For Quick Alerts
ALLOW NOTIFICATIONS  
For Daily Alerts

ಬಿಳಿ ಕೂದಲನ್ನು ಮರೆಮಾಚಲು 5 ನೈಸರ್ಗಿಕ ವಿಧಾನಗಳು

By Arpitha Rao
|

ಈಗ ಪ್ರತಿಯೊಬ್ಬರೂ ತಮ್ಮ ಕೇಶ ವಿನ್ಯಾಸಕ್ಕೆ ಹಾಗೂ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ. ಸೌಂದರ್ಯ ಎಂಬುದು ಇಂದು ಕೇವಲ ಮಹಿಳೆಯರಿಗೆ ಮಾತ್ರ ಮೀಸಲಾಗಿಲ್ಲ. ಮಹಿಳೆಯರಿಗೆ ಮತ್ತು ಪುರುಷರಿಗೆ ಇಬ್ಬರಿಗೂ ಬಿಳಿ ಕೂದಲು ಕಾಣಿಸಿಕೊಂಡರೆ ಅದು ಒಂದು ರೀತಿಯಲ್ಲಿ ಮುಜುಗರ ಉಂಟುಮಾಡುತ್ತದೆ.

ಬಿಳಿ ಕೂದಲಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಆದರೆ ಅದು ತಾರುಣ್ಯದಲ್ಲೇ ಕಾಣಿಸಿಕೊಂಡರೆ ತಲೆಕೆಡಿಸಿಕೊಳ್ಳಬೇಕಾಗುತ್ತದೆ. ಬಿಳಿ ಕೂದಲು ಪ್ರಬುದ್ಧತೆ ಮತ್ತು ಬುದ್ದಿವಂತಿಕೆ ತೋರಿಸುತ್ತದೆ, ಆದರೆ ತಾರುಣ್ಯಯುತರಾಗಿ ಕಾಣಲು, ಸುಂದರವಾಗಿ ಕಾಣಿಸಲು ಬಿಳಿ ಕೂದಲು ಆದಾಗ ಜನರು ಬಣ್ಣವನ್ನು ಹಚ್ಚಲು ಪ್ರಾರಂಭಿಸುತ್ತಾರೆ.

ನೀವೇಕೆ ನೈಸರ್ಗಿಕ ಬಣ್ಣವನ್ನು ಉಪಯೋಗಿಸಬಾರದು?
ನೀವು ಮಾರುಕಟ್ಟೆಯಲ್ಲಿ ಸಾಕಷ್ಟು ಹೇರ್ ಕಲರ್ ಕಾಣಬಹುದು. ಅವುಗಳನ್ನು ಬಳಸುವುದರ ಮೂಲಕ ನಿಮ್ಮ ಕೂದಲನ್ನು ನೈಸರ್ಗಿಕವಾಗಿ ಕಾಣುವಂತೆಯೇ ಮಾಡಬಹುದು, ಜೊತೆಗೆ ಸ್ಟೈಲ್ ಆಗಿ ಕೂಡ ಕಾಣಬಹುದು. ಆದಾಗ್ಯೂ ಕೂದಲ ಬಣ್ಣಗಳನ್ನು ರಾಸಾಯನಿಕ ಸಂಯುಕ್ತಗಳನ್ನು ಬಳಸಿ ಮಾಡುವುದರಿಂದ ಅದನ್ನು ಬಳಸುವಾಗ ಆಗುವ ಪರಿಣಾಮಗಳನ್ನು ಕೂಡ ನೋಡಬೇಕಾಗುತ್ತದೆ.

ತಲೆಹೊಟ್ಟಿನ ಸಮಸ್ಯೆ ನಿವಾರಣೆಯಲ್ಲಿ ಈರುಳ್ಳಿಯ ಪಾತ್ರವೇನು?

ಸಾಕಷ್ಟು ಕೂದಲ ಬಣ್ಣಗಳು ಬಲವಾದ ರಾಸಾಯನಿಕ ಮತ್ತು ಅಮ್ಮೋನಿಯವನ್ನು ಒಳಗೊಂಡಿರುತ್ತದೆ. ಇದರಿಂದ ನೆತ್ತಿಗೆ ಹಾನಿಕಾರಕ ಮತ್ತು ಸಾಕಷ್ಟು ಕೂದಲ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೂದಲ ಬಣ್ಣಗಳನ್ನು ಉಪಯೋಗಿಸುವುದರಿಂದ ಸೋಂಕು ತಗುಲುವ ಸಾಧ್ಯತೆ ಇರುತ್ತದೆ ಮತ್ತು ಕೂದಲು ಉದುರುವ ಸಮಸ್ಯೆ ಕೂಡ ಕಾಣಿಸಿಕೊಳ್ಳಬಹುದು.

ನೈಸರ್ಗಿಕ ಗಿಡಮೂಲಿಕೆ ಮತ್ತು ಸಸ್ಯಗಳಿಂದ ಮಾಡಿದ ಕೂದಲ ಬಣ್ಣವನ್ನು ಬಳಸುವುದರಿಂದ ಅಡ್ಡ ಪರಿಣಾಮಗಳಾಗುವುದಿಲ್ಲ. ಇವುಗಳಿಗೆ ಹಣ ಹೆಚ್ಚು ಖರ್ಚಾಗುವುದಿಲ್ಲ ಮತ್ತು ಮನೆಯಲ್ಲಿಯೇ ಇದನ್ನು ಸುಲಭವಾಗಿ ತಯಾರಿಸಬಹುದು. ಕೂದಲಿಗೆ ಬಣ್ಣವನ್ನು ನೀಡುವುದರ ಜೊತೆಗೆ ಈ ನೈಸರ್ಗಿಕ ಗಿಡಮೂಲಿಕೆಯು ಕೂದಲನ್ನು ಪೋಷಿಸುತ್ತದೆ. ಬಿಳಿ ಕೂದಲನ್ನು ಹೋಗಲಾಡಿಸಲು ಬಳಸಬಹುದಾದ ನೈಸರ್ಗಿಕ ಬಣ್ಣದ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.

ತಲೆಹೊಟ್ಟು ಸಮಸ್ಯೆಗೆ ಪ್ರಮುಖ 5 ಲಕ್ಷಣಗಳು ಯಾವುದು?

ತೆಂಗಿನ ಎಣ್ಣೆ ಮತ್ತು ಕರಿಬೇವಿನ ಸೊಪ್ಪು

ತೆಂಗಿನ ಎಣ್ಣೆ ಮತ್ತು ಕರಿಬೇವಿನ ಸೊಪ್ಪು

ತೆಂಗಿನ ಎಣ್ಣೆ ಕೂದಲಿನ ತೇವಾಂಶ ಕಾಪಾಡಿ ಕೂದಲನ್ನು ಪೋಷಿಸಲು ಹೆಸರುವಾಸಿ. ಇದನ್ನು ಕರಿಬೇವಿನ ಸೊಪ್ಪಿನೊಂದಿಗೆ ಬಳಸಿದಾಗ ಆಯುರ್ವೇದದ ಸಂಯುಕ್ತದಂತೆ ಇದು ಕೆಲಸ ಮಾಡುತ್ತದೆ. ಸ್ವಲ್ಪ ತೆಂಗಿನ ಎಣ್ಣೆಗೆ ಅರ್ಧ ಕಪ್ ಕರಿ ಬೇವಿನ ಎಳೆಯನ್ನು ಮಿಶ್ರ ಮಾಡಿ ನಂತರ ಇದನ್ನು ಕುದಿಸಿ. ನಂತರ ಇದನ್ನು ತಣ್ಣಗಾಗಲು ಬಿಡಿ. ಇದನ್ನು ಕೂದಲಿನ ಬೇರಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಬಿಡಿ. ನಂತರ ಬೆಚ್ಚಗಿನ ನೀರಿನಲ್ಲಿ ಶಾಂಪೂ ಬಳಸಿ ತೊಳೆಯಿರಿ.

ನೆಲ್ಲಿಕಾಯಿ

ನೆಲ್ಲಿಕಾಯಿ

ಭಾರತದ ನೆಲ್ಲಿಕಾಯಿ ಸಾಕಷ್ಟು ಗುಣಗಳನ್ನು ಹೊಂದಿದೆ. ಇದನ್ನು ನೀವು ನಿಮ್ಮ ತಲೆಯಲ್ಲಿನ ಬಿಳಿ ಕೂದಲನ್ನು ಹೋಗಲಾಡಿಸಲು ಕೂಡ ಬಳಸಬಹುದು. ಸ್ವಲ್ಪ ನೆಲ್ಲಿಕಾಯಿಯನ್ನು ಸಣ್ಣ ಸಣ್ಣ ಹೋಳುಗಳಾಗಿ ಕತ್ತರಿಸಿ ಬಿಸಿಲಿಗೆ ಒಣಗಲು ಬಿಡಿ. ನಂತರ ಶುದ್ಧ ತೆಂಗಿನ ಎಣ್ಣೆಯಲ್ಲಿ ಇದನ್ನು ಸ್ವಲ್ಪ ಹೊತ್ತು ಕುದಿಸಿ. ಆಗ ನೆಲ್ಲಿಕಾಯಿ ಮೆತ್ತಗಾಗಿ ಕಂಡು ಬಣ್ಣವನ್ನು ತಾಳುತ್ತದೆ. ಇದು ತಣ್ಣಗಾದ ನಂತರ ತಲೆಗೆ ಹಚ್ಚಿ. ಸ್ವಲ್ಪ ಸಮಯದ ನಂತರ ಮೃದುವಾದ ಶಾಂಪೂ ಬಳಸಿ ತೊಳೆಯಿರಿ. ಇದಲ್ಲದೆ ನೀವು ನೆಲ್ಲಿಕಾಯಿ ಬೆರೆಸಿದ ನೀರಿನಲ್ಲಿ ಬೆಳಗ್ಗೆ ನಿಮ್ಮ ಕೂದಲನ್ನು ನೆನೆಸಿಕೊಳ್ಳಲುಬಹುದು.

ಮಜ್ಜಿಗೆ ಮತ್ತು ಕೆರಿಬೇವಿನ ಸೊಪ್ಪು

ಮಜ್ಜಿಗೆ ಮತ್ತು ಕೆರಿಬೇವಿನ ಸೊಪ್ಪು

ಮಜ್ಜಿಗೆ ಮತ್ತು ಕರಿಬೇವಿನ ಸೊಪ್ಪು ಬಳಸುವುದರಿಂದ ಬಿಳಿ ಕೂದಲು ಹೆಚ್ಚುವುದನ್ನು ತಡೆಯಬಹುದು. ಒಂದು ಲೋಟ ಮಜ್ಜಿಗೆಗೆ ಒಂದು ಕೈ ತುಂಬಾ ಕರಿಬೇವಿನ ಸೊಪ್ಪನ್ನು ಹಾಕಿ. ನಂತರ ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ. ಚೆನ್ನಾಗಿ ಮಸಾಜ್ ಮಾಡಿ ನಂತರ ಕೂದಲನ್ನು ತೊಳೆಯಿರಿ.

ಕ್ಯಾರೆಟ್ ಬೀಜದ ತೈಲ ಮತ್ತು ಎಳ್ಳಿನ ಎಣ್ಣೆ

ಕ್ಯಾರೆಟ್ ಬೀಜದ ತೈಲ ಮತ್ತು ಎಳ್ಳಿನ ಎಣ್ಣೆ

ಬಿಳಿ ಕೂದಲನ್ನು ಕಾಣದಂತೆ ತಡೆಯಲು ಕ್ಯಾರೆಟ್ ಬೀಜದ ಎಣ್ಣೆ ಮತ್ತು ಎಳ್ಳೆಣ್ಣೆ ಬಳಸಬಹುದು. ಸಣ್ಣ ಪ್ರಮಾಣದ ಕ್ಯಾರೆಟ್ ಬೀಜದ ಎಣ್ಣೆಗೆ ನಾಲ್ಕು ಚಮಚ ಎಳ್ಳಿನ ಎಣ್ಣೆ ಬೆರೆಸಿ. ನಂತರ ಇದನ್ನು ನೆತ್ತಿ ಮತ್ತು ಕೂದಲಿಗೆ ಹಚ್ಚಿ. ಸ್ವಲ್ಪ ಸಮಯದ ನಂತರ ನೀರಿನಿಂದ ತೊಳೆಯಿರಿ.

ನಿಂಬೆ ರಸ, ಬಾದಾಮಿ ಎಣ್ಣೆ ಮತ್ತು ನೆಲ್ಲಿಕಾಯಿ

ನಿಂಬೆ ರಸ, ಬಾದಾಮಿ ಎಣ್ಣೆ ಮತ್ತು ನೆಲ್ಲಿಕಾಯಿ

ನಿಂಬೆ ರಸ, ನೆಲ್ಲಿಕಾಯಿ ಮತ್ತು ಬಾದಾಮಿ ಎಣ್ಣೆ ಬಿಳಿ ಕೂದಲಿಗೆ ಆಯುರ್ವೇದದಂತೆ ಕೆಲಸ ಮಾಡುತ್ತದೆ. ಈ ಮಿಶ್ರಣವನ್ನು ನೀವು ಫ್ರಿಡ್ಜ್ ನಲ್ಲಿ ಮೂರು ದಿನ ಇಡಬಹುದು. ಇದನ್ನು ನೆತ್ತಿ ಮತ್ತು ಕೂದಲಿಗೆ ಹಚ್ಚಿದಾಗ ಅರ್ಧ ಗಂಟೆ ಬಿಡಬೇಕು. ನಂತರ ಶಾಂಪೂ ಮತ್ತು ತಣ್ಣೀರಿನಲ್ಲಿ ತೊಳೆಯಿರಿ. ಇದನ್ನು ದಿನವೂ ಕೂಡ ಬಳಸಬಹುದು.

ನಿಮಗೆ ಈ ಎಲ್ಲಾ ಸಲಹೆಗಳು ಮೊದಲೇ ಗೊತ್ತಿರಬಹುದು ಆದರೆ ನೀವಿದನ್ನು ಪ್ರಯತ್ನಿಸದೇ ಇರಬಹುದು. ಸಾಮಾನ್ಯವಾಗಿ ನಾವು ಪರಿಣಾಮಕಾರಿಯಾದ ಮತ್ತು ಸುಲಭವಾದ ವಿಧಾನವನ್ನೇ ನಿರ್ಲಕ್ಷಿಸಿರುತ್ತೇವೆ. ಈ ಮೇಲೆ ಹೇಳಿದ ವಿಧಾನಗಳು ಸುಲಭವಾದುದು, ಸುರಕ್ಷಿತವಾದುದು. ಒಮ್ಮೆ ಪ್ರಯತ್ನಿಸಿ ನೋಡಿ.

English summary

5 Surprising Natural Products To Treat Gray Hair

For both men and women, emergence of gray streaks on the head can be a cause of serious concern. Here are some of the natural hair care solutions for gray hair, just for StyleCraze readers!
X
Desktop Bottom Promotion