For Quick Alerts
ALLOW NOTIFICATIONS  
For Daily Alerts

ಹೊಳೆಯುವ ಕೂದಲು ನಿಮ್ಮದಾಗಳು 8 ಮನೆ ಮದ್ದು

By Arpitha Rao
|

ನಿಮ್ಮದು ಉದ್ದ ಕೂದಲಿರಲಿ ಅಥವಾ ಗಿಡ್ಡ ಕೂದಲು,ಗುಂಗುರು,ನೇರ ಯಾವುದೇ ರೀತಿಯ ಕೂದಲಾಗಿರಲಿ ಪ್ರತಿಯೊಬ್ಬ ಮಹಿಳೆಯೂ ಬಯಸುವುದು ಮೃದುವಾದ,ರೇಷ್ಮೆಯಂತಹ,ಆರೋಗ್ಯಯುತವಾದ ಕೂದಲನ್ನು.ಆದರೆ ಎಲ್ಲರೂ ತಾವಂದು ಕೊಂಡಂತಹ ಕೂದಲನ್ನು ಪಡೆದಿರುತ್ತಾರೆ ಎನ್ನಲಾಗುವುದಿಲ್ಲ.ವಾತಾವರಣ, ಹೆಚ್ಚು ರಾಸಾಯನಿಕ ವಸ್ತುಗಳ ಬಳಕೆ,ಮಾಲಿನ್ಯ,ಅಸಮತೋಲಿತ ಆಹಾರ ಪದ್ಧತಿ ಇವುಗಳೆಲ್ಲಾ ಕೂದಲನ್ನು ಒಣಗಿದಂತೆ ಮಾಡಿಬಿಡುತ್ತವೆ.

ಒಣಗಿದ ಮತ್ತು ಅನಾರೋಗ್ಯಕರ ಕೂದಲು ಹೆಚ್ಚು ಉದುರಲು ಪ್ರಾರಭಿಸುತ್ತದೆ.ಇದಕ್ಕಾಗಿ ನಿಮ್ಮ ಕೂದಲನ್ನು ಹೊಳೆಯುವ ನುಣುಪಾದ ಮತ್ತು ಆರೋಗ್ಯಯುತವಾಗಿರಿಸಲು ಕೆಲವು ಮಾರ್ಗಗಳಿವೆ.ನೀವು ಸಾವಿರಗಟ್ಟಲೆ ದುಡ್ಡನ್ನು ಬ್ಯೂಟಿಪಾರ್ಲರ್ ನಲ್ಲಿ ಕಳೆಯಲು ಇಷ್ಟಪಡುವುದಿಲ್ಲ ಎಂದಾದರೆ ಈ ಕೆಳಗೆ ಕೊಟ್ಟಿರುವ ಸಲಹೆಗಳನ್ನು ಪಾಲಿಸಿ ನೋಡಿ.ನಿಮ್ಮ ಕೂದಲು ನೋಡುಗರನ್ನು ಸೆಳೆಯುವುದು ಖಂಡಿತ.

ಇನ್ನಷ್ಟು ಮಾಹಿತಿಗಾಗಿ ಲಿಂಕ್ ಅನ್ನು ಕ್ಲಿಕ್ ಮಾಡಿ: ಸಾಂಪ್ರಾಯಿಕ ಧಿರಿಸಿಗೆ ಅತ್ಯುತ್ತಮ ಕೇಶವಿನ್ಯಾಸ

ಒಣಗಿದ ಕೂದಲಿಗೆ ಮನೆ ಮದ್ದುಗಳು:

ಕಡಲೆ ಹಿಟ್ಟಿನ ಪ್ಯಾಕ್ :

ಕಡಲೆ ಹಿಟ್ಟಿನ ಪ್ಯಾಕ್ :

ತೇವಾಂಶರಹಿತ ಒಣಗಿದ ಕೂದಲಿಗೆ ಇದು ಪರಿಣಾಮಕಾರಿ ಹೇರ್ ಪ್ಯಾಕ್

ಒಂದು ಕಪ್ ಹಸಿ ಹಾಲು ಅಥವಾ ತೆಂಗಿನ ಹಾಲನ್ನು ತೆಗೆದುಕೊಳ್ಳಿ. ಇದಕ್ಕೆ ಎರಡು ಅಥವಾ ಮೂರು ಚಮಚ ಕಡಲೆ ಹಿಟ್ಟನ್ನು ಸೇರಿಸಿ.ಇದನ್ನು ಪೇಸ್ಟ್ ಮಾಡಿ ತಲೆಗೆ ನೆತ್ತಿಯ ಬುಡಕ್ಕೆ ಹಚ್ಚಿ.ಇದನ್ನು ೧೫ ನಿಮಿಷ ಬಿಟ್ಟು ಮೈಲ್ಡ್ ಆಗಿರುವ ಶಾಂಪೂ ಬಳಸಿ ತೊಳೆಯಿರಿ.

ತೈಲಗಳು :

ತೈಲಗಳು :

ಒಣಗಿದ ಕೂದಲಿಗೆ ಉತ್ತಮ ಪರಿಹಾರವೆಂದರೆ ತೈಲವನ್ನು ಬಳಸುವುದು. ತೆಂಗಿನ ಎಣ್ಣೆ ಮತ್ತು ಬಾದಾಮಿ ಎಣ್ಣೆಯನ್ನು ಸಮಪ್ರಮಾನದಲ್ಲಿ ಬೆರೆಸಿ.ಇದಕ್ಕೆ ಅರ್ಧ ಚಮಚ ಕ್ಯಾಸ್ಟರ್ ಎಣ್ಣೆಯನ್ನು ಬಳಸಿ.ಇದಕ್ಕೆ ಲ್ಯಾವೆಂಡರ್ ಎಣ್ಣೆ ಅಥವಾ ರೋಸ್ಮೇರಿ ಎಣ್ಣೆಯನ್ನು ಸೇರಿಸಿ.ಇದನ್ನು ಸ್ವಲ್ಪ ಬೆಚ್ಚಗೆ ಮಾಡಿ ನೆತ್ತಿಯ ಬುಡಕ್ಕೆ ಹಚ್ಚಿ.ನಂತರ ಶಾಂಪೂ ಬಳಸಿ ಸ್ವಚ್ಚಗೊಳಿಸಿ. ಈ ರೀತಿ ಬಿಸಿ ಎಣ್ಣೆಯ ಮಸಾಜ್ ನಿಂದ ಕೂದಲು ತೇವಾಂಶವನ್ನು ಮರಳಿ ಪಡೆಯುತ್ತದೆ.ಇದು ಕೂದಲು ಬೆಳೆಯಲು ಕೂಡ ಸಹಕರಿಸುತ್ತದೆ.

ಜೇನು ಬಳಸಿ :

ಜೇನು ಬಳಸಿ :

ಜೇನುತುಪ್ಪ ನೈಸರ್ಗಿಕವಾಗಿ ದೊರೆಯುವ ಔಷಧಿ ಎಂಬುದು ಎಲ್ಲರಿಗೂ ತಿಳಿದ ವಿಷಯವೇ.ಇದು ತೇವಾಂಶವನ್ನು ಕಾಪಾಡುತ್ತದೆ.ಇದು ಒಣಗಿದ ಕೂದಲಿಗೆ ತೇವಾಂಶವನ್ನು ನೀಡಿ ಕೂದಲು ಬೆಳೆಯಲು ಸಹಕರಿಸುತ್ತದೆ. ೨ ಲೋಟ ನೀರಿಗೆ ಒಂದು ಚಮಚ ಜೇನು ತುಪ್ಪವನ್ನು ಸೇರಿಸಿ ಇದನ್ನು ಬಳಸಿ.

ಮೊಟ್ಟೆ:

ಮೊಟ್ಟೆ:

ಮೊಟ್ಟೆಯಲ್ಲಿರುವ ಹಳದಿ ಅಂಶವು ಪ್ರೋಟಿನ್,ತೇವಾಂಶ ಇವುಗಳನ್ನು ಹೊಂದಿರುತ್ತದೆ. ಇದನ್ನು ಕೂದಲಿಗೆ ಬಳಸಿದಾಗ ಬೇಡದ ಎಣ್ಣೆಯನ್ನು ನೆತ್ತಿಯಿಂದ ತೆಗೆಯುತ್ತದೆ.ಒಣಗಿದ ಕೂದಲಿಗೆ ಮೊಸ್ಚರೈಸರ್ ಆಗಿ ಕೆಲಸ ಮಾಡುತ್ತದೆ. ಮೊಟ್ಟೆಯನ್ನು ಒಡೆದು ಅದನ್ನು ಚೆನ್ನಾಗಿ ಸೇರಿಸಿ. ಇದಕ್ಕೆ ಒಂದು ಚಮಚ್ ಮೊಸರು ಮತ್ತು ಜೇನುತುಪ್ಪ ಸೇರಿಸಿ. ಇದನ್ನು ಸರಿಯಾಗಿ ಬಳಸಿ ನಿಮ್ಮ ಕೂದಲಿಗೆ ಹಚ್ಚಿ. ನಂತರ ತಣ್ಣನೆಯ ನೀರಿನಲ್ಲಿ ತೊಳೆದು ಶಾಂಪೂ ಬಳಸಿ ಸ್ವಚ್ಚಗೊಳಿಸಿ.

ಮಯೋನೀಸ್ ಪ್ಯಾಕ್ :

ಮಯೋನೀಸ್ ಪ್ಯಾಕ್ :

ಮಯೋನೀಸ್ ನಲ್ಲಿ ಎಲ್ ಸಿಸ್ಟೈನ್ ಇರುತ್ತದೆ ಇದು ಕೂದಲಿಗೆ ಬಲ ಮತ್ತು ಹೊಳಪನ್ನು ನೀಡುತ್ತದೆ.ಇದು ಒಣಗಿದ ಕೂದಲಿಗೆ ತುಂಬಾ ಸಹಾಯಕ. ಒಂದು ಲೋಟ ಮಯೋನೀಸ್ ತೆಗೆದುಕೊಂಡು ಸರಿಯಾಗಿ ಬೆರೆಸಿ. ನಿಮ್ಮ ಕೂದಲಿಗೆ ಸರಿಯಾಗಿ ಹಚ್ಚಿ. ನಂತರ ೩೦ ನಿಮಿಷ ಹಾಗೆಯೇ ಬಿಡಿ. ನಂತರ ತಣ್ಣನೆಯ ನೀರಿನಲ್ಲಿ ತೊಳೆದು,ಶಾಂಪೂ ಮೂಲಕ ತೊಳೆಯಿರಿ.

ಬಿಯರ್ ಬಳಸಿ

ಬಿಯರ್ ಬಳಸಿ

ಬಿಯರ್ ಅನ್ನು ಕಂಡಿಷನರ್ ಎನ್ನಲಾಗುತ್ತದೆ ಇದು ಡಲ್ ಮತ್ತು ಒಣಗಿದ ಕೂದಲಿಗೆ ಹೊಳಪನ್ನು ನೀಡುತ್ತದೆ.ಇದರಲ್ಲಿರುವ ವಿಟಮಿನ್ ಬಿ ಅಂಶ ಕೂದಲ ಹೊಳಪಿಗೆ ಕಾರಣವಾಗುತ್ತದೆ. ಅರ್ಧ ಲೋಟ ಬಿಯರ್ ಗೆ ೨ ಲೋಟ ನೀರನ್ನು ಬೆರೆಸಿ. ನಿಮ್ಮ ಕೂದಲಿಗೆ ಶಾಂಪೂ ಬಳಸಿದ ನಂತರ ಬಿಯರ್ ಅನ್ನು ಹಚ್ಚಿ.

ನಂತರ ಮತ್ತೆ ಕೂದಲನ್ನು ತೊಳೆಯುವ ಅಗತ್ಯವಿಲ್ಲ ಹಾಗೆಯೇ ಕೂದಲನ್ನು ಒಣಗಲು ಬಿಡಿ. ಬೇಕಿದ್ದಲ್ಲಿ ನೀವು ಹೊಸದಾಗಿ ಬಿಡುಗಡೆಯಾದ ಪಾರ್ಕ್ ಅವೆನ್ಯೂ ಬಿಯರ್ ಶಾಂಪೂ ಬಳಸಬಹುದು.

ಬೇಕಿಂಗ್ ಸೋಡಾ:

ಬೇಕಿಂಗ್ ಸೋಡಾ:

ಬೇಕಿಂಗ್ ಸೋಡಾ ನಿಮ್ಮ ಕೂದಲಿನ ಕಲ್ಮಶವನ್ನು ಸಂಪೂರ್ಣವಾಗಿ ತೆಗೆದು ಹಾಕುತ್ತದೆ.ಇದು ಕ್ಷಾರೀಯ ಗುಣವನ್ನು ಹೊಂದಿರುವುದರಿಂದ ಕೂದಲಿನ ಕೊಳಕನ್ನು ಹೋಗಲಾಡಿಸುತ್ತದೆ.ಇದು ನೆತ್ತಿಯಲ್ಲಿರುವ ಅಧಿಕ ಎಣ್ಣೆಯನ್ನು ಹೋಗಲಾಡಿಸುತ್ತದೆ ಮತ್ತು ತೇವಾಂಶ ಕಾಪಾಡುತ್ತದೆ. ಅರ್ಧ ಲೋಟ ನೀರಿನಲ್ಲಿ ಒಂದು ಚಮಚ ಬೇಕಿಂಗ್ ಸೋಡಾ ಬೆರೆಸಿ. ಇದನ್ನು ಸರಿಯಾಗಿ ಕರಗಲು ಬಿಡಿ. ನಿಮ್ಮ ಶಾಂಪೂ ಜೊತೆಗೂ ಕೂಡ ಈ ಸೋಡಾವನ್ನು ಬಳಸಬಹುದು.

ಬೆಣ್ಣೆಹಣ್ಣು ಮತ್ತು ತೆಂಗಿನ ಮಿಶ್ರಣ:

ಬೆಣ್ಣೆಹಣ್ಣು ಮತ್ತು ತೆಂಗಿನ ಮಿಶ್ರಣ:

ಅವಕಾಡೋ ಅಥವಾ ಬೆಣ್ಣೆಹಣ್ಣಿನಲ್ಲಿ ನೈಸರ್ಗಿಕ ಎಣ್ಣೆ ಅಂಶವಿರುತ್ತದೆ.ಇದರಲ್ಲಿ ಪ್ರೋಟೀನ್,ಮಿನರಲ್ಸ್ ಮತ್ತು ವಿಟಮಿನ್ ಎ,ಡಿ,ಇ,ಕೆ ಮತ್ತು ಬಿ ಅಂಶವಿದ್ದು ಕೂದಲು ಒಣಗಿ ಒರಟಾಗುವುದನ್ನು ತಪ್ಪಿಸುತ್ತದೆ. ಬೆಣ್ಣೆ ಹಣ್ಣಿನ ಒಳಭಾಗವನ್ನು ಚೆನ್ನಾಗಿ ಕಲಕಿ. ಇದಕ್ಕೆ ಅರ್ಧ ಲೋಟ ತೆಂಗಿನ ಹಾಲನ್ನು ಬೆರೆಸಿ. ಇದನ್ನು ಕೂದಲಿಗೆ ಹೆಚ್ಚಿ ೧೫ ನಿಮಿಶ ಬಿಡಿ. ನಂತರ ತಣ್ಣನೆಯ ನೀರಿನಲ್ಲಿ ತೊಳೆಯಿರಿ. ಇದರಿಂದ ಕೂದಲು ಮೃದುವಾಗಿ, ಹೊಳೆಯುವುದನ್ನು ಕಾಣಬಹುದು.

English summary

8 Essential Homemade Tips For Dry Hair

Whether you have long hair or short, curly or straight hair, every womans dream is smooth, silky and healthy hair. But unfortunately everyone does not have his or her dream hair.
Story first published: Saturday, February 15, 2014, 14:36 [IST]
X
Desktop Bottom Promotion