎಂದರೆ ಪ್ಲೇಟ್ಲೆಟ್ ರಿಚ್ ಪ್ಲಾಸ್ಮಾ. ಈ ಪ್ರಕ್ರಿಯೆಯಲ್ಲಿ ರೋಗಿಯದ್ದೇ ರಕ್ತವನ್ನು ತೆಗೆದು, ಅದರಲ್ಲಿರುವ ಪ್ಲೇಟ್ಲೆಟ್ ಅನ್ನು ಪ್ರತ್ಯೇಕಿಸಲಾಗುತ್ತದೆ. ಕೇಶ ಬೆಳವಣಿಗೆಗೆ ಹಾಗೂ ಕೋಶಗಳ ಪುನರುಜ್ಜೀವನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಿಆರ್‍ಪಿ ಪ್ರಕ್ರಿಯೆಯನ್ನೇ ಅನುಸರಿಸಲಾಗುತ್ತದೆ.

English summary

Hairline International Hair and Skin Clinic launches Scarless Hair Transplant

Hairline International Hair and Skin Clinic brings state-of-the-art international procedures, machinery and treatment packages to deal with hair, skin and beauty issues across the spectrum for men and women.
Story first published: Monday, September 22, 2014, 12:38 [IST]
X
Desktop Bottom Promotion