For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಕೂದಲಿನ ದುರ್ವಾಸನೆಯನ್ನು ತಡೆಗಟ್ಟುವುದು ಹೇಗೆ?

|

ಮಳೆಗಾಲವೆಂದರೆ ಏನೋ ಒಂದು ತೆರನಾದ ಸಂಭ್ರಮ. ಈ ಕಾಲದಲ್ಲಿ ಪ್ರತಿಯೊಂದು ತೊಳೆದಿಟ್ಟ ಕನ್ನಡಿಯಂತೆ ಶುಭ್ರವಾಗಿ ಕಂಡುಬರುತ್ತದೆ. ಮನೆ ಮನಗಳ ಸ್ವಚ್ಛವಾಗಿ ಅಲ್ಲೊಂದು ಶುಭ್ರತೆಯ ಹೊಸ ಕಾಂತಿ ಒಡಮೂಡುತ್ತದೆ. ಗಾಳಿ ತಂಪಾಗಿ ನಾವಿರುವ ಪರಿಸರ ಕಾಂತಿಯುಕ್ತವಾಗಿರುತ್ತದೆ.

ಒಟ್ಟಾರೆ ಹೇಳುವುದಾದರೆ ಪ್ರಕೃತಿಯ ತಾಜಾ ನೋಟದ ದರುಶನ ನಮಗುಂಟಾಗುತ್ತದೆ. ಮಳೆ ಹನಿಯ ಆಗಮನ ನಮ್ಮಲ್ಲಿ ಹೊಸ ಸಂತಸದ ಅಲೆಗಳನ್ನು ಸೃಷ್ಟಿ ಮಾಡುತ್ತದೆ. ಈ ತಂಪಾದ ಮಳೆಹನಿಯೊಂದಿಗೆ ಆಟವಾಡುತ್ತಾ ಕೆಲವೊಂದು ಮುನ್ನೆಚ್ಚರಿಕೆಗಳನ್ನು ನಾವು ತೆಗೆದುಕೊಳ್ಳುವುದು ಅತ್ಯವಶ್ಯಕವಾಗಿದೆ. ಅದರಲ್ಲೂ ಕೂದಲು ಒದ್ದೆಯಾಗುವುದನ್ನು ಅದರಿಂದ ಕೆಟ್ಟ ವಾಸನೆ ಹೊರಬರುವುದನ್ನು ತಡೆಗಟ್ಟಲು ನಾವು ಕೆಲವೊಂದು ವಿಧಾನಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.

Avoid Smelly Hair During Monsoons: Tips

ಮಳೆ ಹನಿಯು ಭೂಮಿಗೆ ಬಿದ್ದಾಗ ತೇವಾಂಶ ನೆಲದಲ್ಲಿ ಮತ್ತು ವಾತಾವರಣದಲ್ಲಿ ಉಂಟಾಗುತ್ತದೆ. ಈ ಬದಲಾವಣೆಯು ಪ್ರತಿಯೊಂದರ ಮೇಲೂ ಪರಿಣಾಮವನ್ನು ಬೀರುತ್ತದೆ. ಒದ್ದೆ ಕೂಲದು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರಿಕಿರಿಯನ್ನು ಉಂಟುಮಾಡುತ್ತದೆ. ಕೂದಲು ಸರಿಯಾಗಿ ಒಣಗಿಲ್ಲವೆಂದಲ್ಲಿ ಹೊಟ್ಟು ಸರ್ವೇ ಸಾಮಾನ್ಯವಾಗಿರುತ್ತದೆ. ಈ ಕಾಲದ ಕೆಲವೊಂದು ಸಮಸ್ಯೆಗಳಿಂದ ನಮ್ಮನ್ನು ತಪ್ಪಿಸಿಕೊಳ್ಳಲು ಕೆಲವೊಂದು ವಿಧಾನಗಳನ್ನು ನಾವು ಅನುಸರಿಸುವುದು ಅಗತ್ಯವಾಗಿದೆ.

ಮಳೆಗಾಲದಲ್ಲಿ ಕೂದಲಿನ ಸಂರಕ್ಷಣೆ ಬೇರೆಲ್ಲಾ ಕಾಲಕ್ಕಿಂತ ಭಿನ್ನವಾಗಿರುತ್ತದೆ. ಇದರ ಬಗ್ಗೆ ಸರಿಯಾದ ಮತ್ತು ಕಾಳಜಿಯುಕ್ತ ಆರೈಕೆಯನ್ನು ನಾವು ತೆಗೆದುಕೊಳ್ಳುವುದು ಮುಖ್ಯವಾಗಿರುತ್ತದೆ. ಬ್ಯಾಕ್ಟೀರಿಯಾ ಮತ್ತು ಫಂಗಸ್‌ನಿಂದ ಕೂದಲಿನ ಸಂರಕ್ಷಣೆಯನ್ನು ನಾವು ಮಾಡಬೇಕಾಗುತ್ತದೆ.

ಕೂದಲು ಹಾಳಾಗುವುದನ್ನು ತಡೆಯಬೇಕೇ? ಇಲ್ಲಿದೆ ಸೂಕ್ತ ಸಲಹೆ

ಮಾನ್‌ಸೂನ್ ಅಥವಾ ಮಳೆಗಾಲದಲ್ಲಿ ಉಂಟಾಗುವ ಕೂದಲ ವಾಸನೆಯನ್ನು ಹೋಗಲಾಡಿಸಲು ನಾವಿಲ್ಲಿ ಕೆಲವೊಂದು ವಿಧಾನಗಳನ್ನು ತಿಳಿಸಿಕೊಡುತ್ತಿದ್ದೇವೆ. ಇದೇನೂ ಅಷ್ಟೊಂದು ಕಷ್ಟದ ಕೆಲಸವಲ್ಲ. ಸುಲಭವಾಗಿ ಅನುಸರಿಸಬಹುದಾದ ವಿಧಾನಗಳಾಗಿವೆ.

ಸ್ವಚ್ಛ ತಲೆಬುರುಡೆ
ಸ್ವಚ್ಛವಾದ ತಲೆಬುರುಡೆ ಆರೋಗ್ಯವಾದ ಕೂದಲಿಗೆ ಮುಖ್ಯವಾಗಿರುತ್ತದೆ. ಇಲ್ಲಿ ಫಂಗಸ್ ಬೆಳವಣಿಗೆ ಉಂಟಾಗುವುದನ್ನು ತಡೆಗಟ್ಟಲು ತಲೆಬುರುಡೆಯನ್ನು ಸ್ವಚ್ಛಗೊಳಿಸುವುದು ಕೂದಲಿನ ವಾಸನೆಯನ್ನು ತಡೆಗಟ್ಟಲು ಇರುವ ಒಂದು ಸರಳ ವಿಧಾನವಾಗಿದೆ. ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸಲು ನೀವು ತಲೆಬುರುಡೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾಗಿರುತ್ತದೆ.

ಶಾಂಪೂ ಆಯ್ಕೆ
ನಿಮ್ಮ ಕೂದಲಿಗೆ ತೇವಾಂಶವನ್ನು ಉಂಟುಮಾಡುವ ಶಾಂಪೂಗಳನ್ನು ವರ್ಜಸಿ. ಇದು ಕೂದಲಿಗೆ ಜಿಡ್ಡು ಮತ್ತು ಕೆಟ್ಟ ವಾಸನೆಯನ್ನು ನೀಡಬಹುದು. ಮೈಲ್ಡ್ ಶಾಂಪೂವನ್ನು ಬಳಸುವುದು ಉತ್ತಮವಾಗಿರುತ್ತದೆ. ಎಣ್ಣೆಯುಕ್ತ ಕೂದಲು ನಿಮ್ಮದಾಗಿದ್ದರೆ ಈ ಮುತುವರ್ಜಿಯನ್ನು ನೀವು ವಹಿಸಲೇಬೇಕು. ನೆಲ್ಲಿಕಾಯಿ, ಸೀಗೆಕಾಯಿ. ನೊರೆಕಾಯಿ ಉತ್ತಮ ಆಯ್ಕೆಯಾಗಿದೆ.

ಕೂದಲು ಹೊಳೆಯುವಂತಾಗಲು ಮೊಟ್ಟೆಯ ಪಾತ್ರವೇನು ಗೊತ್ತೇ?

ಕೂದಲಿನ ಕಂಡೀಷನಿಂಗ್
ಮಳೆಗಾಲದಲ್ಲಿ ಕೂದಲಿನ ವಾಸನೆಯನ್ನು ತಡೆಗಟ್ಟಲು ಕಂಡೀಷನಿಂಗ್ ಮಾಡುವುದು ತೀರಾ ಅಗತ್ಯವಾಗಿದೆ. ಕೆಲವೊಂದು ಬ್ರ್ಯಾಂಡೆಡ್ ಅಥವಾ ಮನೆಯಲ್ಲೇ ತಯಾರಿಸಬಹುದಾದ ಕಂಡೀಷನರ್ ಅನ್ನು ಬಳಸಿ. ಲಿಂಬೆ ರಸ, ಬೇಕಿಂಗ್ ಸೋಡಾ ಅಥವಾ ಆಪಲ್ ಸೀಡರ್ ವಿನೇಗರ್‌ನಂತಹ ವಸ್ತುಗಳನ್ನು ನಿಮ್ಮ ಕೂದಲಿನ ಕಂಡೀಷನ್‌ಗಾಗಿ ನೀವು ಬಳಸವುದು ಮುಖ್ಯವಾಗಿದೆ.

ಡಯೆಟ್ ಬದಲಾವಣೆಗಳು
ಸರಿಯಾದ ಮತ್ತು ಸೂಕ್ತವಾದ ಡಯೆಟ್ ಅನುಸರಣೆಯು ನಿಮ್ಮ ಆರೋಗ್ಯವಂತ ಬುರುಡೆ ಮತ್ತು ಕೂದಲಿಗಾಗಿ ಅತೀ ಮುಖ್ಯವಾದುದು. ನೀವು ಅಗತ್ಯವಾಗಿರುವ ತರಕಾರಿ, ಹಣ್ಣುಗಳನ್ನು ತೆಗೆದುಕೊಳ್ಳುತ್ತಿದ್ದೀರಿ ಎಂಬುದನ್ನು ಖಾತರಿಪಡಿಸಿಕೊಳ್ಳಿ. ಇದು ನಿಮ್ಮ ದೇಹ ಹೈಡ್ರೇಟ್ ಆಗಿರಿಸಲು ಸಹಕಾರಿಯಾಗಿದೆ. ನಿಮ್ಮ ಕೂದಲಿನಲ್ಲಿ ಬೆವರನ್ನು ಮತ್ತು ನಿಮಗೆ ಜಿಡ್ಡನ್ನು ಉಂಟುಮಾಡುವ ಅಧಿಕ ಕೆಫೇನ್ ಸೇವನೆಯನ್ನು ನಿಲ್ಲಿಸಿ.

ಕೂದಲ ಅಲಂಕಾರ ಸಾಮಾಗ್ರಿಗಳು
ನೀವು ನಿಮ್ಮ ಕೂದಲ ಅಲಂಕಾರ ಸಾಮಾಗ್ರಿಗಳನ್ನು ಬಳಸಬೇಕೆಂದಲ್ಲಿ, ಪರ್ಮಿಂಗ್, ಸ್ಟ್ರೇಟಿಂಗ್ ಅಥವಾ ಕಲರ್ ಮಾಡಿಕೊಳ್ಳುವುದಕ್ಕಾಗಿ ಮಳೆಗಾಲ ಕಡಿಮೆ ಆಗುವವರೆಗೆ ಕಾಯಿರಿ. ಮಳೆಗಾಲದಲ್ಲಿ ಕೂದಲಿನ ಸಂರಕ್ಷಣೆಯನ್ನು ಭಿನ್ನ ರೀತಿಯಲ್ಲಿ ಮಾಡಬೇಕಾಗುತ್ತದೆ. ಮತ್ತು ಹೀಗೆ ಅಲಂಕಾರ ಮಾಡಿದ ಕೂದಲನ್ನು ಸಂರಕ್ಷಿಸಿಕೊಳ್ಳುವುದು ತುಸು ಕಷ್ಟದ ಕೆಲಸವೇ ಸರಿ. ಆದ್ದರಿಂದ ಕೂದಲಿಗೆ ಮಳೆಗಾಲದಲ್ಲಿ ಅಲಂಕಾರ ಮಾಡಿಕೊಳ್ಳುವುದನ್ನು ಆದಷ್ಟು ಕಡಿಮೆ ಮಾಡಿ.

ನಮ್ಮ ಕೂದಲನ್ನು ನಾವೆಲ್ಲಾ ತುಂಬಾ ಪ್ರೀತಿಸುತ್ತೇವೆ ಮತ್ತು ಅದರ ಸಂರಕ್ಷಣೆಗಾಗಿ ಮುತುವರ್ಜಿಯನ್ನು ಕೂಡ ವಹಿಸುತ್ತೇವೆ. ಮಳೆಗಾಲದಲ್ಲಿ ಕೂದಲಿನ ಬುಡ ಮತ್ತು ಬುರುಡೆಯ ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳುವುದು ಕೂದಲಿನ ಆರೋಗ್ಯವನ್ನು ಅಭಿವೃದ್ಧಿಯನ್ನು ಮಾಡುತ್ತದೆ.

X
Desktop Bottom Promotion