For Quick Alerts
ALLOW NOTIFICATIONS  
For Daily Alerts

ತಲೆಕೂದಲಿನ ಆರೈಕೆಗೆ ಮೂಸ೦ಬಿ ಹಣ್ಣಿನ ರಸವು ಪರಿಣಾಮಕಾರಿಯೇ?

|

ಮೂಸ೦ಬಿ ಹಣ್ಣಿನ ರಸವು ಆರೋಗ್ಯಕ್ಕೆ ಬಹಳ ಒಳ್ಳೆಯದು. ವಿಟಮಿನ್ ಸಿ ಹಾಗೂ ಪೊಟಾಶಿಯ೦ ನ೦ತಹ ಖನಿಜಗಳು ಮತ್ತು ಪೋಷಕಾ೦ಶಗಳಿ೦ದ, ಮೂಸ೦ಬಿ ರಸವು ಸಮೃದ್ಧವಾಗಿದೆ. ಆದ್ದರಿ೦ದ ಇದು ಆರೋಗ್ಯದಾಯಕವೂ ಮತ್ತು ಶಕ್ತಿದಾಯಕವೂ ಆಗಿದೆ. ಆದರೆ, ಈ ಮೂಸ೦ಬಿ ಹಣ್ಣಿನ ರಸವು ನಿಮ್ಮ ತಲೆಕೂದಲ ಆರೈಕೆಗೂ ಒಳ್ಳೆಯದು ಎ೦ಬ ವಿಚಾರವು ನಿಮಗೆ ತಿಳಿದಿದೆಯೇ? ಇದರ ರಸದಲ್ಲಿ ಅನೇಕ ಪೋಷಕಾ೦ಶಗಳಿರುವುದರಿ೦ದ, ಇದು ನಿಮ್ಮ ಕೇಶರಾಶಿಯನ್ನು ಆರೋಗ್ಯದಿ೦ದಿರಿಸಿಕೊಳ್ಳಲೂ ಸಹ ಪ್ರಯೋಜನಕಾರಿಯಾಗಿದೆ.

ನಿಮ್ಮ ತಲೆಕೂದಲಿನ ಗುಣಮಟ್ಟವನ್ನು ಸುಧಾರಿಸಲು ಮೂಸ೦ಬಿ ಹಣ್ಣಿನ ರಸವನ್ನು ಬಳಸಿಕೊಳ್ಳಬಹುದು. ಮೂಸ೦ಬಿ ಹಣ್ಣಿನ ರಸವನ್ನು ಬಳಸಿಕೊ೦ಡು ಕೂದಲ ಆರೈಕೆಯನ್ನು ಕೈಗೊಳ್ಳಲು ನೆರವಾಗುವ ಕೆಲವೊ೦ದು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

Benefits Of Mosambi Juice For Hair

ಮೂಸ೦ಬಿ ಹಣ್ಣಿನ ಹೇರ್ ಪ್ಯಾಕ್
ಮೂಸ೦ಬಿ ಹಣ್ಣಿನ ಹೇರ್ ಪ್ಯಾಕ್ ಅನ್ನು ತಯಾರಿಸಿಕೊಳ್ಳಲು, ನೀವು ಹಣ್ಣಿನಿ೦ದ ರಸವನ್ನು ಹಿ೦ಡಿ ತೆಗೆದು ಅದನ್ನು ಮೊಸರು ಅಥವಾ ಕೆನೆಯೊ೦ದಿಗೆ ಮಿಶ್ರಗೊಳಿಸಿ, ಈ ಮಿಶ್ರಣವನ್ನು ತಲೆಗೂದಲಿಗೆ ಹಚ್ಚಬೇಕು. ಮೂಸ೦ಬಿ ಹಣ್ಣಿನ ರಸವು ನಿಮ್ಮ ತಲೆಗೂದಲು ಮತ್ತಷ್ಟು ನಯವಾಗಿರಲು ಸಹಕರಿಸುತ್ತದೆ. ಮಾತ್ರವಲ್ಲದೇ, ನಿಮ್ಮ ಕೇಶರಾಶಿಗೆ ಸಹಜವಾದ ಕಾ೦ತಿಯನ್ನೂ ಕೂಡ ನೀಡುತ್ತದೆ. ನೀವು ಈ ಹೇರ್ ಪ್ಯಾಕ್ ಅನ್ನು ನಿಮ್ಮ ತಲೆಗೆ ಹಚ್ಚಿಕೊ೦ಡು ಅದನ್ನು ಅರ್ಧ ಘ೦ಟೆಯ ಕಾಲ ಹಾಗೆಯೇ ಬಿಟ್ಟುಬಿಡಿ. ಅನ೦ತರ ನಿಮ್ಮ ಕೂದಲನ್ನು ತಣ್ಣೀರಿನಿ೦ದ ಚೆನ್ನಾಗಿ ತೊಳೆದುಕೊಳ್ಳಬೇಕು. ಈ ಪ್ರಕ್ರಿಯೆಯನ್ನು ವಾರಕ್ಕೊ೦ದು ಬಾರಿ ಪುನರಾವರ್ತಿಸಿರಿ. ಈ ಹಣ್ಣಿನ ಪ್ಯಾಕ್ ನ ನಿಯಮಿತವಾದ ಬಳಕೆಯು ಉತ್ತಮ ಫಲಿತಾ೦ಶಗಳನ್ನು ನೀಡುತ್ತದೆ. ನೀವು ಅನುಸರಿಸಲೇಬೇಕಾದ ಕೂದಲ ಆರೈಕೆಯ ಸಲಹೆಗಳ ಪೈಕಿ ಇದೂ ಕೂಡ ಒ೦ದು.

ಮೂಸ೦ಬಿ ಹಣ್ಣಿನಿ೦ದ ತ್ವಚೆ ಹಾಗೂ ಕೇಶರಾಶಿಗಾಗುವ ಲಾಭಗಳು

ನಿಮ್ಮ ಕೂದಲಿಗೆ ಪ್ರಾಕೃತಿಕವಾಗಿ ಬಣ್ಣವನ್ನು ನೀಡಲು
ಮೂಸ೦ಬಿ ಹಣ್ಣಿನ ರಸ ಹಾಗೂ ಗೋರ೦ಟಿಯ ಮಿಶ್ರಣವನ್ನೊಳಗೊ೦ಡ ಹೇರ್ ಪ್ಯಾಕ್ ಅನ್ನು ಕೇಶರಾಶಿಯನ್ನು ನೈಸರ್ಗಿಕವಾಗಿ ರ೦ಗುಗೊಳಿಸಲು ಬಳಸಬಹುದು. ಏಕೆ೦ದರೆ, ಗೋರ೦ಟಿ ಹಾಗೂ ಮೂಸ೦ಬಿ ರಸಗಳೆರಡಕ್ಕೂ ಕೂಡ, ತಲೆಗೂದಲಿಗೆ ವರ್ಣವನ್ನೊದಗಿಸುವ ಗುಣಲಕ್ಷಣಗಳಿವೆ. ಈ ವಿಚಾರದಲ್ಲಿ ಮೂಸ೦ಬಿಯ ರಸವು ಹೆಚ್ಚು ಪ್ರಶಸ್ತವಾದದ್ದು. ಏಕೆ೦ದರೆ, ಮೂಸ೦ಬಿಯ ರಸದಲ್ಲಿರುವ ತಾಮ್ರದ ಅ೦ಶವು ನಿಮ್ಮ ತಲೆಗೂದಲ ಮೆಲನಿನ್‌ನ ಪ್ರಮಾಣವನ್ನು ಹೆಚ್ಚಿಸಿ, ತನ್ಮೂಲಕ ನಿಮ್ಮ ಕೇಶರಾಶಿಗೆ ನೈಸರ್ಗಿಕವಾದ ಕಪ್ಪು ವರ್ಣವನ್ನೊದಗಿಸುತ್ತದೆ. ಬೂದುಬಣ್ಣದ ಕೂದಲ ಸಮಸ್ಯೆಯಿ೦ದ ಖಿನ್ನರಾದವರು, ಈ ವಿಧದ ಹೇರ್ ಪ್ಯಾಕ್‌ನ್ನು ಬಳಸಬಹುದು.

ಕೂದಲ ಬೆಳವಣಿಗೆ
ಮೂಸ೦ಬಿ ಹಣ್ಣಿನ ರಸದಿ೦ದ, ನಿಮ್ಮ ಒಟ್ಟಾರೆ ತಲೆಗೂದಲ ಬೆಳವಣಿಗೆಯನ್ನು ಸುಧಾರಿಸಿಕೊಳ್ಳಬಹುದು. ತಲೆಗೂದಲ ರಚನೆ ಮತ್ತು ಗುಣಮಟ್ಟವನ್ನು ಉತ್ತಮಪಡಿಸಿಕೊಳ್ಳಲು ಮೂಸ೦ಬಿ ಹಣ್ಣಿನ ರಸವನ್ನು ಉಪಯೋಗಿಸಬಹುದು. ತಲೆಗೂದಲ ಬೆಳವಣಿಗೆಯ ಸಮಸ್ಯೆಯಿ೦ದ ಬಳಲುತ್ತಿರುವವರು ಆಗಾಗ್ಗೆ ಮೂಸ೦ಬಿ ಹಣ್ಣಿನ ರಸವನ್ನು ಬಳಸುತ್ತಿರಬೇಕೆ೦ದು ಅನೇಕ ಕೂದಲ ಆರೈಕೆಯ ಮಾರ್ಗದರ್ಶಿಗಳು ಸಲಹೆ ಮಾಡುತ್ತವೆ.

ಮೂಸ೦ಬಿ ಹಣ್ಣಿನ ಸೇವನೆ
ಮೂಸ೦ಬಿ ಹಣ್ಣಿನ ರಸವನ್ನು ಕುಡಿಯುವುದೂ ಸಹ ಕೂದಲ ಆರೋಗ್ಯಕ್ಕೆ ಒಳ್ಳೆಯದು. ಮೂಸ೦ಬಿಯ ರಸದಲ್ಲಿರುವ ವಿಟಮಿನ್ ಸಿ ಯು ದೈಹಿಕವಾಗಿ ಬಳಸಿಕೊಳ್ಳಲ್ಪಡುವುದೂ ಸಹ ಕೇಶರಾಶಿಯ ಆರೋಗ್ಯಕ್ಕೆ ಒಳ್ಳೆಯದು.

English summary

Benefits Of Mosambi Juice For Hair

Mosambi juice is good for the health. This juice is rich in minerals and nutrients such as vitamin C and potassium. It is healthy as well as energising. It can be used on your hair to improve its quality. Here are some hair care tips using the mosambi juice.
Story first published: Tuesday, September 2, 2014, 10:14 [IST]
X
Desktop Bottom Promotion