For Quick Alerts
ALLOW NOTIFICATIONS  
For Daily Alerts

ಕೂದಲಿನ ಸಾಮಾನ್ಯ ಸಮಸ್ಯೆಗಳಿಗೆ ಮನೆಮದ್ದು

By Arpitha Rao
|

ಸುಂದರವಾದ ಕೂದಲನ್ನು ಹೊಂದಿರಬೇಕು ಎಂಬುದು ಪ್ರತಿಯೊಬ್ಬ ಮಹಿಳೆಯ ಬಯಕೆ. ನಯವಾದ ರೆಷ್ಮೆಯುತ ಕೂದಲಿನಿಂದ ಸಾಕಷ್ಟು ಕೇಶವಿನ್ಯಾಸಗಳನ್ನು ಮಾಡಿ ಸುಂದರವಾಗಿ ಕಾಣಬಹುದು ನೋಡುಗರ ಮನ ಸೆಳೆಯಬಹುದು.ಕೂದಲ ಕಾಳಜಿ ಇದಕ್ಕೆ ಅತಿ ಮುಖ್ಯ.ದೇಹದ ತ್ವಚೆಯನ್ನು ಕಾಳಜಿಯಿಂದ ಕಾಪಾಡಿಕೊಂಡಂತೆ ಕೂದಲಿನ ಆರೈಕೆ ಕೂಡ ಮುಖ್ಯವಾಗುತ್ತದೆ.

ಆರೋಗ್ಯಯುತ ಕೂದಲು ನಿಮ್ಮದಾಗಬೇಕೆಂದಿದ್ದಲ್ಲಿ ಅದಕ್ಕೆ ಸರಿಯಾದ ನಿರ್ವಹಣೆ ಕೂಡ ಅಗತ್ಯವಾಗುತ್ತದೆ. ನಮ್ಮಲ್ಲಿ ಸಾಕಷ್ಟು ಜನರು ಕೂದಲಿಗೆ ಹೆಚ್ಚು ಆರೈಕೆ ಮಾಡುವುದೇ ಇಲ್ಲ ಅದನ್ನು ಸಾಮಾನ್ಯವಾಗಿ ಬಿಟ್ಟುಬಿಡುತ್ತೇವೆ.ಆದರೆ ಸುಂದರವಾದ ಆರೋಗ್ಯಯುತ ಕೂದಲು ನಿಮ್ಮದಾಗಬೇಕೆಂದಲ್ಲಿ ಕೂದಲಿನ ಆರೈಕೆಗೆ ಸ್ವಲ್ಪ ಸಮಯ ನೀಡಲೇಬೇಕು.

ಕೂದಲಿನ ಯಾವುದೇ ತೊಂದರೆಗಳು ಇಲ್ಲದಿದ್ದಲ್ಲಿ ಮಾತ್ರ ಕೂದಲು ಸುಂದರವಾಗಿ ಬೆಳೆಯಲು ಮತ್ತು ನೋಡುಗರ ಮನ ಸೆಳೆಯಲು ಸಾಧ್ಯ.ಕೂದಲಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಸಮಸ್ಯೆಗಳೆಂದರೆ ತುರಿಕೆ,ಎಣ್ಣೆಯುಕ್ತ ಕೂದಲು,ಒಣ ಕೂದಲು ಮತ್ತು ಕೂದಲು ತುಂಡಾಗುವಿಕೆ ಮುಂತಾದವುಗಳು.ಈ ಕೆಳಗೆ ಕೂದಲ ಆರೈಕೆಗೆ ಕೆಲವು ಮನೆ ಮದ್ದುಗಳನ್ನು ನೀಡಲಾಗಿದೆ.ಓದಿ ನೋಡಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮೊಟ್ಟೆ ಬಳಸಿ ಕೂದಲನ್ನು ರಕ್ಷಿಸಿಕೊಳ್ಳಿ!

ಹೇರ್ ಕಂಡೀಶನರ್:

ಹೇರ್ ಕಂಡೀಶನರ್:

ಮೊಟ್ಟೆ ನೈಸರ್ಗಿಕವಾದ ಹೇರ್ ಕಂಡೀಶನರ್.ಮೊಟ್ಟೆಯ ಸಂಪೂರ್ಣ ಭಾಗ ಕೂದಲಿನ ಆರೈಕೆಗೆ ಸಹಾಯಕ.ಎಣ್ಣೆ ಅಥವಾ ಗ್ರೀಸ್ ಯುಕ್ತ ಕೂದಲಿಗೆ ಮೊಟ್ಟೆಯ ಬಿಳಿಯ ಭಾಗ ಸಹಾಯಕ.ಒಣಗಿದ ಮತ್ತು ತುಂಡಾದ ಕೂದಲಿಗೆ ಮೊಟ್ಟೆಯ ಹಳದಿ ಭಾಗ ಸಹಾಯಕವಾಗಿದೆ.ನಿಮ್ಮ ಕೂದಲಿನ ವಿಧವನ್ನು ನೋಡಿಕೊಂಡು ಸೂಕ್ತವಾಗುವ ಮೊಟ್ಟೆಯ ಭಾಗವನ್ನು ಬಳಸಬಹುದು.ನಿಮ್ಮದು ಒಣ ಕೂದಲಾಗಿದ್ದರೆ ಮೊಟ್ಟೆಯ ಹಳದಿ ಭಾಗವನ್ನು ಹಚ್ಚಿ ೨೦ ನಿಮಿಷದ ನಂತರ ಕೂದಲನ್ನು ತೊಳೆಯಿರಿ.ನಿಮ್ಮದು ಎಣ್ಣೆಯುಕ್ತ ಕೂದಲಾಗಿದ್ದರೆ ಮೊಟ್ಟೆಯ ಬಿಳಿಯ ಭಾಗವನ್ನು ಉಪಯೋಗಿಸಿ.ಕಂಡೀಶನರ್ ಆಗಿ ಮೊಟ್ಟೆಯನ್ನು ಉಪಯೋಗಿಸುತ್ತೀರಾದರೆ ಸಂಪೂರ್ಣ ಮೊಟ್ಟೆಯನ್ನು ಬಳಸಬಹುದು.

ಒಣಗಿದ ಮತ್ತು ಕಳೆಗುಂದಿದ ಕೂದಲು:

ಒಣಗಿದ ಮತ್ತು ಕಳೆಗುಂದಿದ ಕೂದಲು:

ನಿಮ್ಮ ಕೂದಲಿಗೆ ಮೊಸರನ್ನು ಹಚ್ಚಿ. ನಂತರ ೨೦ ನಿಮಿಷಗಳನ್ನು ಬಿಟ್ಟು ತಣ್ಣೀರಿನಿಂದ ಕೂದಲನ್ನು ತೊಳೆಯಿರಿ.ಮೊಸರಿನಲ್ಲಿರುವ ಲ್ಯಾಕ್ಟಿಕ್ ಆಮ್ಲ ಕೂದಲಿನ ಬೇರನ್ನು ಬಲಗೊಳಿಸುತ್ತದೆ.ಈ ಕೂದಲು ತುಂಡಾಗುವಿಕೆ ಅಥವಾ ಹಾನಿ, ಮಾಲಿನ್ಯದಿಂದ ಮತ್ತು ಕೂದಲಿಗೆ ಬಳಸುವ ವಿವಿಧ ಕೇಶವಿನ್ಯಾಸ ಉತ್ಪನ್ನಗಳಿಂದ ಉಂಟಾಗುತ್ತದೆ ಆದ್ದರಿಂದ ಇವುಗಳಿಂದ ದೂರವಿರಿ.

ಕೂದಲಿನ/ತಲೆಯ ತುರಿಕೆಗೆ ಪರಿಹಾರ ಕಂಡುಕೊಳ್ಳಿ:

ಕೂದಲಿನ/ತಲೆಯ ತುರಿಕೆಗೆ ಪರಿಹಾರ ಕಂಡುಕೊಳ್ಳಿ:

ಪರಿಸರದ ಬದಲಾವಣೆ,ಅಸಮತೋಲಿತ ಆಹಾರ ಮತ್ತು ಒತ್ತಡದಿಂದಾಗಿ ತಲೆಯ ತುರಿಕೆ ಕಂಡು ಬರುತ್ತದೆ.ಈ ರೀತಿ ಆದಲ್ಲಿ ೨ ಚಮಚ ನಿಂಬೆ ರಸ ಮತ್ತು ೨ ಚಮಚ ಆಲೀವ್ ಎಣ್ಣೆ ಬಳಸಬೇಕು.ಇವರಡನ್ನು ಮಿಶ್ರ ಮಾಡಿ ತಲೆಗೆ ಹೆಚ್ಚಿ ೩೦ ನಿಮಿಷ ಬಿಟ್ಟು ನಂತರ ನೆತ್ತಿಯನ್ನು ತೊಳೆಯಿರಿ.

ಬೆಳವಣಿಗೆ ಕುಂಟಿತಗೊಂಡ ಕೂದಲು:

ಬೆಳವಣಿಗೆ ಕುಂಟಿತಗೊಂಡ ಕೂದಲು:

ಇಂತಹ ಕೂದಲಿಗೆ ನೇರವಾಗಿ ಬೀರ್ ಹಚ್ಚಿ.ಬೀರ್ ನಲ್ಲಿರುವ ಈಸ್ಟ್ ಕೂದಲ ಬೆಳವಣಿಗೆಗೆ ಸಹಕರಿಸುತ್ತದೆ.ಮೊಟ್ಟೆ,ಒಂದು ಚಮಚ ಸೂರ್ಯಕಾಂತಿ ಎಣ್ಣೆ ಮತ್ತು ಅರ್ಧ ಕಪ್ ಬೀರನ್ನು ಸೇರಿಸಿ.ಇದನ್ನು ಕೂದಲಿಗೆ ಹಚ್ಚಿ ಇದರಿಂದ ಕೂದಲು ಸುಂದರವಾಗುತ್ತದೆ.

ಸೂರ್ಯನ ಬೆಳಕಿನಿಂದ ಹಾನಿಯಾದ ಕೂದಲು:

ಸೂರ್ಯನ ಬೆಳಕಿನಿಂದ ಹಾನಿಯಾದ ಕೂದಲು:

ಬೌಲಿನಲ್ಲಿ ಕಾಲು ಕಪ್ ಜೇನುತುಪ್ಪವನ್ನು ತೆಗೆದುಕೊಳ್ಳಿ ಇದಕ್ಕೆ ೫-೬ ಚಮಚ ಆಲೀವ್ ಎಣ್ಣೆಯನ್ನು ಸೇರಿಸಿ.ಇದನ್ನು ಚೆನ್ನಾಗಿ ಬೆರೆಸಿ ಕೂದಲಿಗೆ ಹಚ್ಚಿ.ಆಲೀವ್ ಆಯಿಲ್ ನಲ್ಲಿರುವ ವಿಟಮಿನ್ ಇ ಕೂದಲ ಹಾನಿ ತಡೆಯುತ್ತದೆ ಮತ್ತು ಜೇನಿನಲ್ಲಿರುವ ತೇವಾಂಶದ ಗುಣ ಸೂರ್ಯನ ಕಿರಣಗಳಿಂದ ಕೂದಲು ಹಾನಿಗೊಳಗಾಗಿದ್ದನ್ನು ಸರಿಪಡಿಸುತ್ತದೆ.

ಫ಼್ರಿಜ್ಜಿ ಕೂದಲಿಗೆ ಪರಿಹಾರ :

ಫ಼್ರಿಜ್ಜಿ ಕೂದಲಿಗೆ ಪರಿಹಾರ :

ಬೆಣ್ಣೆ ಹಣ್ಣು ಅಥವಾ ಅವಾಕಾಡೋ ತೆಗೆದುಕೊಂಡು ಸ್ಮ್ಯಾಶ್ ಮಾಡಿ ಅದನ್ನು ತಲೆಗೆ ಹಚ್ಚಿ.೨೦ ನಿಮಿಷದ ನಂತರ ತಲೆಯನ್ನು ತೊಳೆಯಿರಿ.ಬೆಣ್ಣೆಹಣ್ಣು , ಮೊಸರು ಅಥವಾ ಮೊಟ್ಟೆಯ ಹಳದಿ ಭಾಗವನ್ನು ತಲೆಗೆ ಹಚ್ಚುವುದರಿಂದ ಫ್ರೀಜಿ ಕೂದಲಿಗೆ ಪರಿಹಾರ ಪಡೆದುಕೊಳ್ಳಬಹುದು.

ತುಂಡು ತುಂಡಾಗುವ ಕೂದಲಿಗೆ ಅಡುಗೆ ಸೋಡಾ:

ತುಂಡು ತುಂಡಾಗುವ ಕೂದಲಿಗೆ ಅಡುಗೆ ಸೋಡಾ:

ಅಡುಗೆ ಸೋಡವನ್ನು ನೀರಿನೊಂದಿಗೆ ಮಿಶ್ರ ಮಾಡಿ.ಇದನ್ನು ನೆತ್ತಿಗೆ ಹಚ್ಚಿ.ಈ ರೀತಿ ಮಾಡುವುದರಿಂದ ಕೂದಲಿಗೆ ಬೇಡವಾದ ಅನಗತ್ಯ ಅಂಶವನ್ನು ಇದು ತೆಗೆದುಹಾಕುತ್ತದೆ.

English summary

Best home remedies for the common hair problems

Hair care is the necessary thing to good and healthy hair. The hair care involves the maintaining hair healthy, treats the hair problems and gives the beauty to the hair.
Story first published: Saturday, January 25, 2014, 17:20 [IST]
X
Desktop Bottom Promotion