For Quick Alerts
ALLOW NOTIFICATIONS  
For Daily Alerts

ಕೂದಲಿನ ಆರೈಕೆಗೆ ಅಡುಗೆ ಎಣ್ಣೆಗಳು

By Super Admin
|

ಕೂದಲು ಉದುರುವ ಸಮಸ್ಯೆ ಈಗ ಪ್ರತಿಯೊಬ್ಬರ ಸಮಸ್ಯೆಯಾಗಿ ಪರಿಣಮಿಸಿದೆ. ಇದಕ್ಕಾಗಿ ಹಲವಾರು ಮಾತ್ರೆಗಳು, ಎಣ್ಣೆಗಳು, ಔಷಧಿಗಳು ಮತ್ತು ಚಿಕಿತ್ಸೆಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಅವುಗಳೆಲ್ಲದರಿಂದ ನಿಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ಭರವಸೆಯನ್ನು ಅವರು ನೀಡುವುದಿಲ್ಲ. ಜೊತೆಗೆ ಅವುಗಳೆಲ್ಲವೂ ನಿಮಗೆ ಹೊಂದಿಕೊಳ್ಳುತ್ತವೆ ಎಂಬ ಭರವಸೆಯನ್ನು ಸಹ ನೀಡಲಾಗುವುದಿಲ್ಲ. ಆದರೂ ಅವುಗಳು ನಿಮ್ಮನ್ನು ಆಕರ್ಷಿಸುತ್ತವೆ ಎಂಬುದು ಸುಳ್ಳಲ್ಲ.

ಹಾಗಾಗಿ ಬೋಲ್ಡ್ ಸ್ಕೈ ಇಂದು ಕೆಲವೊಂದು ಕೇಶರಾಶಿಯ ಆರೈಕೆಯ ಉಪಾಯಗಳನ್ನು ಸೂಚಿಸಿದ್ದು ಇವು ಯಾವುದೇ ರೀತಿಯ ಅಡ್ಡಪರಿಣಾಮಗಳನ್ನು ಉಂಟು ಮಾಡದೇ ತ್ವರಿತ ಪರಿಣಾಮಗಳನ್ನು ನೀಡಬಲ್ಲವು. ಅಲ್ಲದೇ, ಬ್ಯೂಟಿ ಪಾರ್ಲರ್‌ನಲ್ಲಿ ನೀವು ವ್ಯಯಿಸಬೇಕಾದಷ್ಟು ಸಮಯವನ್ನಾಗಲಿ ಅಥವಾ ಹಣವನ್ನಾಗಲಿ ಈ ವಿಧಾನಗಳು ಬಯಸುವುದಿಲ್ಲ. ಕೇಶಸಂರಕ್ಷಣೆಯ ಈ ಕೆಳಗಿನ ವಿಧಾನಗಳನ್ನು ಕಲಿಯಿರಿ ಮತ್ತು ಹೇಗೆ ಅವು ನಿಮ್ಮ ಕೇಶರಾಶಿಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ಉಂಟುಮಾಡುತ್ತವೆ ಎಂಬುದನ್ನು ಸ್ವತಃ ನೀವೇ ಕಂಡುಕೊಳ್ಳಿರಿ.

ತೆಂಗಿನ ಎಣ್ಣೆ

ತೆಂಗಿನ ಎಣ್ಣೆ

ಕೂದಲು ಹಾಗೂ ತ್ವಚೆಯ ಆರೈಕೆಗೆ ಬಳಸುವಂತಹ ಸಾಮಾನ್ಯ ಅಡುಗೆ ಎಣ್ಣೆಯೆಂದರೆ ಅದು ತೆಂಗಿನ ಎಣ್ಣೆ. ತೆಂಗಿನ ಎಣ್ಣೆಯು ನಿಮ್ಮ ಕೂದಲಿಗೆ ಒಳ್ಳೆಯ ಕಂಡೀಷನರ್ ಆಗಿ ಕೆಲಸ ಮಾಡುತ್ತದೆ. ತೆಂಗಿನ ಎಣ್ಣೆಯು ನಿಮ್ಮ ಕೂದಲನ್ನು ಕಂಡೀಷನರ್ ಮಾಡುವುದಲ್ಲದೆ ಅದು ದಪ್ಪವಾಗಿ ಬೆಳೆಯಲು ನೆರವಾಗುತ್ತದೆ. ತೆಂಗಿನಎಣ್ಣೆಯಲ್ಲಿ ಸೋಂಕು ನಿವಾರಕ ಗುಣಗಳಿರುವ ಕಾರಣ ಇದು ತಲೆ ಬುರುಡೆಗೆ ಸೋಂಕು ಬರದಂತೆ ತಡೆಯುತ್ತದೆ.

ಎಳ್ಳೆಣ್ಣೆ

ಎಳ್ಳೆಣ್ಣೆ

ಕೂದಲಿನ ಆರೈಕೆಗೆ ಅಡುಗೆ ಎಣ್ಣೆಯನ್ನು ಪರಿಗಣಿಸುವುದಾದರೆ ಎಳ್ಳೆಣ್ಣೆ ಹೊರತು ಈ ಪಟ್ಟಿ ಪೂರ್ಣಗೊಳ್ಳದು. ಕೂದಲಿನ ಆರೈಕೆಗೆ ಎಳ್ಳೆಣ್ಣೆ ಉತ್ತಮ ಆಯ್ಕೆ. ತಲೆಬುರುಡೆಗೆ ಎಳ್ಳೆಣ್ಣೆಯಿಂದ ಮಸಾಜ್ ಮಾಡುವುದರಿಂದ ಅದು ರಕ್ತ ಸಂಚಲನಕ್ಕೆ ನೆರವಾಗಿ ಕೂದಲಿನ ಬೆಳವಣಿಗೆಗೆ ನೆರವಾಗುವುದು.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ಕೂದಲಿನ ಆರೈಕೆಗೆ ಅತ್ಯುತ್ತಮ ಅಡುಗೆ ಎಣ್ಣೆ ಹುಡುಕುತ್ತಿದ್ದರೆ ಆಲಿವ್ ಎಣ್ಣೆ ಒಳ್ಳೆಯ ಆಯ್ಕೆ. ನೀವು ಶಾಂಪೂ ಬಳಸುತ್ತಿದ್ದರೆ ಆಗ ಕೂದಲು ತೊಳೆದ ಬಳಿಕ ನೀವು ಸಂಪೂರ್ಣ ಕೂದಲಿಗೆ ಆಲಿವ್ ಎಣ್ಣೆ ಹಚ್ಚಿ. ಇದರಿಂದ ನಿಮ್ಮ ಕೂದಲನ್ನು ಕಂಡೀಷನರ್ ಮಾಡಲು ನೆರವಾಗುತ್ತದೆ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆ

ಕೂದಲಿನ ಆರೈಕೆಗೆ ಅಡುಗೆ ಎಣ್ಣೆಯಲ್ಲಿ ಸಾಸಿವೆ ಎಣ್ಣೆ ತುಂಬಾ ಜನಪ್ರಿಯ. ದಪ್ಪ ಹಾಗೂ ಆರೋಗ್ಯಕರ ಕೂದಲಿಗೆ ಸಾಸಿವೆ ಎಣ್ಣೆಯನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಸಾಸಿವೆ ಎಣ್ಣೆಯಲ್ಲಿ ಸೆಲೆನಿಯಂ ಮತ್ತು ಜಿಂಕ್ ನಂತಹ ಅಂಶಗಳು ಸಮೃದ್ಧವಾಗಿದೆ. ಈ ಎಣ್ಣೆಯಲ್ಲಿ ವಿಟಮಿನ್ ಎ, ಡಿ, ಇ ಮತ್ತು ಕೆ ಇದೆ.

ಕೆನೊಲಾ ಎಣ್ಣೆ

ಕೆನೊಲಾ ಎಣ್ಣೆ

ನಿಮ್ಮದು ಒಣ ಕೂದಲಾಗಿದ್ದರೆ ಆಗ ನೀವು ಕೆನೊಲಾ ಎಣ್ಣೆಯನ್ನು ಕೂದಲಿನ ಆರೈಕೆಗೆ ಬಳಸಬೇಕು. ಕೆನೊಲಾ ಒಣಗಿದ ಕೂದಲಿನ ಬುಡ ಮತ್ತು ಗಡಸು ಭಾಗಕ್ಕೆ ಚಿಕಿತ್ಸೆ ನೀಡಿ ಕೂದಲನ್ನು ಮೃದು ಮತ್ತು ಹೊಳೆಯುವಂತೆ ಮಾಡಲಿದೆ. ಕೂದಲಿನ ಒಡೆದ ಬುಡವನ್ನು ಮೃದು ಮಾಡಲಿದೆ. ಕೆನೊಲಾ ಎಣ್ಣೆಯು ಸುರಕ್ಷಿತ ತಡೆ ನಿರ್ಮಿಸಿ ಹೆಚ್ಚಿನ ಹಾನಿಯಾಗದಂತೆ ತಡೆಯುತ್ತದೆ.

English summary

Cooking Oils For Hair Care

Beautiful hair is an essential part of looking beautiful. At the same time, it is a clear indicator of your overall health as well. Women are ready to try anything and everything to get thick and long hair. But, in most of the cases, these trials will end up in a more heart breaking result.
X
Desktop Bottom Promotion