For Quick Alerts
ALLOW NOTIFICATIONS  
For Daily Alerts

ಕೂದಲು ಉದುರುವುದನ್ನು ತಡೆಗಟ್ಟಲು ಆಹಾರ ಸೂತ್ರಗಳು.

By Gururaja Achar
|

ತಲೆಕೂದಲಿನ ನಷ್ಟಕ್ಕೆ ಕೇವಲ ತಲೆಹೊಟ್ಟು , ಬಿಸಿಲು ಇವೇ ಮುಂತಾದ ಬಾಹ್ಯ ವಿಷಯಗಳಷ್ಟೇ ಕಾರಣವಲ್ಲ. ತಲೆಕೂದಲಿನ ನಷ್ಟಕ್ಕೆ ಅನಾರೋಗ್ಯಕರವಾದ ಆಹಾರಕ್ರಮವೂ ಕೂಡ ಅನೇಕ ಬಾರಿ ಕಾರಣವಾಗಿರುತ್ತದೆ. ನಿಮ್ಮ ಶರೀರಕ್ಕೆ ಸಾಕಷ್ಟು ಪ್ರಮಾಣದಲ್ಲಿ ಕೂದಲಿನ ಬೆಳವಣಿಗೆಗೆ ಅವಶ್ಯಕವಾದ ಪೋಷಕಾಂಶಗಳ ಕೊರತೆಯುಂಟಾದಾಗ, ನೀವು ಕೂದಲು ಉದುರುವುದರ ಸಮಸ್ಯೆಗೆ ತುತ್ತಾಗುವುದು ಬಹುತೇಕ ಖಚಿತವಾಗಿರುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಾಂಪ್ರಾಯಿಕ ಧಿರಿಸಿಗೆ ಅತ್ಯುತ್ತಮ ಕೇಶವಿನ್ಯಾಸ

ಧೀರ್ಘಕಾಲದವರೆಗೆ ಈ ಸಮಸ್ಯೆಗೆ ಸೂಕ್ತಕ್ರಮವನ್ನು ಕೈಗೊಳ್ಳದೆಯೇ ಹಾಗೆಯೇ ಉಪೇಕ್ಷಿಸಿದರೆ, ನಿಮ್ಮ ತಲೆಯು ಸಂಪೂರ್ಣ ಬೋಳಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಕೂದಲುದುರುವಿಕೆಯ ಈ ಸಮಸ್ಯೆಯನ್ನು ನಿಭಾಯಿಸಲು ಅತ್ಯುತ್ತಮ ಮಾರ್ಗವೆಂದರೆ, ಉತ್ತಮ ಪೋಷಕಾಂಶಗಳಿರುವ ಆರೋಗ್ಯಕರ ಆಹಾರವನ್ನು ಸೇವಿಸುವುದು. ನಿಮ್ಮ ಕೇಶರಾಶಿಯನ್ನು ಆರೊಗ್ಯವಾಗಿಡಲು ಬೇಕಾಗಿರುವ ಅವಶ್ಯಕ ಪೋಷಕಾಂಶಗಳ ಬಗ್ಗೆ ಈ ಕೆಳಗೆ ಪ್ರಸ್ತಾವಿಸಲಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹೊಳೆಯುವ ಕೂದಲು ನಿಮ್ಮದಾಗಳು 8 ಮನೆ ಮದ್ದು

ವಿಟಮಿನ್ B: ನಿಮ್ಮ ತಲೆಗೆ ಹಾಗೂ ಕೂದಲಿನ ಬೇರುಗಳಿಗೆ ಆಮ್ಲಜನಕವನ್ನು ಹೆಮೊಗ್ಲೋಬಿನ್ ಮೂಲಕ ಪೂರೈಸಲು vitamin B-Complex ನ ಅವಶ್ಯಕತೆಯಿದೆ. ತಲೆಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕದ ಪೂರೈಕೆಯಾದಾಗ ಕೇಶವು ಸೊಂಪಾಗಿ ಬೆಳೆಯುತ್ತದೆ. vitamin B-Complex ಯ ಕೊರತೆಯು ದುರ್ಬಲ, ಕುಪೋಷಿತ, ಮತ್ತು ಹಾಳಾದ ಕೇಶೋತ್ಪತ್ತಿಗೆ ಕಾರಣವಾಗುತ್ತದೆ. ನಿಮ್ಮ ಶರೀರದಲ್ಲಿ vitamin B-Complex ನ ಕೊರತೆಯಿದ್ದರೆ, ಇದನ್ನು ನೀವು ನೈಸರ್ಗಿಕ ಮೂಲಗಳಾದ ಚಿಕನ್, ಮೀನು, ಮೊದಲಾದವುಗಳಿಂದ ಅಥವಾ ವಿಟಮಿನ್ ಗುಳಿಗೆಗಳನ್ನು (ಟ್ಯಾಬ್ಲೆಟ್) ಸೇವಿಸುವುದರ ಮೂಲಕ ಇದರ ಕೊರತೆಯನ್ನು ನೀಗಿಸಬಹುದು.

ವಿಟಮಿನ್ B:

ವಿಟಮಿನ್ B:

ನಿಮ್ಮ ತಲೆಗೆ ಹಾಗೂ ಕೂದಲಿನ ಬೇರುಗಳಿಗೆ ಆಮ್ಲಜನಕವನ್ನು ಹೆಮೊಗ್ಲೋಬಿನ್ ಮೂಲಕ ಪೂರೈಸಲು vitamin B-Complex ನ ಅವಶ್ಯಕತೆಯಿದೆ. ತಲೆಗೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕದ ಪೂರೈಕೆಯಾದಾಗ ಕೇಶವು ಸೊಂಪಾಗಿ ಬೆಳೆಯುತ್ತದೆ. vitamin B-Complex ಯ ಕೊರತೆಯು ದುರ್ಬಲ, ಕುಪೋಷಿತ, ಮತ್ತು ಹಾಳಾದ ಕೇಶೋತ್ಪತ್ತಿಗೆ ಕಾರಣವಾಗುತ್ತದೆ. ನಿಮ್ಮ ಶರೀರದಲ್ಲಿ vitamin B-Complex ನ ಕೊರತೆಯಿದ್ದರೆ, ಇದನ್ನು ನೀವು ನೈಸರ್ಗಿಕ ಮೂಲಗಳಾದ ಚಿಕನ್, ಮೀನು, ಮೊದಲಾದವುಗಳಿಂದ ಅಥವಾ ವಿಟಮಿನ್ ಗುಳಿಗೆಗಳನ್ನು (ಟ್ಯಾಬ್ಲೆಟ್) ಸೇವಿಸುವುದರ ಮೂಲಕ ಇದರ ಕೊರತೆಯನ್ನು ನೀಗಿಸಬಹುದು.

ಸತು (zinc):

ಸತು (zinc):

ನಮ್ಮ ತಲೆಯ ನೆತ್ತಿಯ ಭಾಗದಲ್ಲಿ ತೈಲದ ಗ್ರಂಥಿಗಳಿದ್ದು ಇವು ಸಾಕಷ್ಟು ಪ್ರಮಾಣದಲ್ಲಿ ತೈಲವನ್ನು ಉತ್ಪಾದಿಸುವ ನಿಟ್ಟಿನಲ್ಲಿ ಸಕ್ರಿಯವಾಗಿರಬೆಕು. ಇಲ್ಲವಾದಲ್ಲಿ, ಇದು ಒಣಗಿದ ತಲೆ/ನೆತ್ತಿ, ತಲೆಹೊಟ್ಟು (dandruff), ಮತ್ತು ಕಟ್ಟಕಡೆಗೆ ಕೂದಲ ಉದುರುವಿಕೆಗೆ ಕಾರಣವಾಗುತ್ತದೆ. ನಿಮ್ಮ ಕೇಶರಾಶಿಗೆ ಸಾಕಷ್ಟು ಪ್ರಮಾಣದಲ್ಲಿ ಸತುವನ್ನು ಪೂರೈಸಲು ಕಾಳುಗಳು, ಧಾನ್ಯಗಳು (whole grains), ಚನ್ನ೦ಗಿ ಕಾಳು (lentils), ಮಾಂಸ, ಮತ್ತು ಸಮುದ್ರ ಆಹಾರ (seafood) ದಂತಹ ಆಹಾರವನ್ನು ಸೇವಿಸಿರಿ.

ತಾಮ್ರ:

ತಾಮ್ರ:

ಕೇಶರಾಶಿಯನ್ನೂ ಒಳಗೊಂಡಂತೆ ನಮ್ಮ ಶರೀರದ ವಿವಿಧ ಅಂಗಾಂಗಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಮತ್ತು ರಕ್ತವನ್ನು ಪೂರೈಸಲು ಹೆಮೊಗ್ಲೋಬಿನ್ ನ ಅಗತ್ಯವಿದೆ. ಹಿಮೊಗ್ಲೋಬಿನ್ ನ ಕೊರತೆಯು ಪೆಡುಸಾದ ಕೂದಲಿಗೆ ಕಾರಣವಾಗಿ ಕೊನೆಗೆ ಕೂದಲಿನ ನಷ್ಟದಲ್ಲಿ ಪರ್ಯಾವಸಾನಗೊಳ್ಳುತ್ತದೆ. ಎಳ್ಳು, ಸೋಯಾ, ಗೋಡಂಬಿ, ಮಾಂಸ, ಮತ್ತು ಸಮುದ್ರ ಆಹಾರ (seafood) ಮೊದಲಾದವು ತಾಮ್ರದ ಅತ್ಯುತ್ತಮ ಆಹಾರಗಳಾಗಿವೆ.

ಕಬ್ಬಿಣಾoಶ:

ಕಬ್ಬಿಣಾoಶ:

ಕಬ್ಬಿಣದ ಅಂಶವು ಪುರುಷರಿಗೆ, ವಿಶೇಷವಾಗಿ ಮಹಿಳೆಯರಿಗೆ ಅತಿ ಅಗತ್ಯವಾಗಿದೆ. ಕಾರಣವೇನೆಂದರೆ, ಋತುಚಕ್ರದ ಅವಧಿಯಲ್ಲಿ ಸ್ತ್ರೀಯರು ಸಾಕಷ್ಟು ಪ್ರಮಾಣದಲ್ಲಿ ರಕ್ತ ಮತ್ತು ಕಬ್ಬಿಣಾoಶದ ನಷ್ಟವನ್ನು ಹೊಂದುತ್ತಾರೆ. ಹೆಮೊಗ್ಲೋಬಿನ್ ಅನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಪ್ರತಿಯೋರ್ವ ಗರ್ಭಿಣಿ ಹಾಗೂ ಹಾಲುಣಿಸುವ ಸ್ತ್ರೀಗೆ ಅತ್ಯುನ್ನತ ಪ್ರಮಾಣದಲ್ಲಿ ಕಬ್ಬಿಣಾoಶದ ಅಗತ್ಯವಿದೆ. ಕಬ್ಬಿಣಾoಶದ ಕೊರತೆಯು ನಿಮ್ಮ ಕೇಶರಾಶಿಯನ್ನು ಅವುಗಳ ಬೇರಿನಿoದಲೇ ದುರ್ಬಲಗೊಳಿಸಿ ಅವು ಬೇಗನೆ ತುಂಡಾಗುವಂತೆ ಮಾಡುತ್ತದೆ. ದಿನಕ್ಕೆ ಸರಿಸುಮಾರು 100 ರಷ್ಟು ಕೇಶಸಮೂಹದ ನಷ್ಟವು, ಕೂದಲು ಉದುರುವಿಕೆಯ ಒಂದು ಲಕ್ಷಣವಾಗಿದೆ. ಕಬ್ಬಿಣಾoಶದ ಕೊರತೆಯನ್ನು ಸರಿದೂಗಿಸಲು, ಪಾಲಕ್, ಸೋಯಾ ಬೀನ್ಸ್, ಬೇಳೆ, ರಕ್ತವರ್ಣದ ಕಿಡ್ನಿಯಾಕಾರದ ಹುರುಳಿ, ಚಿಕನ್, ಮಾಂಸ, ಮೊಟ್ಟೆಗಳು, ಮತ್ತು ಮೀನನ್ನು ಸೇವಿಸಿರಿ.

ವಿಟಮಿನ್ C:

ವಿಟಮಿನ್ C:

ಕೂದಲ ಕೋಶಗಳನ್ನು ಒತ್ತಟ್ಟಿಗೆ ಬಂಧಿಸಿಡಲು Collagen ನ ಉತ್ಪತ್ತಿಯು ಅತೀ ಮುಖ್ಯವಾಗಿದ್ದು, ವಿಟಮಿನ್ C ಯು ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತದೆ. ಇದರ ಕೊರತೆಯು ಆಗಾಗ್ಗೆ ಕೂದಲ ಬೇರುಗಳ ಸಿಗಿಯುವಿಕೆ, ಕೂದಲು ಉದುರುವುದು, ಮತ್ತು ಪೆಡುಸಾದ ಕೂದಲುಗಳಿಗೆ ಕಾರಣವಾಗಬಲ್ಲುದು. ನಿಮ್ಮ ಆಹಾರಕ್ರಮದಲ್ಲಿ ಕಿತ್ತಳೆ, ಲಿಂಬೆ, ಬೀಜರಹಿತ ಹಣ್ಣುಗಳು (berries), ಮೂಸಂಬಿ, ಕಲ್ಲಂಗಡಿ, ಮತ್ತು ಟೊಮೇಟೊ ಗಳಂತಹ ಹಣ್ಣುಗಳನ್ನು ಸೇರಿಸಿರಿ. ನೀವು ಸಿಗರೇಟು ಸೇದುವವರಾಗಿದ್ದರೆ, ನಿಮಗೆ ಅನ್ನಾಂಗ C ಯ ಅವಶ್ಯಕತೆಯು ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಆದ್ದರಿಂದ, ಧೂಮಪಾನವನ್ನು ಕಡಿಮೆ ಮಾಡಿರಿ ಹಾಗೂ ಹೆಚ್ಚು ಹಣ್ಣುಗಳನ್ನು ಸೇವಿಸಿರಿ.

ಪ್ರೋಟೀನ್:

ಪ್ರೋಟೀನ್:

ಕೂದಲು ಮತ್ತು ನೆತ್ತಿ/ಶಿರವನ್ನೂ ಒಳಗೊಂಡಂತೆ, ನಮ್ಮ ಶರೀರದ ಪ್ರತಿಯೊಂದು ಅಂಗಾoಶಗಳ ಬೆಳವಣಿಗೆಯ ಮೂಲಘಟಕಗಳಾಗಿ ವರ್ತಿಸುವ ಪ್ರೋಟೀನ್ ಒಂದು ಅತೀ ಅವಶ್ಯಕವಾದ ಪೋಷಕಾoಶವಾಗಿದೆ. ಪ್ರೋಟೀನ್ ಕಳೆದು ಹೋದ ಕೂದಲುಗಳ ಸ್ಥಾನದಲ್ಲಿ ಹೊಸ ಕೂದಲುಗಳ ಉತ್ಪಾದನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಪ್ರೋಟೀನ್ ನ ಕೊರತೆಯು, ಕೂದಲುಗಳ ತೆಳ್ಳಗಾಗುವಿಕೆ, ಒಣ ಮತ್ತು ಪೆಡುಸಾದ ಕೂದಲುಗಳಿಗೆ ಕಾರಣವಾಗಿ, ಕಟ್ಟಕಡೆಗೆ ಕೂದಲ ನಷ್ಟಕ್ಕೆ ದಾರಿ ಮಾಡಿಕೊಡುತ್ತದೆ. ಅಹಾರಪದಾರ್ಥಗಳಾದ ಹುರುಳಿ, ಕಾಳುಗಳು, ಹಾಲು, ಗಿಣ್ಣು, ಮೀನು, ಮೊಟ್ಟೆಗಳು, ಮತ್ತು ಚಿಕನ್ ಗಳನ್ನು ಸೇವಿಸುವುದರ ಮೂಲಕ ಪ್ರೋಟೀನ್ ನ ಸತ್ವವನ್ನು ನಿಮ್ಮ ಶರೀರಕ್ಕೆ ಒದಗಿಸಿರಿ.

English summary

Control hair loss with these diet tips.

Hair loss is not just due to external factors like dandruff, sun exposure and so on. It is also a result of an unhealthy diet. When you deprive your body of essential nutrients, many of which are needed for normal hair growth,
X
Desktop Bottom Promotion