For Quick Alerts
ALLOW NOTIFICATIONS  
For Daily Alerts

7 ಬಗೆಯ ಕೂದಲಿನ ಸಮಸ್ಯೆಗೆ ಪರಿಹಾರ-ಲೋಳೆ ಸರ

|

ಕೂದಲಿನ ಸಮಸ್ಯೆಗೆ ನಾವೆಲ್ಲಾ ಯಾವ ಶ್ಯಾಂಪೂ ಬಳಸಿದರೆ ಕೂದಲು ಉದುರುವುದು ನಿಲ್ಲುತ್ತದೆ ಎಂದು ಯೋಚಿಸುತ್ತೇವೆ. ಆದರೆ ಲೋಳೆಸರ ಹಚ್ಚಿ ನೋಡಿದರೆ ಹೇಗೆ ಎಂದು ಯೋಚಿಸುವುದೇ ಇಲ್ಲ. ಈ ಲೋಳೆಸರವನ್ನು ಮನೆಯಲ್ಲಿ ಸ್ಥಳಾವಕಾಶ ಕಮ್ಮಿಯಿದ್ದರೂ ಬೆಳೆಸಬಹುದು. ಆದ್ದರಿಂದ ಈ ವಿಧಾನ ದುಬಾರಿಯಲ್ಲ, ಸೊಬಗಿನ ಕೂದಲನ್ನು ಪಡೆಯಬಹುದು.

ಇದನ್ನು ಈ ಕೆಳಗಿನ ಕೂದಲಿನ ಸಮಸ್ಯೆಗೆ ಬಳಸಿದರೆ ಅತ್ಯುತ್ತಮವಾದ ಪ್ರಯೋಜವನ್ನು ಪಡೆಯಬಹುದು.

ಕೂದುರು ಉದುರುವುದಕ್ಕೆ ಪರಿಹಾರ

ಕೂದುರು ಉದುರುವುದಕ್ಕೆ ಪರಿಹಾರ

ಕೂದಲಿನ ಬುಡಕ್ಕೆ ಲೋಳೆಸರ ಹಚ್ಚಿ ಅರ್ಧ ಗಂಟೆ ಬಿಟ್ಟು ತಲೆ ತೊಳೆದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ತಲೆಗೆ ಹಚ್ಚುವುದರ ಜೊತೆಗೆ ಇದರ ಜ್ಯೂಸ್ ಮಾಡಿ ಕುಡಿದರೆ ಕೂದಲು ಉದುರುವ ಸಮಸ್ಯೆಯಿಂದ ಬೇಗನೆ ಗುಣಮುಖವಾಗಬಹುದು.

ಕಂಡೀಷನರ್

ಕಂಡೀಷನರ್

ಲೋಳೆಸರ ನೈಸರ್ಗಿಕವಾದ ಕಂಡೀಷನರ್ ಆಗಿದ್ದು ಕೂದಲನ್ನು ಮೃದುವಾಗಿಸಿ, ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ.

ಬಕ್ಕತಲೆ ಉಂಟಾಗುವುದನ್ನು ತಡೆಯುತ್ತದೆ

ಬಕ್ಕತಲೆ ಉಂಟಾಗುವುದನ್ನು ತಡೆಯುತ್ತದೆ

ಬಕ್ಕ ತಲೆ ಹೆಚ್ಚಿನ ಪುರುಷರಲ್ಲಿ ಕಂಡು ಬರುವ ಸಮಸ್ಯೆಯಾಗಿದೆ. ಬಕ್ಕೆ ತಲೆ ಉಂಟಾಗುತ್ತಿದ್ದರೆ ಪ್ರತಿದಿನಾ ಲೋಳೆಸರ ಹಚ್ಚಿ. ಈ ರೀತಿ2-3 ಕಾಲದವರೆಗೆ ಹಚ್ಚಿದರೆ ಹೊಸ ಕೂದಲು ಹುಟ್ಟುತ್ತದೆ.

ನೈಸರ್ಗಿಕವಾದ ಮಾಯಿಶ್ಚರೈಸರ್

ನೈಸರ್ಗಿಕವಾದ ಮಾಯಿಶ್ಚರೈಸರ್

ಒಣ ಕೂದಲು ಇದ್ದರೆ ಕೂದಲು ಕವಲೊಡೆಯುವುದು, ಉದುರುವುದು, ತಲೆಹೊಟ್ಟು ಈ ರೀತಿಯ ಸಮಸ್ಯೆ ಕಂಡು ಬರುತ್ತದೆ, ಅಲ್ಲದೆ ಕೂದಲು ಕೂಡ ಆಕರ್ಷಕವಾಗಿ ಕಾಣುವುದಿಲ್ಲ. ಲೋಳೆ ಸರ ಹಚ್ಚಿದರೆ ಕೂದಲಿನಲ್ಲಿ ಮಾಯಿಶ್ಚರೈಸರ್ ಇರುತ್ತದೆ. ಇದರಿಂದ ಕೂದಲಿನ ಆರೋಗ್ಯ ಹೆಚ್ಚುವುದು, ನೋಡಲು ಆಕರ್ಷಕವಾಗಿ ಕಾಣುವುದು.

ತಲೆಹೊಟ್ಟನ್ನು ಹೋಗಲಾಡಿಸುತ್ತದೆ

ತಲೆಹೊಟ್ಟನ್ನು ಹೋಗಲಾಡಿಸುತ್ತದೆ

ತಲೆ ಹೊಟ್ಟಿನ ಸಮಸ್ಯೆಯನ್ನು ಹೋಗಲಾಡಿಸಲು ಬೆಸ್ಟ್ ಮದ್ದು ಲೋಳೆಸರ. ಕೂದಲಿನ ಬುಡ ಒಣಗಿದರೆ ತಲೆಹೊಟ್ಟು ಉಂಟಾಗುವುದು, ಲೋಳೆಸರವನ್ನು ತಲೆಗೆ ಹಚ್ಚಿ 20-30 ನಿಮಿಷ ಇಟ್ಟು ತಲೆ ತೊಳೆಯಿರಿ. ಈ ರೀತಿ ಮಾಡಿದರೆ ಉತ್ತಮ ಫಲಿತಾಂಶವನ್ನು ಕಾಣಬಹುದು.

ತಲೆ ತುರಿಕೆಗೆ

ತಲೆ ತುರಿಕೆಗೆ

ತಲೆಹೊಟ್ಟು ಇದ್ದರೆ ತಲೆ ತುರಿಸಿ ಗಾಯವಾಗಿರುತ್ತದೆ. ಅಂತಹವರು ಲೋಳೆಸರ ಹಚ್ಚಿ ಅರ್ಧ ಗಂಟೆಯ ಬಳಿಕ ಸ್ನಾನ ಮಾಡಿ ಕೂದಲನ್ನು ಚೆನ್ನಾಗಿ ಒಣಗಿಸಬೇಕು. ಹೀಗೆ ಮಾಡಿದರೆ ಗಾಯ ಬೇಗನೆ ಒಣಗುವುದು, ಕೂದಲೂ ಸೊಂಪಾಗಿ ಬೆಳೆಯುತ್ತದೆ.

ಹಣೆಯ ಮೇಲ್ಭಾಗದ ಕೂದಲು ಕಡಿಮೆಯಾಗುವುದು

ಹಣೆಯ ಮೇಲ್ಭಾಗದ ಕೂದಲು ಕಡಿಮೆಯಾಗುವುದು

ಕೆಲವರಿಗೆ ಹಣೆಯ ಮೇಲ್ಬಾಗದ ಕೂದಲು ಉದುರಿಸಲಾರಂಭಿಸುತ್ತದೆ. ಇದು ಕೂಡ ಬಕ್ಕ ತಲೆಯ ಲಕ್ಷಣವಾಗಿದೆ. ಈ ಎಲ್ಲಾ ಕೂದಲಿನ ಸಮಸ್ಯೆಗೆ ಪರಿಹಾರ ಲೋಳೆಸರದಲ್ಲಿದೆ.

English summary

Use Of Aloe Vera For Hair Care | Tips For Hair Care | ಕೂದಲಿನ ಆರೈಕೆ ಮಾಡುವ ಲೋಳೆಸರ | ಕೂದಲಿನ ಆರೈಕೆಗೆ ಕೆಲ ಸಲಹೆ

Aloe vera has been used as a medicine to cure several skin ailments. Even acne, one of the biggest skin problems can be cured by applying the green aloe vera extract. You can use aloe vera to prepare many herbal face packs at home to get a flawless and glowing skin.
X
Desktop Bottom Promotion