For Quick Alerts
ALLOW NOTIFICATIONS  
For Daily Alerts

ಮೃದು ಕೂದಲಿಗಾಗಿ 9 ಪರಿಣಾಮಕಾರಿ ವಿಧಾನಗಳು

|

ಆರೋಗ್ಯಕರವಾದ ಕೂದಲು ಎಂದರೆ ಸುಂದರವಾದ ಕೂದಲು ಎಂದರ್ಥ. ಆದರೆ ನಾವೆಲ್ಲರು ಸುಂದರವಾದ.ಹೊಳೆಯುವ, ಸದಾ ಬೆನ್ನ ಹಿಂದೆ ಅತ್ತಿತ್ತ ಆಡುವ ಮತ್ತು ಆರೋಗ್ಯಕರವಾದ ಕೂದಲನ್ನು ಪಡೆದುಕೊಂಡು ಬರುವಷ್ಟು ಪುಣ್ಯವಂತರಾಗಿರುವುದಿಲ್ಲ. ಅದೆಲ್ಲಕ್ಕಿಂತ ಮಿಗಿಲಾಗಿ ಇಂದಿನ ಜೀವನ ಶೈಲಿ, ವಿಶ್ರಾಂತಿಯ ಕೊರತೆ, ದೈನಂದಿನ ಜಂಜಡಗಳು ಎಲ್ಲವೂ ಕೂಡಿ ಕೂದಲಿಗೆ ಅಗತ್ಯವಾಗಿ ಬೇಕಾಗುವ ಪೋಷಕಾಂಶಗಳನ್ನು ಒದಗಿಸುವಲ್ಲಿ ವಿಫಲವಾಗಿವೆ.

ಇದೆಲ್ಲದಕ್ಕಿಂತ ಹೆಚ್ಚಾಗಿ ಪರಿಸರ ಮಾಲಿನ್ಯವು ಕೂದಲಿನಲ್ಲಿರುವ ಜಿಡ್ಡಿನಂಶವನ್ನು ಹಿಂಡಿ ಹಿಪ್ಪೆ ಮಾಡಿ, ಆ ಕೂದಲನ್ನು ಜೀವ ರಹಿತವಾದ ಒಣ ಕೂದಲನ್ನಾಗಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಯಾರು ಏನು ಮಾಡಬಹುದು? ಕೂದಲನ್ನು ಕಾಪಾಡಿಕೊಳ್ಳುವ ಕುರಿತು ಸುಮಾರು ಸಲಹೆಗಳು ನಮಗೆ ದೊರೆಯುತ್ತವೆ. ಒಂದು ವೇಳೆ ನಾವು ಟಿವಿಗಳಲ್ಲಿ ಮತ್ತು ಮ್ಯಾಗಜೀನ್‍ಗಳಲ್ಲಿ ಬರುವ ಜಾಹೀರಾತುಗಳನ್ನು ಅನುಸರಿಸಿದರೆ? ಫಲಿತಾಂಶ ಪಕ್ಕಾ ಬರುತ್ತದೆ ಎಂಬ ನಂಬಿಕೆ ಇದೆಯೇ?

ನಮಗೇನು ಕೂದಲನ್ನು ರಕ್ಷಿಸಲು ಚಿಟಿಕೆ ಹೊಡೆಯುವಷ್ಟು ಕಾಲದಿಂದ ಹಿಡಿದು ಆರು ತಿಂಗಳಲ್ಲಿ ಆರೋಗ್ಯಕಾರಿ ಕೂದಲನ್ನು ನಿಮ್ಮದಾಗಿಸಿಕೊಳ್ಳಿ ಎನ್ನುವವರೆಗೆ ಔಷಧಗಳು ಉತ್ಪನ್ನಗಳು ದೊರೆಯುತ್ತವೆ. ಇದಕ್ಕಾಗಿ ಹೇರ್ ಆಯಿಲ್, ಕಂಡೀಶನರ್, ಸೆರುಮ್‍ಗಳು, ಸಾಫ್ಟ್‌ನರ್‌ಗಳು, ಶಾಂಪೂಗಳು, ಅದರಲ್ಲಿ ಡೆಂಡ್ರಫ್ ಫ್ರೀ, ಸ್ಕಾಲ್ಪ್ ಕೇರ್, ಸಿಲ್ಕೀ ಹೇರ್, ಆಯಿಲಿ ಹೇರ್ ಇತ್ಯಾದಿ, ಇತ್ಯಾದಿ ಉತ್ಪನ್ನಗಳು ನಿಮ್ಮ ತಲೆಯನ್ನು ಸುತ್ತಿಸಿಬಿಡುತ್ತವೆ.

ತಲೆಕೂದಲಿನ ಆರೈಕೆಗೆ ಮೂಸ೦ಬಿ ಹಣ್ಣಿನ ರಸವು ಪರಿಣಾಮಕಾರಿಯೇ?

ಈ ಉತ್ಪನ್ನಗಳೆಲ್ಲವು ನಮ್ಮ ಕೂದಲಿಗೆ ವಿಶೇಷ ಸ್ಥಾನಮಾನವನ್ನು ನೀಡುತ್ತವೆ ಆದರೆ ಇವು ನಿಜವಾಗಿ ನಮಗೆ ಬೇಕೆ? ನಮ್ಮ ಹಿಂದಿನ ತಲೆಮಾರಿನವರು ಇವ್ಯಾವುದನ್ನು ಹೊಂದಿರಲಿಲ್ಲ. ಆದರೂ ಅವರು ಆರೋಗ್ಯಕಾರಿ ಕೂದಲನ್ನು ಹೊಂದಿದ್ದರು. ನಿಜವಾಗಿ ನಮ್ಮ ಮೂಲಭೂತ ಅವಶ್ಯಕತೆಯೆಂದರೆ ಒಂದೇ ಅದು ಕೂದಲನ್ನು ಮತ್ತು ಅದರ ಬುಡವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು. ವಾರಕ್ಕೊಮ್ಮೆ ಅಥವಾ ಎರಡು ಬಾರಿ ಎಣ್ಣೆ ಹಾಕಿ ಕೂದಲಿಗೆ ಮಸಾಜ್ ಮಾಡಿ. ಯಾವುದೇ ರೀತಿಯ ಅಸ್ವಾಭಾವಿಕ ಚಿಕಿತ್ಸೆಗಳಿಂದ ದೂರವಿರಿ. ನಿಮ್ಮ ಅಗತ್ಯತೆಗಳನ್ನು ಎಣ್ಣೆ ಮತ್ತು ಶಾಂಪೂಗೆ ಸೀಮಿತಗೊಳಿಸಿಕೊಳ್ಳಿ. ಕೂದಲಿಗೆ ಆರೈಕೆ ಮಾಡಲು ಇನ್ನೂ ಹೆಚ್ಚಿನ ಪದಾರ್ಥಗಳು ಬೇಕೆ? ಹಾಗಾದರೆ ಮೆಡಿಕಲ್ ಅಂಗಡಿಗೆ ಹೋಗುವ ಬದಲು ನಿಮ್ಮ ಅಡುಗೆ ಮನೆಯಲ್ಲಿ ಅದಕ್ಕೆ ಅಗತ್ಯವಾದ ಪದಾರ್ಥಗಳು ದೊರೆಯುತ್ತವೆ ನೋಡಿ. ಅವುಗಳನ್ನು ಬಳಸಿ ನೀವು ಬಯಸುವಂತಹ ಕೂದಲನ್ನು ನಿಮ್ಮದಾಗಿಸಿಕೊಳ್ಳಿ.

ಮೊಟ್ಟೆ

ಮೊಟ್ಟೆ

ಇದು ನನ್ನ ಅಚ್ಚುಮೆಚ್ಚಿನ ಪದಾರ್ಥ. ಇದು ನಿಮ್ಮ ಕೂದಲು ಮತ್ತು ಅದರ ಬುಡಕ್ಕೆ ಅಗತ್ಯವಾದ ಪ್ರೋಟಿನ್ ನೀಡುವುದರ ಜೊತೆಗೆ, ಅತ್ಯುತ್ತಮ ಕಂಡೀಶನರ್ ಆಗಿ ಸಹ ವರ್ತಿಸುತ್ತದೆ. ಜೇನು, ನಿಂಬೆ ಅಥವಾ ಹಾಲಿನ ಜೊತೆಗೆ ಬೇಕಾದರು ಇದನ್ನು ಬೆರೆಸಬಹುದು. ಒಂದು ವೇಳೆ ನಿಮ್ಮ ಕೂದಲು ಜಿಡ್ಡಿನಿಂದ ಕೂಡಿದ್ದರೆ ಯಾವುದೇ ಸಮಸ್ಯೆ ಇಲ್ಲ, ಇಲ್ಲವಾದಲ್ಲಿ ಎಗ್ ಹೇರ್ ಮಾಸ್ಕ್ ತಯಾರಿಸಲು ಅದಕ್ಕೆ ಸ್ವಲ್ಪ ಎಣ್ಣೆಯನ್ನು ಮಿಶ್ರಣ ಮಾಡಬೇಕಾಗುತ್ತದೆ. ಪ್ರತಿ ಕೂದಲು ಮತ್ತು ಅದರ ಬುಡಕ್ಕೆ ಈ ಮಾಸ್ಕ್ ಲೇಪಿಸಿ. ಒಂದೂವರೆ ಗಂಟೆಯ ನಂತರ ಶಾಂಪೂ ಹಾಕಿ ಚೆನ್ನಾಗಿ ತೊಳೆಯಿರಿ.

ಜೇನು ತುಪ್ಪ

ಜೇನು ತುಪ್ಪ

ಇದನ್ನು ಮೊಟ್ಟೆಯ ಜೊತೆಗೆ ಬೆರೆಸಿ, ಅದನ್ನು ಕೂದಲಿಗೆ ಮತ್ತು ಅದರ ಬುಡಕ್ಕೆ ಲೇಪಿಸಿ. ಒಂದು ವೇಳೆ ನೀವು ಮೊಟ್ಟೆಯೊಂದಿಗೆ ಇದನ್ನು ಬೆರೆಸಿ ಲೇಪಿಸಲು ಇಷ್ಟಪಡದಿದ್ದಲ್ಲಿ, ಹಾಗೆಯೇ ಲೇಪಿಸಿ. ಆದರೆ ತುಂಬಾ ಸಮಯ ಬಿಡಬೇಡಿ. ಏಕೆಂದರೆ ಜೇನು ತುಪ್ಪವು ನಿಮ್ಮ ಕೂದಲಿನ ಬಣ್ಣವನ್ನು ಬದಲಾಯಿಸಿ ಬಿಡುತ್ತದೆ. ಜೇನು ತುಪ್ಪವು ನಿಮ್ಮ ಕೂದಲಿಗೆ ಸ್ವಾಭಾವಿಕವಾದ ಕಂಡೀಶನರ್ ಮತ್ತು ಮೊಯಿಶ್ಚರೈಸರ್‌ನಂತೆ ವರ್ತಿಸಿ, ಅದಕ್ಕೆ ಅಗತ್ಯವಾದ ಸ್ವಾಭಾವಿಕ ರಕ್ಷಣೆಯನ್ನು ನೀಡುತ್ತದೆ.

ಹಾಲು

ಹಾಲು

ಇದು ಕೂದಲಿಗೆ ಪ್ರೋಟಿನ್‍ಗಳನ್ನು ಒದಗಿಸುವ ಮೂಲ. ಕೂದಲಿನ ಮೇಲೆ ನಡೆದ ಎಲ್ಲಾ ಸಂಶೋಧನೆಗಳು ಸಾಭೀತು ಮಾಡಿರುವ ವಿಚಾರವೆಂದರೆ :ಕೂದಲಿನ ಆರೋಗ್ಯಕ್ಕೆ ಪ್ರೋಟಿನ್ ಅತ್ಯಾವಶ್ಯಕ ಎಂಬುದು. ಇನ್ನು ಇದಕ್ಕಾಗಿ ಹಾಲಿಗಿಂತ ಒಳ್ಳೆಯ ಪದಾರ್ಥ ಮತ್ತೊಂದು ನಮಗೆ ಸುಲಭವಾಗಿ ದೊರೆಯುವುದಿಲ್ಲ. ಇದೆಲ್ಲದ್ದಕ್ಕಿಂತ ಹೆಚ್ಚಾಗಿ ಹಾಲು ಕೂದಲಿನ ಎಳೆಗಳಿಗೆ ಅತ್ಯುತ್ತಮ ಕಂಡೀಶನರ್ ಆಗಿ ಸಹ ಕಾರ್ಯ ನಿರ್ವಹಿಸುತ್ತದೆ.

ಎಣ್ಣೆ

ಎಣ್ಣೆ

ಕೂದಲನ್ನು ರಕ್ಷಣೆ ಮಾಡುವ ವಿಷಯವು ಎಣ್ಣೆಯ ಬಗ್ಗೆ ಮಾತನಾಡದೆ ಪೂರ್ಣಗೊಳ್ಳುವುದಿಲ್ಲ. ಒಂದು ವೇಳೆ ನೀವು ಸ್ನಾನ ಮಾಡುವ ಮೊದಲು ಕೂದಲಿಗೆ ಎಣ್ಣೆಯನ್ನು ಹಾಕದೆ ಸ್ನಾನ ಮಾಡುವ ಅಭ್ಯಾಸವಿರಿಸಿಕೊಂಡಿದ್ದಲ್ಲಿ, ನಿಮ್ಮ ಕೂದಲು ಒಣಗಿದಂತೆ, ನಿರ್ಜೀವತೆಯಿಂದ ಕೂಡಿರುವಂತೆ ಕಾಣುವುದರಲ್ಲಿ ಯಾವುದೇ ಸಂಶಯವಿಲ್ಲ. ಜೊತೆಗೆ ಕೂದಲು ಸಿಕ್ಕು ಸಿಕ್ಕಾಗುವುದನ್ನು ಸಹ ನಾವು ಕಾಣಬಹುದು.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣುಗಳ ಸುವಾಸನೆಯ ಜೊತೆಗೆ ನಿಮ್ಮ ಕೂದಲಿಗೆ ಅಗತ್ಯವಾದ ಆರೈಕೆಯನ್ನು ಸಹ ನೀಡುತ್ತದೆ. ಹಣ್ಣಾದ ಬಾಳೆಹಣ್ಣನ್ನು , ಮೊಟ್ಟೆಯೊಂದಿಗೆ ಬೆರೆಸಿ. ನಂತರ ಅದನ್ನು ಕೂದಲಿಗೆ ಲೇಪಿಸಿ, ಸ್ವಲ್ಪ ಹೊತ್ತು ನೆನೆಯಲು ಬಿಡಿ. ನಂತರ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯಿರಿ.

ಯೋಗರ್ಟ್

ಯೋಗರ್ಟ್

ಇದು ಸಹ ಕೂದಲಿಗೆ ಅತ್ಯಾವಶ್ಯಕವಾದ ಪ್ರೋಟಿನ್‍ನ ಸಮೃದ್ಧ ಆಗರ, ಒಳ್ಳೆಯ ಮೊಯಿಶ್ಚರೈಸರ್ ಮತ್ತು ಕಂಡೀಶನರ್. ಇದನ್ನು ಹಾಗೆಯೇ ಕೂದಲಿಗೆ ಲೇಪಿಸಿ ಅಥವಾ ಕಡಲೆ ಹಿಟ್ಟಿನೊಂದಿಗೆ, ಮೆಂತ್ಯೇ ಬೀಜ ಅಥವಾ ಮೊಟ್ಟೆಯೊಂದಿಗೆ ಬೆರೆಸಿ ಲೇಪಿಸಿ.

ಬೀರ್

ಬೀರ್

ಎಂದಾದರು ಬೀರ್ ಶಾಂಪೂ ಕೇಳಿದ್ದೀರಾ? ಬೀರ್ ಶಾಂಪೂ ಹುಡುಕಲು ಹೋಗಬೇಡಿ. ನಿಜವಾದ ಬೀರ್ ತನ್ನಿ. ಆದರೆ ಅದನ್ನು ಕುಡಿಯಲು ಹೋಗಬೇಡಿ, ಬದಲಿಗೆ ಇದನ್ನು ನಿಮ್ಮ ಕೂದಲಿನ ಕಂಡೀಶನರ್ ರೀತಿ ಬಳಸಿ. ಕೂದಲನ್ನು ತೊಳೆಯಿರಿ. ಈಗ ನೋಡಿ ನಿಮ್ಮ ಕೂದಲು ಹೇಗೆ ಹೊಳೆಯುತ್ತ ನಲಿಯತ್ತದೆಯೆಂದು.

ನಿಂಬೆ

ನಿಂಬೆ

ಇದು ವಿನೇಗರ್‌ನ ಸೋದರ ಸಂಬಂಧಿ, ಹೇರ್ ಪ್ಯಾಕ್ ಜೊತೆಗೆ ಬೆರೆಸಿದಾಗ ಕೂದಲನ್ನು ತೊಳೆಯುವ ಅತ್ಯುತ್ತಮ ಕ್ಲೀನ್ಸರ್ ಆಗುತ್ತದೆ. ಉದ್ದದ ಕೂದಲಿಗೆ ಒಂದು ಪೂರ್ಣ ನಿಂಬೆ ಹಣ್ಣಿನ ರಸ ಮತ್ತು ಗಿಡ್ಡ ಕೂದಲಿಗೆ ಅರ್ಧ ಹೋಳು ನಿಂಬೆ ರಸವನ್ನು ಮೊಟ್ಟೆ, ಎಣ್ಣೆ, ಹಾಲು ಅಥವಾ ಜೇನಿನೊಂದಿಗೆ ಬೆರೆಸಿ, ಆಗ ನೋಡಿ ನಿಮ್ಮ ಕೂದಲಿನ ಬೆಳವಣಿಗೆಯನ್ನು.

ಕಡಲೆಹಿಟ್ಟು

ಕಡಲೆಹಿಟ್ಟು

ಇದರಲ್ಲಿ ಪ್ರೋಟಿನ್‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ, ಇದನ್ನು ಯೋಗರ್ಟ್ ಜೊತೆಗೆ ಮಿಶ್ರಣ ಮಾಡಿ, ಹೇರ್ ಮಾಸ್ಕ್ ಜೊತೆಗೆ ಲೇಪಿಸಿ. ಅರ್ಧ ಗಂಟೆ ಬಿಡಿ, ಕೂದಲು ಮತ್ತು ಅದರ ಬುಡಗಳು ಈ ಅಂಶಗಳನ್ನು ಹೀರಿಕೊಳ್ಳಲು ಅನುಕೂಲ ಮಾಡಿಕೊಡಿ. ನಂತರ ಕೂದಲನ್ನು ತೊಳೆಯಿರಿ, ಈಗ ನೋಡಿ ನಿಮ್ಮ ಕೂದಲು ಮೃದುವಾಗುವುದರ ಜೊತೆಗೆ ರೇಷ್ಮೆಯಂತೆ ಹೊಳೆಯುತ್ತದೆ.

English summary

9 Ways To Have Soft Hair

Healthy hair means beautiful hair. But not all of us are blessed with healthy, beautiful hair that shines and bounces with joy. What does one do in such conditions? Hair care tips are numerous but which one to follow? If we go by the luring television commercials and glossy magazine ads a hefty amount will be spent on hair care products
Story first published: Tuesday, September 2, 2014, 12:19 [IST]
X
Desktop Bottom Promotion