For Quick Alerts
ALLOW NOTIFICATIONS  
For Daily Alerts

ನಿಮ್ಮ ಕೂದಲೂ ಪ್ರೋಟೀನ್ ಬೇಕೆಂದು ಹೇಳುತ್ತೆ ಗೊತ್ತಾ?

|

ಸುಂದರವಾದ ಹೊಳೆಯುವ ಕೂದಲು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ? ನಮ್ಮ ಕೂದಲೂ ಸುಂದರವಾಗಿ ಆರೋಗ್ಯವಾಗಿರಬೇಕೆಂದು ನಾವು ಹಲವಾರು ಕಸರತ್ತುಗಳನ್ನು ಮಾಡುತ್ತೇವೆ. ಆಯುರ್ವೇದದಿಂದ ಹಿಡಿದು ಆಧುನಿಕ ಕೂದಲಿನ ರಹಸ್ಯ ವಿಧಾನವನ್ನು ಅನುಸರಿಸುತ್ತೇವೆ ಆದರೆ ಫಲ ಮಾತ್ರ ಸೊನ್ನೆ.
ನಿಮ್ಮ ಕೂದಲಿಗೆ ತೆಂಗಿನೆಣ್ಣೆ ಒಳ್ಳೆಯದು ಏಕೆ ಗೊತ್ತೇ?

ಹಾಗಿದ್ದರೆ ನಿಮ್ಮ ಸಮಸ್ಯೆಗೆ ಮೂಲ ಕಾರಣ ಏನೆಂಬುದನ್ನು ನೀವು ತಿಳಿದಿದ್ದೀರಾ? ನಿಮ್ಮ ಕೂದಲು ಆರೋಗ್ಯವಾಗಿ ಸುಂದರವಾಗಿರಲು ಮುಖ್ಯವಾಗಿರಬೇಕಾದ್ದು ಏನೆಂಬುದನ್ನು ಅರಿತಿದ್ದೀರಾ? ನಮ್ಮ ದೇಹಕ್ಕೆ ಪ್ರೋಟೀನ್ ಹೇಗೆ ಅವಶ್ಯಕವೋ ಹಾಗೆಯೇ ಕೂದಲಿಗೂ ಪ್ರೊಟೀನ್ ಅತೀ ಅಗತ್ಯ.

4 Signs That Your Hair Needs Protein

ಹಾಗಿದ್ದರೆ ನಿಮ್ಮ ಕೂದಲಿಗೆ ಪ್ರೊಟೀನ್ ದೊರೆಯುವಂತೆ ಮಾಡಲು ಏನು ಮಾಡಬೇಕು? ನೀವು ಪಾರ್ಲರ್‌ಗೆ ಹೋದಾಗ ನಿಮ್ಮ ಕೂದಲಿಗೆ ಆವಶ್ಯಕವಾಗಿರುವ ಪ್ರೊಟೀನ್ ಆರೈಕೆಯನ್ನು ಅವರು ನಿಮಗೆ ನೀಡುತ್ತಾರೆ.

ನಿಮ್ಮ ಕೂದಲಿಗೆ ಅತೀ ಅಗತ್ಯವಾಗಿರುವ ಪ್ರೊಟೀನ್ ಯಾವುದೆಂಬುದನ್ನು ಈ ಲೇಖನದಲ್ಲಿ ನಾವು ಇಂದು ತಿಳಿದುಕೊಳ್ಳೋಣ.

ನೈಸರ್ಗಿಕವಾಗಿ ತಲೆಹೊಟ್ಟು ನಿವಾರಿಸಿಕೊಳ್ಳಬೇಕೇ?

1.ಕೂದಲಿನ ಇಲಾಸ್ಟಿಕ್ ಪರೀಕ್ಷೆ:
ನಿಮ್ಮ ಕೂದಲು ಆರೋಗ್ಯವಾಗಿದೆ ಎಂಬ ನಂಬಿಕೆ ನಿಮ್ಮದಾಗಿದ್ದರೆ ಈ ಸುಲಭವಾದ ಪರೀಕ್ಷೆಯನ್ನು ನಿಮ್ಮ ಕೂದಲ ಮೇಲೆ ಮಾಡಿ ನೋಡಿ. ನಿಮ್ಮ ಕೂದಲಿನ 2-3 ತುದಿಗಳನ್ನು ತೆಗೆದುಕೊಳ್ಳಿ. ಈಗ ಅದನ್ನು ಎಳೆಯಲು ಪ್ರಾರಂಭಿಸಿ. ಮಧ್ಯದಲ್ಲಿಯೇ ಕೂದಲು ತುಂಡಾದರೆ, ನಿಮ್ಮ ಕೂದಲು ಆರೋಗ್ಯವಾಗಿಲ್ಲ ಎಂಬುದು ಇದರರ್ಥವಾಗಿದೆ. ನಿಮ್ಮ ಕೂದಲಿಗೆ ಪ್ರೊಟೀನ್ ಆವಶ್ಯಕ ಎಂಬುದು ಇದರಿಂದ ತಿಳಿದು ಬರುತ್ತದೆ.

2. ಹಾನಿ ತೀವ್ರತರವಾಗಿದ್ದರೆ:
ನಿಮ್ಮ ಕೂದಲು ಹಾನಿಗೊಳಗಾಗಿದೆ ಎಂಬುದನ್ನು ತಿಳಿದುಕೊಳ್ಳೋಣ. ಎಷ್ಟು ಹಾನಿಗೊಳಗಾಗಿದೆ ಎಂಬುದನ್ನು ತಿಳಿದುಕೊಳ್ಳೋಣ? ಹಲವಾರು ಶ್ಯಾಂಪೂಗಳಿಂದ ನಿಮ್ಮ ಕೂದಲನ್ನು ನೀವು ತೊಳೆದಾಗ, ಅದು ರಾಸಾಯನಿಕವಾಗಿ ಹಾನಿಗೊಳಗಾಗುತ್ತದೆ. ಈ ಸಮಯದಲ್ಲಿ ಕೆಲವೊಂದು ಪ್ರೊಟೀನ್ ಅಂಶವುಳ್ಳ ಶ್ಯಾಂಪೂ ಮತ್ತು ಕಂಡೀಷನ್ ಅನ್ನು ಕೂದಲಿಗೆ ಬಳಸಿ.

3.ನಿಮ್ಮ ಕೂದಲಿನ ತುದಿ:
ನಿಮ್ಮ ಕೂದಲಿನ ತುದಿಯನ್ನು ನೀವು ಕತ್ತರಿಸದೆ ಹಾಗೆಯೇ ಬಿಟ್ಟಿದ್ದರೆ ಈ ಅಂಶ ನಿಮಗೆ ತಿಳಿದುಬರುತ್ತದೆ. ಸೀಳು ತುದಿಗಳು ನಿಮ್ಮ ಕೂದಲಿನ ಬುಡಕ್ಕೆ ಕೂಡ ಕೆಟ್ಟ ಪರಿಣಾಮವನ್ನು ಬೀರಿರುತ್ತದೆ. ಈ ಸಮಯದಲ್ಲಿ ನಿಮ್ಮ ಕೂದಲನ್ನು ಪ್ರೊಟೀನ್ ವಿಧಾನದ ಮೂಲಕ ಚಿಕಿತ್ಸೆಗೆ ಒಳಪಡಿಸುವುದು ಅತ್ಯವಶ್ಯಕವಾಗಿರುತ್ತದೆ.

ಇಳಿ ವಯಸ್ಸಿನಲ್ಲಿ ಕೂದಲು ಉದುರುವಿಕೆಯ ಸಮಸ್ಯೆಯೇ?

4. ಕೂದಲು ತುಂಡಾಗುವುದು:
ನೀವು ತಲೆ ಬಾಚುವಾಗ ನಿಮ್ಮ ಕೂದಲು ತುಂಡಾಗುವುದನ್ನು ನೀವು ಗಮನಿಸಿದ್ದೀರಾ? ನಿಮ್ಮ ಕೂದಲು ಸುಲಭವಾಗಿ ತುಂಡಾಗುತ್ತದೆ, ನಿಮ್ಮ ಕೂದಲು ಆವಶ್ಯಕವಾಗಿರುವ ಪ್ರೊಟೀನ್ ಕೊರತೆಯಿಂದ ಬಳಲುತ್ತಿದ್ದರೆ ನಿಮ್ಮ ಕೂದಲು ಈ ಹಾನಿಗೆ ಒಳಗಾಗುತ್ತದೆ. ಪ್ರೊಟೀನ್ ಒಳಗೊಂಡಿರುವ ಶ್ಯಾಂಪೂ ಅಥವಾ ಕಂಡೀಷನ್ ಬಳಕೆ ನಿಮ್ಮ ಕೂದಲನ್ನು ಈ ಹಾನಿಯಿಂದ ರಕ್ಷಿಸುತ್ತದೆ.

English summary

4 Signs That Your Hair Needs Protein

Healthy hair is what you crave for! Won’t you love to have rich, shining and voluminous hair that stay healthy at all times? But, whenever you enter the parlour or meet a hair expert, you know the question that is going to come to you.
Story first published: Monday, May 26, 2014, 10:29 [IST]
X
Desktop Bottom Promotion