For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಕೇಶ ಸಂರಕ್ಷಣೆಗಾಗಿ ಸರಳ ಟಿಪ್ಸ್

By Super
|

ಸಾಮಾನ್ಯವಾಗಿ ಚಳಿಗಾಲದಲ್ಲಿ ಚರ್ಮದ ಸಮಸ್ಯೆ ಕಂಡುಬರುವುದು ಸಹಜ. ನಮ್ಮ ಚರ್ಮಕ್ಕೆ ಒಳಗಿನಿಂದ ಹೇಗೆ ಪೋಷಣೆ ಅಗತ್ಯವೋ ಹಾಗೆಯೇ ಹೊರಗಿನಿಂದಲೂ ಕೊಂಚ ಪೋಷಣೆಯ ಅಗತ್ಯವಿದೆ. ಗಾಳಿಯಲ್ಲಿರುವ ಆರ್ದ್ರತೆಯಿಂದ ನಮ್ಮ ಚರ್ಮ ನೀರಿನ ಪಸೆಯನ್ನು ಹೀರಿಕೊಳ್ಳುತ್ತದೆ. ಆದರೆ ಚಳಿಗಾಲದಲ್ಲಿ ಆರ್ದ್ರತೆಯೇ ಇರದ ಕಾರಣ ಗಾಳಿ ಶುಷ್ಕವಾಗುತ್ತದೆ. ಈ ಶುಷ್ಕಗಾಳಿಯಿಂದಾಗಿ ಚರ್ಮದ ಹೊರಭಾಗಕ್ಕೆ ಸಿಗಬೇಕಾದ ಪಸೆ ಲಭ್ಯವಾಗದೇ ಒಣಗುತ್ತದೆ.

ಚರ್ಮ ನೆರಿಗೆಯಾಗುವ ಸೂಕ್ಷ್ಮ ಸ್ಥಳದಲ್ಲಿ ಚರ್ಮದ ಎರಡೂ ಪದರಗಳು ಹತ್ತಿರವಿರುವ ಕಾರಣ ಅಲ್ಲಿ ಮೊದಲು ಒಣಗಲು ತೊಡಗುತ್ತದೆ. ಪೂರ್ಣ ಒಣಗಿದ ಬಳಿಕ ಚರ್ಮ ನಿಧಾನವಾಗಿ ಪರೆಯಂತೆ ಸುಲಿಯಲು ಪ್ರಾರಂಭವಾಗುತ್ತದೆ.

ಇದನ್ನೇ ಚರ್ಮ ಒಡೆಯುವುದು ಎನ್ನುತ್ತಾರೆ. ಇದರಿಂದ ಪಾರಾಗಲು ನೀರು ಚಿಮುಕಿಸಿದರೆ ಸಾಲದು, ಏಕೆಂದರೆ ನಮ್ಮ ಚರ್ಮ ದ್ರವರೂಪದಲ್ಲಿರುವ ನೀರನ್ನು ನೇರವಾಗಿ ಹೀರಲಾರದು. ಅದಕ್ಕಾಗಿ ಕೋಲ್ಡ್ ಕ್ರೀಂ ಅಥವಾ ವ್ಯಾಸಲಿನ್ ಬಳಸಬೇಕು. ಚಳಿಗಾಲದಲ್ಲಿ ಕೂದಲಿನ ಆರೈಕೆ ಹೇಗಿರಬೇಕು?

ನಮ್ಮ ತಲೆಯಲ್ಲಿರುವ ಚರ್ಮಕ್ಕೂ ಇದೇ ಗುಣಗಳು ಅನ್ವಯವಾಗುತ್ತವೆ. ಕೂದಲ ಅಡಿ ಇರುವ ಚರ್ಮದಿಂದ ಹೀಗೇ ಸುಲಿದ ಚರ್ಮ ಗಾಳಿಯಲ್ಲಿ ಹಾರದೇ ಕೂದಲುಗಳ ನಡುವೆ ಸಿಲುಕಿಕೊಳ್ಳುತ್ತದೆ. ಇದನ್ನೇ ತಲೆಹೊಟ್ಟು (dandruff) ಎನ್ನುತ್ತೇವೆ. ಸರಿಯಾದ ಪೋಷಣೆಯಿಲ್ಲದಿದ್ದರೆ ಉದುರುವ ಹೊಟ್ಟು ಮುಜುಗರ ತರಿಸುತ್ತದೆ.

ಈ ತಲೆಹೊಟ್ಟನ್ನು ನಿರ್ವಹಿಸಲು ಹಲವು ಶ್ಯಾಂಪೂ ಹಾಗೂ ಎಣ್ಣೆಗಳು ಲಭ್ಯವಿವೆ. ಆದರೆ ಮನೆಯಲ್ಲಿಯೇ ತಯಾರಿಸಿಕೊಳ್ಳುವ ಸುಲಭ ಮಿಶ್ರಣಗಳ ಮೂಲಕ ತಲೆಹೊಟ್ಟನ್ನು ನಿವಾರಿಸಿಕೊಳ್ಳಬಹುದು. ಇದಕ್ಕಾಗಿ ಹೆಚ್ಚು ಬೆಲೆ ತೆರಬೇಕಾದ ಅಗತ್ಯವಿಲ್ಲ. ನಿಮ್ಮ ಅಡುಗೆ ಮನೆಯಲ್ಲಿ ಲಭ್ಯವಿರುವ ವಸ್ತುಗಳಿಂದಲೇ ಈ ಮಿಶ್ರಣವನ್ನು ಸುಲಭವಾಗಿ ಮಾಡಿಟ್ಟುಕೊಂಡು ಬಳಸಬಹುದು. ಚಳಿಗಾಲದಲ್ಲಿ ಕಂಡುಬರುವ ಸಮಸ್ಯೆಗೆ ಸೂಕ್ತ ಪರಿಹಾರ

ಲಿಂಬೆ, ಜೇನು ಮತ್ತು ಮೊಟ್ಟೆ


ಈ ಮಿಶ್ರಣ ಎಲ್ಲಾ ರೀತಿಯ ಕೂದಲಿನವರಿಗೆ ಒಳ್ಳೆಯದು. ಒಂದು ಮೊಟ್ಟೆಯನ್ನು ಒಡೆದು ಬೋಗುಣಿಯಲ್ಲಿ ಸುರಿಯಿರಿ. ಒಂದು ಚಮಚದಿಂದ ಚೆನ್ನಾಗಿ ಗೊಟಾಯಿಸಿ. ಇದಕ್ಕೆ ಅರ್ಧ ಲಿಂಬೆಯ ರಸ ಹಾಗೂ ಒಂದು ಟೀ ಚಮಚ ಜೇನು ತುಪ್ಪವನ್ನು ಸೇರಿಸಿ ಮಿಶ್ರಣವನ್ನು ತಯಾರಿಸಿ. ಈ ಮಿಶ್ರಣವನ್ನು ತಲೆಗೆ ಹಚ್ಚಿ ಒಂದು ಘಂಟೆಯ ಬಳಿಕ ಉಗುರುಬೆಚ್ಚನೆಯ ನೀರಿನಿಂದ ಮತ್ತು ಸೌಮ್ಯವಾದ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಿ. ಲಿಂಬೆಯಿಂದ ತಲೆಹೊಟ್ಟು ನಿವಾರಣೆಯಾಗುತ್ತದೆ, ಮೊಟ್ಟೆಯಿಂದ ಕೂದಲಿಗೆ ಅಗತ್ಯವಾದ ಪೋಷಕಾಂಶಗಳು ದೊರಕುತ್ತವೆ ಹಾಗೂ ಜೇನುತುಪ್ಪದಿಂದ ಅಗತ್ಯವಾದ ಆರ್ದ್ರತೆ ದೊರಕುತ್ತದೆ.

ಮೊಸಲು, ಲಿಂಬೆ ಮತ್ತು ಕಡ್ಲೆಹಿಟ್ಟು
ಎರಡು ಟೀ ಚಮಚ ಮೊಸರು, ಒಂದು ಟೀ ಚಮಚ ಕಡ್ಲೆ ಹಿಟ್ಟು ಮತ್ತು ಅರ್ಧ ಲಿಂಬೆಯ ರಸವನ್ನು ಚೆನ್ನಾಗಿ ಕಲಸಿ ಮಿಶ್ರಣ ತಯಾರಿಸಿ. ಇದನ್ನು ತಲೆಗೆ ಹಚ್ಚಿ ಅರ್ಧಘಂಟೆಯ ಬಳಿಕ ಗುರುಬೆಚ್ಚನೆಯ ನೀರಿನಿಂದ ಮತ್ತು ಸೌಮ್ಯವಾದ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಿ.

ಓಟ್ಸ್, ಜೇನು ಮತ್ತು ಹಾಲು
ಮಾರುಕಟ್ಟೆಯಲ್ಲಿ ದೊರಕುವ ಓಟ್ಸ್ ಅನ್ನು ಗ್ರೈಂಡರಿನಲ್ಲಿ ನಯವಾಗಿ ಪುಡಿ ಮಾಡಿಕೊಳ್ಳಿ. ಎರಡು ಭರ್ತಿ ದೊಡ್ಡ ಚಮಚದಷ್ಟು ಈ ಪುಡಿಯನ್ನು ಒಂದು ದೊಡ್ಡ ಚಮಚ ಜೇನು ಹಾಗೂ ಮಿಶ್ರಣಕ್ಕೆ ಅಗತ್ಯವಿದ್ದಷ್ಟು ತಣ್ಣನೆಯ ಹಾಲನ್ನು ಕಲೆಸಿ ಮಿಶ್ರಣ ತಯಾರಿಸಿಕೊಳ್ಳಿ. ಇದು ತೀರಾ ಉದುರಾಗಿಯೂ ಇರಬಾರದು ಹಾಗೂ ತೀರಾ ನೀರಾಗಿಯೂ ಇರಬಾರದು. ಈ ಮಿಶ್ರಣವನ್ನು ತಲೆಗೆ ಹಚ್ಚಿ ಒಣಗಲು ಬಿಡಿ. ಸುಮಾರು ಇಪ್ಪತ್ತು ನಿಮಿಷ ಅಥವಾ ಅರ್ಧಘಂಟೆಯ ಬಳಿಕ ಗುರುಬೆಚ್ಚನೆಯ ನೀರಿನಿಂದ ಮತ್ತು ಸೌಮ್ಯವಾದ ಶಾಂಪೂ ಉಪಯೋಗಿಸಿ ತೊಳೆದುಕೊಳ್ಳಿ.

English summary

Hair Masks for Dandruff During Winter

Winter is approaching and you will soon find your skin feeling drier than usual. The skin needs increased moisture to keep it healthy and glowing. The same goes for the scalp too Not to forget the constant itchiness they cause. So what can you do to counter this problem? The answer lies in hair masks for dandruff.
X
Desktop Bottom Promotion