For Quick Alerts
ALLOW NOTIFICATIONS  
For Daily Alerts

ಕೂದಲಿನ ಆರೈಕೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು

By Super
|

ನಮ್ಮ ದೇಹದ ನಿರ್ಜೀವ, ಆದರೆ ಬೆಳೆಯುವ ಅಂಗಗಳೆಂದರೆ ಕೂದಲು ಮತ್ತು ಉಗುರು. ಪ್ರತಿದಿನ ನಮ್ಮ ದೇಹದಿಂದ ಸರಾಸರಿ ನೂರು ಕೂದಲುಗಳು ಉದುರುತ್ತವೆ ಹಾಗೂ ಅಷ್ಟೇ ಸಂಖ್ಯೆಯಲ್ಲಿ ಹೊಸ ಕೂದಲು ಹುಟ್ಟುತ್ತದೆ. ಕೂದಲು ಉದುರಿದ ಬಳಿಕ ಆ ಬುಡದಲ್ಲಿಯೇ ಹೊಸ ಕೂದಲು ಹುಟ್ಟಲು ಸುಮಾರು ಎರಡರಿಂದ ಆರು ದಿನಗಳು ಬೇಕು. ಕೂದಲ ಬೆಳವಣಿಗೆಗೆ ಹಲವು ಪೋಷಕಾಂಶಗಳ ಅಗತ್ಯವಿದೆ.

ನಮ್ಮ ಆಹಾರದ ಮೂಲಕ ಸೇವಿಸುವ ಹಲವು ಪೋಷಕಾಂಶಗಳು ಕೂದಲ ಆರೈಕೆಗೆ ಒಳಗಿನಿಂದ ನೆರವಾದರೆ ಕೂದಲ ಬುಡಕ್ಕೆ ಹಚ್ಚುವ ತೈಲ ಮತ್ತು ಇತರ ಪ್ರಸಾದನಗಳಿಂದ ಹೊರಗಿನಿಂದ ನೆರವು ದೊರಕುತ್ತದೆ. ಸೂಕ್ತ ಆರೈಕೆಯಿಲ್ಲದಿದ್ದಲ್ಲಿ ಕೂದಲುದುರುವ ಸಂಖ್ಯೆಹೆಚ್ಚಿ ಹೊಸ ಕೂದಲು ಹುಟ್ಟುವ ಪ್ರಮಾಣ ಕಡಿಮೆಯಾಗುತ್ತದೆ ಹಾಗೂ ಇರುವ ಕೂದಲುಗಳೂ ಬಿರಿದ ತುದಿ, ಮಂಕಾದ ಹೊಳಪು ಮೊದಲಾದ ತೊಂದರೆಗಳಿಂದ ಶಿಥಿಲವಾಗುತ್ತವೆ.

ಕೆಲವು ನಗರಗಳಲ್ಲಿ ನಲ್ಲಿಗಳಲ್ಲಿ ಬರುವ ಗಡಸು ನೀರಿನಿಂದ ಕೂದಲನ್ನು ತೊಳೆದುಕೊಳ್ಳುವಾಗ ನೀರಿನ ಗುಣಮಟ್ಟವೂ ಕೂದಲನ್ನು ಶಿಥಿಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಗಡಸು ನೀರಿನಲ್ಲಿ ಕರಗಿರುವ ಹಲವು ಲೋಹ ಮತ್ತು ಖನಿಜಗಳ ಕಾರಣ ಕೂದಲು ತನ್ನ ಹೊಳಪು ಮತ್ತು ಆರೋಗ್ಯವನ್ನು ಕಳೆದುಕೊಳ್ಳುತ್ತದೆ. ತಲೆಕೂದಲಿನ ಆರೈಕೆಗೆ ಮೂಸ೦ಬಿ ಹಣ್ಣಿನ ರಸವು ಪರಿಣಾಮಕಾರಿಯೇ?

ಒಂದು ವೇಳೆ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿದ್ದರೆ ಕೂದಲು ಭಾರವಾಗಿದ್ದು ಕೂದಲ ಬುಡದಲ್ಲಿ ಪಕಳೆ ಎದ್ದಂತೆ ಚರ್ಮ ಬಿರಿಬಿಟ್ಟಿರುತ್ತದೆ. ಕ್ರಮೇಣ ಬಿರಿಬಿಟ್ಟ ಚರ್ಮ ಒಣಗಿ ತಲೆಹೊಟ್ಟಿನ ರೂಪದಲ್ಲಿ ಹೊರಬರುತ್ತದೆ. ಒಂದು ವೇಳೆ ಕಬ್ಬಿಣದ ಅಂಶ ಹೆಚ್ಚಾಗಿದ್ದರೆ ಕೂದಲನ್ನು ಬಿಧುರ (brittle)ವಾಗಿಸುತ್ತದೆ. ಇದರಿಂದ ಕೂದಲನ್ನು ಬಾಚಿಕೊಳ್ಳುವಾಗ ಪ್ರತಿ ಕೂದಲೂ ತುಂಡು ತುಂಡಾಗಿ ಬಾಚಣಿಗೆಯಲ್ಲಿ ಸಿಕ್ಕಿಕೊಳ್ಳುತ್ತದೆ.

ಕೂದಲತುದಿಗಳು ಸೀಳುಬಿಡುತ್ತವೆ(split ends). ಈ ತುದಿಗಳನ್ನು ಕೂಡಲೇ ಸೀಳು ಪ್ರಾರಂಭವಾದ ಕೊಂಚ ಕೆಳಗೆ ಕತ್ತರಿಸಿಕೊಳ್ಳದೇ ಇದ್ದರೆ ಬಿರುಕು ನಿಧಾನವಾಗಿ ಹೆಚ್ಚುತ್ತಾ ಕೂದಲ ಬುಡದವರೆಗೂ ವ್ಯಾಪಿಸುತ್ತದೆ. ನೀರಿನಲ್ಲಿರುವ ತಾಮ್ರದ ಕಾರಣ ಚರ್ಮ ಹೊಳಪು ಕಳೆದುಕೊಂಡು ಕೆಂಚು ಬಣ್ಣಕ್ಕೆ ತಿರುಗುತ್ತದೆ ಹಾಗೂ ಗುಂಗುರಾಗತೊಡಗುತ್ತದೆ. ಮೆಗ್ನೀಶಿಯಂ ಇದ್ದರಂತೂ ಮೇಲಿನ ಎಲ್ಲಾ ತೊಂದರೆಗಳನ್ನು ಒಟ್ಟಿಗೇ ತಂದುಬಿಡುತ್ತದೆ. ಈ ತೊಂದರೆಗಳಿಂದ ನಿವಾರಣೆ ಪಡೆಯಲು ಹಲವು ಸುಲಭ ಉಪಾಯಗಳನ್ನು ಇಲ್ಲಿ ವಿವರಿಸಲಾಗಿದೆ. ಕೂದಲಿನ ಸಮಸ್ಯೆಗೆ ಅತಿ ಸರಳವಾದ ಮನೆ ಮದ್ದು

ಗಡಸು ನೀರನ್ನು ಮೃದುವಾಗಿಸಿ

ಗಡಸು ನೀರನ್ನು ಮೃದುವಾಗಿಸಿ

ಗಡಸು ನೀರನ್ನು ಮೃದುವಾಗಿಸಲು ಇಂದು ಮಾರುಕಟ್ಟೆಯಲ್ಲಿ ಹಲವು ಉಪಕರಣಗಳು ಲಭ್ಯವಿವೆ. ನೀರಿನ ಗಡಸುತನವನ್ನು ಅನುಸರಿಸಿ ಇವುಗಳ ಮಾದರಿ ಹಾಗೂ ಬೆಲೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ನಿಮ್ಮ ನೀರಿನ ಗಡಸುತನವನ್ನು ಪರಿಶೀಲಿಸಿ ಸೂಕ್ತವಾದ ಉಪಕರಣವನ್ನು ಅಳವಡಿಸುವ ಮೂಲಕ ನೀರನ್ನು ಮೃದುಗೊಳಿಸಿ ಉಪಯೋಗಿಸುವ ಮೂಲಕ ಕೂದಲಿಗೆ ಉತ್ತಮ ಆರೈಕೆ ಹಾಗೂ ಒಟ್ಟಾರೆ ಆರೋಗ್ಯವನ್ನು ಪಡೆಯಬಹುದು.

ಆಳವಾದ ಕಂಡೀಶನರ್ ಉಪಯೋಗಿಸಿ

ಆಳವಾದ ಕಂಡೀಶನರ್ ಉಪಯೋಗಿಸಿ

ಸಾಮಾನ್ಯವಾಗಿ ಗಡಸುನೀರಿನ ಉಪಯೋಗದ ಬಳಿಕ ಕೂದಲ ಒಳಭಾಗ ಟೊಳ್ಳಾಗಿ ಸ್ಟ್ರಾ ದಂತಾಗಿರುತ್ತದೆ. ಈ ಕೂದಲು ಅತ್ಯಂತ ಹಗುರವಾಗಿದ್ದು ಬಗ್ಗಿಸಿದ ಕೂಡಲೇ ತುಂಡಾಗುವಂತಿರುತ್ತದೆ. ಇದಕ್ಕಾಗಿ ಕೂದಲ ಬುಡದಿಂದ ಹೀರಲ್ಪಟ್ಟು ತುದಿಯವರೆಗೂ ಹರಡಬಲ್ಲ ಆಳವಾದ ಕಂಡೀಶನಿಂಗ್ (Deep Conditioning) ಅಗತ್ಯವಿದೆ. ಇದಕ್ಕಾಗಿ ಮೊಟ್ಟೆ ಮತ್ತು ಮೊಸರನ್ನು ಗೊಟಾಯಿಸಿ ಸ್ನಾನದ ಬಳಿಕ ಹಚ್ಚಿಕೊಳ್ಳಬೇಕು. ಆದರೆ ಈ ಚಿಕಿತ್ಸೆ ತುಂಬಾ ಸೌಮ್ಯವಾಗಿದ್ದು ಸ್ವಲ್ಪ ಮಟ್ಟದ ಟೊಳ್ಳಾಗಿದ್ದಲ್ಲಿ ಮಾತ್ರ ಫಲ ನೀಡುತ್ತದೆ. ಹೆಚ್ಚಿನ ಪ್ರಮಾಣದ ಹಾನಿಯಾಗಿದ್ದರೆ ವೃತ್ತಿಪರರ ಸಹಾಯ ಪಡೆಯುವುದು ಅತ್ಯುತ್ತಮ. ಕೊಂಚ ದುಬಾರಿಯಾದರೂ ತಿಂಗಳಿಗೊಮ್ಮೆ ವೃತ್ತಿಪರ ಸೌಂದರ್ಯ ಮಳಿಗೆಯಲ್ಲಿ ಕೂದಲಿಗೆ ಅಗತ್ಯವಾದ ಅರೈಕೆ ಪಡೆಯುವುದು ಹಿತಕರ. ಜೊತೆಗೇ ನಿಯಮಿತವಾಗಿ ತಲೆಗೆ ಬಿಸಿ ಎಣ್ಣೆಯ ಮಸಾಜ್ ಕೂಡಾ ಅಗತ್ಯ.

ಅಂತಿಮ ಹಂತದಲ್ಲಿ ತೊಳೆಯಲು ಕುಡಿಯುವ ನೀರನ್ನು ಬಳಸಿ

ಅಂತಿಮ ಹಂತದಲ್ಲಿ ತೊಳೆಯಲು ಕುಡಿಯುವ ನೀರನ್ನು ಬಳಸಿ

ಒಂದು ವೇಳೆ ಗಡಸು ನೀರನ್ನು ಮೃದುಗೊಳಿಸಲು ಸುಲಭಸಾಧ್ಯವಿಲ್ಲದಿದ್ದಲ್ಲಿ ಅಥವಾ ಪ್ರವಾಸ ಮೊದಲಾದ ಕಾರಣದಿಂದ ಬೇರೆ ಕಡೆಯಲ್ಲಿ ಸ್ನಾನ ಮಾಡಬೇಕಾಗಿ ಬಂದಲ್ಲಿ ಸ್ನಾನದ ಬಳಿಕ ಅಂತಿಮವಾಗಿ ನೀರು ಹಾಕಿಕೊಳ್ಳಲು ಕುಡಿಯುವ ನೀರು ಅಥವಾ ಮಿನೆರಲ್ ನೀರನ್ನು ಬಳಸಿ. ಇದರಿಂದ ನಿಮ್ಮ ಕೂದಲಿಗೆ ಹಾನಿಯುಂಟಾಗುವುದನ್ನು ತಪ್ಪಿಸಿಕೊಳ್ಳಬಹುದು.

ಮಳೆನೀರನ್ನು ಉಪಯೋಗಿಸಿ

ಮಳೆನೀರನ್ನು ಉಪಯೋಗಿಸಿ

ನಿಸರ್ಗದ ಅತ್ಯಂತ ಸ್ವಚ್ಛವಾದ ನೀರೆಂದರೆ ಮಳೆ ನೀರು. ಆದರೆ ಮಳೆ ಪ್ರಾರಂಭವಾದ ಕೆಲ ನಿಮಿಷಗಳವರೆಗಿನ ನೀರು ವಾತಾವರಣದಲ್ಲಿರುವ ಕಲ್ಮಶಗಳನ್ನು ಕರಗಿಸಿಕೊಂಡು ಆಮ್ಲೀಯವಾಗುವುದರಿಂದ ಕೆಲ ನಿಮಿಷಗಳ ಬಳಿಕ ಸಂಗ್ರಹಿಸಿದ ನೀರು ಒಳ್ಳೆಯದು. ಈ ನೀರನ್ನು ಪ್ರತ್ಯೇಕವಾಗಿ ಸಂಗ್ರಹಿಸಿಟ್ಟುಕೊಳ್ಳಿ. ಸ್ನಾನದ ಸಮಯದಲ್ಲಿ ಸ್ವಲ್ಪ ಪ್ರಮಾಣವನ್ನು ಒಂದು ಪಾತ್ರೆಯಲ್ಲಿ ಬಿಸಿಮಾಡಿ ತಲೆಯನ್ನು ತೊಳೆದುಕೊಳ್ಳಲು ಉಪಯೋಗಿಸಿ.

English summary

Avoid Hard Water damages of your hair

Calcium makes the hair seem heavy and the scalp often seems flaky. It is not just bits of skin that are coming loose but the calcium slowly becoming unstuck. Iron leaves it feeling brittle and dry. Split ends appear and the hair will need to be trimmed on a regular basis.
X
Desktop Bottom Promotion